Andolana originals

ಮುದ್ರಣ ಮಾಧ್ಯಮಕ್ಕೆ ಅಳಿವಿಲ್ಲ; ಡಿಜಿಟಲ್‌, ಎಲೆಕ್ಟ್ರಾನಿಕ್‌ ಮಾಧ್ಯಮಗಳ ಅಬ್ಬರ ಎದುರಿಸಲು ಬೇಕು ಚಾಕಚಕ್ಯತೆ

– ರವಿಚಂದ್ರ ಚಿಕ್ಕೆಂಪಿಹುಂಡಿ

ಪ್ರಸ್ತುತ ಸಾಮಾಜಿಕ, ಡಿಜಿಟಲ್ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳ ಭರಾಟೆ ಹೆಚ್ಚಾಗಿದೆ. ಆತುರದಲ್ಲಿ ನೀಡುವ ಅರೆಬರೆ ಸುದ್ದಿಗಳು, ಸುಳ್ಳು ಸುದ್ದಿಗಳು, ಸುದ್ದಿ ಅಬ್ಬರ ಮುಂತಾದ ಪ್ರವೃತ್ತಿಗಳು ಹೆಚ್ಚಾಗಿವೆ. ಇವುಗಳ ನಡುವೆ ಮುದ್ರಣ ಮಾಧ್ಯಮವು ಎದುರಿಸುತ್ತಿರುವ ಹಲವು ಸವಾಲುಗಳ ಕುರಿತು ಪ್ರಜಾವಾಣಿ ದಿನಪತ್ರಿಕೆಯ ಮಾಜಿ ಸಂಪಾದಕರು, ದಿ ಪ್ರಿಂಟರ‍್ಸ್ (ಮೈಸೂರು) ಪ್ರೈ. ಲಿಮಿಟೆಡ್‌ನ ನಿರ್ದೇಶಕರು, ಪಿಟಿಐ ಸಂಸ್ಥೆಯ ಅಧ್ಯಕ್ಷರು ಹಾಗೂ ಹವ್ಯಾಸಿ ಛಾಯಾಗ್ರಾಹಕರೂ ಆದ ಕೆ. ಎನ್. ಶಾಂತಕುಮಾರ್ ಅವರು ‘ಆಂದೋಲನ’ದ ಸಂಪಾದಕೀಯ ಬಳಗದೊಂದಿಗೆ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರೊಂದಿಗೆ ಔಟ್ ಲುಕ್ ನಿಯತಕಾಲಿಕೆಯ ಸಂಪಾದಕರಾಗಿದ್ದ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

ಆಂದೋಲನ: ಡಿಜಿಟಲ್ ಮಾಧ್ಯಮಗಳು, ಸುದ್ದಿ ವಾಹಿನಿಗಳ ಭರಾಟೆ ನಡುವೆ ಮುದ್ರಣ ಮಾಧ್ಯಮ ಎದು ರಿಸುತ್ತಿರುವ ಸವಾಲುಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

