4 ಗ್ರಾಮ ಪಂಚಾಯಿತಿ, 4 ಪಟ್ಟಣ ಪಂಚಾಯಿತಿ, 1 ನಗರಸಭೆ, ಇಲವಾಲ, ನಾಗನಹಳ್ಳಿ ಗ್ರಾಮ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ತರಲು ಸಿದ್ಧತೆ
ಕೆ. ಬಿ. ರಮೇಶನಾಯಕ
ಮೈಸೂರು: ನಗರದ ಹೊರವಲಯದ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಬೃಹತ್ ಮೈಸೂರು ಮಹಾನಗರಪಾಲಿಕೆಯನ್ನು ರಚಿ ಸಲು ಸರ್ಕಾರ ಮತ್ತೆ ಮನಸ್ಸು ಮಾಡಿರುವುದ ರಿಂದ ನನೆಗುದಿಗೆಯಲ್ಲಿದ್ದ ಪ್ರಸ್ತಾಪಕ್ಕೆ ಮರು ಜೀವ ಸಿಕ್ಕಿದೆ. ಇದರೊಂದಿಗೆ ಶೀಘ್ರದಲ್ಲೇ ನಗರ ಪಾಲಿಕೆ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ಹುಸಿಯಾಗುವ ಸೂಚನೆ ದೊರೆತಿದೆ.
ಹಲವು ವರ್ಷಗಳಿಂದಲೂ ಬೃಹತ್ ಮೈಸೂರು ಮಹಾ ನಗರಪಾಲಿಕೆಯನ್ನಾಗಿ ಮಾಡಬೇಕೆಂಬ ಕೂಗಿಗೆ ಕೊನೆಗೂ ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಹೀಗಾಗಿಯೇ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಅಧಿಕಾರಿಗಳ ಮಹತ್ವದ ಸಭೆ ಕರೆಯಲಾಗಿದೆ.
ನಗರಪಾಲಿಕೆ, ನಾಲ್ಕು ಪಟ್ಟಣ ಪಂಚಾಯಿತಿ ಗಳು, ಒಂದು ನಗರಸಭೆ, ನಾಲ್ಕು ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಂದ ಈಗಾಗಲೇ ಮಾಹಿತಿ ಕ್ರೋಡೀಕರಿಸಿರುವ ನಗರಪಾಲಿಕೆ ಅಧಿಕಾರಿಗಳು ಎಲ್. ಕೆ. ಅತೀಕ್ ಅವರ ಎದುರು ಪ್ರಸ್ತುತಪಡಿಸುವರು. ಈ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಕ್ರೋಡೀ ಕರಿಸಿ ಅತೀಕ್ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ. ಇದರಿಂದಾಗಿ ಸ್ಥಳೀಯ ಸಂಸ್ಥೆ ಗಳ ಚುನಾವಣೆ ಜತೆಗೆ ಮೈಸೂರು ಮಹಾ ನಗರಪಾಲಿಕೆ ಚುನಾವಣೆ ನಡೆಯುವುದು ಸಾಧ್ಯವಿಲ್ಲ ಎನ್ನುವ ಸಂದೇಶ ಹೊರ ಬಿದ್ದಿದೆ.
