Andolana originals

ಬಹುರೂಪಿಯಲ್ಲಿ ಕಲಾವಿದ ರಾಜಶೇಖರ್ ಕೈಚಳಕ

10 ನಿಮಿಷ ನಿಂತರೆ ನಿಮ್ಮದೇ ಭಾವಚಿತ್ರ ಕೈಗೆ ಸಿಗುತ್ತದೆ!

ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ಕೇವಲ ೫ ನಿಮಿಷಗಳಲ್ಲಿ ಫೋಟೊ ತೆಗೆದುಕೊಡಲಾಗುತ್ತದೆ ಎಂಬುದಾಗಿ ಅನೇಕ ಸ್ಟುಡಿಯೋಗಳಲ್ಲಿ ಬೋರ್ಡ್‌ಗಳನ್ನು ನೇತು ಹಾಕಿರುವುದನ್ನು ನೋಡುತ್ತೇವೆ. ಅದು ಯಂತ್ರಾಧಾರಿತ. ಇಲ್ಲಿ ಕೇವಲ ೧೦ ನಿಮಿಷಗಳು ಅವರೆದುರು ನಿಂತರೆ ಸಾಕು, ಪೆನ್ಸಿಲ್ ಹಿಡಿದ ಕೈಯೊಂದರ ನರ್ತನ ದೊಂದಿಗೆ ನಿಮ್ಮ ಭಾವಚಿತ್ರ ವಿಕಸಿತಗೊಳ್ಳುತ್ತದೆ!

ನಾಟಕ, ಸಿನಿಮಾ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಅನಾವರಣದ ಬಹು ರೂಪಿಯಲ್ಲಿ ೧೦ ನಿಮಿಷಗಳಲ್ಲಿ ಕುಂಚದಲ್ಲಿ ಭಾವ ಚಿತ್ರವನ್ನು ಅರಳಿಸುವ ಮಳಿಗೆಯೊಂದು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

‘ಬಿಡುಗಡೆ’ ಘೋಷ ವಾಕ್ಯ ಹೊತ್ತಿರುವ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಭೇಟಿ ನೀಡುವ ಕಲಾಸಕ್ತರು ಅರಮನೆ ಸ್ಕೂಲ್ ಆ- ಆರ್ಟ್ಸ್ ಮೈಸೂರು ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ಒಂದೆರಡು ನಿಮಿಷ ಕಲೆಯನ್ನು ಆಸ್ವಾದಿಸುವುದರ ಜೊತೆಗೆ ಕುಂಚದ ಲಾಸ್ಯದಲ್ಲಿ ಕಪ್ಪು-ಬಿಳುಪು ಬಣ್ಣದಲ್ಲಿ ಅರಳುವ ತಮ್ಮ ಭಾವಚಿತ್ರವನ್ನು ಕಂಡು ಪುಳಕಿತರಾಗುತ್ತಿದ್ದಾರೆ.

ಎದುರಿಗೆ ಕುಳಿತ ವ್ಯಕ್ತಿಯ ಚಹರೆಯನ್ನು ಕೇವಲ ೧೦ ನಿಮಿಷಗಳೊಳಗೆ ಗ್ರಹಿಸಿ ಅದರ ಪಡಿ ಯಚ್ಚು ಮೂಡಿಸುವ ಮೂಲಕ ಪ್ರತಿಭಾವಂತ
ಕಲಾವಿದ ಹಾಗೂ ಚಿತ್ರಕಲಾ ಶಿಕ್ಷಕ ರಾಜಶೇಖರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ರಾಜಶೇಖರ್, ಮೊದಲಿನಿಂದಲೂ ಭಾವನೆಗಳನ್ನು ಚಿತ್ರಗಳ ಮೂಲಕ ಸೆರೆ ಹಿಡಿಯುವುದನ್ನು ರೂಢಿಸಿಕೊಂಡಿದ್ದರು. ಅದು ಅಷ್ಟು ಸುಲಭವಲ್ಲ, ಎದುರಿಗೆ ಕೂರಿಸಿ, ಕೆಲವೇ ನಿಮಿಷಗಳಲ್ಲಿ ಚಹರೆ ಯನ್ನು ಗಮನಿಸಿ ಸೆರೆ ಹಿಡಿಯುವುದು ಕಠಿಣ ಕೆಲಸ. ಯಾರ ಚಿತ್ರವನ್ನು ರಚಿಸಬೇಕೋ ಅವರ ವ್ಯಕ್ತಿತ್ವವನ್ನು ಆಮೂಲಾಗ್ರವಾಗಿ ಗ್ರಹಿಸುತ್ತೇವೆ ಎನ್ನುತ್ತಾರೆ ರಾಜಶೇಖರ್.