ಶಾಂತಕುಮಾರ್: ಪ್ರಿಂಟ್ ಮೀಡಿಯಾದಲ್ಲಿ ಸಾಕಷ್ಟು ಬದ ಲಾವಣೆಗಳಾಗಿವೆ. ಹತ್ತು ಹದಿನೈದು ವರ್ಷಗಳಿಂದ ಸವಾಲುಗಳು ಹೆಚ್ಚಾಗುತ್ತಿವೆ. ಕೋವಿಡ್ ನಂತರ ಸವಾಲು ಗಳು ಇನ್ನಷ್ಟು ತೀವ್ರವಾಗಿವೆ. ಈ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ, ತಂತ್ರಗಾರಿಕೆ ಬೇಕಾಗಿದೆ. ದಿನನಿತ್ಯ ಹೊಸಹೊಸ ದಾರಿಗಳನ್ನು ಹುಡುಕುತ್ತಾ ಹೋಗಬೇಕು. ಪ್ರಪಂಚದಾದ್ಯಂತ ಮುದ್ರಣ ಮಾಧ್ಯಮ ನಿಧಾನವಾಗಿ ಕ್ಷೀಣಿಸುತ್ತಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಒಂದು ಭರವಸೆ ಕೊಡಬಹುದು. ಕಳೆದ ೨೦೦ ವರ್ಷಗಳ ಇತಿಹಾಸವನ್ನು ನೋಡಿದರೆ ಯಾವುದೇ ಮಾಧ್ಯಮ ಸತ್ತಿಲ್ಲ, ಮೊದಲು ಮುದ್ರಣ ಮಾಧ್ಯಮ ಶುರುವಾಯಿತು. ಆಮೇಲೆ ರೇಡಿಯೋ, ಎಲೆಕ್ಟ್ರಾನಿಕ್ ಮಾಧ್ಯಮ ಹೀಗೆ ಎಲ್ಲವೂ ಬಂದವು. ಆದರೆ ಯಾವುದೂ ಕೊನೆ ಗೊಂಡಿಲ್ಲ. ಎಲ್ಲವೂ ಹೊಸ ರೂಪದೊಂದಿಗೆ ಜಗತ್ತಿಗೆ ತೆರೆದುಕೊಂಡಿವೆ. ಅವು ಗಳ ಪ್ರಭಾವ, ಗಾತ್ರ, ವ್ಯಾಪ್ತಿ ಮುಂತಾದವು ಗಳಲ್ಲಿ ಏರಿಳಿತಗಳಾಗಬಹುದು. ಪತ್ರಿಕೆ ಓದುಗರ ಸಂಖ್ಯೆ ಕಡಿಮೆ ಆಗಬಹುದು. ಪ್ರಸರಣ ಸಂಖ್ಯೆ ಕಡಿಮೆಯಾಗ ಬಹುದು. ಆದರೆ ಕೊನೆಯಾಗುವುದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮ ದೊಡ್ಡಮಟ್ಟದಲ್ಲಿ ಆರಂಭವಾ ದರೂ, ದೊಡ್ಡ ಮಟ್ಟದಲ್ಲಿ ಮುನ್ನುಗ್ಗುತ್ತಿದ್ದರೂ ಅಷ್ಟೇ ಮಟ್ಟದ ಸವಾಲುಗಳೂ ಅದಕ್ಕೆ ಇವೆ. ಹಾಗೆಯೇ ಒಟಿಟಿ ಪ್ರಭಾವ ಹೆಚ್ಚಾಗಿದೆ. ಹಾಗಾಗಿ ಇಡೀ ಮಾಧ್ಯಮ ಕ್ಷೇತ್ರದಲ್ಲೇ ದೊಡ್ಡ ಬದಲಾವಣೆಗಳು ಆಗುತ್ತಿವೆ. ಸವಾಲುಗಳು ಹೆಚ್ಚಾಗುತ್ತಿವೆ. ಮುದ್ರಣ ಮಾಧ್ಯಮವನ್ನು ಮಾತ್ರ ಮುನ್ನಡೆಸುತ್ತಿರುವ ಸಂಸ್ಥೆಗಳು ಆದಾಯ ತರುವ ಹೊಸಹೊಸ ಚಟುವಟಿಕೆಗಳನ್ನು ನಡೆಸಬೇಕು. ಅಂದರೆ ಶಿಕ್ಷಣ ಕ್ಷೇತ್ರ ಮತ್ತಿತರ ವಲಯಗಳಲ್ಲಿ ಈವೆಂಟ್‌ಗಳನ್ನು ನಡೆಸಬೇಕು. ಆ ಒಂದು ಹೊಸ ವಾತಾ ವರಣದಲ್ಲಿ ನಾವು ಹೇಗೆ ಚೇತರಿಸಿಕೊಳ್ಳಬೇಕು, ಹೇಗೆ ಬೆಳೆಯಬೇಕು ಎಂದು ಸಕಾರಾತ್ಮಕವಾಗಿ ನೋಡಬೇಕಾಗುತ್ತದೆ.

——

ಆಂದೋಲನ: ಮುದ್ರಣ ಮಾಧ್ಯಮಗಳ ಜವಾಬ್ದಾರಿ ಹೇಗಿರಬೇಕು?

