Andolana originals

ಅಂಬೇಡ್ಕರ್ ಭವನ ಪೂರ್ಣಕ್ಕೆ ಆಡಳಿತಾತ್ಮಕ ಅನುಮೋದನೆ

ಕೆ.ಬಿ.ರಮೇಶನಾಯಕ

೧೯.೧೦ ಕೋಟಿ ರೂ.ಗಳಿಂದ ೨೩.೮೩ ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಒಪ್ಪಿಗೆ 

ಮೈಸೂರು: ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ೨೩.೮೩ ಕೋಟಿ ರೂ. ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಗೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಅಂಬೇಡ್ಕರ್ ಜಯಂತಿ ಮುಗಿದ ಬೆನ್ನಲ್ಲೇ ಕಾಮಗಾರಿ ಆರಂಭವಾಗಲಿದೆ.

ಭವನದ ಕಾಮಗಾರಿ ಪೂರ್ಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಲ್ಲಿಸಿದ್ದ ೨೩.೮೩ ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇದರಿಂದಾಗಿ ಕಾಮಗಾರಿ ಅಪೂರ್ಣದ ಬಗ್ಗೆ ಅಸಮಾಧಾನಗೊಂಡಿದ್ದ ದಲಿತ ಸಮುದಾಯ, ಹೋರಾಟಗಾರರಿಗೆ ಸಂತಸವನ್ನುಂಟು ಮಾಡಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹ ದೇವಪ್ಪ ಅವರ ಪ್ರಯತ್ನಕ್ಕೆ ದೊಡ್ಡ ಫಲ ದೊರೆತಿದೆ.

ಮೈಸೂರು ನಗರದ ಹೃದಯ ಭಾಗದಲ್ಲಿರುವ ದೇವರಾಜ  ಪೊಲೀಸ್ ಠಾಣೆಯ ಬಳಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೨೦೦೮ ರಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ, ನಿಗದಿತ ಕಾಮಗಾರಿ ಮುಗಿಸುವ ಬದಲಿಗೆ ಅರ್ಧಕ್ಕೆ ನಿಂತಿತ್ತು. ವಿ.ಶ್ರೀನಿವಾಸ ಪ್ರಸಾದ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಭವನಕ್ಕೆ ಹೊಸ ರೂಪ ನೀಡಲು ವಿನ್ಯಾಸವನ್ನು ಬದಲಿಸಿ ೧೮ ಕೋಟಿ ರೂ. ಬಿಡುಗಡೆ ಮಾಡವಂತೆ ನೋಡಿಕೊಂಡರು. ಆದರೆ, ಸಕಾಲದಲ್ಲಿ ಕಾಮಗಾರಿ ಶುರುವಾಗದ ಕಾರಣ ಕಾಮಗಾರಿ ಮುಗಿಯಲಿಲ್ಲ. ನಂತರ, ಕೆಲವು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆದುಕೊಂಡಿದ್ದರು.

ಇದಾದ ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ಇದರ ಹೊಣೆಯನ್ನು ಹೊತ್ತಿದ್ದರಿಂದ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿ ಅಭಿವೃದ್ಧಿ ನಿಧಿ-೧ರಲ್ಲಿ ೧೯.೧೦ ಕೋಟಿ ರೂ.ಗಳ ಅಂದಾಜು ಪಟ್ಟಿ ಮೊತ್ತ ದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ, ಹಾಲಿ ನಿರ್ಮಿಸಿರುವ ಕಟ್ಟಡವು ತೆರೆದ ಸಭಾಂಗಣವಾಗಿದ್ದು, ಅದನ್ನು ಮುಚ್ಚಿದ ಸಭಾಂ ಗಣವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಅದಕ್ಕೆ ಅವಶ್ಯವಿರುವ -ಲ್ಸ್ ಸೀಲಿಂಗ್ ಲೈಟಿಂಗ್ಸ್ ಅಳವಡಿಸಲು ಹಾಗೂ ಹಾಲಿ ಇರುವ ಎತ್ತರವನ್ನು ಕಡಿಮೆಗೊಳಿಸಿ ಹವಾ ನಿಯಂತ್ರಣವನ್ನು ಸಮರ್ಪಕವಾಗಿ ಬಳಸಲು ಕಡಿಮೆ ಎತ್ತರದಲ್ಲಿ ಡೆಡಿಕೇಟೆಡ್ ಕಾಲಮ್ಸ್ ಗಳ ಅವಶ್ಯಕತೆ ಇರುತ್ತದೆ.

