Andolana originals

ವಸ್ತು ಪ್ರದರ್ಶನಕ್ಕೆ ವಿನೂತನ ಮನರಂಜನೆಯ ಸ್ಪರ್ಶ

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ನಗರದ ವಸ್ತುಪ್ರದರ್ಶನ ಆವರಣದಲ್ಲಿ ಇದೇ ಮೊದಲ ಬಾರಿಗೆ ಡ್ರ್ಯಾಗನ್ ಪಾಂಡ್ ನಿರ್ಮಾಣಗೊಂಡಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ. ಇದರ ಜೊತೆಗೆ ಲೇಸರ್ ಶೋ ಕೂಡ ಜನಾಕರ್ಷಣೆಯಕೇಂದ್ರ ಬಿಂದುವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟಿಸುವ ಇರ್ಯಾದೆ ಇದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದ್ದಾರೆ.

ಈ ಬಾರಿಯ ದಸರಾ ಉತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ದಸರಾ ವಸ್ತುಪ್ರದರ್ಶನದಲ್ಲಿ ಸಾರ್ವಜನಿಕರನ್ನು ಸೆಳೆಯಲು ವಿಭಿನ್ನ ಹಾಗೂ ವಿಶೇಷವಾದ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾವಾನ್ಯವಾಗಿ ದಸರಾ ಮಹೋತ್ಸವದಲ್ಲಿ ಯುವ ಸಂಭ್ರಮ, ಯುವ ದಸರಾ, ಆಹಾರ ಮೇಳ ಮುಂತಾದ ಕಾರ್ಯಕ್ರಮಗಳ ಜೊತೆಗೆ ದಸರಾ ವಸ್ತು ಪ್ರದರ್ಶನ ಕೂಡ ಜನಾಕರ್ಷಕ ವಾಗಿರುತ್ತದೆ.

ಏಕೆಂದರೆ ಈ ಎಲ್ಲದರಲ್ಲಿ ಸಿಗುವ ಸಂಭ್ರಮ ಸಡಗರವೆಲ್ಲ ವಸ್ತು ಪ್ರದರ್ಶನದಲ್ಲಿ ಒಂದೆಡೆ ಸಿಗು ತ್ತದೆ. ಆಟ, ಊಟ, ಶಾಪಿಂಗ್, ಕಲೆ, ಸಂಸ್ಕತಿ ಎಲ್ಲವೂ ಒಂದೆಡೆ ಸಿಗಲಿದೆ. ಹೀಗಾಗಿ ವಸ್ತು ಪ್ರದರ್ಶನ ಈ ಬಾರಿ ಹೊಸ ಮೆರುಗು ಪಡೆದುಕೊಳ್ಳಲಿದೆ.

ಜನಾಕರ್ಷಕವಾಗಲಿರುವ ಡ್ರ್ಯಾಗನ್: ಇದೇ ಮೊದಲ ಬಾರಿಗೆ ಸುಮಾರು ೪.೫ ಕೋಟಿ ರೂ. ವೆಚ್ಚದಲ್ಲಿ ರೂಪುಗೊಂಡಿರುವ ಡ್ರ್ಯಾಗನ್ ಪಾಂಡ್, ವಸ್ತು ಪ್ರದರ್ಶನ ವೀಕ್ಷಿಸಲು ಬರುವ ಜನರನ್ನು ರಂಜಿಸಲು ಸಿದ್ಧವಾಗಿದೆ. ಡ್ರ್ಯಾಗನ್ ಮಾದರಿಯ ಸುತ್ತಲೂ ಕೊಳವನ್ನು ನಿರ್ಮಿಸಲಾಗಿದ್ದು, ಅಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ಭೇಟಿ ನೀಡುವವರು ದೋಣಿ ವಿಹಾರ ನಡೆಸುತ್ತಲೇ ಡ್ರ್ಯಾಗನ್ ಚಮತ್ಕಾರವನ್ನು ವೀಕ್ಷಿಸಬಹುದು.