ಶಾಂತಕುಮಾರ್: ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮದವರ ಜವಾಬ್ದಾರಿ ಹೆಚ್ಚಾಗುತ್ತದೆ. ಡಿಜಿಟಲ್‌ನಲ್ಲಿ ವರದಿಯಾಗುವ ಸುಳ್ಳು ಸುದ್ದಿಗಳು ಬೇಗ ಹರಡುತ್ತವೆ. ಹಾಗಾಗಿಯೇ ಎಷ್ಟೋ ಪತ್ರಿಕೆಗಳು, ಸಂಸ್ಥೆಗಳು -ಕ್ಟ್ ಚೆಕ್ ಎಂಬ ವಿಭಾಗ ಮಾಡಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

—–

ಆಂದೋಲನ: ಇಂದಿನ ವೇಗದ ಬದುಕಿಗೆ ಮುದ್ರಣ ಮಾಧ್ಯಮ ಹೇಗೆ ಒಗ್ಗಿಕೊಳ್ಳಬೇಕು?

ಶಾಂತಕುಮಾರ್: ಖಂಡಿತಾ ಒಗ್ಗಿಕೊಳ್ಳಬೇಕು. ಈಗ ನಿಮ್ಮ ಪತ್ರಿಕೆಯನ್ನೇ ತೆಗೆದುಕೊಂಡರೆ, ೨೦-೩೦ ವರ್ಷಗಳ ಹಿಂದೆ ಪ್ರಕಟ ವಾಗುತ್ತಿದ್ದ ಸ್ವರೂಪಕ್ಕೂ ಈಗ ಪ್ರಕಟವಾಗುತ್ತಿರುವ ಸ್ವರೂಪಕ್ಕೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಸರಿಸುಮಾರು ಶೇ. ೫೦ರಷ್ಟು ಬದಲಾವಣೆಗಳಾಗಿವೆ. ಸಂಸ್ಥೆಯ ಧ್ಯೇಯ, ನಿಯಮಗಳನ್ನು ಉಳಿಸಿಕೊಂಡು ಸ್ವರೂಪವನ್ನು ಬದಲಾವಣೆ ಮಾಡಬಹುದು.

——-

ಆಂದೋಲನ: ಡಿಜಿಟಲ್ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳೊಂದಿಗೆ ಮುದ್ರಣ ಮಾಧ್ಯವೂ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳುತ್ತಾರೆ. ಹಾಗಾದರೆ ಮುದ್ರಣ ಮಾಧ್ಯಮವು ಹಿಂದಿನ ವಿಶ್ವಾಸಾರ್ಹತೆಯನ್ನು ಮತ್ತೆ ಗಳಿಸಬೇಕು ಎಂದರೆ ಏನು ಮಾಡಬೇಕು?

ಶಾಂತಕುಮಾರ್: ಮುದ್ರಣ ಮಾಧ್ಯಮವೂ ಕೂಡ ಸ್ವಲ್ಪ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದು ನಿಜ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಮುಂತಾದವುಗಳೊಂದಿಗೆ ಪೈಪೋಟಿ ಮಾಡಿಕೊಂಡು ಮತ್ತು ಅವುಗಳನ್ನು ಅನುಸರಿಸುವುದು, ಅನುಕರಿಸುವುದು ಮಾಡುವುದರಿಂದ ಈ ರೀತಿ ಆಗುತ್ತದೆ. ಹಾಗಾಗಿ ಕ್ರಿಯೆ ಮತ್ತು ಪ್ರತಿಕ್ರಿಯೆ ವಿಚಾರ ದಲ್ಲಿ ಬಹಳ ಎಚ್ಚರದಿಂದ ಇರಬೇಕು. ಅವರು ಮಾಡಿದ್ದನ್ನೇ ನಾವೂ ಮಾಡದೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು.

——-

ಆಂದೋಲನ: ಪ್ರಸ್ತುತ ಸುದ್ದಿ ಮೂಲಗಳು ಸಾಕಷ್ಟು ಇರುವುದರಿಂದ ನ್ಯೂಸ್ ಏಜೆನ್ಸಿಗಳು ಹೇಗೆ ಉಳಿದುಕೊಂಡಿವೆ?

