Andolana originals

ಓದುವವರ, ಬರೆಯುವವರ ಸಂಖ್ಯೆ ಹೆಚ್ಚಿಸಿದ “ಆಂದೋಲನ”

• ಪ್ರೊ.ಸಿದ್ದರಾಜು ಆಲಕೆರೆ, ಮಂಡ್ಯ

ಮಂಡ್ಯ ನಗರದಲ್ಲಿ ಅಂದು ಸ್ಥಳೀಯ ಪತ್ರಿಕೆಗಳೆಂದರೆ ಪೌರವಾಣಿ, ನುಡಿಭಾರತಿ ಹಾಗೂ ‘ಆಂದೋಲನ’ ದಿನಪತ್ರಿಕೆ. ಅವುಗಳಲ್ಲಿ ‘ಆಂದೋಲನ’ ಪತ್ರಿಕೆ ಜನಮನಣೆ ಗಳಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರಗೊಂಡಿತ್ತು. ಪತ್ರಿಕೆಯ ಓದುಗರ ಪತ್ರ ವಿಭಾಗ ಹೆಚ್ಚು ಓದುಗರನ್ನು ಆಕರ್ಷಿಸಿತ್ತು. ಆ ವಿಭಾಗದಲ್ಲಿ ಬರೆಯುವವರ ಸಂಖ್ಯೆಯೂ ಹೆಚ್ಚಾಯಿತು.

ಮಂಡ್ಯ ನಗರದ ಪಿಇಎಸ್ ಸಂಜೆ ಕಾಲೇಜಿನ ಇತಿಹಾಸ ನನ್ನನ್ನು ಅಧ್ಯಾಪಕನಾದ 1995ರಲ್ಲಿ ಅಧ್ಯಾಪಕ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು. ಆ ಸಂದರ್ಭದಲ್ಲಿ ಮಂಡ್ಯದ ಆಧುನಿಕ ಶಿಲ್ಪಿ ಎಂದೇ ಕರೆಯಲ್ಪಡುವ ಕೆ.ವಿ.ಶಂಕರಗೌಡ ಅವರ ಕಂಚಿನ ಪ್ರತಿಮೆಯನ್ನು ಮಂಡ್ಯದಲ್ಲಿ ಸ್ಥಾಪಿಸಬೇಕೆಂದು ಪತ್ರ ಬರೆದೆ. ಆ ಪತ್ರ ‘ಆಂದೋಲನ’ ಪತ್ರಿಕೆಯಲ್ಲಿ ಓದುಗರ ಪತ್ರ ವಿಭಾಗದಲ್ಲಿ ಪ್ರಕಟಗೊಂಡಿತ್ತು. ನನ್ನ ಪತ್ರವೊಂದು ಪತ್ರಿಕೆಯಲ್ಲಿ ಪ್ರಕಟಣೆಗೊಂಡಾಗ ನನಗಾದ ಸಂತಸ ಹೇಳತೀರದು.

ಅಂದಿನಿಂದ ‘ಆಂದೋಲನ’ದ ಓದುಗರ ಪತ್ರ ವಿಭಾಗಕ್ಕೆ ಬರೆಯುವ ಹವ್ಯಾಸ ಬೆಳೆಸಿಕೊಂಡೆ. 1997ರ ಮಾರ್ಚ್ ತಿಂಗಳಿನಲ್ಲಿ ಮಂಡ್ಯ ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ ಅಸ್ತಿತ್ವಕ್ಕೆ ಬಂದ ಮೇಲೆ ಸಂಸ್ಥಾಪಕ ಸಂಪಾದಕರಾದ ಕೋಟಿ ಅವರ, ನನ್ನ ನಡುವೆ ಒಡನಾಟ ಜಾಸ್ತಿಯಾಯಿತು. ಕ್ರಮೇಣ ‘ಹಾಡುಪಾಡು’ ವಿಭಾಗದಲ್ಲೂ ಲೇಖನಗಳನ್ನು ಬರೆಯತೊಡಗಿದೆ. ಸುದ್ದಿ ಚಿತ್ರಸಹಿತ ವಿಭಾಗ ದಲ್ಲಿಯೂ ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಬರೆಯತೊಡಗಿದೆ.

ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದ ರಲ್ಲಿ ಭಾಗವಹಿಸಿದ್ದ ಕೋಟಿಯವರನ್ನು ಭೇಟಿಯಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಮಂಡ್ಯ ಆವೃತ್ತಿಯಲ್ಲಿ ನೀವೇಕೆ ಒಂದು ಅಂಕಣ ಬರೆಯಬಾರದೆಂದು ಹೇಳಿದಾಗ, ನಾನು ಖಂಡಿತ ಬರೆಯುತ್ತೇನೆ ಎಂದು ಒಪ್ಪಿಕೊಂಡೆ. ಅದರಂತೆ ‘ಗ್ರಾಮ ದರ್ಶನ’ ಎಂಬ ಅಂಕಣದಲ್ಲಿ ಒಂದೊಂದು ಗ್ರಾಮದ ಪರಿಚಯ ಲೇಖನಗಳನ್ನು ಬರೆಯುವುದಾಗಿ ಹೇಳಿದೆ. ಅದಕ್ಕವರು ಒಪ್ಪಿದರು. ಹಾಗಾಗಿ ಪ್ರತಿ ಶನಿವಾರ ಬರೆಯುವಂತೆ ಹೇಳಿ ನನ್ನನ್ನು ಒಬ್ಬ ಅಂಕಣಕಾರನನ್ನಾಗಿ ಮಾಡಿದರು.

1999ರ ನವೆಂಬರ್ 23ರಿಂದ 2010ರ ಫೆಬ್ರವರಿ 15ರವರೆಗೆ ‘ಗ್ರಾಮ ದರ್ಶನ’ ಅಂಕಣದಲ್ಲಿ ಮಂಡ್ಯ ಜಿಲ್ಲೆಯ ಪ್ರತಿ ಗ್ರಾಮದ ಸಂಕ್ಷಿಪ್ತ ಪರಿಚಯ, ಸ್ಥಳ ನಾಮ, ಐತಿಹ್ಯ, ಇತಿಹಾಸ, ಹಬ್ಬ, ಸಾಂಸ್ಕೃತಿಕ ವ್ಯಕ್ತಿಗಳ ಬಗ್ಗೆ ಪರಿಚಯ ಲೇಖನಗಳನ್ನು ಬರೆದ ಗ್ರಾಮ ದರ್ಶನ ಅಂಕಣ ಅಂದು ಹೆಚ್ಚು ಜನಪ್ರಿಯವಾಯಿತು. ಆ ಅಂಕಣದಲ್ಲಿ ಪ್ರಕಟವಾದ 50 ಗ್ರಾಮಗಳನ್ನು ಕುರಿತ ಬರಹಗಳನ್ನು ಒಳಗೊಂಡ ಒಂದೊಂದು ಕೃತಿಯನ್ನು ಹೊರತರುವುದಾಗಿ ಕೋಟಿಯವರ ಹತ್ತಿರ ಹೇಳಿ ದಾಗ ಅವರೂ ಕೂಡ ಸಂತಸಗೊಂಡು ಅದಕ್ಕೆ ಪ್ರೇರಕರಾದರು.

2008 ಮತ್ತು 2009ರ ಸಾಲಿನಲ್ಲಿ ಒಂದೊಂದು ಕೃತಿಯಲ್ಲಿ 50 ಗ್ರಾಮಗಳ ಪರಿಚಯವುಳ್ಳ ಎರಡು ಕೃತಿಗಳನ್ನು ಮುನಿಸಲಾಯಿತು ಮೊದಲ ಕೃತಿಗೆ ಕೋಟಿಯವರನ್ನು ಕೊಂಡಾಗ ಅವರು ಬೆನ್ನುಡಿಯನ್ನು ಬರೆದುಕೊಟ್ಟು ಅದಕ್ಕೆ ಮುನ್ನುಡಿಯನ್ನು ವಿಧಾನಪರಿಷತ್‌ನ ಮಾಜಿ ಸದಸ್ಯ ಹಾಗೂ ‘ದ ಹಿಂದು’ ಪತ್ರಿಕೆಯ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಹತ್ತಿರ ಬರೆಸಿ ಎಂದು ಹೇಳಿದರು. ಅದರಂತೆ ಮೊದಲನೇ ಕೃತಿಗೆ ಪಿ. ರಾಮಯ್ಯ ಅವರು, ಎರಡನೇ ಕೃತಿಗೆ ಅಂದಿನ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ (ಗೊ.ರು.ಚ.) ಅವರು ಹಾಗೂ ಮೂರನೇ ಕೃತಿಗೆ ನಾಡೋಜ ದೇಜಗೌರವರು ಮುನ್ನುಡಿ ಬರೆದುಕೊಟ್ಟರು.

2010ರಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಪ್ರಥಮವಾಗಿ ಹೊರತಂದ ಎರಡು ಕೃತಿಗಳನ್ನು ಕೋಟಿಯವರು ಬಿಡುಗಡೆ ಮಾಡಿದರು. 2010ರಲ್ಲಿ ‘ಆಂದೋಲನ’ ಪ್ರಾದೇಶಿಕ ಪತ್ರಿಕೆ ಯಾದ ನಂತರ ಈ ಅಂಕಣ ಅಲ್ಲಿಗೆ ಸ್ಥಗಿತಗೊಂಡಿತು.

