Andolana originals

ಮಡಿಕೇರಿ ನಗರದಲ್ಲಿ ಅಮೃತ್‌ 2.0 ಕಾಮಗಾರಿ ಅಧ್ವಾನ

ಗುಂಡಿಗಳನ್ನು ಮುಚ್ಚದೆ ಜನರಿಗೆ ತೊಂದರೆ : ಸ್ಥಳೀಯ ನಿವಾಸಿಗಳ ಆಕ್ರೋಶ 

ಮಡಿಕೇರಿ: ಮಹತ್ವಾಕಾಂಕ್ಷಿ ಅಮೃತ್ ೨.೦ ಯೋಜನೆಯ ಅನುಷ್ಠಾನದಿಂದ ಜನಸಾಮಾನ್ಯರಿಗೆ ನಗರದಲ್ಲಿ ತೊಂದರೆಯಾಗುತ್ತಿದ್ದು, ಜನ ಹೈರಾಣಾಗಿದ್ದಾರೆ.

ಕಾಮಗಾರಿ ಮುಗಿದ ನಂತರ ರಸ್ತೆಗಳನ್ನು ಯಥಾಸ್ಥಿತಿಗೆ ತರಬೇಕು ಎಂಬ ನಿಯಮವಿದೆ. ಆದರೆ, ಅಮೃತ್ ೨.೦ ಯೋಜನೆಯ ಕಾಮಗಾರಿ ಸಂದರ್ಭದಲ್ಲಿ ಕೆಲವು ಬಡಾವಣೆಗಳಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಮುಗಿದ ನಂತರ ಕಾಟಾಚಾರಕ್ಕೆ ಮಣ್ಣು ಹಾಕಿ ಮುಚ್ಚಲಾಗಿದೆ. ಕೆಲವು ಕಡೆಗಳಲ್ಲಿ ಮಣ್ಣನ್ನೂ ಮುಚ್ಚದೆ ಹಾಗೆಯೇ ಬಿಡಲಾಗಿದೆ. ರಸ್ತೆಯನ್ನು ಮೊದಲಿನ ಸ್ಥಿತಿಗೆ ತಂದಿಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಪೂರ್ತಿ ಕೆಸರುಮಯವಾಗಿದೆ.ಇಲ್ಲಿ ಸಂಚರಿಸುವವರು ಎಚ್ಚರ ತಪ್ಪಿದರೆ ಅನಾಹುತಗಳು ಸಂಭವಿಸುವುದು ಖಚಿತ. ಮುತ್ತಪ್ಪ ದೇವಾಲಯದ ರಸ್ತೆಯ ಒಂದು ಬದಿಯನ್ನು ಅಗೆದು ಮಣ್ಣು ಮುಚ್ಚಲಾಗಿದೆ. ಸಮರ್ಪಕವಾಗಿ ಮುಚ್ಚದ ಕಾರಣ ಇಲ್ಲಿ ಸಂಚರಿಸಲು ಸಾಧ್ಯವೇ ಆಗದ ಸ್ಥಿತಿ ಇದೆ. ಅಬ್ಬಿ ಫಾಲ್ಸ್‌ಗೆ ಸಂಪರ್ಕ ಬೆಸೆಯುವ ಪ್ರಮುಖ ರಸ್ತೆ ಇದಾಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತವೆ.ಜನರು ಪಾದಚಾರಿ ಮಾರ್ಗದಲ್ಲೂ ನಡೆದು ಹೋಗಲು ಸಾಧ್ಯವಾಗದೆ, ರಸ್ತೆಯಲ್ಲಿಯೇ ಆತಂಕದಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ: ನ.೧೦ರಿಂದ ೧೨ರವರೆಗೆ ಹಸಗೂಲಿ ಪಾರ್ವತಾಂಬೆ ಜಾತ್ರೆ 

