ಹಲವು ಬಗೆಯ ಸರ್ಕಾರಿ ಸೇವೆಗಳ ಕೆಲಸದ ಜವಾಬ್ದಾರಿ
■ ಆರಂಭದಲ್ಲಿ ಎರಡು ಗಂಟೆಗಳ ಕೆಲಸ; ಈಗ ಮಿತಿಯೇ ಇಲ್ಲದ ಕಾರ್ಯಭಾರ
■ ಕುಟುಂಬದ ಮಾಹಿತಿ ಸಂಗ್ರಹಿಸಲು ಹೋದ ‘ಆಶಾ’ ಮೇಲೆ ಹಲ್ಲೆ
■ ಅನಾರೋಗ್ಯಕ್ಕೀಡಾದರೆ ಉಚಿತ ಚಿಕಿತ್ಸಾ ಸೌಲಭ್ಯವೂ ಇಲ್ಲ
■೫ ಲಕ್ಷ ರೂ.ಗಳವರೆಗೆ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಸೌಲಭ್ಯಕ್ಕೆ ಮನವಿ
ಎಂದಿನಂತೆ ಆಶಾ ಕಾರ್ಯಕರ್ತೆಯಾದ ಸುಶೀಲಾ (ಹೆಸರು ಬದಲಾಯಿಸಲಾಗಿದೆ) ಬೆಳಿಗ್ಗೆ ೧೦ ಗಂಟೆಯಿಂದಲೇ ತಮ್ಮ ಕೆಲಸದಲ್ಲಿ ನಿರತರಾದರು. ಸರ್ಕಾರದ ಆದೇಶದಂತೆ ತಮ್ಮ ನಿಗದಿತ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮನೆ ಮಂದಿಯ ಪಡಿತರ ಚೀಟಿಯ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸುತ್ತಿದ್ದರು. “ನಿಮ್ಮ ಮನೆಯಲ್ಲಿರುವ ವಾಹನ, ಕುಟುಂಬದ ಸದಸ್ಯರ ಸಂಖ್ಯೆ, ನಿಮ್ಮ ಆರ್ಥಿಕ ಪರಿಸ್ಥಿತಿ ಇತ್ಯಾದಿ ವಿವರಗಳನ್ನು ಹೇಳಿ” ಎಂದಾಕ್ಷಣವೇ ಆ ಮನೆಯವರು ಕೋಪದಿಂದ ಇವರನ್ನು ಒದ್ದು, ಬಡಿದರು. “ನೀನು ನಮ್ಮ ಮಾಹಿತಿಯನ್ನು ಸರ್ಕಾರಕ್ಕೆ ಕೊಟ್ಟು, ನಮ್ಮ ಪಡಿತರ ಚೀಟಿಯನ್ನೇ ಕಸಿದುಕೊಳ್ಳಲು ಬಂದಿದ್ದೀಯಾ?” ಎಂದು ಶಂಕಿಸಿ ಆಕೆಯ ಮೇಲೆ ದಾಳಿ ಮಾಡಿದರು. ಕೊನೆಗೆ, ಅಲ್ಲಿಯ ಕೆಲವು ಮಂದಿ ಮಧ್ಯಸ್ಥಿಕೆ ವಹಿಸಿ, ಸುಶೀಲಾ ಅವರನ್ನು ರಕ್ಷಿಸಿದರು.
ಮಾಹಿತಿ ಸಂಗ್ರಹಿಸಲು ಜನರ ಆಕ್ರೋಶಕ್ಕೆ ಬಲಿಪಶುವಾದ ಸುಶೀಲಾ ಕಡೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು. ಅದರ ಖರ್ಚುವೆಚ್ಚದ ಹೊರೆಯೂ ಆಕೆಯ ಕುಟುಂಬದ ಆಶಾ ಕಾರ್ಯಕರ್ತೆಯರು ಮೂಲತಃ ಗರ್ಭಿಣಿಯರು ಮತ್ತು ಹಸುಗೂಸುಗಳ ಆರೈಕೆಗಾಗಿ ನೇಮಕಗೊಂಡವರು. ಕರ್ನಾಟಕದಲ್ಲಿ ತಾಯಂದಿರು ಮತ್ತು ಮಕ್ಕಳ ಸಾವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ರೂಪಿಸಿತು. ಆದರೆ ಕಾಲಕ್ರಮೇಣ ಅವರ ಮೇಲೆ ಅನೇಕ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ.
