Andolana originals

ಮಂಜಿನ ನಗರಿಯಲ್ಲಿ ಸಮೃದ್ಧವಾದ ನೀರಿನ ಸಂಗ್ರಹ

• ನವೀನ್ ಡಿಸೋಜ

ಸುಸ್ಥಿತಿಯಲ್ಲಿರುವ ಮೋಟಾರ್‌ಗಳು; ಈ ಬಾರಿ ಮಡಿಕೇರಿ ನಿವಾಸಿಗಳಿಗಿಲ್ಲ ನೀರಿನ ಚಿಂತೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಬೇಸಿಗೆಗೂ ಮುನ್ನವೇ ಸೆಕೆಯಿಂದ ತತ್ತರಿಸುವಂತಾಗಿದೆ. ಆದರೆ ಮಂಜಿನನಗರಿಯಲ್ಲಿ ಈ ಬಾರಿ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲವೆಂದು ಅಧಿಕಾರಿಗಳು ಅಭಯ ನೀಡಿದ್ದಾರೆ. ಕುಂಡಾಮೇಸ್ತಿ ಮತ್ತು ಕೂಟುಹೊಳೆ ಸೇರಿದಂತೆ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಎಲ್ಲ ಸಂಗ್ರಹಗಾರಗಳಲ್ಲಿಯೂ ನೀರು ಸಮೃದ್ಧವಾಗಿದ್ದು, ಬೇಸಿಗೆಯಲ್ಲಿ ನಗರ ನಿವಾಸಿಗಳಿಗೆ ನೀರಿನ ಚಿಂತೆ ದೂರಾಗಿದೆ.

ಈ ಬಾರಿ ಫೆಬ್ರವರಿ ತಿಂಗಳಲ್ಲಿಯೇ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದ್ದು, ಬೇಸಿಗೆಯ ವಾತಾವರಣ ಕಂಡುಬರುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ಅಲ್ಲಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಆತಂಕ ಶುರುವಾಗಿತ್ತು. ಆದರೆ ಮಡಿಕೇರಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಗರಸಭೆ ಮಾಹಿತಿ ನೀಡಿದೆ. ಸದ್ಯ ಎಲ್ಲೆಡೆ ನೀರಿನ ಸಂಗ್ರಹವಿದ್ದು, ಬೇಸಿಗೆಗೆ ಸಮಸ್ಯೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ನಗರಸಭೆ ಆಯುಕ್ತ ರಮೇಶ್ ತಿಳಿಸಿದ್ದಾರೆ.

ಕಳೆದ ಮಾನ್ಸೂನ್‌ನಲ್ಲಿ ಮಡಿಕೇರಿ ನಗರದಲ್ಲಿ ಹಿಂದಿನ ವರ್ಷ ಮತ್ತು ಅದರ ಹಿಂದಿನ ವರ್ಷ ಬೇಸಿಗೆಯಲ್ಲಿಯೂ ಮಡಿಕೇರಿಯಲ್ಲಿ ನೀರಿಗೆ ಬರವಿರಲಿಲ್ಲ. ಆದರೆ 2023ರ ಬೇಸಿಗೆಯಲ್ಲಿ ಮೋಟಾರ್ ಕೈಕೊಟ್ಟ ಪರಿಣಾಮ ಹಲವು ದಿನಗಳ ಕಾಲ ಮಡಿಕೇರಿ ನಿವಾಸಿಗಳು ಪರದಾಡುವ ಪರಿಸ್ಥಿತಿ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕುಂಡಾಮೇಸ್ಟ್ರಿಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿರುವುದು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜಲ ಒಳಹರಿವೂ ಉತ್ತಮವಾಗಿದೆ. ಮೂಲಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ. ಮುಖ್ಯವಾಗಿ ಮಡಿಕೇರಿ ನಗರಕ್ಕೆ ಶೇ.70ರಷ್ಟು ನೀರು ಪೂರೈಸುವ ಕೂಟು ಹೊಳೆಯಲ್ಲಿ ಇನ್ನೂ ನೀರಿನ ಸಂಗ್ರಹವಿದ್ದು, ನೀರು ಬತ್ತಿಹೋಗದಂತೆ ನೋಡಿಕೊಳ್ಳುತ್ತಿರುವ ನಗರಸಭೆ, ಕುಂಡಾಮೇಸ್ತ್ರಿ ಕಿರು ಅಣೆಕಟ್ಟೆಯಿಂದ ಈಗಾಗಲೇ ಕೂಟುಹೊಳೆಗೆ ನೀರು ಹರಿಸುತ್ತಿದೆ. 300 ಎಚ್‌ ಪಿ ಸಾಮರ್ಥ್ಯದ ಮೂರು ಪಂಪ್‌ಗಳ ಮೂಲಕ ನೀರು ಹರಿಸಲಾಗುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಕುಂಡಾಮೇಸ್ತ್ರಿಯಲ್ಲಿಯೂ ನೀರು ಸಮೃದ್ಧವಾಗಿದ್ದು, ಜಲಮೂಲಗಳಿಂದ ನೀರಿಗಾಗಿ ನಿರ್ಮಾಣವಾಗಿತ್ತು.