ಶಾಂತಕುಮಾರ್: ಸುದ್ದಿಗಳನ್ನು ಬಳಸಿಕೊಳ್ಳುವವರು ಕಡಿಮೆಯಾಗಿಲ್ಲ. ಅವುಗಳಿಗೆ ಗ್ರಾಹಕರೂ ಈಗಲೂ ಇದ್ದಾರೆ. ಪಿಟಿಐಗೆ ಅದರದೇ ಆದ ಗ್ರಾಹಕರು ಇದ್ದಾರೆ. ಪತ್ರಿಕೆ, ಟಿವಿಗಳಲ್ಲಿ ಎಲ್ಲ ರಾಜ್ಯಗಳು, ಪ್ರದೇಶಗಳಿಂದಲೂ ಸುದ್ದಿ ಕೊಡುವವರು ವರದಿಗಾರರು ಇರುವುದಿಲ್ಲ. ಸುದ್ದಿ ಬೇರೆ ಬೇರೆ ಮೂಲಗಳಿಂದ ಸಿಗಬಹುದು. ಅದರ ವಿಶ್ವಾಸಾರ್ಹತೆ ಮುಖ್ಯ. ಹಾಗಾಗಿ ನಂಬಿಕೆಗೆ ಅರ್ಹವಾಗಿರುವ ನ್ಯೂಸ್ ಏಜೆನ್ಸಿಗಳ ಪಾತ್ರ ಬಹಳ ಮುಖ್ಯ. ನ್ಯೂಸ್ ಏಜೆನ್ಸಿಗಳಿಗೂ ಸವಾಲುಗಳಿವೆ. ಪಿಟಿಐನಲ್ಲೂ ಬದಲಾವಣೆಗಳನ್ನು ತರುತ್ತಿ ದ್ದೇವೆ. ವಿಡಿಯೋ ಮಾಡಲು ಆರಂಭಿಸಿ ಚೆನ್ನಾಗಿ ನಡೆಯುತ್ತಿದೆ. ಫ್ಯಾಕ್ಟ್ ಚೆಕ್ ಮಾಡಬೇಕು ಎಂದುಕೊಂಡಿದ್ದೇವೆ.

——

ಆಂದೋಲನ: ಸುದ್ದಿರೂಪದಲ್ಲಿ ಎಲ್ಲ ವರ್ಗದ ಓದುಗರನ್ನೂ ತಲುಪಲು ಏನು ಮಾಡಬೇಕು?

ಶಾಂತಕುಮಾರ್: ಒಂದು ಪುಟ ಕ್ರೀಡೆ, ಒಂದು ಪುಟ ಸಾಹಿತ್ಯ, ಒಂದು ಪುಟ ವಿಶೇಷತೆ ಹೀಗೆಂದು ಫಾರ್ಮುಲ ಇಟ್ಟುಕೊಂಡು ಓದುಗರಿಗೆ ಪತ್ರಿಕೆ ತಲುಪಿಸಲು ಸಾಧ್ಯವಿಲ್ಲ. ಎಲ್ಲ ಪತ್ರಿಕೆಗಳಲ್ಲೂ ಒಂದೇ ರೂಪದ ಸುದ್ದಿ ನೀಡುವುದಾದರೆ ಓದುಗರು ನಿಮ್ಮ ಪತ್ರಿಕೆಯನ್ನೇ ಯಾಕೆ ನೋಡಬೇಕು. ಹಾಗಾಗಿ ಓದುಗರಿಗೆ ಅರ್ಥೈಸುವ ಉತ್ತರ ನಮ್ಮಲ್ಲಿ ಇರಬೇಕಲ್ಲವೆ. ಅದು ಯಾವುದೇ ಪತ್ರಿಕೆಗೂ ದೊಡ್ಡ ಸವಾಲು. ಯಾರಾದರು ಮಾತನಾಡಿದ್ದನ್ನೇ ಯಥಾವತ್ ವರದಿ ಮಾಡುವುದಾದರೆ ಅದರಲ್ಲಿ ಯಾವುದೇ ಉಪಯೋಗವಿಲ್ಲ. ಅದಕ್ಕೆ ಪೂರಕ ಅಂಶಗಳನ್ನು ಸೇರ್ಪಡೆಗೊಳಿಸಬೇಕು. ಅವರು ಯಾಕೆ ಆ ಮಾತನ್ನು ಹೇಳಿದರು, ಅದಕ್ಕೆ ಹಿನ್ನೆಲೆ ಏನು? ಅದರ ಪರಿಣಾಮ ಏನು ಹೀಗೆ ಪೂರಕ ಅಂಶ ಇರಬೇಕು.

