Andolana originals

ಪಡುಕೋಟೆಯಲ್ಲಿ ಆಸ್ಟ್ರೇಲಿಯಾ ನಿಂಬೆ

 ಅನಿಲ್ ಅಂತರಸಂತೆ

ಆಸ್ಟ್ರೇಲಿಯಾದಲ್ಲಿ ಕೃಷಿ ವಿಭಾಗದಲ್ಲಿ ಎಂಎಸ್ಸಿ ಪದವಿಯ ಜತೆಗೆ ಚಿನ್ನದ ಪದಕ ಪಡೆದಿದ್ದು, ಉನ್ನತ ಹುದ್ದೆ ಪಡೆದು ಸುಖ ಜೀವನ ಮಾಡಬಹುದಾದ ವ್ಯಕ್ತಿಯೊಬ್ಬರು ಹುದ್ದೆಗಳ ಆಸಕ್ತಿ ಬಿಟ್ಟು ಸ್ವದೇಶಕ್ಕೆ ಮರಳಿ ಇಲ್ಲಿಯೇ ಜಮೀನು ಖರೀದಿಸಿ ಆಸ್ಟ್ರೇಲಿಯಾ ಸೇರಿದಂತೆ ಇತರೆ ದೇಶಗಳಲ್ಲಿ ಬೇಡಿಕೆ ಯಲ್ಲಿರುವ ಬೀಜರಹಿತ ನಿಂಬೆಹಣ್ಣನ್ನು ಬೆಳೆದು ಸ್ವದೇಶಕ್ಕೆ ಪರಿಚಯಿಸಿದ್ದಾರೆ ರೈತ ರಾಮಕೃಷ್ಣ.

ಮೂಲತಃ ಆಂಧ್ರಪ್ರದೇಶದವರಾದ ರಾಮಕೃಷ್ಣ 20 ವರ್ಷಗಳ ಹಿಂದೆ ಎಚ್.ಡಿ.ಕೋಟೆ ತಾಲ್ಲೂಕಿನ ಪಡುಕೋಟೆ ಗ್ರಾಮದಲ್ಲಿ ಸುಮಾರು 40 ಎಕರೆ ಜಮೀನು ಖರೀದಿಸಿ ಜಮೀನಿನಲ್ಲಿ ಆರು ಕೊಳವೆ ಬಾವಿಗಳನ್ನು ಅಳವಡಿಸಿಕೊಂಡು ಕೃಷಿ ಪ್ರಾರಂಭಿಸಿ ಇಂದು ಮಾದರಿ ಕೃಷಿಕರೆನಿಸಿಕೊಂಡಿದ್ದಾರೆ.

ರಾಮಕೃಷ್ಣ ಆಸ್ಟ್ರೇಲಿಯಾ ಮೂಲದ ನಿಂಬೆಹಣ್ಣನ್ನು ಭಾರತ ದಲ್ಲಿಯೂ ಬೆಳೆಯಬಹುದು ಎಂಬುದನ್ನು ಸಾಧಿಸಿದ್ದು, ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಗೋವಿನ ಜೀವಾಮೃತವನ್ನು ಬಳಸಿಕೊಂಡು ನಿಂಬೆಹಣ್ಣು ಬೆಳೆಯುತ್ತಿದ್ದಾರೆ.

ಪ್ರಾರಂಭದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ನಿಂಬೆಹಣ್ಣಿನ ಬೇಸಾಯ ಆರಂಭಿಸಿದ ರಾಮಕೃಷ್ಣರವರು ಹಂತಹಂತವಾಗಿ 17 ಎಕರೆಗೆ ವಿಸ್ತರಿಸಿದರು. ನಿಂಬೆಹಣ್ಣಿಗಿರುವ ಬೇಡಿಕೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಇನ್ನೂ 15 ಎಕರೆಗಳಿಗೂ ವಿಸ್ತರಿಸಲು ಉತ್ಸಾಹದಲ್ಲಿದ್ದಾರೆ. ಜೊತೆಗೆ ಸುತ್ತಮುತ್ತಲಿನ ರೈತರಿಗೂ ನಿಂಬೆ ಬೆಳೆಯುವ ಬಗ್ಗೆ ಸಲಹೆ ನೀಡುವ ಜತೆಗೆ ನಿಂಬೆ ಗಿಡಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಎಕರೆಗೆ 350ರಿಂದ 400 ಗಿಡಗಳಂತೆ ಸುಮಾರು 17 ಎಕರೆಗಳಲ್ಲಿ 7 ಸಾವಿರ ನಿಂಬೆಗಿಡಗಳನ್ನು ಬೆಳೆದಿರುವ ರಾಮಕೃಷ್ಣ ಪ್ರತಿದಿನ 1-2 ಟನ್ ನಿಂಬೆಹಣ್ಣನ್ನು ಮೈಸೂರು, ಬೆಂಗಳೂರು ಹಾಗೂ ಕೇರಳಕ್ಕೆ ಮಾರಾಟ ಮಾಡುತ್ತಿದ್ದಾರೆ.

