ಎಂದೂ ಮುಕ್ಕಾಗದ ಸಿದ್ದರಾಮಯ್ಯ- ಎಚ್.ಸಿ.ಮಹದೇವಪ್ಪ ಅವರ 40 ವರ್ಷಗಳ ಸ್ನೇಹ
ಸಮಾಜವಾದಿ ಸಿದ್ಧಾಂತದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂಬೇಡ್ಕರ್ ವಾದಿ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಕಾರ್ಯಸೂಚಿ ಬೇರೆ ಇಲ್ಲ. ಇಬ್ಬರೂ ನಂಬಿರುವ ಸಿದ್ಧಾಂತಗಳು ಒಂದೇ. ಡಾ.ಎಚ್.ಸಿ.ಮಹದೇವಪ್ಪ ದಲಿತ ಚಳವಳಿ ಮೂಲಕ ಬಂದರೆ, , ಸಿದ್ದರಾಮಯ್ಯ ಅವರು ಜೆ.ಪಿ.ಚಳವಳಿ, ರೈತಪರ, ದಲಿತಪರ ಹೋರಾಟದ ಹಿನ್ನೆಲೆಯಲ್ಲಿ ಬಂದಿದ್ದರಿಂದಾಗಿ ಇಬ್ಬರದ್ದೂ ಒಂದೇ ಕಾರ್ಯಸೂಚಿಯಾಗಿತ್ತು. ಹೀಗಾಗಿ ಇವರ ಸ್ನೇಹ ಗಾಢವಾಗುತ್ತಾ ಬಂದಿತು. ಪರಸ್ಪರ ಪೂರಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದು ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿದರು.
ರಾಜಕೀಯವಾಗಲಿ, ವೈಯಕ್ತಿಕವಾಗಿಯಾಗಲೀ ಸಿದ್ಧರಾa ಕೈಬಿಡುವುದಿಲ್ಲ. ಸ್ನೇಹಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನಂಬಿಸಿ ದೂರಾದವರ ಮನಸ್ಸಿನಲ್ಲಿಯೇ ನೊಂದುಕೊಳ್ಳುತ್ತಾರೆ. ನೂರಾರು ಯೋಜನೆಗಳನ್ನು ಜಾರಿಗೆ ತಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಜನಪರ ಆಡಳಿತ ನೀಡಿದ್ದರೂ, ಒಬ್ಬ ಹಿಂದುಳಿದ ವರ್ಗದ ನಾಯಕ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ತ ರಾಜಕೀಯ ವಿರೋಧಿಗಳೆಲ್ಲರೂ ಒಟ್ಟಾಗಿ ಕೈ ಜೋಡಿಸಿದರು. ಇಂತಹ ಸಂದರ್ಭದಲ್ಲಿ ಮಹದೇವಪ್ಪ ಸಿದ್ದರಾಮಯ್ಯ ಅವರೊಂದಿಗೆ ಗಟ್ಟಿಯಾಗಿ ನಿಂತರು. ನಾಲ್ಕು ದಶಕಗಳಿಂದ ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರ ಜೋಡಿ ಯಾವ ರೀತಿ ಜತೆ ಜತೆಯಾಗಿ ರಾಜಕಾರಣ ಮಾಡಿಕೊಂಡು ಬಂದಿದೆ ಎಂಬುದು ಕುತೂಹಲಕಾರಿಯಾಗಿದೆ.
ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ಪರಿಚಯ, ಒಡನಾಟದ ಬಗ್ಗೆ ವಿವರಿಸಿದ್ದು ಹೀಗೆ…
ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. 1980ರಲ್ಲಿ ಕರ್ನಾಟಕ ಕ್ರಾಂತಿರಂಗದ ನಂಜನಗೂಡು ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಅವರು 1983ರಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. ನಾನು ಸಿಗರೇಟ್ ಸೇದುತ್ತಾ, ಇನ್ ಶರ್ಟ್ ಮಾಡಿಕೊಂಡು ಓಡಾಡುತ್ತಿದ್ದನ್ನು ಗಮನಿಸಿದ್ದ ಸಿದ್ದರಾಮಯ್ಯ ಅವರು, ಈ ಹುಡುಗ ಯಾರು? ಈ ರೀತಿ ಓಡಾಡುತ್ತಿದ್ದನೆಂದು ಕೇಳಿದ್ದಾರೆ. ನಾನು ಹದಿನಾರು ಗ್ರಾಮದವನಾದರೆ, , ಅವರು ಹತ್ತು ಕಿ.ಮೀ. – ದೂರದ ಸಿದ್ದರಾಮನಹುಂಡಿ ಗ್ರಾಮದವರಾಗಿದ್ದರೂ ಸಂಪರ್ಕವೇ ಇರಲಿಲ್ಲ.
ನನ್ನ – ರಾಜಕೀಯ ಗುರು ಬಿ.ರಾಚಯ್ಯ ಅವರು ಅವರಿಗೆ ಪರಿಚಯ ಮಾಡಿಸಿದ ಮೇಲೆ ಅವರು ಸಿದ್ದರಾಮಯ್ಯ ಮೇಲೆ ನಮ್ಮಿಬ್ಬರ ಸಂಪರ್ಕವಾಯಿತು. ದಲಿತ ; ಸಂಘರ್ಷ ಸಮಿತಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಹುಡುಗನಿಗೂ ಅವಕಾಶ ಮಾಡಿಕೊಡುವಂತೆ ಹೇಳುತ್ತಿದ್ದರು. 1983ರಲ್ಲಿ ಕ್ರಾಂತಿರಂಗ, ಜನತಾರಂಗ ಒಂದಾಗಿ ಜನತಾಪಕ್ಷವಾಯಿತು. ಸಿದ್ದರಾಮಯ್ಯ ಅವರಲ್ಲಿದ್ದ ಹಳ್ಳಿಯ ಜನರ ಬದುಕು, ಬಡವರ ಬಗ್ಗೆ ಮೇಲಿದ್ದ ತುಳಿತ, ದಲಿತರ ಮೇಲಿನ ಬದ್ಧತೆ, ನಾಯಕತ್ವ ನನ್ನನ್ನು ಹೆಚ್ಚು ಒಟ್ಟಿಗೆ ಸೇರುವಂತೆ ಮಾಡಿಸಿತು. 1985ರಲ್ಲಿ ಬಿ.ರಾಚಯ್ಯ ಅವರು ನನಗೆ ತಿ.ನರಸೀಪುರ ಕ್ಷೇತ್ರದಿಂದ ಟಿಕೆಟ್ ಕೊಡಿಸಿದ್ದರು. ಸಿದ್ದಾರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಎರಡನೇ ಬಾರಿಗೆ ಜನತಾಪಕ್ಷದಿಂದ ಸ್ಪರ್ಧಿಸಿದ್ದರು. ಇಬ್ಬರೂ ಆ ಚುನಾವಣೆಯಲ್ಲಿ ಜಯಗಳಿಸಿದೆವು. ಇಬ್ಬರೂ ಒಂದೇ ಪಕ್ಷದಿಂದ ಒಟ್ಟಿಗೆ ವಿಧಾನಸಭೆ ಪ್ರವೇಶ ಮಾಡಿದ ಮೇಲೆ, ನಮ್ಮಿಬ್ಬರ ರಾಜಕೀಯ ಸ್ನೇಹ ಆರಂಭವಾಯಿತು.
1989ರಲ್ಲಿ ಚುನಾವಣೆಯಲ್ಲಿ ಸೋತ ಮೇಲೆ ನಮ್ಮಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. 1989ರಲ್ಲಿ ನಾವಿಬ್ಬರೂ ಕೆಂಗಲ್ ಹನುಮಂತಯ್ಯ ಪ್ರತಿಮೆ ಗೇಟಿನ ಎದುರು ಮಾತನಾಡುತ್ತಾ ನಿಂತಿದ್ದಾಗ ಇದುವರೆಗೂ ಬಿ.ರಾಚಯ್ಯ ಅವರು ನನ್ನ ರಾಜಕೀಯ ಗುರುಗಳಾಗಿದ್ದರು. . ಇನ್ನು ಮುಂದೆ ನಿಮ್ಮ ಸಹವರ್ತಿಯ೯ಯಾಗಿ ಸಾಗುತ್ತೇನೆ ಎಂದು ಹೇಳಿದಾಗ ಬಿಗಿಯಾಗಿ ಅಪ್ಪಿಕೊಂಡರು. ಅಲ್ಲಿಂದ ಅಣ್ಣ-ತಮ್ಮಂದಿರಂತೆ ಅವರ ಮನಸ್ಸಿನಲ್ಲಿ ಕಲ್ಮಶ ಇಲ್ಲ.
ಅಸೂಯೆ ಇಲ್ಲ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅವರ ಮನಸ್ಸು ಸದಾ ಮಿಡಿಯುತ್ತಿತ್ತು, ಅದಕ್ಕಾಗಿಯೇ 14 ಆಯವ್ಯಯವನ್ನು ಮಂಡಿಸಿದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದರು. ಇಡೀ ದೇಶದಲ್ಲಿ ಯಾರೂ ನೀಡಲು ಸಾಧ್ಯವಾಗದ ಕೊಡುಗೆಗಳನ್ನು ನೀಡಿದ್ದರೂ ಸರಿಯಾಗಿ ವಿಶ್ಲೇಷಣೆ ಮಾಡಲಿಲ್ಲ.