ನಗರ ಪ್ರದೇಶದಲ್ಲಿ ೨ ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆಯಾದರೆ, ಹಳ್ಳಿಗಾಡಿನಲ್ಲಿ ೧ ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆಯನ್ನು ನೇಮಿಸಲಾಗಿದೆ. ಆರಂಭದಲ್ಲಿ, ಆಶಾ ಕಾರ್ಯಕರ್ತೆಯ ಕೆಲಸ ದಿನಕ್ಕೆ ಕೇವಲ ಎರಡು ಗಂಟೆಗಳಷ್ಟೇ ಎಂದು ಹೇಳಲಾಗಿತ್ತು. ಆದರೆ ಇಂದು, ಸರ್ಕಾರ ನೀಡುವ ಕಾರ್ಯಗಳನ್ನು ಪೂರ್ಣಗೊಳಿಸಲು ಇಡೀ ದಿನ ದುಡಿಯಬೇಕಾದ ಸ್ಥಿತಿ ಬಂದಿದೆ. ನಿಗದಿತ ಕೆಲಸದ ಹೊರತಾಗಿ ಬೇರೆ ಬೇರೆ ಸರ್ಕಾರಿ ಸರ್ವೇಗಳಿಗೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಬಿಎಲ್‌ಒ ಆಗಿ, ಬಿಪಿಎಲ್, ರೇಷನ್ ಕಾರ್ಡ್ ಹಾಗೂ ಇನ್ನಿತರ ಆರೋಗ್ಯ ಇಲಾಖೆಗೆ ಸಂಬಂಧಪಡದ ಮಾಹಿತಿ ಸಂಗ್ರಹಣೆಯ ಸರ್ವೆಗಳನ್ನು ಮಾಡಲೂ ‘ಆಶಾ’ಗಳನ್ನು ನಿಯೋಜಿಸಲಾಗುತ್ತದೆ. ಆರೋಗ್ಯ ಸೇವೆಯೇ ಆಶಾ ಕಾರ್ಯಕರ್ತೆಯರ ಮುಖ್ಯ ಜವಾಬ್ದಾರಿ ಎಂಬುದನ್ನು ಮರೆತಂತೆ, ಅವರನ್ನು ಚುನಾವಣಾ ಕರ್ತವ್ಯಗಳಿಗೆ, ವಿವಿಧ ಸಮೀಕ್ಷೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಯಾವುದೇ ಹೆಚ್ಚುವರಿ ವೇತನ, ಭತ್ಯೆ ಅಥವಾ ಅನುಕೂಲಗಳನ್ನೂನೀಡುತ್ತಿಲ್ಲ. ಪ್ರೋತ್ಸಾಹಧನ ಇಲ್ಲದ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ‘ಆಶಾ’ಗಳ ಮೇಲೆ ಹೇರಲಾಗುತ್ತಿದೆ.
ಆಶಾ ಕಾರ್ಯಕರ್ತೆಯರನ್ನು ಎನ್‌ಎಚ್‌ಎಂ (ನ್ಯಾಷನಲ್ ಹೆಲ್ತ್ ಮಿಷನ್) ಅಡಿಯಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಅವರನ್ನು ಕಾರ್ಮಿಕರು ಎಂದೂ ಪರಿಗಣಿಸುವುದಿಲ್ಲ. ಆದ್ದರಿಂದ ಅವರಿಗೆ ಸೇವಾ ನಿವೃತ್ತಿಯಾಗಿ ಗ್ಯಾಚುಯಿಟಿಯಾಗಲಿ, ಪಿಎಫ್ ಆಗಲಿ ದೊರೆಯುವುದಿಲ್ಲ. ಕಡೆಗೆ ಆಶಾ ಕಾರ್ಯಕರ್ತೆಯರು ಅನಾರೋಗ್ಯಕ್ಕೆ ಗುರಿಯಾದರೆ ಅವರಿಗೆ ಉಚಿತ ಚಿಕಿತ್ಸೆಯೂ ಲಭ್ಯವಿಲ್ಲ! ಹಾಗಾಗಿ ಸುವರ್ಣ ಆರೋಗ್ಯ ಟ್ರಸ್ಟ್‌ನ ಆರೋಗ್ಯ ವಿಮಾ ಯೋಜನೆಯಂತೆ ೫ ಲಕ್ಷ ರೂ.ಗಳವರೆಗೆ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯನ್ನು ಆಶಾ ಕಾರ್ಯಕತೆ ಮತ್ತು ಅವರ ಕುಟುಂಬಕ್ಕೆ ನೀಡಬೇಕು. ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ ೩ ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ದೈನಂದಿನ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು. ಹಾಗೂ ೬೦ ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ೫ ಲಕ್ಷ ರೂ.ಗಳಿಗೆ ಇಡುಗಂಟು ಹೆಚ್ಚಿಸಬೇಕು ಎಂದು ಆಶಾಗಳು ಒತ್ತಾಯಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಹಗಲಿರುಳೂ ಶ್ರಮಿಸುವ ಆಶಾಗಳ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕಿದೆ.
