ಎಂ.ನಾರಾಯಣ್
ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ
ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಆರಂಭಗೊಂಡಿದ್ದು, ಜ.೩ರಂದು ಬಂಡಿ ಉತ್ಸವ ಹಾಗೂ ೫ರಂದು ರಥೋತ್ಸವ ನಡೆಯಲಿದೆ.
ಮೂಗಾಸುರನನ್ನು ಸಂಹರಿಸಿ, ರಕ್ತ ಬೀಜಾಸುರರನ್ನು ಸಹೋದರಿ ದೇವತೆಗಳ ಜೊತೆಗೂಡಿ ನಿರ್ನಾಮಗೊಳಿಸಿ ಮೂಗೂರು ಗ್ರಾಮದಲ್ಲಿ ಆದಿಶಕ್ತಿಯಾಗಿ ನೆಲೆಗೊಂಡಿದ್ದಾರೆ ಎಂಬ ಪ್ರತೀತಿ ಇರುವ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರೋತ್ಸವ ವೈಭವದಿಂದ ನಡೆಯಲಿದೆ.
ಡಿ.೩೦ರಂದು ಪೂರ್ಣಾಭಿಷೇಕ, ೩೧ರಂದು ವಧೆ ಉತ್ಸವ, ಜ.೧ರಂದು ಶೇಷ ವಾಹನೋತ್ಸವ ಹಾಗೂ ಪಕ್ಷಿ ವಾಹನೋತ್ಸವ, ಜ.೨ರಂದು ಸಿಂಹ ವಾಹನೋತ್ಸವ ಮತ್ತು ಚಂದ್ರಮಂಡ ಲೋತ್ಸವ ಆಯೋಜನೆಗೊಳ್ಳಲಿವೆ.
ಆಕರ್ಷಕ ಬಂಡಿ ಉತ್ಸವ: ಹುಣ್ಣಿಮೆಯ ದಿನವಾದ ಜ.೩ರ ಶನಿವಾರ ಆಕರ್ಷಣೆಯ ಬಂಡಿ ಉತ್ಸವ ಗ್ರಾಮದ ಬಂಡಿ ಬೀದಿಯಲ್ಲಿ ನಡೆಯಲಿದೆ. ರುದ್ರಾಕ್ಷಿ ಮಂಟಪೋತ್ಸವವೂ ನಡೆಯಲಿದೆ. ಇಲ್ಲಿನ ಬಂಡಿ ಉತ್ಸವಕ್ಕೂ ಮುನ್ನ ಸುತ್ತಮುತ್ತಲ ಗ್ರಾಮಗಳಲ್ಲಿ ಆಯಾಯ ನಿಗದಿತ ದಿನಾಂಕಗಳಂದು ಬಂಡಿ ಉತ್ಸವ ನಡೆಯುತ್ತದೆ. ಬಳಿಕ ಅಂತಿಮ ದೊಡ್ಡ ಬಂಡಿ ಉತ್ಸವ ಮೂಗೂರಿನಲ್ಲಿ ನಡೆಯುತ್ತದೆ. ಜ.೪ರಂದು ಗ್ರಾಮದ ಕಲ್ಯಾಣಿಯಲ್ಲಿ ಅಲಂಕೃತ ತೆಪ್ಪೋತ್ಸವ, ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಜ.೫ ರಂದು ರಥೋತ್ಸವ ವೈಭವ: ಜ.೫ರ ಸೋಮವಾರ ಮಧ್ಯಾಹ್ನ ೩ರಿಂದ ೪.೩೦ಕ್ಕೆ ಅಮ್ಮನವರ ಬ್ರಹ್ಮರಥೋತ್ಸವವು ಸಂಪ್ರದಾಯದಂತೆ ನಡೆಯಲಿದೆ. ಅಂದು ರಾತ್ರಿ ಆನೆ ವಾಹನೋತ್ಸವ ಜರುಗಲಿದೆ. ಜ.೬ರ ಮಂಗಳವಾರ ಶ್ರೀ ಅಮ್ಮನವರು ಉತ್ಸವ ಹೊಸಹಳ್ಳಿಗೆ ಬರಲಿದೆ. ಅಲ್ಲಿ ಮರದ ಕೊಂಬೆಯೊಂದನ್ನು ಸವರಿ ಬಿಟ್ಟಿದ್ದು ಮುಂಜಾನೆಯಲ್ಲಿ ಚಿಗುರು ಕಡಿಯುತ್ತದೆ. ಚಿಗುರಿದ ಎಲೆಗಳ ಸಂಖ್ಯೆಯ ಮೇಲೆ ಗ್ರಾಮಕ್ಕೆ ಶುಭ- ಅಶುಭ ಫಲಗಳ ಸೂಚನೆ ಸಿಗುತ್ತದೆ ಎಂಬುದು ಇಲ್ಲಿನ ನಂಬಿಕೆ. ಮತ್ತೆ ಉತ್ಸವ ಮೂಗೂರಿಗೆ ಆಗಮಿಸ ಲಿದೆ. ಬಳಿಕ ಕುದುರೆ ವಾಹನೋತ್ಸವ ನಡೆಯಲಿದೆ. ಜ.