Andolana originals

ಮಹಿಳೆಯರಿಗೆ ಬಾಗಿನ, ಜನರಿಗೆ ಬಾದಾಮಿ ಹಾಲು

ದಿನೇಶ್‌ಕುಮಾರ್ ಎಚ್.ಎಸ್.

ಈ ಬಾರಿಯ ಆಷಾಢ ಶುಕ್ರವಾರದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಭಕ್ತರಿಗೆ ವಿಶೇಷ ವ್ಯವಸ್ಥೆ 

ಮೈಸೂರು: ಉಚಿತ ಬಾದಾಮಿ ಹಾಲು, ರವಿಕೆ ಕಣ, ಡ್ರೈಫ್ರೂಟ್ಸ್ ಹೀಗೆ ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟಕ್ಕೆ ದೇವಿಯ ದರ್ಶನಕ್ಕೆ ಬರುವ ಸಾರ್ವಜನಿಕರಿಗೆ ತಿರುಪತಿ ಮಾದರಿಯಲ್ಲಿ ಇದೇ ಪ್ರಥಮ ಬಾರಿಗೆ ಸಾಕಷ್ಟು ವ್ಯವಸ್ಥೆಗಳನ್ನು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಲ್ಪಿಸಿದೆ.

ಆಷಾಢ ಮಾಸ ಬಂತೆಂದರೆ ಸಾಕು ಚಾಮುಂಡಿಬೆಟ್ಟ ಜನರಿಂದ ತುಂಬಿ ತುಳುಕುತ್ತದೆ. ಸ್ಥಳೀಯ ನಿವಾಸಿ ಗಳಲ್ಲದೆ, ದೇಶ- ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ.

ಅದರಲ್ಲಿಯೂ ಆಷಾಢ ಶುಕ್ರವಾರದಂದು ಭಕ್ತ ಸಾಗರವೇ ಅಲ್ಲಿ ನೆರೆದಿರುತ್ತದೆ. ಸರತಿ ಸಾಲಿನಲ್ಲಿ ನಿಂತು ದೇವಾಲಯದ ಒಳಗೆ ತೆರಳಬೇಕಾದ ಪರಿಸ್ಥಿತಿ ಇದೆ. ಈ ವೇಳೆ ಹಲವಾರು ಮಂದಿ ಕುಡಿಯಲು ನೀರಿಲ್ಲದೆ, ಹಸಿವಿನಿಂದ ಸುಸ್ತಾಗು ವುದು ಸೇರಿದಂತೆ ನಾನಾ ತೊಂದರೆ ಎದುರಿಸಬೇಕಾಗುತ್ತದೆ. ಅಂತಹ ವರ ನೆರವಿಗೆ ಧಾವಿಸುವ ಉದ್ದೇಶದಿಂದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆಷಾಢ ಶುಕ್ರವಾರಗಳಂದು ಧರ್ಮ ದರ್ಶನದ ಸರತಿ ಸಾಲಿನಲ್ಲಿ ನಿಂತು ಬರುವವರಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟಿದೆ.

೫ ಸ್ಥಳಗಳಲ್ಲಿ ನೀರಿಗೆ ವ್ಯವಸ್ಥೆ: ಈ ಬಾರಿಯ ಆಷಾಢ ಶುಕ್ರವಾರದಲ್ಲಿ ಚಾಮುಂಡಿಬೆಟ್ಟದಲ್ಲಿ ಸರತಿ ಸಾಲಿನಲ್ಲಿ ನಿಂತವರಿಗೆ ಕುಡಿಯುವ ನೀರು ಒದಗಿಸುವ ಕೌಂಟರ್‌ಗಳನ್ನು ಆರಂಭಿಸಲಾಗುತ್ತಿದೆ. ಸುಮಾರು ೫ ಸ್ಥಳಗಳಲ್ಲಿ ಉಚಿತವಾಗಿ ಖನಿಜಯುಕ್ತ ನೀರಿನ ವ್ಯವಸ್ಥೆ ಮಾಡಿ ಕೊಡಲಾಗಿದೆ. ಹಣ ನೀಡಿ ನೀರಿನ ಬಾಟಲ್‌ಅನ್ನು ಸಹ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ.