ಇದರೊಂದಿಗೆ ಎರಡು ಎಕರೆ ಜಮೀನಿನಲ್ಲಿ ವೈಟ್ ಜಾಮೂನ್‌ನ 150ರಿಂದ 200 ಮರಗಳನ್ನು ಬೆಳಸಿದ್ದು, ಅದರೊಂದಿಗೆ ಮಾವಿನ ಬೇಸಾಯ ವನ್ನೂ ಮಾಡುತ್ತಿದ್ದಾರೆ. ಅಲ್ಲದೆ ವರ್ಷಪೂರ್ತಿ ಹಣ್ಣು ಬಿಡುವ 30ರಿಂದ 40 ಸಪೋಟ ಮರಗಳೂ ಇವರ ತೋಟದಲ್ಲಿವೆ.

ಇದರೊಂದಿಗೆ 800 ಸಿಲ್ವರ್ ಮರಗಳು, 800 ಅಡಕೆ ಮರಗಳು ಹಾಗೂ 400 ತೆಂಗಿನ ಮರಗಳನ್ನು ಬೆಳಸಿದ್ದಾರೆ. ಎರಡು ವರ್ಷಕ್ಕೆ ಫಲ ಬಿಡುವ ತೆಂಗಿನ ಮರಗಳನ್ನು ಹಾಕಿರುವ ಕಾರಣ ಮೂರನೇ ವರ್ಷಕ್ಕೆ ಉತ್ತಮ ಇಳುವರಿ ಪಡೆದಿದ್ದಾರೆ. ಅಲ್ಲದೆ ಸಿಲ್ವರ್ ಮರಗಳ ಆಶ್ರಯದಲ್ಲಿ ಮೆಣಸು ಬಳ್ಳಿಯನ್ನು ಬೆಳೆದಿದ್ದು ಮೂರು ವರ್ಷಗಳಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

9 ನಾಟಿ ಹಸುಗಳನ್ನು ಸಾಕಿರುವ ರಾಮಕೃಷ್ಣರವರು ಹಸುವಿನ ಗಂಜಲ ಮತ್ತು ಸೆಗಣಿಯಿಂದ ಜೀವಾಮೃತ ತಯಾರಿಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಕಾರಣ ಉತ್ತಮ ಬೇಡಿಕೆಯ ಜತೆಗೆ ಉತ್ತಮ ಲಾಭವನ್ನೂ ಗಳಿಸುತ್ತಿದ್ದಾರೆ. ತೋಟದಲ್ಲಿ ಆರು ಕೊಳವೆ ಬಾವಿಗಳನ್ನು ಹೊಂದಿರುವ ಇವರು ಎಲ್ಲವನ್ನೂ ಒಂದು ತೊಟ್ಟಿಗೆ ಸೇರಿಸಿ ಆ ಮೂಲಕ ಹಸುಗಳ ಗಂಜಲ ಹಾಗೂ ಸಗಣಿಯ ಜೀವಾಮೃತವನ್ನು ಸೇರಿಸಿ ಪೈಪ್‌ಲೈನ್‌ಗಳ ಮೂಲಕ ಸಂಪರ್ಕ ಮಾಡಿ ನಂತರ ನೆಟ್ರಿಜನ್ ತಯಾರಿಸಿ ಶುದ್ದೀಕರಣ ಮಾಡಿ ನಂತರ ಡ್ರಿಪ್ ಮೂಲಕ ನಿಂಬೆ ಗಿಡಗಳಿಗೆ ನೀರುಣಿಸುವ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ತೋಟದ ಉಸ್ತುವಾರಿಯನ್ನು ಬಿಜಾಪುರ ಜಿಲ್ಲೆಯ ಕೃಷಿ ಪದವಿ ಪಡೆದ ಸಾಗರ್ ಶ್ರೀಕಾಂತ್ ಎಂಬವವರು ನೋಡಿಕೊಳ್ಳುತ್ತಿದ್ದಾರೆ. ಮೈಸೂರಿನ ರಿಲಯನ್ಸ್ ಮಾರ್ಟ್ ಹಾಗೂ ಸ್ಟಾರ್ಟ್‌ಜಾ‌ ಮಾರ್ಕೆಟ್‌ಗಳಲ್ಲಿ ಈ ನಿಂಬೆಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುವುದಲ್ಲದೇ ಕೇರಳ ಕೆಲ ವ್ಯಾಪಾರಿಗಳು ತೋಟಕ್ಕೆ ಬಂದು ಖರೀದಿಸಿ ಹೋಗುತ್ತಾರೆ.

