ಭೇರ್ಯ ಮಹೇಶ್
ಹೆಬ್ಬಾಳು ಗ್ರಾಮದ ಸುರೇಶ್ ಕಶ್ಯಪ್, ಅರ್ಚಕರಾದ ಶ್ರೀನಿವಾಸಭಟ್ ಅವರ ಮನೆಯಲ್ಲಿ ಆಯೋಜನೆ
ಕೆ.ಆರ್.ನಗರ: ನಾಡಹಬ್ಬ ದಸರಾ ಸಂದರ್ಭದಲ್ಲಿ ಬೊಂಬೆಗಳ ಪ್ರದರ್ಶನ ವಿಶೇಷ ಆಕರ್ಷಣೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ ಎಡತೊರೆಯ ಕೃಷ್ಣರಾಜನಗರ ಪಟ್ಟಣ (ಕೆ.ಆರ್.ನಗರ) ಹಾಗೂ ತಾಲ್ಲೂಕಿನ ವಿವಿಧೆಡೆ ನವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನ, ಮನೆಮನೆಗಳಲ್ಲಿ ವಿಶೇಷವಾಗಿ ದಸರಾ ಬೊಂಬೆಗಳ ಪ್ರದರ್ಶನ ನಡೆಯುತ್ತಿದೆ.
ತಾಲ್ಲೂಕಿನ ಹೆಬ್ಬಾಳು ಗ್ರಾಮದ ಪುರೋಹಿತರಾದ ಸುರೇಶ್ ಕಶ್ಯಪ್ ಮತ್ತು ಅವರ ಪತ್ನಿ ಶಿಕ್ಷಕಿ, ನಿರೂಪಕಿ ಹಾಗೂ ಕವಯಿತ್ರಿ ಭಾರತಿ ಸುರೇಶ್ ಅವರು ಹೆಬ್ಬಾಳು ಗ್ರಾಮದ ತಮ್ಮ ಮನೆಯಲ್ಲಿ ಕಳೆದ ೩೦ ವರ್ಷಗಳಿಂದ ದಸರಾ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸುತ್ತಿದ್ದಾರೆ.
ನವರಾತ್ರಿಯ ಪ್ರಾರಂಭದ ದಿನದಿಂದ ಮನೆಯಲ್ಲಿ ೯ ಹಂತಗಳಲ್ಲಿ ಗೊಂಬೆ ಜೋಡಣೆ ಮಾಡಿ, ಪ್ರತಿದಿನ ಬೆಳಿಗ್ಗೆ ದೇವಿ ಮಹಾತ್ಮ ಪಾರಾಯಣ ಮಾಡಿ, ಸಂಜೆ ಆರತಿ ಮಾಡಿ ಪ್ರತಿದಿನವೂ ಒಂದೊಂದು ಬಗೆಯ ತಿಂಡಿ ನೀಡುವುದು ವಿಶೇಷ. ಗೊಂಬೆ ಜೋಡಣೆಯಲ್ಲಿ ವಿವಿಧ ಶೈಲಿಯ ಗಣಪನ ಮೂರ್ತಿಗಳು, ಪಟ್ಟದ ಗೊಂಬೆಗಳು, ದಶಾವತಾರ, ಸಾಧುಸಂತರು, ಪೌರಾಣಿಕ ಗೊಂಬೆಗಳು ಇದ್ದು, ಮಕ್ಕಳಿಗೆ ಸಂಸ್ಕ ತಿ ಮತ್ತು ಪರಂಪರೆಯನ್ನು ತಿಳಿಸಲಾಗುತ್ತದೆ.
ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿ, ಕ್ಷೀರ ಸಾಗರದಲ್ಲಿ ಲಕ್ಷ್ಮೀನಾರಾಯಣರು, ಶ್ರೀ ಕೃಷ್ಣನ ಲೀಲೆಗಳು, ವಿವಿಧ ಪ್ರಾಂತೀಯ ಶೈಲಿಯ ವಧು-ವರರ ಗೊಂಬೆಗಳು, ಜಂಬೂಸವಾರಿ, ತಿರುಪತಿ, ತಲಕಾವೇರಿ ತೀರ್ಥೋದ್ಭವ ಕುರಿತ ಬೊಂಬೆಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ. ಇವರ ಮಕ್ಕಳಾದ ಅಂಕಿತ ರಾಜ್ ಮತ್ತು ಡಾ.ಆದಿತ್ಯ ಕಶ್ಯಪ್ರ ಸಹಕಾರದೊಂದಿಗೆ ಪ್ರತಿ ವರ್ಷ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿದಿನ ಹಲವಾರು ಜನರು ಗೊಂಬೆಗಳನ್ನು ವೀಕ್ಷಿಸುತ್ತಿದ್ದಾರೆ.
