ಪ್ರಶಾಂತ್ ಎಸ್.
ಸ್ಕಾಲರ್‌ಶಿಪ್ ಬಳಸಿಕೊಂಡೇ ವ್ಯಾಸಂಗ ಮಾಡಿದ ಮಹಿನ್ ಸರೂರ್ ಸಾಧ
ಮೈಸೂರು: ಬಡತನದ ನಡುವೆಯೂ ಆಟೋ ಚಾಲಕನ ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆಟೋ ಚಾಲಕರಾಗಿ ಕೆಲಸ ಮಾಡುವ ಮುಜೀಬ್ ಅಹಮ್ಮದ್ ಹಾಗೂ ಫೌಜಿಯಾ ಸುಲ್ತಾನ ಅವರ ಪುತ್ರಿ ಮಹಿನ್ ಸರೂರ್ ೫೭೬ ಅಂಕ ಗಳಿಸಿ ಮಹಾರಾಣಿ ಪದವಿಪೂರ್ವ ಕಾಲೇಜಿಗೆ ಈ ಬಾರಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಶಿಷ್ಯವೇತನದಲ್ಲೇ ಓದು: ಎಸ್‌ಎಸ್ಎಲ್‌ಎಸಿ ಪರೀಕ್ಷೆಯಲ್ಲಿಯೂ ಶೇ.೯೩ ಫಲಿತಾಂಶ ಪಡೆದಿದ್ದರಿಂದ ಶಿಷ್ಯವೇತನ ಪಡೆದುಕೊಂಡಿದ್ದರು. ಅಂದಿನಿಂದ ಪೋಷಕರಿಗೆ ಹೊರೆಯಾಗದಂತೆ ಮಹಿನ್ ಸರೂರ್ ಅವರು ಸರ್ಕಾರಿ ಸ್ಕಾಲರ್‌ಶಿಪ್ ಅನ್ನೇ ಬಳಸಿಕೊಂಡು ವಿದ್ಯಾಭ್ಯಾಸ ಮಾಡಿದ್ದಾರೆ. ಜೊತೆಗೆ ತಾನು ದುಡಿದು ಓದಿನಲ್ಲಿ ಮೇಲುಗೈ ಸಾಧಿಸಿದ್ದಾರೆ.
ನನಗೆ ನನ್ನ ಕುಟುಂಬವೇ ಸೂರ್ತಿ: ನೋಡಮ್ಮ ನಮಗೆ ಹೆಚ್ಚು ಓದಿಸಲು ಆಗಲ್ಲ. ನೀನು ಚೆನ್ನಾಗಿ ಓದಿದರೆ ನಿನ್ನನ್ನು ಯಾರಾದರೂ ಮುಂದೆ ಓದಿಸುತ್ತಾರೆಂದು ಅಪ್ಪ-ಅಮ್ಮ ಆಗಾಗ ಹೇಳುತ್ತಿರುವಾಗ ತುಂಬಾ ದುಃಖವಾಗುತ್ತಿತು. ಈ ಮಾತುಗಳೇ ನನ್ನ ಓದಿಗೆ ಸೂರ್ತಿಯಾಯಿತು ಎಂದು ಓದಿನ ಅನುಭವವನ್ನು ಹಂಚಿಕೊಂಡಿದ್ದಾರೆ.
” ಮನೆಯಲ್ಲಿ ಬಡತನವಿದ್ದರೂ ನನ್ನ ತಂದೆ ಆಟೋ ಓಡಿಸುತ್ತಾ ಬಂದಂತಹ ಹಣವನ್ನು ಕೂಡಿಟ್ಟು ಓದಲು ಸಹಾಯ ಮಾಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಹಾಕಿ ಉನ್ನತ ವಿದ್ಯಾಭ್ಯಾಸ ಮಾಡಿ ನನ್ನ ಗುರಿ ಮುಟ್ಟುತ್ತೇನೆ.”
ಮಹಿನ್ ಸರೂರ್, ವಿದ್ಯಾರ್ಥಿನಿ
” ಮಹಿನ್ ಸರೂರ್ ನಮ್ಮಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಇದರಿಂದ ನಮ್ಮ ಸಿಬ್ಬಂದಿಗೆ ಬಹಳ ಸಂತಸವಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ನಮ್ಮ ಕಾಲೇಜಿನ ಸಿಬ್ಬಂದಿ ವತಿಯಿಂದಲೂ ಸಹಾಯ ಮಾಡುತ್ತೇವೆ.”
ಪಿ.ಸೋಮಣ್ಣ, ಪ್ರಾಂಶುಪಾಲ, ಮಹಾರಾಣಿ ಪದವಿಪೂರ್ವ ಕಾಲೇಜು.
ಮೈಸೂರು: ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬೇಕು ಎಂಬ ಕ್ರಿಕೆಟ್ ಪ್ರೇಮಿಗಳ ಕನಸು ಈಗ ಸಾಕಾರಗೊಳ್ಳಲಿದೆ. ಇದಕ್ಕೆ ಕಾರಣಕರ್ತರಾಗಿರುವವರು ಮೈಸೂರು-ಕೊಡಗು…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 30ಕ್ಕೂ…
ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ವಿಚಾರವಾಗಿ ಸರ್ವಪಕ್ಷ ಸಭೆಗೆ ಹಾಜರಾಗದೇ ಪ್ರಧಾನಿ ಮೋದಿ ಅವರು ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ…
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ…
ಟೆಹ್ರಾನ್: ಇರಾನ್‌ನ ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು…
ಮಡಿಕೇರಿ: ಕೊಲೆ ಪ್ರಕರಣದ ಶಂಕಿತ ಆರೋಪಿಯೊಬ್ಬ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಕೊಲೆ ಪ್ರಕರಣದ…