೭ರಂದು ಅಮ್ಮನವರ ಪಲ್ಲಕ್ಕಿ ಉತ್ಸವ ಹಾಗೂ ವೈಮಾಳಿಗೆ ಉತ್ಸವ ಹಾಗೂ ರಾತ್ರಿ ಪೂರ್ಣಾಭಿ ಷೇಕದೊಂದಿಗೆ ೧೫ ದಿನಗಳ ಮೂಗೂರು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಪ್ರತಿ ವರ್ಷದಂತೆ ಈ ಸಾಲಿನ ರಥೋತ್ಸವಕ್ಕೆ ಮೂಲಸೌಕರ್ಯಗಳಾದ ಕುಡಿಯುವ ನೀರು ಮತ್ತು ಮಹಿಳೆ ಹಾಗೂ ಪುರುಷರಿಗೆ ಶೌಚಾಲಯ ವ್ಯವಸ್ಥೆ, ದೇವಾಲಯದ ಹೊರ ಹಾಗೂ ಒಳಾವರಣದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ತಾತ್ಕಾಲಿಕ ಆರೋಗ್ಯ ಕೇಂದ್ರ, ಮುಡಿಕಟ್ಟೆ ವ್ಯವಸ್ಥೆ, ಗ್ರಾಮದ ಬೀದಿಗಳಲ್ಲಿ ಸ್ವಚ್ಛತೆ, ಹೊಸಹಳ್ಳಿಗೆ ತೆರಳುವ ರಸ್ತೆ ಸ್ವಚ್ಛತಾ ಕಾರ್ಯ, ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕಲ್ಪಿಸಲು ತಾಲ್ಲೂಕು ಆಡಳಿತ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ.
” ಜಾತ್ರೋತ್ಸವಕ್ಕೆ ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಜವಾಬ್ದಾರಿ ನೀಡಿದ್ದು, ಪೊಲೀಸರಿಂದ ಶಾಂತಿ ಸಭೆಯನ್ನು ನಡೆಸಿ,ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.”
-ಟಿ.ಜಿ.ಸುರೇಶಾಚಾರ್, ತಹಸಿಲ್ದಾರ್, ತಿ.ನರಸೀಪುರ
” ಮೂಗೂರು ಗ್ರಾಮದಲ್ಲಿ ಪುರಾತನ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರು ಜಾತ್ರೋತ್ಸವದ ಪೂಜಾ ಉತ್ಸವಗಳು ಈಗಾಗಲೇ ಆರಂಭಗೊಂಡಿವೆ. ಬಂಡಿ ಉತ್ಸವ, ರಥೋತ್ಸವ ಹಾಗೂ ಚಿಗುರು ಕಡಿಯುವ ಉತ್ಸವಗಳಿಗೆ ವಿಶೇಷತೆಯಿದೆ. ತಾಲ್ಲೂಕು ಆಡಳಿತದ ಮಾರ್ಗದರ್ಶನದಲ್ಲಿ ಹಬ್ಬದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನಡೆಯಲಿವೆ.”
-ಎಂ.ಬಿ.ಸಾಗರ್, ಪಾರುಪತ್ತೆಗಾರ, ಮೂಗೂರು
ಬಳ್ಳಾರಿ : ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ…
ಬಳ್ಳಾರಿ : ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,…
ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…
ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…
ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.ನಾಗರತ್ನಮ್ಮ ಅವರ…
ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…