ಟಿ.ಜಾನ್ ಬಡಾವಣೆಯ ರಸ್ತೆ ಪೂರ್ತಿ ಕಿತ್ತು ಬಂದಿದ್ದು, ಅಲ್ಲಲ್ಲಿ ಗುಂಡಿ ಬಿದ್ದು, ಸಂಚಾರದುಸ್ತರವಾಗಿದೆ. ಈ ರಸ್ತೆಯ ಬದಿಗಳಲ್ಲಿ ಅಗೆದು ಪೈಪ್ ಅಳವಡಿಸಿ, ಗುಂಡಿ ಮುಚ್ಚಿ ಸುಮಾರು ೩ ತಿಂಗಳು ಕಳೆದರೂ ರಸ್ತೆ ಮೊದಲಿನ ಸ್ಥಿತಿಗೆ ಬಂದಿಲ್ಲ. ಕೆಲವೆಡೆ ಹಾಕಲಾಗಿದ್ದ ವೆಟ್ ಮಿಕ್ಸ್ ಗಳು ಕೊಚ್ಚಿಕೊಂಡು ಹೋಗಿವೆ. ಇನ್ನೂ ಹಲವೆಡೆ ಡಾಂಬರೂ ಇಲ್ಲ, ವೆಟ್‌ಮಿಕ್ಸ್ ಕೂಡ ಇಲ್ಲ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ವಾರ್ಡ್‌ಗಳೇ ಹೀಗಾದರೆ ಇನ್ನಾರಿಗೆ ದೂರುವುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

೮ ವರ್ಷಗಳ ಹಿಂದೆ ಮಡಿಕೇರಿಯಲ್ಲಿ ನಡೆದಿದ್ದ ಒಳಚರಂಡಿ ಕಾಮಗಾರಿ ಪೂರ್ಣವಾಗಲೇ ಇಲ್ಲ. ಹೆಸರಿಗೆ ಮಾತ್ರ ಗುಂಡಿಗಳನ್ನು ನಿರ್ಮಿಸಲಾಯಿತು. ಸಂಪರ್ಕ ನೀಡದೇ ಅವುಗಳೆಲ್ಲವೂ ಕುಸಿಯುವ ಹಂತ ತಲುಪಿವೆ. ಅಮೃತ್೨.೦ ಯೋಜನೆಯೂ ಆ ಸಾಲಿಗೆ ಸೇರಲಿದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.

” ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರವಷ್ಟೇ ನಗರಸಭೆಗೆ ಹಸ್ತಾಂತರವಾಗುತ್ತದೆ.”

ಎಚ್.ಆರ್.ರಮೇಶ್, ಪೌರಾಯುಕ್ತರು, ಮಡಿಕೇರಿ ನಗರಸಭೆ

ಕಾಮಗಾರಿ ವೈಜ್ಞಾನಿಕವಾಗಿಯೇ ನಡೆಯುತ್ತಿದೆ!: 

ಅಮೃತ್೨.೦ ಯೋಜನೆ ಕಾಮಗಾರಿ ಅವೈeನಿಕವಾಗಿ ನಡೆಯುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್‌ಗಳು ಕಾಮಗಾರಿ ವೈeನಿಕವಾಗಿಯೇ ನಡೆಯುತ್ತಿದೆ ಎಂದಿದ್ದಾರೆ. ಪರೀಕ್ಷಾರ್ಥ ನೀರು ಸರಬರಾಜು ಆಗುವವರೆಗೂ ಅಗೆದ ರಸ್ತೆಯನ್ನು ಡಾಂಬರು, ಇಲ್ಲವೇ ಕಾಂಕ್ರೀಟ್ ಹಾಕಿ ಮುಚ್ಚಲು ಸಾಧ್ಯವಿಲ್ಲ. ಪರೀಕ್ಷಾರ್ಥ ನೀರು ಸರಬರಾಜು ಮುಗಿದ ಕೂಡಲೇ ಗುಂಡಿ ತೆಗೆದಿರುವ ಕಡೆ ಮುಚ್ಚಿ ಮೊದಲಿನಂತೆ ಕಾಂಕ್ರೀಟ್ ಇಲ್ಲವೇ, ಡಾಂಬರು ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಬಿಪಿನ್ ತಿಳಿಸಿದ್ದಾರೆ.

-ಪುನೀತ್ ಮಡಿಕೇರಿ

ಆಂದೋಲನ ಡೆಸ್ಕ್

Recent Posts

ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ

ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…

28 mins ago

ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…

32 mins ago

ಹುಲಿ ಸೆರೆಗೆ ಬಂತು ಥರ್ಮಲ್ ಡ್ರೋನ್‌

ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…

37 mins ago

ಕೃಷಿ ಮೇಳಕ್ಕೆ 10 ಲಕ್ಷ ಜನ ಭೇಟಿ

ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ  ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…

42 mins ago

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

10 hours ago