2024ರ ಬೇಸಿಗೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅವಧಿಗಿಂತ ಮೊದಲೇ ಕೂಟುಹೊಳೆ ಬತ್ತಿತ್ತು. ನಿರಂತರವಾಗಿ ಕುಂಡಾಮೇಷ್ಠಿಯಿಂದ ನೀರನ್ನು ಪಂಪ್ ಮಾಡಲಾಗುತ್ತಿತ್ತಾದರೂ ಮೋಟಾರ್

ಕೆಟ್ಟುಹೋಗಿ ನೀರಿಗೆ ಸಮಸ್ಯೆ ಎದುರಾಗಿತ್ತು. ನಗರದ ಕೆಲ ಬಡಾವಣೆಗಳಿಗೆ 2 ದಿನಗಳಿಗೊಮ್ಮೆ ನೀರು ಪೂರೈಸುವ ಮೂಲಕ ನಗರಸಭೆ ಸಮಸ್ಯೆಯನ್ನು ನಿಭಾಯಿಸಿತ್ತು. ಹೀಗಾಗಿ ಈ ಬಾರಿ ಮೋಟಾರ್ ಸಮಸ್ಯೆ ಬಾರದಂತೆ ಎಚ್ಚರವಹಿಸುವುದು ನಗರಸಭೆಗೆ ಸವಾಲಾಗಿದೆ.

ಕೂಟು ಹೊಳೆಯಲ್ಲಿರುವ 300 ಎಚ್‌ ಪಿ ಸಾಮರ್ಥ್ಯದ ಮೂರು ಮೋಟಾರ್‌ಗಳು, ಕುಂಡಾಮೇಸ್ತಿಯಲ್ಲಿರುವ ಅಷ್ಟೇ ಸಾಮರ್ಥ್ಯದ ಮೂರು ಮೋಟಾರ್‌ಗಳನ್ನು ಇತ್ತೀಚೆಗೆ ಸುಸ್ಥಿತಿಯಲ್ಲಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಪರಿಶೀಲಿಸಲಾಗಿದ್ದು, ಸುಸ್ಥಿತಿಯಲ್ಲಿವೆ. ಇಲ್ಲ ಎಂದು ನಗರಸಭೆ ಆಯುಕ್ತ ರಮೇಶ್ ಹಾಗೆಯೇ ರೋಷಾನಾರ, ಪಂಪಿನ ಕೆರೆ ಮತ್ತು ತಿಳಿಸಿದ್ದಾರೆ.

ಮಾನ್ಸೂನ್‌ನಲ್ಲಿ ಮಳೆ ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಕೂಟುಹೊಳೆಯಲ್ಲಿ ಇನ್ನೂ ನೀರಿದೆ. ಜತೆಗೆ ಕುಂಡಾ ಮೇಸ್ಟ್ರಿಯಿಂದಲೂ ನಿರಂತರವಾಗಿ ನೀರು ಹರಿಸುತ್ತಿದ್ದೇವೆ. ಮಡಿಕೇರಿ ನಗರದ ಅವಶ್ಯಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ.
-ಎಚ್.ಆರ್.ರಮೇಶ್, ಪೌರಾಯುಕ್ತ.

ಮಡಿಕೇರಿ ನಗರ ಸುಮಾರು 39,000 ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿದಿನ 52.7 ಲಕ್ಷ ಲೀಟರ್ ನೀರಿನ ಬೇಡಿಕೆಯಿದೆ. ವಲಸಿಗರ, ಪ್ರವಾಸಿಗರ ನೀರಿನ ಬೇಡಿಕೆ 0.225 ಮೆಗಾ ಲೀ. ಇದ್ದು, ಶೇ.15ರಷ್ಟು ಸೋರಿಕೆ ಸೇರಿದಂತೆ ಒಟ್ಟು 65 ಲಕ್ಷ ಲೀಟರ್ ನೀರಿನ ಬೇಡಿಕೆಯಿದೆ. ಸದ್ಯ ಇಷ್ಟು ಪ್ರಮಾಣದ ನೀರು ಪೂರೈಕೆಯಾಗುತ್ತಿದ್ದು, ಈ ಬಾರಿ ನೀರಿನ ಸಮಸ್ಯೆ ಉಂಟಾಗುವುದಿಲ್ಲವೆಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

4 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

6 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

7 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

7 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

7 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

7 hours ago