ಬಾಲ್ಯದ ನೆನಪುಗಳನ್ನು ಮರುಕಳಿಸುವ ಕಲಾಕೃತಿಗಳು: ಇದೇ ಮಳಿಗೆಯ ಮತ್ತೊಂದು ಭಾಗದಲ್ಲಿ ಬಹುತೇಕ ಶಾಲಾ ದಿನಗಳಲ್ಲಿ ಆಡುತ್ತಿದ್ದ ವಿವಿಧ ಆಟಗಳನ್ನು ನೆನಪಿಸುವ ಕಲಾಕೃತಿಗಳು ನೋಡುಗರ ಮನವನ್ನು ಮುದಗೊಳಿಸುತ್ತಿವೆ.

ಕಲಾವಿದ ಶಿವಕುಮಾರ್ ಅವರು, ಲ್ಯಾಂಡ್ ಸ್ಕೇಪ್, ವಾಲ್ ಪೇಯಿಂಟ್‌ಗಳಲ್ಲಿ ಅರಳಿಸಿರುವ ಮಕ್ಕಳ ಬಂಡಿ ಆಟ, ಗಿಲ್ಲಿದಾಂಡು, ಅರೆಪೆಟ್ಲು ಸೈಕಲ್ ಓಡಿಸುವುದು, ಅಮ್ಮ-ಮಗ, ಉಯ್ಯಾಲೆ ಆಟ, ನಾಯಿಯೊಂದಿಗೆ ವಿಹಾರದ ಕಪ್ಪು-ಬಿಳುಪು ಚಿತ್ರಗಳು ಬಾಲ್ಯದ ಜೀವನವನ್ನು ಮೆಲುಕು ಹಾಕಿಸುತ್ತವೆ. ಮನೆಯ ಅಲಂಕಾರಿಕ ವಸ್ತುಗಳನ್ನು ಕೂಡ ರಚಿಸಿದ್ದಾರೆ. ಅವರು ತಮ್ಮ ಚಿತ್ರಕಲಾ ಜೀವನದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ.

ಆಂದೋಲನ ಡೆಸ್ಕ್

Recent Posts

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ: ತಮ್ಮ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿದ ಬಿಜೆಪಿ ಯುವ ಮುಖಂಡ ನಿಶಾಂತ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ…

6 hours ago

ಹನೂರು| ಗೋಪಿನಾಥಂ ಸಫಾರಿಯಲ್ಲಿ ಪ್ರವಾಸಿಗರಿಗೆ ದರ್ಶನ ಕೊಟ್ಟ ಹುಲಿರಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹಲವು ದಿನಗಳ ನಂತರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ…

9 hours ago

ಇರಾನ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಇಸ್ರೇಲ್

ಟೆಹರಾನ್‌: ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಛಿದ್ರಗೊಂಡ ಆಕಾಶದೆತ್ತರದ ಕಟ್ಟಡಗಳು..! ಟೆಹರಾನ್‌ನಲ್ಲಿನ ಬೃಹತ್ ಕಟ್ಟಡಗಳು…

10 hours ago

ಅಮೆರಿಕಾದ ತದ್ವಿರುದ್ಧ ನಿಲುವಿಗೆ ಸಿಎಂ ಸಿದ್ದರಾಮಯ್ಯ ಖಂಡನೆ

ಶಿವಮೊಗ್ಗ: ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ…

10 hours ago

ಖಮೇನಿ ಹತ್ಯೆ ಖಂಡಿಸಿ ಭಾರತದಲ್ಲೂ ಪ್ರತಿಭಟನೆ

ಜಮ್ಮು-ಕಾಶ್ಮೀರ: ಇಸ್ರೇಲ್‌ ಮತ್ತು ಅಮೇರಿಕಾ ಇರಾನ್‌ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ.…

11 hours ago

ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆ: ಏನದು ಗೊತ್ತಾ.?

ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ತೈಲ ಕಂಪನಿಗಳು ವಾಣಿಜ್ಯ…

11 hours ago