Andolana originals

ವಯೋಮಿತಿ ಕಡಿತ ನಿಯಮಬಾಹಿರ: ಆರೋಪ

ಕೆ.ಎಂ.ಅನುಚೇತನ್

ಎಟಿಐ ಕೆಲ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ

ನೇಮಕಾತಿ ವಯೋಮಾನ ೬೫ರಿಂದ ೫೫ ವರ್ಷಕ್ಕೆ ಇಳಿಕೆ

ಸ್ಪಷ್ಟೀಕರಣಕ್ಕಾಗಿ ಎಟಿಐ ಅಧಿಕಾರಿಗಳಿಗೆ ಆಡಳಿತ ತಜ್ಞರ

ಎಲ್ಲ ಸರ್ಕಾರಿ ಇಲಾಖೆಗಳ ಉದ್ಯೋಗಿಗಳಿಗೆ ತರಬೇತಿ ನೀಡುವುದು ಎಟಿಐ ಹೊಣೆ 

ಮೈಸೂರು: ರಾಜ್ಯ ಸರ್ಕಾರದ ತರಬೇತಿ ಸಂಸ್ಥೆಗಳ ಮಾತೃಸಂಸ್ಥೆಯಾದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಹೊರಗುತ್ತಿಗೆ ತರಬೇತುದಾರ ಬೋಧಕ ಹಾಗೂ ಬೋಧಕೇತರರ ನೇಮಕಾತಿಯ ಗರಿಷ್ಟ ವಯೋಮಿತಿಯನ್ನು ೬೫ ವರ್ಷಗಳಿಂದ ೫೫ ವರ್ಷಗಳಿಗೆ ಕಡಿತಗೊಳಿಸಲಾಗಿದೆ. ಇದಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಎಟಿಐ ಸಂಸ್ಥೆಗೆ ಎಲ್ಲಾ ಸರ್ಕಾರಿ ಇಲಾಖೆಗಳ ಗ್ರೇಡ್ ‘ಎ’ ಮತ್ತು ಗ್ರೇಡ್ ‘ಬಿ’ ಅಽಕಾರಿಗಳಿಗೆ, ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಹೊಣೆಗಾರಿಕೆ ಇದೆ. ಇವರಿಗೆ ತರಬೇತಿ ನೀಡಲು ಗುತ್ತಿಗೆ ಆಧಾರದಲ್ಲಿ ಬೋಧಕರನ್ನು ಹಾಗೂಬೋಧಕೇತರರನ್ನು ಎಟಿಐ ನೇಮಿಸಿಕೊಳ್ಳುತ್ತದೆ. ಅತ್ಯಂತ ನುರಿತ, ಅನುಭವಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತದೆ. ಆದರೆ, ಇದೀಗ ಆಡಳಿತ ವ್ಯವಸ್ಥೆಯ ನೇಮಕಾತಿಯಲ್ಲಿ ಲೋಪದೋಷಗಳು ಕಾಣುತ್ತಿವೆ ಎಂದು ಆರೋಪಿಸಲಾಗಿದೆ. ಗುತ್ತಿಗೆ ನೌಕರರ ನೇಮಕಾತಿ ವಯೋಮಿತಿಯನ್ನು ಏಕಾಏಕಿ ೬೫ರಿಂದ ೫೫ ವರ್ಷಗಳಿಗೆ ಕಡಿತಗೊಳಿಸಿದ್ದಾರೆ ಎಂಬುದಾಗಿ ಹಲವರು ಆಕೇಪ ವ್ಯಕ್ತಪಡಿಸಿದ್ದಾರೆ.

ಕೆಲವೇ ಅಧಿಕಾರಿಗಳ ಇಂತಹ ನಿರ್ಧಾರದಿಂದ ಎಐಟಿನ ಮೌಲ್ಯ ಕುಸಿಯುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಯಾವುದೇ ಅಧಿಕಾರಿಗಳಿಗೆ, ನೌಕರರಿಗೆ ೬೦ ವರ್ಷಗಳವರೆಗೆ ಕಾರ್ಯನಿರ್ವಹಿಸುವ ಕಾರ್ಯಕ್ಷಮತೆ ಇರುತ್ತದೆ. ಈ ಆಧಾರದಲ್ಲಿ ವಯೋಮಿತಿಯನ್ನು ತೀರ್ಮಾನಿಸಲಾಗಿದೆ. ಆದರೆ ಎಟಿಐನ ಆಡಳಿತ ಮಂಡಳಿಯು ಈ ನಿಯಮವನ್ನು ಮೀರಿ ಗುತ್ತಿಗೆ ತರಬೇತುದಾರರ ನೇಮಕಾತಿ ಪ್ರಕ್ರಿಯೆಯನ್ನು ೫೫ ವರ್ಷಗಳಿಗೆ ಕಡಿತಗೊಳಿಸಿದ್ದು, ಇದರಿಂದ ಅನುಭವಿಗಳ, ನುರಿತ ತಜ್ಞರ ಕೊರತೆ ಎದುರಾಗಲಿದೆ.