ಡ್ರೈ ಫ್ರೂಟ್ಸ್: ಸರತಿ ಸಾಲಿನಲ್ಲಿ ನಿಲ್ಲುವ ಪ್ರತಿಯೊಬ್ಬರಿಗೂ ಇದೇ ಮೊದಲ ಬಾರಿಗೆ ಸ್ವಲ್ಪ ಮಟ್ಟಿಗಿನ ತಿನಿಸನ್ನು ನೀಡಲು ಉದ್ದೇಶಿಸಲಾಗಿದೆ. ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಬಾದಾಮಿ, ಗೋಡಂಬಿ, ಖರ್ಜೂರ, ದ್ರಾಕ್ಷಿ ಹಾಗೂ ಕಲ್ಲು ಸಕ್ಕರೆಯನ್ನು ಒಳಗೊಂಡ ಸಣ್ಣ ಪೊಟ್ಟಣವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ.

ನಾಲ್ಕು ಸ್ಥಳಗಳಲ್ಲಿ ನಂದಿನಿ ಬೂತ್ ಆರಂಭ : ಇದೇ ಮೊದಲ ಬಾರಿಗೆ ನಂದಿನಿ ಉತ್ಪನ್ನಗಳ ಮಾರಾಟಕ್ಕೂ ಮುಂದಾಗಿದ್ದು, ಧರ್ಮದರ್ಶನಕ್ಕೆ ಬರುವ ಸರತಿ ಸಾಲಿನ ಬಳಿ ಸುಮಾರು ನಾಲ್ಕು ಸ್ಥಳಗಳಲ್ಲಿ ನಂದಿನಿ ಬೂತ್ ಆರಂಭಿಸಲಾಗುತ್ತಿದೆ. ಅಲ್ಲಿ ಮಜ್ಜಿಗೆ, ಲಸ್ಸಿ, ಸಿಹಿ ತಿನಿಸುಗಳು, ಬಿಸ್ಕತ್ತುಗಳು, ಬ್ರೆಡ್, ಐಸ್ ಕ್ರೀಂ, ನೀರಿನ ಬಾಟಲ್ ಹಾಗೂ ಇನ್ನಿತರ ವಸ್ತುಗಳ ಮಾರಾಟಕ್ಕೆ ಅನುವು ಮಾಡಿ ಕೊಡಲಾಗುತ್ತಿದೆ. ಅಗತ್ಯವಿರುವವರು ಹಣವನ್ನು ಪಾವತಿಸಿ ನಂದಿನಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಉಚಿತ ಬಾದಾಮಿ ಹಾಲು, ೫ ರೂ.ಗೆ ಕಾಫಿ ವಿತರಣೆ ವ್ಯವಸ್ಥೆ: ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಮತ್ತಷ್ಟು ಅನುಕೂಲತೆಗಳನ್ನು ನೀಡುವ ಉದ್ದೇಶದಿಂದ ಈ ಬಾರಿ ದರ್ಶನಕ್ಕೆ ಬರುವ ವರಿಗೆ ದೇವಾಲಯದ ವತಿಯಿಂದ ಉಚಿತವಾಗಿ ಬಾದಾಮಿ ಹಾಲನ್ನು ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಖಾಸಗಿ ಯವರಿಂದ ೫ ರೂ. ದರದಲ್ಲಿ ಕಾಫಿ ಮಾರಾಟಕ್ಕೂ ಅನುವು ಮಾಡಿಕೊಡಲಾಗಿದೆ

” ಮಹಿಳೆಯರಿಗೆ ಉಚಿತವಾಗಿ ಬಾಗಿನ ವಿತರಣೆ ದೇವಿಯ ದರ್ಶನ ಪಡೆದು ವಾಪಸ್ಸಾಗುವ ಎಲ್ಲ ಭಕ್ತರಿಗೂ ಹೊರ ಹೋಗುವ ಗೇಟ್ ಬಳಿ ಉಚಿತ ವಾಗಿ ಪೂಜಾ ಕುಂಕುಮದ ಪ್ಯಾಕೆಟ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ. ಆಷಾಢ ಶುಕ್ರವಾರ ಎಂದರೆ ದೇವಾಲಯಕ್ಕೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ದೇವಾಲಯಕ್ಕೆ ಬಂದ ನೆನಪನ್ನು ಮಹಿಳೆಯರು ಉಳಿಸಿ ಕೊಳ್ಳ ಬೇಕು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಲ್ಲಾ ಮಹಿಳೆಯರಿಗೆ ರವಿಕೆ ಕಣ, ಬಳೆ ಹಾಗೂ ಕುಂಕುಮದ ಪ್ಯಾಕೆಟ್ ಗಳನ್ನು ಒಳ ಗೊಂಡ ಬಾಗಿನವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ.”

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

5 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

6 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

6 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

7 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

12 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

12 hours ago