ಪಟ್ಟಣದ ಸಿ.ಎಂ. ರಸ್ತೆಯಲ್ಲಿನ ಗಾಂಧಿ ಪಾರ್ಕ್ ಪಕ್ಕದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀನಿವಾಸಭಟ್ ಅವರ ನೇತೃತ್ವದಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾವಿರಾರು ಬೊಂಬೆಗಳ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ.
ರಾಮಾಯಣ ದರ್ಶನ, ಕೃಷ್ಣಲೀಲಾಮೃತ, ಲಕ್ಷ್ಮೀ, ಸರಸ್ವತಿ, ಶಾರದಾಂಬೆ, ಗಣೇಶ, ಪುರಾಣ ಪ್ರಸಿದ್ದ ದೇಗುಲಗಳು, ರಾಜರ ಕಾಲದ ಆಳ್ವಿಕೆ, ಉಡುಗೆ-ತೊಡುಗೆಗಳನ್ನು ಬಿಂಬಿಸುವ ಬೊಂಬೆಗಳು, ಮರದ ಬೊಂಬೆಗಳು, ಹೀಗೆ ವೈವಿಧ್ಯಮಯ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಹಲವಾರು ವರ್ಷಗಳಿಂದ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದು, ನವರಾತ್ರಿ ಆರಂಭದ ದಿನದಿಂದ ಮುಂದಿನ ೩ ದಿನಗಳವರೆಗೆ ಬೊಂಬೆಗಳ ಪ್ರದರ್ಶನ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಬೊಂಬೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
” ಪ್ರತಿ ವರ್ಷ ದಸರಾ ಬೊಂಬೆಗಳ ಪ್ರದರ್ಶನ ಮಾಡುತ್ತಿದ್ದೇವೆ. ನವರಾತ್ರಿಯ ಕೊನೆಯ ದಿನ ಎಲ್ಲ ಬೊಂಬೆಗಳನ್ನೂ ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದಿಂದ ಬಜಾರ್ ರಸ್ತೆ ಮೂಲಕ ನಗರದ ವಿವಿಧ ಕಡೆಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.”
ಶ್ರೀನಿವಾಸ್ ಭಟ್, ಅರ್ಚಕರು, ಶ್ರೀ ಲಕ್ಷ್ಮೀನಾರಾಯಣ ದೇವಾಲಯ
” ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿಗೆ ೪೦೦ ವರ್ಷಗಳ ಇತಿಹಾಸವಿದೆ. ಹಾಗಾಗಿ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಜಂಬು ಸವಾರಿ ಸೇರಿದಂತೆ ನಾಡಿನ ಸಂಸ್ಕ ತಿಯನ್ನು ಸಾರುವ ಹಾಗೂ ಪುರಾಣ ಪ್ರಸಿದ್ಧ ಐತಿಹಾಸಿಕ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆ ಮೂಲಕ ಇಂದಿನ ಯುವ ಪೀಳಿಗೆಗೆ ನಾಡಹಬ್ಬ, ನವರಾತ್ರಿ ಉತ್ಸವದ ಸಂಪ್ರದಾಯವನ್ನು ತಿಳಿಸಲಾಗುತ್ತಿದೆ.”
ಜೆ.ಎಂ.ಕುಮಾರ್, ಗೌರವಾಧ್ಯಕ್ಷರು, ರೈತ ಪರ್ವ ಸಂಘ
ಪದ್ಮಾ ಶ್ರೀರಾಮ ಸುಮಾರು ೭೦-೭೨ ವರ್ಷಗಳ ಹಿಂದೆ ‘ದಸರಾ’ ಉತ್ಸವದ ಬಗ್ಗೆ ನಮಗಿದ್ದ ಆಕರ್ಷಣೆ, ಮೈಸೂರಿಗೆ ಹೋಗಬೇಕು, ಅಲ್ಲಿನ ಎಲ್ಲ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಬೇರೆಬೇರೆ ಆಂಗಲ್ಗಳಲ್ಲಿ ಸರಣಿ ಫೋಟೋಗಳ ಸೆರೆ ಪಟ್ಟಣಗೆರೆ ಶೆಡ್ನಲ್ಲಿ ಮಹಜರ್ ಮಾಡುವಾಗ ಪೊಲೀಸರು ಕೃತ್ಯ…
ಬೆಂಗಳೂರು: ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…
ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…
ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…