ಆಡಿಟೋರಿಯಂನ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಶೌಚಾಲಯ ಪರಿಗಣಿಸಿರುವುದು ಹಾಗೂ ಪ್ರಸ್ತುತ ದರಗಳನ್ನು ಗಮನಿಸಿ ೧೯.೧೦ ಕೋಟಿ ರೂ.ಗಳಿಂದ ೨೩.೮೩ ಕೋಟಿ ರೂ.ಗೆ ಪರಿಷ್ಕೃತಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಮುಡಾ ಆಯುಕ್ತರು ಸರ್ಕಾರಕ್ಕೆ ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದರು. ಇದರಿಂದಾಗಿ, ಪ್ರಾಽಕಾರದ ವತಿಯಿಂದ ಅಂಬೇಡ್ಕರ್ ಭವನದ ಬಾಕಿ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ೪.೭೩ ಕೋಟಿ ರೂ.ಗಳ ಅನುದಾನವನ್ನು ವಿ -ಂಡ್ ಡೆವಲಪ್‌ಮೆಂಟ್ -ಂಡ್-೧ರಲ್ಲಿ ಭರಿಸಲು ವಿನಾಯಿತಿ ನೀಡಿ ೨೩.೮೩ ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಶೀಘ್ರದಲ್ಲೇ ಟೆಂಡರ್: ಮುಡಾ ಪ್ರಸ್ತಾಪಕ್ಕೆ ಅನುಮೋದನೆ ನೀಡಿರುವುದರಿಂದ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಶುರುವಾಗಲಿದ್ದು, ಅನುಮೋದಿತ ಮೊತ್ತಕ್ಕಿಂತ ಮೀರಿ ವೆಚ್ಚ ಮಾಡದಂತೆ ಸರ್ಕಾರ ಷರತ್ತುಗಳನ್ನು ವಿಧಿಸಿದೆ. ಪ್ರಾಧಿಕಾರದ ನಿಧಿ ಬಳಕೆ ಮಾಡುವಾಗ ಸರ್ಕಾರದ ಮಾರ್ಗಸೂಚಿ ಅನ್ವಯ ಅನುಷ್ಠಾನಗೊಳಿಸಿ ವೆಚ್ಚ ಮಾಡುವ ಜತೆಗೆ ಸರ್ಕಾರದ ಪೂರ್ವಾನುಮತಿ ಇಲ್ಲದೇ ಕಾಮಗಾರಿಯ ಸಾಮಗ್ರಿಗಳ ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಕಾಮಗಾರಿಯಲ್ಲಿ ಬಿಡುಗಡೆಗೊಳ್ಳುವ ಉಪಯುಕ್ತ ಸಾಮಗ್ರಿಗಳನ್ನು ಮರು ಬಳಕೆ ಮಾಡಿಕೊಳ್ಳುವಂತೆ ಹೇಳಲಾಗಿದೆ. ಕಾಮಗಾರಿ ಮುಗಿದ ತಕ್ಷಣವೇ ಥರ್ಡ್ ಪಾರ್ಟಿ ಏಜೆನ್ಸಿಯ ಮೂಲಕ ಗುಣಮಟ್ಟ ಪರಿಶೀಲಿಸಿ ಸಾರ್ವಜನಿಕ ಉಪಯೋಗಕ್ಕೆ ಹಾಗೂ ನಿರ್ವಹಣೆಗೆ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವಂತೆ ನಗರಾಭಿವೃದ್ಧಿ ಇಲಾಖೆ  ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.

ಹಲವರಲ್ಲಿ ಸಂತಸ: ಅಂಬೇಡ್ಕರ್ ಭವನದ ಕಾಮಗಾರಿ ವಿಳಂಬದ ಬಗ್ಗೆ ಬೆಟ್ಟಯ್ಯಕೋಟೆ ನೇತೃತ್ವದ ದಸಂಸ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹಲವರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಕೊನೆಗೂ ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಿಂದಲೇ ಅನುದಾನವನ್ನು ಬಳಸಿಕೊಂಡು ಕಾಮಗಾರಿ ಮುಗಿಸಲು ಒಪ್ಪಿಗೆ ನೀಡಿರುವುದರಿಂದ ಸಂತಸ ಮೂಡಿಸಿದೆ. ಏ.೧೪ರ ನಂತರ ಕಾಮಗಾರಿ ಆರಂಭಕ್ಕೆ ಬೇಕಾದ ಎಲ್ಲಾ ತಯಾರಿ ಆಗುವ ಕಾರಣ ಜಯಂತಿ ದಿನದಂದು ಯಾವುದೇ ಅಪಸ್ವರದ ಮಾತುಗಳಿಗೂ ಅವಕಾಶ ಇಲ್ಲದಂತೆ ಸರ್ಕಾರ ನೋಡಿಕೊಂಡಿದೆ.

” ದಲಿತರು, ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಯಾರೂ ಅನುಮಾನಪಡುವ ಅಗತ್ಯವಿಲ್ಲ. ಬಜೆಟ್‌ನಲ್ಲಿ ಅನುದಾನ ಬಿಡುಗಡೆಗೆ ಒಪ್ಪಿಗೆ ಕೊಡಿಸಿದ್ದೆ. ಮುಡಾ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿ ನಿಽ-೧ರಲ್ಲಿ ಬಳಕೆ ಮಾಡಲು ಅವಕಾಶ ಮಾಡಿರುವ ಕಾರಣ ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ. ನಾವು ಬಂದ ಮೇಲೆ ಎರಡೆರಡು ಬಾರಿ ಅನುದಾನ ನೀಡಿರುವುದನ್ನು ಗಮನಿಸಬಹುದು.”

-ಡಾ.ಎಚ್.ಸಿ.ಮಹದೇವಪ್ಪ,

” ಜಿಲ್ಲಾ ಉಸ್ತುವಾರಿ ಸಚಿವರು. ರಾಜ್ಯ ಸರ್ಕಾರ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿದ್ದ ಅನುದಾನ ಬಳಕೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸಿ ನಿಗದಿತ ಸಮಯದೊಳಗೆ ಪೂರ್ಣ ಮಾಡಿ ಹಸ್ತಾಂತರಿಸುತ್ತೇವೆ. ಹವಾನಿಯಂತ್ರಿತ ಶೈಲಿಯನ್ನು ಒಳಗೊಂಡಿರುವ ಕಾರಣ ಒಂದಿಷ್ಟು ಬದಲಾವಣೆಯಾಗಿರುತ್ತದೆ.”

-ಎ.ಎನ್.ರಘುನಂದನ್, ಆಯುಕ್ತರು, ಮುಡಾ.

ಆಂದೋಲನ ಡೆಸ್ಕ್

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

2 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

2 hours ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

2 hours ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

2 hours ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

3 hours ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

3 hours ago