Andolana originals

ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ
• ಚಿರಂಜೀವಿ ಸಿ. ಹುಲ್ಲಹಳ್ಳಿ
ಮಂಡ್ಯ: ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಮ ಕಾಲಿನ ತಲ್ಲಣಗಳು, ವಿವಿಧ ಚಳವಳಿ ಸೇರಿದಂತೆ ನಾನಾ ವಿಚಾರಗಳ ಚಿಂತನೆಗೆ ಹಚ್ಚಿದ ವಿಚಾರಗೋಷ್ಠಿಗಳು, ಜನಮನ ರಂಜಿಸಿದ ಹತ್ತಾರು ಸಾಂಸ್ಕೃತಿಕ ಕಾರ್ಯ ಕ್ರಮಗಳು, ಸಣ್ಣಪುಟ್ಟ ಸದ್ದು ಗದ್ದಲದೊಂದಿಗೆ ಮೂರು ದಿನಗಳ ಕಾಲ ‘ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ 30 ವರ್ಷಗಳ ನಂತರ ಆಯೋಜಿಸಿದ್ದ ಅಕ್ಷರ ಜಾತ್ರೆಗೆ ಭಾನುವಾರ ಸಂಜೆ ವರ್ಣರಂಜಿತ ತೆರೆಬಿದ್ದಿತ್ತು.

ದಲಿತ, ಅಲ್ಪಸಂಖ್ಯಾತ, ಹಿಂದುಳಿದ, ಮಹಿಳೆ, ಧರ್ಮ, ರಾಜಕಾರಣ, ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಅನೇಕ ವಿಚಾರಗಳ ಕುರಿತ ಗೋಷ್ಠಿಗಳಲ್ಲಿ ಮಹತ್ವದ ಹಕ್ಕೊತ್ತಾಯ ವಾಗಲಿ ಅಥವಾ ಸರ್ಕಾರದ ಮನ ಮುಟ್ಟಿಸುವ ವಿಚಾರ ಜಾತ್ರೆಯೇ ಮೇಲೈಸಿತ್ತು. ಉದ್ಘಾಟನೆ ದಿನ ಜನ ಕಿಕ್ಕಿರಿದು ಗಳು ಪ್ರಸ್ತಾಪವಾಗಲಿಲ್ಲ. ಇದಕ್ಕಿಂತ ಮುಖ್ಯವಾಗಿ ನಾಡಿನ ಸೇರಿದ್ದರು. 2ನೇ ಮತ್ತು 3ನೇ ದಿನವೂ ಜನ ಹೆಚ್ಚಿದ್ದರು. ಸಾಹಿತ್ಯಾಸಕ್ತರು ಮನಸೋತರು. ಪುಸ್ತಕ, ವಾಣಿಜ್ಯ, ಕೃಷಿ | ರಸ್ತೆ ಬದಿ ವ್ಯಾಪಾರವೂ ಜೋರು
ಕನ್ನಡ ಶಾಲೆಗಳ ಉಳಿವಿನ ಯೋಜನೆಯ ವಿಷಯಗಳು ಸದ್ದು ಮಾಡದೆ ಕೇವಲ ಬಾಡೂಟದ ಚರ್ಚೆಗೆ ಸೀಮಿತವಾಯಿತು.

ಸಮ್ಮೇಳನದ ಉದ್ಘಾಟನೆಗೂ ಮುನ್ನ ಬಾಡೂಟದ ಗದ್ದಲ ಜೋರಾಗಿ ಇತ್ತು. ಆದರೆ, ಬಾಡೂಟದ ಗದ್ದಲದ ತೀವ್ರತೆ ಕಡಿಮೆಯಾದರೂ ಸಮ್ಮೇಳನದ ವೇದಿಕೆಯ ಹೊರ ಭಾಗ ಅಲ್ಲಿ ಇಲ್ಲಿ ಧ್ವನಿಸಿತು. ಮಾಜಿ ಸಚಿವ ಸಿ.ಟಿ.ರವಿ ಅವರ ಹೇಳಿಕೆ ಖಂಡಿಸಿಯೂ ವೇದಿಕೆ ಹೊರಗೆ ಪ್ರತಿಭಟನೆ ನಡೆಯಿತು, ಪ್ರತಿ ಬಾರಿಯಂತೆ ಸರ್ಕಾರಿ ನೌಕರರ ಓಓಡಿ ಗದ್ದಲ ಇಲ್ಲೂ ನಡೆಯಿತು.

