Andolana originals

ಓದುಗರ ಪತ್ರ: ಬಾಂಗ್ಲಾದೇಶದ ಅರಾಜಕತೆ ಭಾರತಕ್ಕೆ ಎಚ್ಚರಿಕೆಯ ಘಂಟೆ

ಬಾಂಗ್ಲಾದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎನ್ನುವ ಬೆನ್ನಲ್ಲೆ ಅಲ್ಲಿ ಈಗ ಹಿಂಸಾಚಾರ ಭುಗಿಲೆದ್ದಿದೆ. ಮೀಸಲಾತಿಯನ್ನು ವಿರೋಧಿಸುವ ಹೆಸರಿನಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾ ಚಾರಕ್ಕೆ ತಿರುಗಿದ್ದು, ನೂರಾರು ಮಂದಿ ಬಲಿಯಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅಧಿಕಾರದ ದಾಹ ಒಂದು ದೇಶವನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಎಂಬುದಕ್ಕೆ ಬಾಂಗ್ಲಾದೇಶಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಸರ್ವಾಧಿಕಾರ ತೋರುವ ರಾಜಕಾರಣಿಗಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ನಮ್ಮ ನೆರೆಯ ಬಾಂಗ್ಲಾದೇಶವೇ ಸಾಕ್ಷಿ. ಬಾಂಗ್ಲಾದೇಶದ ಆಡಳಿತ ವ್ಯವಸ್ಥೆ ಅಲ್ಲಿನ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವ ಮತ್ತು ಜನರ ಧ್ವನಿಯನ್ನು ದಮನಿಸುವ ಪ್ರಯತ್ನ ಮಾಡಿತು. ಅದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಹಿಂಸಾಚಾರಕ್ಕೆ ತಿರುಗಿದೆ.

ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಬೇಕು ನಿಜ. ಆದರೆ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಮಾಯಕರು ಬಲಿಯಾಗುವಂತಾಗಬಾರದು. ಅದೇ ರೀತಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕೇ ವಿನಾ ಅದನ್ನು ದುರ್ಬಲಗೊಳಿಸಲು ಮುಂದಾದರೆ ಇಂತಹ ಹಿಂಸಾಚಾರಕ್ಕೆ ಕಾರಣವಾಗಬಹುದು. ಆದ್ದರಿಂದ ನೆರೆಯ ಬಾಂಗ್ಲಾದೇಶದ ರಾಜಕೀಯ ಅರಾಜಕತೆ ನಮಗೆ ಎಚ್ಚರಿಕೆಯ ಘಂಟೆಯಾಗಿದೆ. ಅದನ್ನು ಅರಿತು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

 

ಆಂದೋಲನ ಡೆಸ್ಕ್

Recent Posts

ಮೈಸೂರು ಮುಡಾ ಹಗರಣ: ಹೊಸ ಬಾಂಬ್‌ ಸಿಡಿಸಿದ ಸ್ನೇಹಮಯಿ ಕೃಷ್ಣ

ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ರಾಜ್ಯ ಮುಖ್ಯ…

27 mins ago

ಗುಂಡಾಲ್‌ ಜಲಾಶಯದಲ್ಲಿ ಹುಲಿ ಶವ ಪತ್ತೆ ಪ್ರಕರಣ: ಸ್ಕೂಟರ್‌ ಕ್ಲಚ್‌ ವೈರ್‌ ಉರುಳಿಗೆ ವ್ಯಾಘ್ರ ಬಲಿ?

ಹನೂರು: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ ಹುಲಿಯೊಂದು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ…

39 mins ago

ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್‌ಗೆ ಭೇಟಿ: ನೆತನ್ಯಾಹು ಘೋಷಣೆ

ಟೆಲ್‌ ಅವಿವ್:‌ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ.25 ರಿಂದ 26ರವರೆಗೆ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ ಎಂದು…

52 mins ago

ಹಲವು ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ ದಿಢೀರ್‌ ರದ್ದು?

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ. ಸದ್ಯ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಯ ವಿಚಾರ. ಶಾಸಕರು ಸರ್ಕಾರಿ ಖರ್ಚಿನಲ್ಲಿ…

56 mins ago

ಮಹದೇಶ್ವರ ಬೆಟ್ಟ: ಪೌರಕಾರ್ಮಿಕರ ಜೊತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಎ.ಈ.ರಘು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ…

2 hours ago

ಓದುಗರ ಪತ್ರ: ನಕಲಿ ರಹದಾರಿ: ಕಠಿಣ ಶಿಕ್ಷೆ ವಿಧಿಸಿ

ರಾಜ್ಯದಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಂತಹ ದೂರದ ರಾಜ್ಯಗಳ ದಾಖಲೆಗಳನ್ನು ಬಳಸಿ ಬಸ್‌ಗಳ ನಕಲಿ ರಹ ದಾರಿ(ಪರ್ಮಿಟ್) ಪಡೆದು ಸರ್ಕಾರಕ್ಕೆ…

5 hours ago