ತೆರಕಣಾಂಬಿಯಲ್ಲಿ 32 ಮಳಿಗೆಗಳ ಹಳ್ಳಿ ಸಂತೆ ; ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟಕ್ಕೆ ಅವಕಾಶ
ರವಿ ಎನ್. ಲಕ್ಕೂರು
ತೆರಕಣಾಂಬಿ (ಗುಂಡ್ಲುಪೇಟೆ ತಾ. ): ಹೋಬಳಿ ಕೇಂದ್ರವಾದ ತೆರಕಣಾಂಬಿ ಗ್ರಾಮ ದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನ ಗಳಿಗೆ ಮಾರುಕಟ್ಟೆ ಕಲ್ಪಿಸಲು ನಿರ್ಮಿಸಿರುವ ಹಳ್ಳಿ ಸಂತೆ ಕಟ್ಟಡ ಉದ್ಘಾಟನೆಗೆ ಸಜ್ಜುಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಫಲಾನುಭವಿಗಳ ಸಮಾವೇಶದಲ್ಲಿ ಹಳ್ಳಿ ಸಂತೆಯನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ, ಸಮಾವೇಶ ಮುಂದೂಡಿದ್ದರಿಂದ ಉದ್ಘಾಟನೆ ಆಗಲಿಲ್ಲ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಎನ್‌ಆರ್‌ಎಲ್‌ಎಂ ಯೋಜನೆಯಡಿ ಈ ಹಳ್ಳಿ ಸಂತೆ ಕಟ್ಟಡವನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ (ಕೆಆರ್‌ಐಡಿಎಲ್) ನಿರ್ಮಾಣ ಮಾಡಲಾಗಿದೆ. ಇದರ ಅಂದಾಜು ವೆಚ್ಚ ೫೨ ಲಕ್ಷ ರೂ. ಗಳಾಗಿದೆ.
ತೆರಕಣಾಂಬಿ-ಚಾಮರಾಜನಗರ ಮುಖ್ಯ ರಸ್ತೆಯ ಬದಿಯಲ್ಲೇ (ತೆರಕಣಾಂಬಿ ಪೊಲೀಸ್ ಠಾಣೆ ಸಮೀಪ) ೩೨ ಮಳಿಗೆಗಳ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳು, ನೀರಿನ ವ್ಯವಸ್ಥೆ ಹಾಗೂ ನೀರಿನ ತೊಟ್ಟಿಯನ್ನು ನಿರ್ಮಿಸಲಾಗಿದೆ. ಹಳ್ಳಿಸಂತೆ ಮುಂಭಾಗ ಕೌಂಟರ್‌ಅನ್ನು ತೆರೆಯಲಾಗಿದೆ.
ತೆರಕಣಾಂಬಿ ಹೋಬಳಿಯ ೯ ಗ್ರಾಪಂ ವ್ಯಾಪ್ತಿಯಲ್ಲಿರುವ ಎನ್‌ಆರ್‌ಎಲ್‌ಎಂ ಒಕ್ಕೂ ಟದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಈ ಮಳಿಗೆಗಳನ್ನು ನೀಡಲಾಗುತ್ತದೆ. ಎನ್‌ಆರ್ ಎಲ್‌ಎಂ ಯೋಜನೆಯಡಿ ಸಾಲ ಪಡೆದು ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿ ಸಿದ ಹಪ್ಪಳ, ಉಪ್ಪಿನಕಾಯಿ, ಬಟ್ಟೆಗಳು, ಕರಕು ಶಲ ವಸ್ತುಗಳು, ತಿಂಡಿ-ತಿನಿಸುಗಳು, ಅಲಂಕಾ ರಿಕ ವಸ್ತುಗಳನ್ನು ಹಳ್ಳಿ ಸಂತೆ ಕಟ್ಟಡದ ಮಳಿಗೆ ಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡ ಲಾಗುವುದು. ಮಹಿಳೆಯರು ವ್ಯಾಪಾರ ಚಟು ವಟಿಕೆಗಳಲ್ಲಿ ಪಾಲ್ಗೊಂಡು ಆರ್ಥಿಕವಾಗಿ ಸ್ವಾವ ಲಂಬಿಗಳಾಗಲಿ ಎಂಬುದು ಹಳ್ಳಿ ಸಂತೆಯ ಉದ್ದೇಶವಾಗಿದೆ. ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡಿಲ್ಲ. ಕಟ್ಟಡದ ನಿರ್ವಹಣೆಗೆ ಶುಲ್ಕ ಪಡೆಯಲಾಗುತ್ತದೆ. ವಾಣಿಜ್ಯ ಕೇಂದ್ರ ವಾದ ತೆರಕಣಾಂಬಿ ಗ್ರಾಮದಲ್ಲಿ ಪ್ರತಿ ಗುರು ವಾರ ಎಪಿಎಂಸಿ ಪ್ರಾಂಗಣದಲ್ಲಿ ಭರ್ಜರಿ ಸಂತೆ ನಡೆಯುತ್ತದೆ. ಹಳ್ಳಿ ಸಂತೆಯೂ ಆರಂಭವಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಗಾಯಿತ್ರಿ ಟಾಕೀಸ್ ಎದುರಿನ ರಾಜ ಕಾಲುವೆಯ ಬಳಿ ಇರುವ ಬೀದಿ ದೀಪ ಹಗಲಿನ ವೇಳೆಯೂ…
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಸರ್ಕಾರ ಪ್ರತೀಕಾರ ತೀರಿಸಿಕೊಂಡಿದ್ದು, ನೆರೆಯ ದೇಶ ಪಾಕಿಸ್ತಾನಕ್ಕೆ…
ಶಿವಮೊಗ್ಗ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಮಂಜುನಾಥ್ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಅಂತ್ಯಸಂಸ್ಕಾರ ನೆರವೇರಿಸುವ ಹಿನ್ನೆಲೆಯಲ್ಲಿ…
ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಆದ್ಯತೆ ನೀಡಿದ್ದು, ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ…
ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಇದಕ್ಕಾಗಿ ಬೆಟ್ಟದಲ್ಲಿ…
ಮೈಸೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಉಗ್ರರ ದಾಳಿಗೆ ಸಿಲುಕಿ ಸಾವನ್ನಪ್ಪಿರುವವರಿಗೆ…