‘ಹೋರಾಟದಲ್ಲಿ ನಾವೂ ಭಾಗವಹಿಸಿದ್ದೆವು’
” ಕಳೆದ ಜನವರಿಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಗೌರವಯುತ ಸಂಬಳಕ್ಕಾಗಿ ನಡೆಸಿದ ಹೋರಾಟದಲ್ಲಿ ಎಐಡಿವೈಸಂಘಟನೆಯಿಂದ ನಾವೂ ಭಾಗವಹಿಸಿದ್ದೆವು. ಹೋರಾಟ ನಡೆದು ಮೂರು ತಿಂಗಳು ಕಳೆದರೂ ಸರ್ಕಾರದ ಕಡೆಯಿಂದ ಅಧಿಕೃತ ಆದೇಶವಾಗಲಿ, ಆಶಾ ಕಾರ್ಯಕರ್ತೆಯರ ಸಂಘದೊಂದಿಗೆ ಮಾತುಕತೆಯಾಗಲಿ ಆಗಿಲ್ಲದಿರುವುದು ಖಂಡನೀಯ. ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಲು ಹಿಂದೆ ಮುಂದೆ ನೋಡುವ ಸರ್ಕಾರ ಜನಸಾಮಾನ್ಯರ ತೆರಿಗೆಯ ಹಣದಲ್ಲಿ ಯಾವುದೇ ಘನತೆ ಇಲ್ಲದೆ ಎಲ್ಲಾ ಶಾಸಕರು, ಸಚಿವರು ತಮ್ಮ ಸಂಬಳ, ಭತ್ಯೆ ಹೆಚ್ಚಿಸಿಕೊಳ್ಳಲು ಯಾವುದೇ ತಕರಾರು ಇಲ್ಲದೆ ಎಲ್ಲಾ ಪಕ್ಷದ ಶಾಸಕರು ಮುಂದಾಗಿರುವುದು ಖಂಡನೀಯ.”
– ಸುನಿಲ್ ಟಿ.ಆರ್., ಜಿಲ್ಲಾ ಅಧ್ಯಕ್ಷರು, ಎಐಡಿವೈಓ, ಮೈಸೂರು.
” ಆಶಾ ಕಾರ್ಯಕರ್ತೆಯರನ್ನು ಎನ್‌ಎಚ್‌ಎಂ (ನ್ಯಾಷನಲ್ ಹೆಲ್ತ್ ಮಿಷನ್) ಅಡಿಯಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಅವರನ್ನು ಕಾರ್ಮಿಕರು ಎಂದೂ ಪರಿಗಣಿಸುವುದಿಲ್ಲ. ಆದ್ದರಿಂದ ಅವರಿಗೆ ಸೇವಾ ನಿವೃತ್ತಿಯಾಗಿ ಗ್ಯಾಚುಯಿಟಿಯಾಗಲಿ, ಪಿಎಫ್ ಆಗಲಿ ದೊರೆಯುವುದಿಲ್ಲ. ಕಡೆಗೆ ಆಶಾ ಕಾರ್ಯಕರ್ತೆಯರು ಅನಾರೋಗ್ಯಕ್ಕೆ ಗುರಿಯಾದರೆ ಅವರಿಗೆ ಉಚಿತ ಚಿಕಿತ್ಸೆಯೂ ಲಭ್ಯವಿಲ್ಲ!”
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…