ತೆರಿಗೆದಾರರಿಂದ ಸಂಗ್ರಹಿಸಿದ ಹಣ ದುರುಪಯೋಗ ವಾಗದಂತೆ ಜನಪರ, ಸಾಮಾಜಿಕ ನ್ಯಾಯದ ಆಡಳಿತ ಕೊಟ್ಟರು. ಎಸ್‌ಸಿಪಿ-ಟಿಎಸ್‌ಪಿ ಯೋಜನೆ ರೂಪಿಸಿ ದಲಿತರು, ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಒತ್ತು ಕೊಟ್ಟರು. ಇಡೀ ದೇಶದಲ್ಲಿ ಮಾಡಲು ಸಾಧ್ಯವಾಗದ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲು, ಬಡ್ತಿಯಲ್ಲಿ ಮೀಸಲು ಕೊಡಲು ಕಾಯ್ದೆಗೆ ತಿದ್ದುಪಡಿ ತಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ತೀರ್ಮಾನ ಮಾಡಿದರೇ ಹೊರತು ರಾಜಕೀಯ ಕಾರಣಕ್ಕಾಗಿ ಜಾರಿಗೊಳಿಸಿದವರಲ್ಲ.
ಕೃಷಿಕರ ಬದುಕನ್ನು ಸುಗಮಗೊಳಿಸಲು 5 ಲಕ್ಷ ರೂ.ವರೆಗಿನ ಬಡ್ಡಿರಹಿತ ಸಾಲ ಕೊಡುವ ಜತೆಗೆ 50 ಸಾವಿರ ರೂ.ಗಳವರೆಗಿನ ಸಾಲ ಮನ್ನಾ ಮಾಡಿದರು. ಸ್ತ್ರೀ ಶಕ್ತಿ ಸಂಘಗಳಿಗೆ ನೆರವಾಗಲು ಧನಸಹಾಯದಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇತಿಹಾಸದ ಪುಟಗಳಲ್ಲಿ ಸೇರುವಂತೆ ಮಾಡಿದೆ ಎನ್ನುತ್ತಾರೆ ಡಾ.ಎಚ್.ಸಿ.ಮಹದೇವಪ್ಪ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಬಡವರ ವಿರೋಧಿಗಳು ಕುಹುಕವಾಡಿದರೂ ನಾವು ಎದೆಗುಂದಲ್ಲ. ನಮಗೆ ಜನರ ಕಣ್ಣೀರು ಒರೆಸುವುದು ಮುಖ್ಯವೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ಪ್ರತಿಪಾದಿಸುತ್ತಲೇ ಸಿದ್ದರಾಮಯ್ಯರ ನಾಯಕತ್ವಕ್ಕೆ ಆಸರೆಯಾಗಿ ನಿಂತಿದ್ದಾರೆ.
Uh
1985ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ, ನಾನು ಒಂದೇ ಪಕ್ಷದಿಂದ ಒಟ್ಟಿಗೆ ವಿಧಾನಸಭೆ ಪ್ರವೇಶ ಮಾಡಿದ ಮೇಲೆ, ನಮ್ಮಿಬ್ಬರ ರಾಜಕೀಯ ಸ್ನೇಹ ಆರಂಭವಾಯಿತು. 1989ರಲ್ಲಿ ಚುನಾವಣೆಯಲ್ಲಿ ಇಬ್ಬರೂ ಸೋತಿದ್ದೆವು. ಸೋತ ಮೇಲೆ ನಮ್ಮಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. 1989ರಲ್ಲಿ ನಾವಿಬ್ಬರೂ ಕೆಂಗಲ್ ಹನುಮಂತಯ್ಯ ಪ್ರತಿಮೆ ಗೇಟಿನ ಎದುರು ಮಾತನಾಡುತ್ತಾ ನಿಂತಿದ್ದಾಗ ಇದುವರೆಗೂ ಬಿ.ರಾಚಯ್ಯ ಅವರು ನನ್ನ ರಾಜಕೀಯ ಗುರುಗಳಾಗಿದ್ದರು. ಇನ್ನು ಮುಂದೆ ನಿಮ್ಮ ಸಹವರ್ತಿಯಾಗಿ ಸಾಗುತ್ತೇನೆ ಎಂದು ಹೇಳಿದಾಗ ಬಿಗಿಯಾಗಿ ಅಪ್ಪಿಕೊಂಡರು. ಅಲ್ಲಿಂದ ಅಣ್ಣ-ತಮ್ಮಂದಿರಂತೆ ಇದ್ದೇವೆ. ಅವರಿಗೆ ಸಾಥ್ ನೀಡುತ್ತಿ ದ್ದೇನೆ. ಅವರ ಮನಸ್ಸಿನಲ್ಲಿ ಕಲ್ಮಶ ಇಲ್ಲ. ಅಸೂಯೆ ಇಲ್ಲ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅವರ ಮನಸ್ಸು ಸದಾ ಮಿಡಿಯುತ್ತದೆ.
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…