೨೦೧೮ರ ಚುನಾವಣೆ ಹೊತ್ತಲ್ಲಿ ಬೃಹತ್ ನಗರಪಾಲಿಕೆ ರಚನೆ ಮಾಡಬೇಕೆಂಬ ಪ್ರಸ್ತಾಪ ಕೇಳಿ ಬಂದಿತ್ತಾದರೂ ಯಾವುದೇ ಪಕ್ಷಕ್ಕೂ ಬಹುಮತ ದೊರೆಯದ ಕಾರಣ ಕಾಂಗ್ರೆಸ್ ಮತ್ತು ಜಾ. ದಳ ಮೈತ್ರಿ ಸರ್ಕಾರ ಈ ದುಸ್ಸಾಹಕ್ಕೆ ಕೈ ಹಾಕದೆ ವಾರ್ಡ್ ಮೀಸಲಾತಿ ಯನ್ನು ಮಾತ್ರ ಬದಲಿಸಿ ಚುನಾ ವಣೆ ನಡೆಸಿತ್ತು. ನಂತರ ಮೈತ್ರಿ ಪಕ್ಷಗಳು ಅಽಕಾರ ಹಂಚಿಕೊಂಡಿ ದ್ದವು. ಆದರೆ ೨೦೨೩ರ ನವೆಂಬರ್ ತಿಂಗಳಲ್ಲಿ ಪಾಲಿಕೆ ಸದಸ್ಯರ ಅವಧಿ ಮುಗಿದು ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಹೊಸದಾಗಿ ರಚನೆಯಾದ ಒಂದು ನಗರಸಭೆ, ನಾಲ್ಕು ಪಟ್ಟಣ ಪಂಚಾಯಿತಿ ಗಳಿಗೂ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗಾಗಿ, ಮೈಸೂರು ನಗರ ಮತ್ತು ಹೊರ ವಲಯದ ಸ್ಥಳೀಯ ಸಂಸ್ಥೆಗಳನ್ನು ಸೇರ್ಪಡೆಗೊಳಿಸಿ ಬೃಹತ್ ಪಾಲಿಕೆ ರಚನೆ ಮಾಡಿದರೆ ಯಾವುದೇ ತೊಡಕು ಮತ್ತು ಕಾನೂನಾತ್ಮಕ ಸಮಸ್ಯೆ ಉಂಟಾಗುವುದಿಲ್ಲ ಎನ್ನು ವುದನ್ನು ಮನಗಂಡು ರಾಜ್ಯ ಸರ್ಕಾರ ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಸ್ಥಳೀಯ ಸಂಸ್ಥೆಗಳಿಂದಲೂ ಒಪ್ಪಿಗೆ: ಬೃಹತ್ ನಗರಪಾಲಿಕೆ ರಚನೆಗೆ ಸಂಬಂಽಸಿದಂತೆ ಸ್ಥಳೀಯ ಸಂಸ್ಥೆಗಳು ಒಪ್ಪಿಗೆ ನೀಡಿವೆ. ಸಿದ್ದಲಿಂಗಪುರ ಗ್ರಾಪಂ, ರಮ್ಮನಹಳ್ಳಿ, ಕಡಕೊಳ ಪಪಂ, ಹೂಟಗಳ್ಳಿ ನಗರಸಭೆ, ಆಲನಹಳ್ಳಿ ಗ್ರಾಪಂ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ದೊರೆತಿದ್ದರೆ, ಮೈಸೂರು ನಗರ ಪಾಲಿಕೆಯು ಪ್ರಸ್ತಾವನೆ ಸಲ್ಲಿಸಿರುತ್ತದೆ. ಇಲವಾಲ ಗ್ರಾಪಂ, ಶ್ರೀರಾಂಪುರ, ಬೋಗಾದಿ ಪಟ್ಟಣ ಪಂಚಾಯಿತಿ ಗಳು ಆಡಳಿತಾಧಿಕಾರಿಗಳ ಅನುಮೋದನೆಗೆ ಮಂಡಿಸಿದ್ದರೆ, ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿರು ತ್ತದೆ. ಹೀಗಾಗಿ, ಯಾವುದೇ ರೀತಿಯಲ್ಲೂ ತೊಡಕುಗಳು ಉಂಟಾಗದೆ ಇರುವ ಕಾರಣ ಬೃಹತ್ ಪಾಲಿಕೆಯನ್ನಾಗಿ ಮಾಡಿ ವಾರ್ಡುಗಳ ರಚನೆ, ಬೌಂಡರಿ ಗುರುತಿಸುವಿಕೆ ಕಾರ್ಯ ಸುಲಭವಾಗಲಿದೆ ಎಂದು ಹೇಳಲಾಗಿದೆ.
ನಗರಸಭೆ
ಹೂಟಗಳ್ಳಿ
ಪಟ್ಟಣ ಪಂಚಾಯಿತಿ
ಶ್ರೀರಾಂಪುರ
ರಮ್ಮನಹಳ್ಳಿ
ಕಡಕೊಳ
ಬೋಗಾದಿ
ಗ್ರಾಮ ಪಂಚಾಯಿತಿ
ಸಿದ್ದಲಿಂಗಪುರ
ಆಲನಹಳ್ಳಿ
ಚಾಮುಂಡಿಬೆಟ್ಟ
ಇಲವಾಲ (ಇಲವಾಲ ಗ್ರಾಮ ಮಾತ್ರ) ನಾಗನಹಳ್ಳಿ (ಭಾಗಶಃ)
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…