‘ಆಂದೋಲನ’ ಹಾಗೂ ಹಾಡುಪಾಡು ಸಂಚಿಕೆ ಯಲ್ಲಿ ನಾನು ಬರೆದ (1997ರಿಂದ 2014) ಲೇಖನ ಗಳನ್ನು ಕ್ರೋಢೀಕರಿಸಿ 2014ರಲ್ಲಿ 236 ಪುಟಗಳುಳ್ಳ ‘ಹೊರಳು- ಹೊಳಹು’ ಎಂಬ ಕೃತಿಯನ್ನು ಹೊರತರ ಲಾಯಿತು. ಒಟ್ಟು ನನ್ನ ಹನ್ನೊಂದು ಕೃತಿಗಳು ಹೊರ ಬರಲು ಕೋಟಿಯವರೇ ಪ್ರೇರಕ ಶಕ್ತಿಯಾಗಿದ್ದರು.

2016ರ ಏಪ್ರಿಲ್ 10ರಂದು ಜಿಲ್ಲಾ ಕಸಾಪ ಕಟ್ಟಡದ ಸಂಚಿ ಹೊನ್ನಮ್ಮ ಸಭಾಂಗಣದಲ್ಲಿ ನಡೆದ ಗ್ರಾಮ ದರ್ಶನದ 5ನೇ ಸಂಪುಟ ಬಿಡುಗಡೆ ಕಾರ್ಯಕ್ರಮಕ್ಕೆ ಕೋಟಿ ಅವರು ಆರೋಗ್ಯ ಸರಿಯಿಲ್ಲದಿದ್ದರೂ ಬಂದು ಕೃತಿ ಬಿಡುಗಡೆ ಮಾಡಿದ್ದು, ಅವರ ದೊಡ್ಡತನಕ್ಕೆ ಮತ್ತೊಂದು ನಿದರ್ಶನ.

‘ನಾನೇ ಕೋಟಿ ಎಂದಾಗ ನಂಬಲಾಗಲಿಲ್ಲ’: 1996ರಲ್ಲಿ ‘ಆಂದೋಲನ’ ದಿನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರನ್ನು ಭೇಟಿ ಮಾಡಬೇಕೆಂದು ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಅವರ ಕಚೇರಿಗೆ ಬೆಳಿಗ್ಗೆಯೇ ಹೋದೆ. ಅದಾಗಲೇ ಕಚೇರಿಯ ಬಾಗಿಲು ತೆರೆ ದಿತ್ತು. ಒಳಹೋಗಿ ನೋಡಿದಾಗ ಟಿ- ಶರ್ಟ್, ಲುಂಗಿ ಹಾಕಿಕೊಂಡಿದ್ದ ಒಬ್ಬರು ಕಾಣಿಸಿಕೊಂಡರು. ಅವರು ಕಚೇರಿಯ ಸಾಮಾನ್ಯ ಸಿಬ್ಬಂದಿಯೆಂದು ಭಾವಿಸಿ ಕೋಟಿಯವರನ್ನು ನೊಡಬೇಕೆಂದು ಅವರ ಮುಂದೆ ಹೇಳಿದೆ. ಅದಕ್ಕವರು ಏನಾಗ ಬೇಕಾಗಿತ್ತೆಂದು ಕೇಳಿದರು. ಸಂಪಾದಕರನ್ನು ನೋಡಬೇಕೆಂದು ಮತ್ತೆ ಹೇಳಿದೆ. ಅವರು ನಾನೇ ಕೋಟಿ ಎಂದಾಗ ಆಶ್ಚರ್ಯ ಚಕಿತನಾದೆ. ಸಂಪಾದಕರೊಬ್ಬರು ಸಾಮಾನ್ಯ ನೌಕರನಂತೆ ಇದ್ದುದನ್ನು ನೋಡಿ ನಂಬಲು ಅಸಾಧ್ಯವಾಯಿತು. ಅವರು ಕಚೇರಿ ಪಕ್ಕದಲ್ಲಿರುವ ಅವರ ವಾಸದ ಮನೆಗೆ ಕರೆದೊಯ್ದು ಕಾಫಿ ಕೊಟ್ಟು ಮಾತನಾಡಿಸಿದ್ದು ಅವರ ಆತಿಥ್ಯ ಸತ್ಕಾರಕ್ಕೆ ಸಾಕ್ಷಿ.

ಆಂದೋಲನ ಡೆಸ್ಕ್

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

14 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

2 hours ago