ಲೇಸರ್ ಶೋ: ಪಾಂಡ್‌ನ ಸುತ್ತ ವೀಕ್ಷಕರ ಗ್ಯಾಲರಿ ನಿರ್ಮಾಣವಾಗಿದ್ದು, ಅಲ್ಲಿ ಲೇಸರ್ ಶೋ ನಡೆಸಲು ಸಿದ್ಧತೆ ನಡೆದಿದೆ. ಸುಮಾರು ೨೫ ನಿಮಿಷಗಳ ಲೇಸರ್ ಶೋನಲ್ಲಿ ವಂದೇ ಮಾತರಂ, ಮಾ ತುಜೇ ಸಲಾಂ ಸೇರಿದಂತೆ ಸಾಕಷ್ಟು ಗೀತೆಗಳ ಸಂಗೀತವನ್ನು ಹಿನ್ನೆಲೆಯಾಗಿ ನೀಡಲಾಗಿದೆ. ಮುಂದಿನ ಒಂದು ವಾರದಲ್ಲಿ ಇದು ಲೋಕಾರ್ಪಣೆಗೊಳ್ಳಲಿದೆ.

ವಿಶಿಷ್ಟ ದೀಪಾಲಂಕಾರ: ಇದೇ ಮೊದಲ ಬಾರಿಗೆ ವಸ್ತು ಪ್ರದರ್ಶನದ ಆವರಣದಲ್ಲಿ ವಿವಿಧ ಮಾದರಿಯ ದೀಪಾಲಂಕಾರ ಮಾಡಲಾಗಿದೆ. ಇದು ಸಾರ್ವಜನಿಕರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಪಾರಂಪರಿಕ ಬ್ಯಾಟರಿ ವಾಹನದ ಮೂಲಕ ಹಿರಿಯರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.

ಮ್ಯೂಸಿಕಲ್ ಫೌಂಟೇನ್: ಈ ಬಾರಿ ವಸ್ತು ಪ್ರದರ್ಶನದ ಮುಖ್ಯ ದ್ವಾರದ ಬಳಿ ನಿರ್ಮಾಣ ಮಾಡಲಾಗಿರುವ ಮ್ಯೂಸಿ ಕಲ್ ಫೌಂಟೇನ್ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸುಮಾರು ೨೦ ನಿಮಿಷಗಳ ಕಾಲ ನಡೆಯುವ ಕೆಆರ್‌ಎಸ್ ಬೃಂದಾವನ ಮಾದರಿಯ ಮ್ಯೂಸಿಕಲ್ ಫೌಂಟೇನ್ ಜನರನ್ನು ಮನಸೂರೆಗೊಂಡಿದೆ.

ಮಕ್ಕಳ ರಂಜನೆಗೆ ಬರವಿಲ್ಲ: ಇನ್ನು ಇದೇ ಮೊದಲಬಾರಿಗೆ ವಸ್ತು ಪ್ರದರ್ಶನದ ಒಳಾವರಣದಲ್ಲಿ ಮಕ್ಕಳ ಮನರಂಜನೆಯನ್ನು ಗುರಿಯಾಗಿಸಿಕೊಂಡು ಸಾಕಷ್ಟು ಎಲೆಕ್ಟ್ರಾನಿಕ್ ಅಟಿಕೆಗಳನ್ನು ಪರಿಚಯಿಸಲಾಗಿದೆ. ಅದರಲ್ಲಿ ಕುಳಿತು ಒಂದು ಸುತ್ತು ಹಾಕುವ ಮಕ್ಕಳು ಹೋ…, ಎಂದು ಸಂತಸದಿಂದ ಕೂಗುವುದನ್ನು ಕಾಣಬಹುದು.

ಸೆಲ್ಛಿ ಸ್ಪಾಟ್: ಕಳೆದ ಬಾರಿ ಕಟ್ಟಿಗೆ ಅರಮನೆ ಸೆಲ್ಛಿ ಸ್ಪಾಟ್ ಆಗಿತ್ತು. ಈಬಾರಿ ಅದರ ಜೊತೆಗೆ ಹಿಮ ಕರಡಿಯ ಮಾದರಿಯು ಜನರಿಗೆ ಸೆಲ್ಛಿ ಸ್ಪಾಟ್ ಆಗಿದೆ. ರಾತ್ರಿ ವೇಳೆ ಲೈಟಿಂಗ್‌ನಿಂದಾಗಿ ಕಂಗೊಳಿಸುವ ಹಿಮ ಕರಡಿ ಮಾದರಿಯ ಮುಂದೆ ನಿಂತು ಜನರು ಸೆಲಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.

” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸ್ತು ಪ್ರದರ್ಶನ ಆವರಣವನ್ನು ಪ್ರವಾಸಿ ಸ್ನೇಹಿಯನ್ನಾಗಿ ರೂಪಿಸಲು ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಪ್ರವಾಸಿಗರು ಹಾಗೂ ಸ್ಥಳೀಯರು ವಸ್ತು ಪ್ರದರ್ಶನ ಆವರಣಕ್ಕೆ ಬಂದಲ್ಲಿ ಮನರಂಜನೆ, ಆಟ, ತಿನಿಸಿಗಳು ಒಂದೇ ಕಡೆ ಸಿಗಬೇಕು ಎಂಬ ಸದುದ್ದೇಶದಿಂದ ಹೆಚ್ಚಿನ ಆಸಕ್ತಿ ವಹಿಸಿ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ.”

-ಅಯೂಬ್‌ಖಾನ್, ಅಧ್ಯಕ್ಷರು, ವಸ್ತುಪ್ರದರ್ಶನ ಪ್ರಾಧಿಕಾರ.

ಸತೀಶ್ ಜಾರಕಿಹೊಳಿ ಮೆಚ್ಚುಗೆ…:

ಕಳೆದ ವಾರ ವಸ್ತುಪ್ರದರ್ಶನ ಆವರಣಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಲ್ಲಿನ ವ್ಯವಸ್ಥೆಗಳನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ವಸ್ತು ಪ್ರದರ್ಶನ ಆವರಣದಲ್ಲಿನ ವ್ಯವಸ್ಥೆಗಳನ್ನು ಕಂಡು ನಿಜಕ್ಕೂ ನನಗೆ ಖುಷಿಯಾಗಿದೆ. ಒಂದೇ ಸೂರಿನಡಿ ಏನೆಲ್ಲಾ ನಿರ್ಮಾಣ ಮಾಡಬಹುದು ಎಂಬುದನ್ನು ಅಯೂಬ್ ಖಾನ್ ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರದ ಅಧ್ಯಕ್ಷಗಿರಿಯನ್ನು ಶಾಸಕರೇ ಕೇಳುವಂತಹ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಇದರ ಕೀರ್ತಿ ಅಯೂಬ್‌ಗೆ ಸಲ್ಲಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಚಾ.ನಗರ | ಟೊಮೆಟೊ ದರ ಕುಸಿತ; ರೈತರಿಂದ ಹೆದ್ದಾರಿ ತಡೆ

ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ…

2 hours ago

ಪಂಜಾಬ್‌ | ಪಾಕ್‌ ಪೋಷಿತ ಉಗ್ರ ಘಟಕದ ಮೇಲೆ ದಾಳಿ, ಇಬ್ಬರ ಬಂಧನ

ಅಮೃತಸರ : ಪಂಜಾಬ್‌ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.…

2 hours ago

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘಕಾಲದ ಯುದ್ಧಕ್ಕೆ ಸಿದ್ಧ ; ಇರಾನ್‌

ಹೊಸದಿಲ್ಲಿ : ಇರಾನ್‌ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ತಳ್ಳಿ ಹಾಕಿರುವ…

3 hours ago

ನಂಜನಗೂಡು | ನಾಲೆಯಲ್ಲಿ ನವಜಾತ ಶಿಶು ಪತ್ತೆ

ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…

4 hours ago

ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ : ಮುಖ್ಯಮಂತ್ರಿ

ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ…

5 hours ago

ಮಹದೇಶ್ವರ ಬೆಟ್ಟ | ದಾಸೋಹ-ಲಾಡು ಪ್ರಸಾದಕ್ಕೆ ಸಿಲಿಂಡರ್ ಕೊರತೆ ಇಲ್ಲ ; ಅಪಪ್ರಚಾರಕ್ಕೆ ಕಿವಿಗೊಡದಿರಿ

ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…

6 hours ago