—–

ಆಂದೋಲನ: ಪತ್ರಿಕೆಗಳಲ್ಲಿ ತನಿಖಾ ವರದಿಗಳು ಕಡಿಮೆಯಾಗಿರುವುದೇಕೆ?

ಶಾಂತಕುಮಾರ್: ಇದು ಓನರ್‌ಶಿಪ್ ಪ್ರಾಬ್ಲಮ್. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತನಿಖಾ ವರದಿಗಳು ಬಹಳ ಕಡಿಮೆಯಾಗಿವೆ. ದೊಡ್ಡ ಮಟ್ಟದ ಸಂಸ್ಥೆಗಳಿಗೆ ಬಂಡವಾಳ ಹೂಡಿರುವವರು ಅವರ ನೂರಾರು ಹೂಡಿಕೆಗಳಲ್ಲಿ ಮಾಧ್ಯಮ ಸಣ್ಣ ಭಾಗವಾಗಿರುವುದರಿಂದ ಇಂತಹವುಗಳತ್ತ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಇನ್ನು ಕೆಲವರು ನೇರವಾಗಿ ಒಂದು ಪಕ್ಷ ಅಥವಾ ಒಂದು ಸರ್ಕಾರದ ಭಾಗ ವಾಗಿರುವುದರಿಂದ ತನಿಖಾ ವರದಿ ಮಾಡುವುದಿಲ್ಲ. ಮಾಡಿ ದರೂ ಅದರಿಂದ ಅವರಿಗೆ ಉಪಯೋಗವಿಲ್ಲ. ಲಾಭವಿರುವು ದಿಲ್ಲ. ಅಲ್ಲದೆ ಬಹಳಷ್ಟು ಪತ್ರಿಕೆಗಳು ರಾಜಕಾರಣಿಗಳು ಹಾಗೂ ಅವರ ಆಪ್ತರ ಕೈಯಲ್ಲಿರುತ್ತವೆ. ಕೆಲವು ಪತ್ರಿಕೆಗಳ ಮಾಲೀಕರು ಬಹಿರಂಗವಾಗಿಯೇ ಒಂದು ಪಕ್ಷದ ಅಥವಾ ಸಿದ್ಧಾಂತದ ಪರವಾಗಿಯೇ ಇರುತ್ತಾರೆ. ಇನ್ನು ಅವರ ತನಿಖೆ ಇದ್ದರ ವಿರೋಧಪಕ್ಷದ ಬಗ್ಗೆ ಇರಬೇಕು. ಅವರ ಪಕ್ಷದ ಬಗ್ಗೆ ಇರುವುದಿಲ್ಲ. ಇಂತಹ ವೈಪರೀತ್ಯಗಳು ಹೆಚ್ಚಾಗುತ್ತಿವೆ. ಅಲ್ಲದೆ ತನಿಖೆ ಮಾಡಬಲ್ಲವರು ಕಡಿಮೆಯಾಗುತ್ತಿದ್ದಾರೆ ಮತ್ತು ಕೆಲವರು ಮಾತ್ರ ಇದ್ದಾರೆ. ಒಂದು ಕಾಲದಲ್ಲಿ ಬಹಳಷ್ಟು ಮಂದಿ ತನಿಖಾ ವರದಿ ಮಾಡುವವರು ಇದ್ದರು.

 

 

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago