Andolana originals

ಉದ್ಘಾಟನೆಯಾಗದ ಅಂಬಾರಿ ಖ್ಯಾತಿಯ ಅರ್ಜುನನ ಸ್ಮಾರಕ

ಲಕ್ಷ್ಮಿಕಾಂತ್ ಕೊಮಾರಪ್ಪ

೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ ಲೋಕಾರ್ಪಣೆ ಭಾಗ್ಯ

ಸೋಮವಾರಪೇಟೆ: ವಿಶ್ವ ವಿಖ್ಯಾತ ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತ ಆನೆ ಅರ್ಜುನ ಆನೆ ಎರಡು ವರ್ಷಗಳ ಹಿಂದೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದು ಅದರ ನೆನಪಿಗೆ ನಿರ್ಮಿಸಿರುವ ಸ್ಮಾರಕ ಹಾಗೂ ಪ್ರತಿಮೆ ಎರಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ.

೨೦೨೩ರ ಡಿ.೪ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ(ಕೊಡಗಿನ ಗಡಿ ಭಾಗದ ಸಮೀಪ) ಯಸಳೂರು ಸಮೀಪ ಮೀಸಲು ಅರಣ್ಯ ದಬ್ಬಲಕಟ್ಟೆ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದಾದ ತೀವ್ರ ರಕ್ತಸ್ರಾವದಿಂದ ಅರ್ಜುನ ಮೃತಪಟ್ಟಿದ್ದ. ತನ್ನ ಜೊತೆಯಲ್ಲಿದ್ದ ಎರಡು ಸಾಕಾನೆಗಳು ಓಡಿ ಹೋದರೂ ಭಯಪಡದೆ ಏಕಾಂಗಿಯಾಗಿ ಎದುರಿದ್ದ ಕಾಡಾನೆ ಜೊತೆ ಕಾದಾಟ ನಡೆಸಿ ವೀರಮರಣಕ್ಕೀಡಾದ ಅರ್ಜುನನ ಹೋರಾಟದ ಗುಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು.

ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ, ಹೋರಾಟದ ಹಿಂದಿನ ಮೂರು ದಿನ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬಳಲಿದ್ದ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿದ್ದಕ್ಕೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಅರ್ಜುನ ಮೃತಪಟ್ಟ ಅರಣ್ಯ ಪ್ರದೇಶದಲ್ಲಿ ಸಮಾಧಿ ಮಾಡಲಾಗಿತ್ತು. ಸಮಾಧಿ ಮಾಡಿದ ಪ್ರದೇಶಕ್ಕೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸ್ಥಳೀಯ ಶಾಸಕರು, ಸಂಸದರು ಅನೇಕ ಜನಪ್ರತಿನಿಧಿಗಳು ಆಗಮಿಸಿ ಅರ್ಜುನನ ಸಮಾಧಿ ನಿರ್ಮಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಎರಡು ವರ್ಷಗಳಾದರೂ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಆಡಳಿತ ವೈಫಲ್ಯದ ಕೈಗನ್ನಡಿಯಾಗಿದೆ.

ಒಂದು ವರ್ಷದ ಹಿಂದೆ ಪೂರ್ತಿ ಕಾಮಗಾರಿ ಮಾಡದೆ ತರಾತುರಿಯಲ್ಲಿ ಅರಣ್ಯ ಇಲಾಖೆ ಸಮಾಧಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸಿತ್ತು. ಆದರೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಸ್ಥಳೀಯ ಜನಪರ ಸಂಘಟನೆ ಗಳೊಡಗೂಡಿ ಹೋರಾಟ ನಡೆಸಿದ ನಂತರ ಉದ್ಘಾಟನೆಯನ್ನು ಕೈ ಬಿಡಲಾಗಿತ್ತು. ಪ್ಲಾಸ್ಟಿಕ್ ಮೆಟಲ್ ಇರುವ ಅರ್ಜುನನ ಮೂಲ ಪ್ರತಿಮೆ ಯನ್ನು ಸಮಾಧಿ ಸ್ಥಳಕ್ಕೆ ತಂದು ಒಂದು ವರ್ಷ ಕಳೆದಿದ್ದು, ಸಂಪೂರ್ಣ ಪ್ಲಾಸ್ಟಿಕ್ ನಿಂದ ಮುಚ್ಚಲಾಗಿದೆ. ಸದ್ಯ ಅಲ್ಲಿಗೆ ಪ್ರವೇಶವನ್ನು ಅರಣ್ಯ ಇಲಾಖೆ ಸಂಪೂರ್ಣ ನಿಷೇಧಿಸಿದೆ.

ಸಕಲೇಶಪುರ ತಾಲ್ಲೂಕಿನ ಉಚ್ಚಂಗಿ ಹೆತ್ತೂರು ಐಗೂರು ಚಿಕ್ಕಂದೂರು ಮಾರ್ಗವಾಗಿ ದಟ್ಟಾರಣ್ಯದಲ್ಲಿ ಚಲಿಸಬೇಕಾಗಿದ್ದು, ಅರಣ್ಯದ ನಡುವೆ ಕಚ್ಚಾರಸ್ತೆ ಕಲ್ಲುಗಳಿಂದ ತುಂಬಿದೆ. ಸರ್ಕಾರ ಹೇಳಿದಂತೆ ಸುಸಜ್ಜಿತ ಶೌಚಾಲಯ, ಪ್ರವಾಸಿಗರು ಕುಳಿತುಕೊಳ್ಳಲು ಕಲ್ಲಿನ ಚೇರ್, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಟಿವಿ ಕ್ಯಾಮೆರಾ ಕಾಮಗಾರಿ ಪೂರ್ಣಗೊಂಡಿಲ್ಲ. ಸಿಮೆಂಟ್ ಇಟ್ಟಿಗೆ ಮೂಲಕ ನಿರ್ಮಿಸಬೇಕಿದ್ದ ಶೌಚಾಲಯವನ್ನು ಕಂಟೇನರ್ ಮೂಲಕ ನಿರ್ಮಿಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

” ಕಳೆದ ವರ್ಷ ಕಾಮಗಾರಿ ಮುಗಿಸದೆ ಉದ್ಘಾಟನೆಗೆ ಸಿದ್ಧವಾಗಿದ್ದ ಸರ್ಕಾರದ ಕ್ರಮವನ್ನು ವಿರೋಧಿಸಿದ್ದೆ. ಸಾಕಷ್ಟು ಬಾರಿ ಅರಣ್ಯ ಸಚಿವರಿಗೆ ಸಮಾಧಿ ಸ್ಥಳದ ವಾಸ್ತವದ ಬಗ್ಗೆ ತಿಳಿಸಿದ್ದೇನೆ. ಶೀಘ್ರ ಕಾಮಗಾರಿ ಮುಗಿಯುವ ಭರವಸೆ ಇದೆ.”

-ಸಿಮೆಂಟ್ ಮಂಜು, ಶಾಸಕರು, ಸಕಲೇಶಪುರ

” ಮಲೆನಾಡು ರಕ್ಷಣಾ ಸೇನೆಯಿಂದ ಸ್ಥಳಕ್ಕೆ ಭೇಟಿ ನೀಡಿ ಸಮಾಧಿ ಸ್ಥಳದ ಅವ್ಯವಸ್ಥೆ ಬಗ್ಗೆ ಪ್ರತಿಭಟನೆ ನಡೆಸಲಾಗಿದೆ. ಮೂಲಸೌಕರ್ಯಗಳನ್ನು ಕಲ್ಪಿಸದೆ ಉದ್ಘಾಟನೆಗೆ ನಮ್ಮ ವಿರೋಧವಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.”

 -ಸಾಗರ್ ಜಾನಕೆರೆ, ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ

” ಅರ್ಜುನ ಸಮಾಧಿ ಸ್ಥಳದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ ಶೇ.೯೦ರಷ್ಟು ಕಾಮಗಾರಿ ಮುಗಿದಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಅರಣ್ಯ ಸಚಿವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ.

 -ರೇವಣ್ಣ ಸಿದ್ದಯ್ಯ ಹಿರೇಮಠ, ಆರ್‌ಎಫ್‌ಒ, ಯಸಳೂರು ವಿಭಾಗ 

ಅಪಾಯಕಾರಿ ಪ್ರದೇಶ…:  ಸುತ್ತಲೂ ನೀಲಗಿರಿ ತೋಪಿನ ಮಧ್ಯದಲ್ಲಿರುವ ಈ ಪ್ರದೇಶಕ್ಕೆ ರಾತ್ರಿ ಸಮಯದಲ್ಲಿ ಕಾಡಾನೆಗಳು ಆಗಮಿಸುತ್ತವೆ. ಸೋಲಾರ್ ಬೆಳಕಿನ ವ್ಯವಸ್ಥೆ ಇದ್ದರೂ ಈ ಹಿಂದೆ ಸಮಾಧಿ ಸ್ಥಳದಲ್ಲಿ ಕಾಡಾನೆಗಳು ದಾಂದಲೆ ಮಾಡಿ ಹಲವು ವಸ್ತುಗಳನ್ನು ನಾಶಪಡಿಸಿವೆ. ಸಮಾಽಯು ಉದ್ಘಾಟನೆಗೊಂಡರೆ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕಾಡಾನೆ ಉಪಟಳ ಇರುವ ಈ ಪ್ರದೇಶಕ್ಕೆ ಯಾವುದೇ ರಕ್ಷಣೆ ಇಲ್ಲದೆ ಕಾಡಾನೆಗಳಿಂದ ಸಮಸ್ಯೆ ಆದರೆ ಹೊಣೆ ಯಾರು ಎಂಬುದು ಸ್ಥಳೀಯ ಸಾರ್ವಜನಿಕರ ಪ್ರಶ್ನೆ.

ಆಂದೋಲನ ಡೆಸ್ಕ್

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

1 hour ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

5 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

6 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

6 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

7 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

7 hours ago