ಮಳೆಗಾಲದಲ್ಲಿ ಒಂದು ಕೆ.ಜಿ ನಿಂಬೆಹಣ್ಣುಗಳಿಗೆ 30ರಿಂದ 40 ರೂ.ಗಳಿದ್ದರೆ ಬೇಸಿಗೆಯಲ್ಲಿ 100ರಿಂದ 120 ರೂ.ಗಳಷ್ಟು ಉತ್ತಮ ಬೆಲೆ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂ. 9108048471, ರೈಟರ್ ಸಾಗರ್ ಶ್ರೀಕಾಂತ್ ಮೊ 202761930983.

ನಾನು ಆಸ್ಟ್ರೇಲಿಯಾ ಕೃಷಿಯಲ್ಲಿ ಎಂಎಸ್ಸಿ ವಿಷಯದಲ್ಲಿ ಪದವಿ ಪಡೆದು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ತಾಲ್ಲೂಕಿನಲ್ಲಿ ಜಮೀನು ಖರೀದಿಸಿ ಆಸ್ಟ್ರೇಲಿಯಾದ ನಿಂಬೆಹಣ್ಣಿನ ಗಿಡಗಳನ್ನು ಎಕರೆ ಒಂದಕ್ಕೆ ಒಂದು ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದೇನೆ. ಪ್ರತಿ ವರ್ಷ ಒಂದು ಎಕರೆಗೆ 50ರಿಂದ 60 ಸಾವಿರ ರೂ.ಗಳಂತೆ 18ರಿಂದ 20 ಲಕ್ಷ ಖರ್ಚು ರೂ. ಖರ್ಚಾಗುತ್ತಿದ್ದು, ವಾರ್ಷಿಕ ಒಂದು ಕೋಟಿ ರೂ.ಗಳಷ್ಟು ಆದಾಯ ಪಡೆಯುತ್ತಿದ್ದೇನೆ. ಆಸಕ್ತಿ ಮತ್ತು ಶ್ರಮವಿದ್ದರೆ ಕೃಷಿಯಲ್ಲಿ ಲಾಭಗಳಿಸಬಹುದು.

-ರಾಮಕೃಷ್ಣ ಪ್ರಗತಿಪರ ಕೃಷಿಕ, ಪಡುಕೋಟೆ ಗ್ರಾಮ.

ಅನಿಲ್‌ ಅಂತರಸಂತೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿ ವಾಸಿಸುತ್ತಿರುವ ನಾನು 2019ರಲ್ಲಿ ಮೈಸೂರಿನ ಮಾನಸಗಂಗೋತ್ರಿ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನನ್ನ ವಿದ್ಯಾಭ್ಯಾಸದ ಬಳಿಕ ಮೈಸೂರಿನ 'ಆಂದೋಲನ' ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದರೊಂದಿಗೆ ನಾನು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕನಾಗಿದ್ದು, ದೇಶದ ವಿವಿಧ ಕಾಡುಗಳಲ್ಲಿ ಸಫಾರಿ ಮಾಡಿ ವನ್ಯಜೀವಿಗಳ ಛಾಯಾಚಿತ್ರ ಸೆರೆಹಿಡಿದು ಅವುಗಳ ಮೇಲೆ ಲೇಖನಗಳನ್ನು ಬರೆಯುವುದು, ಪ್ರವಾಸಿ ಲೇಖನಗಳನ್ನು ಬರೆಯುವುದು, ವನ್ಯಜೀವಿ ಸಂಬಂಧಿತ ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ.

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

55 mins ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

3 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

3 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

3 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

3 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

4 hours ago