ಇಲಾಖೆ ಕೇವಲ ಕಡಿಮೆ ವಯೋಮಿತಿ ಆಧರಿಸಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ನೂರಾರು ನುರಿತ ಹಾಗೂ ಅನುಭವಿ ತರಬೇತುದಾರರನ್ನು ಕೈಬಿಡಬೇಕಾಗುತ್ತದೆ. ಯಾವ ಮಾನದಂಡ ಆಧರಿಸಿ ವಯೋಮಿತಿಯನ್ನು ಕಡಿತಗೊಳಿಸಿದೆ ಎಂಬುದಕ್ಕೆ ಆಡಳಿತ ಮಂಡಳಿ ಯಾವುದೇ ಸ್ಪಷ್ಟೀಕರಣ ಅಥವಾ ಕಾರಣಗಳನ್ನು ಬಹಿರಂಗಪಡಿಸಿಲ್ಲ ಎಂಬುದಾಗಿ ಸಂಸ್ಥೆಯ ಗುತ್ತಿಗೆ ಆಧಾರಿತ ಹಿರಿಯ ತರಬೇತುದಾರ ಡಾ.ಜೆ.ಆರ್.ಪರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

೨೦೨೨ರಿಂದ ವಯೋಮಿತಿ ಸಡಿಲಿಕೆ: ಎಟಿಐ ಸಂಸ್ಥೆ ೨೦೨೧-೨೨ನೇ ಸಾಲಿನವರೆಗೆ ಗುತ್ತಿಗೆ ತರಬೇತುದಾರರಬೋಧಕ ಮತ್ತು ಬೋಧಕೇತರರ ನೇಮಕಾತಿ ವಯೋಮಿತಿಯನ್ನು ಗರಿಷ್ಟ ೬೫ ವರ್ಷಗಳಿಗೆ ನಿಗದಿಪಡಿಸಿತ್ತು. ಆದರೆ ೨೦೨೧-೨೨ನೇ ಸಾಲಿನ ನೇಮಕಾತಿ ಬಳಿಕ, ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅಧಿಸೂಚನೆಯಲ್ಲಿ ವಯೋಮಿತಿಯನ್ನು ಏಕಾಏಕಿ ೧೦ ವರ್ಷಗಳಿಗೆ ಕಡಿತಗೊಳಿಸಲಾಗಿದೆ. ಇದರಿಂದ ವಯೋಮಿತಿ ಮೀರಿದ ನೂರಾರು ನುರಿತ ತಜ್ಞರು, ಸಂಶೋಧಕರು, ಅನುಭವಿ ಬೋಧಕರು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವಂತಾಗಿದೆ. ಇದು ವ್ಯವಸ್ಥಿತ ಹುನ್ನಾರ ಎಂಬ ಆರೋಪ ಕೇಳಿ ಬಂದಿದೆ.

ಅನುಭವಿ ತರಬೇತುದಾರರನ್ನು ಕೈಬಿಡಲಾಗುತ್ತಿದೆ. ಅಂತಿಮವಾಗಿ ಸಂಸ್ಥೆಗೆ ಅವಶ್ಯಕವಿರುವ ಗುತ್ತಿಗೆ ತರಬೇತುದಾರರನ್ನು ಆಯ್ಕೆ ಮಾಡುವ ಅವಕಾಶವಿದ್ದರೂ, ೫೫ ವರ್ಷದೊಳಗಿನವರನ್ನು ನೇಮಿಸಿಕೊಳ್ಳುವುದರ ಹಿಂದಿನ ಹುನ್ನಾರ ಏನು? ಇದರರ್ಥ ಅಧಿಕಾರಿಗಳು ತಮಗೆ ಬೇಕಾದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಯೋಮಿತಿ ಕಡಿತ ಸಾಧಕ, ಬಾಧಕಗಳೇನು?: ಗುತ್ತಿಗೆ ತರಬೇತುದಾರರ ನೇಮಕಾತಿಗೆ ವಯೋಮಿತಿಯನ್ನು ಕಡಿತಗೊಳಿಸಿದ್ದು, ಆಡಳಿತ ವ್ಯವಸ್ಥೆಯ ಅನುಭವದ ಕೊರತೆ ಇರುವವರಿಗೆ ಹುದ್ದೆ ದೊರೆಯುತ್ತದೆ. ಇದರ ಹೊರತು ಸಂಸ್ಥೆಗೆ ಸಮಸ್ಯೆಗಳೇ ಹೆಚ್ಚಾಗಿ ಕಾಡಲಿವೆ. ಅನುಭವಿಗಳನ್ನು ಕಾರ್ಯಕ್ಷಮತೆ ಇರುವ ಅಂತಹವರನ್ನು ಕೈಬಿಡುವುದರಿಂದ ಸಂಸ್ಥೆಯಲ್ಲಿ ನೀಡುವ ತರಬೇತಿಯು ಕಳಪೆಯಾಗುವ ಭೀತಿಯಿದೆ. ಅನುಭವಸ್ಥರ ಕೊರತೆಯಿಂದಾಗಿ ಮುಂಬರುವ ತರಬೇತುದಾರರಿಗೆ ಗುಣಮಟ್ಟದ ಮಾರ್ಗದರ್ಶನ ಸಿಗದಂತಾಗಬಹುದು. ಸಮರ್ಪಕವಾದ ಸಂಶೋಧನಾತ್ಮಕ ಮಾಹಿತಿ ದೊರೆಯುವುದಿಲ್ಲ ಎಂಬ ಆತಂಕ ಎದುರಾಗಿದೆ. ಸಂಶೋಧನೆಯಲ್ಲಿ ಗುಣಮಟ್ಟ ವನ್ನು ನಿರೀಕ್ಷಿಸಲಾಗದು.

