Andolana originals

ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಎಚ್ಚರ

ಎಸ್.ಎ.ಹುಸೇನ್

ಬಿಸಿಲು-ಮಳೆಯ ವಾತಾವರಣದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳ; ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆ ಮನವಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲು ಮತ್ತು ಮಳೆಯ ವಾತಾವರಣ ಪರ್ಯಾಯವಾಗಿ ಮುಂದುವರಿದಿರುವುದರಿಂದ ಸೊಳ್ಳೆಜನಿತ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಆತಂಕ ಎದುರಾಗಿದೆ. ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣದೊಂದಿಗೆ ಕೆಲವೊಮ್ಮೆ ಮಳೆಯೂ ಆಗುತ್ತಿದೆ. ಮಳೆಯ ನಂತರ ಮನೆಗಳ ಸುತ್ತಮುತ್ತ, ಖಾಲಿ ನಿವೇಶನಗಳು ಹಾಗೂ ವಿವಿಧ ವಸ್ತುಗಳಲ್ಲಿ ನೀರು ಸಂಗ್ರಹವಾಗುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಇದು ಡೆಂಗ್ಯೂ ಸೇರಿದಂತೆ ಸೊಳ್ಳೆಜನಿತ ರೋಗಗಳ ಹರಡುವಿಕೆಗೆ ಕಾರಣವಾಗಬಹುದು.

ವಿಶೇಷವಾಗಿ ತೆಂಗಿನ ಚಿಪ್ಪು, ಹಳೆಯ ಟೈರ್, ಬಕೆಟ್, ಹೂಕುಂಡ ಹಾಗೂ ನೀರು ಸಂಗ್ರಹವಾಗುವ ಇತರ ವಸ್ತುಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸಾಧ್ಯತೆ ಇರುವುದರಿಂದ ಇವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದರ ಜೊತೆಗೆ ಪರಿಸರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಸೊಳ್ಳೆ ಜನಿತ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಮನೆ-ಮನೆ ಸಮೀಕ್ಷೆ ನಡೆಸುವುದರ ಜೊತೆಗೆ ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸುವ ಕಾರ್ಯಾಚರಣೆ ಕೈಗೊಂಡಿದೆ. ಸಾರ್ವಜನಿಕರಲ್ಲಿ ರೋಗಗಳ ಹರಡುವಿಕೆ, ಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲಿನ ವೇಳೆಯಲ್ಲಿಯೂ ಕಚ್ಚುವುದರಿಂದ ಹಗಲಿನಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಸೊಳ್ಳೆ ಪರದೆ, ಸೊಳ್ಳೆ ನಿವಾರಕ ಕ್ರೀಮ್‌ಗಳನ್ನು ಬಳಸುವುದು ಹಾಗೂ ನೀರಿನ ಟ್ಯಾಂಕ್ ಮತ್ತು ಪಾತ್ರೆಗಳನ್ನು ಮುಚ್ಚಿಡುವುದು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳಾಗಿವೆ.

ಸೊಳ್ಳೆಜನಿತ ರೋಗಗಳ ಜೊತೆಗೆ ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಅಶುದ್ಧ ಆಹಾರದಿಂದ ಉಂಟಾಗಬಹುದಾದ ಸೋಂಕುಗಳ ಬಗ್ಗೆಯೂ ಸಾರ್ವಜನಿಕರು ಎಚ್ಚರ ವಹಿಸಬೇಕು. ಕುಡಿಯುವ ನೀರನ್ನು ಕುದಿಸಿ ಆರಿಸಿ ಅಥವಾ ಶುದ್ಧೀಕರಿಸಿ ಬಳಸಬೇಕು. ಬಿಸಿ ಮತ್ತು ತಾಜಾ ಆಹಾರ ಸೇವಿಸಬೇಕು. ತೆರೆದ ಸ್ಥಳಗಳಲ್ಲಿ ಮಾರಾಟವಾಗುವ ಆಹಾರ ಹಾಗೂ ಕಲುಷಿತ ನೀರಿನ ಸೇವನೆಯನ್ನು ತಪ್ಪಿಸಬೇಕು. ಆಗಾಗ್ಗೆ ಸಾಬೂನಿನಿಂದ ಕೈಗಳನ್ನು ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಜ್ವರ, ತಲೆನೋವು, ಮೈಕೈ ನೋವು, ವಾಂತಿ, ಭೇದಿ ಅಥವಾ ಇತರ ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧ ಸೇವನೆ ಮಾಡದೆ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು. ಆರಂಭದಲ್ಲಿಯೇ ಸೂಕ್ತ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದರಿಂದ ರೋಗದ ತೀವ್ರತೆಯನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.

” ಮಡಿಕೇರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ೨,೫೦೨ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ೪೨ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಮತ್ತು ಆರೋಗ್ಯ ಇಲಾಖೆಯ ಮುನ್ನೆಚ್ಚರಿಕಾ ಸೂಚನೆಗಳನ್ನು ಪಾಲಿಸುವುದರಿಂದ ಸೊಳ್ಳೆಜನಿತ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು.”

ಡಾ. ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದಡದಹಳ್ಳಿ -ಬ್ಯಾತಹಳ್ಳಿ ರಸ್ತೆ ದುರಸ್ತಿಪಡಿಸಿ

ಮೈಸೂರು ಜೆಪಿ ನಗರ ರಿಂಗ್ ರಸ್ತೆಯ ರೈಲ್ವೆ ಅಂಡರ್‌ಬ್ರಿಡ್ಜ್ ಬಳಿಯ ಶ್ರೀನಗರ ಬಡಾವಣೆಗೆ ಹೋಗುವ ರಸ್ತೆಯು ರೈಲ್ವೆ ಕ್ರಾಸಿಂಗ್ ದಾಟಿ…

52 mins ago

ಓದುಗರ ಪತ್ರ: ಇ- ಕೆವೈಸಿ: ಮತ್ತಷ್ಟು ಆಧಾರ್ ಕೇಂದ್ರಗಳನ್ನು ಆರಂಭಿಸಿ

ಪಡಿತರ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರು ಇ- ಕೆವೈಸಿ ಮಾಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಇದಕ್ಕೆ ಆಧಾರ್…

59 mins ago

ಓದುಗರ ಪತ್ರ: ಕೇಂದ್ರ ಸಚಿವರಿಗೆ ಇದು ಬೇಕಾಗಿತ್ತೇ?

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿರುವ ಸ್ಟಿಂಗ್ ಆಪರೇಷನ್ ( ಮಾರುವೇಷದ ಕಾರ್ಯಾಚರಣೆ) ಬಗ್ಗೆ ಕೇಂದ್ರ ಸಚಿವ…

1 hour ago

ಓದುಗರ ಪತ್ರ: ದಸರಾ ಮುಗಿದರೂ ಹೆಚ್ಚುವರಿ ಬಸ್ ಟಿಕೆಟ್ ದರ ವಸೂಲಿ ನಿಂತಿಲ್ಲ!

ಕಾರ್ಯನಿಮಿತ್ತ ಅ.೨೩ರಂದು ಮುಂಜಾನೆ ೮ ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ತಡೆರಹಿತ ಬಸ್‌ನಲ್ಲಿ ತೆರಳಿದಾಗ ನಿರ್ವಾಹಕ…

1 hour ago

ಎರಡು ವಿಭಿನ್ನ ಧರ್ಮಗಳ ಮುಖಾಮುಖಿ ನಾಗ್ಪುರ ದಸರಾ

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ನಶಿಸಿ ಹೋಗುತ್ತಿದ್ದ ಬೌದ್ಧ ಧರ್ಮ ಮರುಹುಟ್ಟು ಪಡೆದ ಪುಣ್ಯಭೂಮಿ ವಿಜಯದಶಮಿ ಬಂತೆಂದರೆ ದೇಶದಾದ್ಯಂತ…

1 hour ago

ಹನೂರು ಹೃದಯ ಭಾಗದಲ್ಲಿಯೇ ಟ್ರಾಫಿಕ್ ಕಿರಿಕಿರಿ

ಮಹಾದೇಶ್ ಎಂ.ಗೌಡ ಸಿಗ್ನಲ್ ಅಳವಡಿಕೆಗೆ ಸಾರ್ವಜನಿಕರ ಒತ್ತಾಯ ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ…

1 hour ago