ಹಲವು ಆರೋಪ ಹೊತ್ತ ಎಟಿಐ: ಎಟಿಐ ಸಂಸ್ಥೆಯು ೨೦೧೪ರವರೆಗೆ ನುರಿತ ಸಂಶೋಧಕರಿಂದ ಪ್ರತಿವರ್ಷ ಹಲವಾರು ಪ್ರಕಟಣೆ, ಗ್ರಂಥಗಳನ್ನು ಹೊರತರುತ್ತಿತ್ತು. ನಂತರ ಆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಅಲ್ಲದೆ, ೨೦೨೧ರ ನಂತರ ಎಟಿಐಗೆ ಸಂಬಂಧಿಸಿದ ಪರೀಕ್ಷೆ, ಸಂದರ್ಶನದ ಜವಾಬ್ದಾರಿಗಳನ್ನು ಬೇರೊಂದು ಸಂಸ್ಥೆಗೆ ನೀಡಲಾಗುತ್ತಿದೆ. ನೇಮಕಾತಿಯಲ್ಲಿ ವಯೋಮಿತಿ ಕಡಿತಕ್ಕೆ ಸಂಬಂಧಿಸಿದಂತೆ ಎಟಿಐ ಸ್ಪಷ್ಟೀಕರಣ ನೀಡಬೇಕು. ಸಂಸ್ಥೆಗೆ ನುರಿತ ತರಬೇತುದಾರರ ನೇಮಕಾತಿ ಮಾಡಬೇಕಿದೆ. ಈ ಕುರಿತು ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂಬುದಾಗಿ ಆಡಳಿತ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸ್ಪಷ್ಟೀಕರಣಕ್ಕೆ ಜಂಟಿ ನಿರ್ದೇಶಕರ ನಿರಾಕರಣೆ: 

ವಯೋಮಿತಿ ಸಡಿಲಿಕೆ ಕುರಿತಾಗಿ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ (ಆಡಳಿತ) ಬಿ.ಎನ್. ವೀಣಾ ಅವರನ್ನು ಪ್ರಶ್ನಿಸಿದಾಗ, ಯಾವುದೇ ಮಾಹಿತಿ ನೀಡುವುದಿಲ್ಲ. ಈ ಕುರಿತು ಹಿಂದೆ ನಡೆದ ಪ್ರಕ್ರಿಯೆ ತಿಳಿದಿಲ್ಲ. ವಿಚಾರ ಕುರಿತು ಏನನ್ನೂ ಮಾತನಾಡುವುದಿಲ್ಲ ಎಂದು ಹೇಳಿದರು.

” ಬೋಧಕರ ನೇಮಕಾತಿ ವಯೋಮಿತಿಯನ್ನು ಸಡಿಲಗೊಳಿಸಲು ಮನವಿ ನೀಡಿದರೂಪರಿಗಣಿಸದ ಎಟಿಐ ಅಽಕಾರಿಗಳು ಸೂಕ್ತ ಕಾರಣ ನೀಡುತ್ತಿಲ್ಲ. ಆ ಮೂಲಕ ಬೋಧಕರ ನೇಮಕಾತಿ ವಿಷಯವನ್ನು ಗೊಂದಲಗೊಳಿಸಿ, ವಿಷಯ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಂಚಿತ ತರಬೇತಿ ಬೋಧಕ ಅಭ್ಯರ್ಥಿಯೊಬ್ಬರು ಹೇಳಿಕೊಂಡಿದ್ದಾರೆ.”

ಆಂದೋಲನ ಡೆಸ್ಕ್

Recent Posts

ನಿಲ್ಲದ ಚಿನ್ನದ ನಾಗಾಲೋಟ : 1.61ಲಕ್ಷ ರೂ.ತಲುಪಿದ ಬಂಗಾರ

1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…

3 hours ago

ಯುವಕನ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…

3 hours ago

ಪಾದಯಾತ್ರೆ ವೇಳೆ ಚಿರತೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ : ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…

4 hours ago

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ : ಜಿ.ಟಿ.ದಿನೇಶ್‌ಗೆ ಹೈಕೋರ್ಟ್ ಶಾಕ್

ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…

5 hours ago

ಸಮೀಕ್ಷೆ | ಫೆ.10ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…

5 hours ago

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…

5 hours ago