ಕವಿಗೋಷ್ಠಿಗಳು, ಬಹಿರಂಗ ಅಧಿವೇಶನ, ಸಂವಾದ ಕಾರ್ಯಕ್ರಮಗಳು ಸಮಾನತೆ ಬಗ್ಗೆ ಬೆಳಕು ಚೆಲ್ಲಿದವು. ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸಲ್ಲಿ ಮೊದಲ ಬಾರಿಗೆ ನಡೆದ ದೃಷ್ಟಚೇತನರ ಕವಿಗೋಷ್ಠಿ ವಿಶೇಷ ಅನ್ನಿಸಿತು. 10 ದೃಷ್ಟಿ ಚೇತನ ಕವಿಗಳು ತಮ್ಮ ಅನುಭವ, ಕಷ್ಟ, ಸುಖಗಳನ್ನು ಕವಿತೆ ಮೂಲಕ ಹಂಚಿಕೊಂಡರು.

ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಮಂಡ್ಯದಲ್ಲಿ ಮೂರು ದಿನಗಳೂ ಜನಸಾಗರವೇ ಹರಿದು ಬಂತು. ಸಮ್ಮೇಳನ ನಡೆಯುತ್ತಿದ್ದ ಅಂಗಳದಲ್ಲಿ ಎಲ್ಲಿ ನೋಡಿದರಲ್ಲಿ ಜನ ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಕೆಲವರಂತೂ ತಮ್ಮ ವಾಹನಗಳಿಗೆ ಕನ್ನಡ ಧ್ವಜಗಳನ್ನು ಕಟ್ಟಿಕೊಂಡು ಓಡಾಡಿದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು, ಸಾಹಿತಿಗಳು, ಆಹ್ವಾನಿತರು, ಸಾರ್ವಜನಿಕರುಸಮ್ಮೇಳನದ ಸಂಭ್ರಮದಲ್ಲಿ ಮಿಂದೆದ್ದರು. ಮಂಡ್ಯ ಸಳನದಲ್ಲಿ ಸಾಹಿತ್ಯಾಸಕ್ತರ ಜತೆಗೆ ಮಹಿಳೆಯರು, ಮಕ್ಕಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಅಂತಿಮ ದಿನವೂ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ, ಸ್ತ್ರೀ ಎಂದರೆ ಅಷ್ಟೇ ಸಾಕೆ? ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು ಗೋಷ್ಠಿ ಮತ್ತು ಸಮ್ಮೇಳನಾಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ನೇತೃತ್ವದಲ್ಲಿ ಬಹಿರಂಗ ಅಧಿವೇಶನ ನೆರವೇರಿತು.

ಸಮಾನಾಂತರ ವೇದಿಕೆ-2 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 25 ಕವಿಗಳು ಕವಿತೆ ವಾಚಿಸಿದರು. ಸಮ್ಮೇಳನದ ಮೂರು ದಿನಗಳೂ ಪ್ರಧಾನ ವೇದಿಕೆ, ಸಮಾನಾಂತರ -1, ಸಮಾನಾಂತರ 2 ವೇದಿಕೆಗಳಲ್ಲಿ ಆಯೋಜಿಸಿದ್ದ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳಿಗೆಗಳು ಜನರನ್ನು ಆಕರ್ಷಿಸಿದವು.

ರುಚಿ ಶುಚಿಯಾದ ಊಟದ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸಿದ ಎಲ್ಲರಿಗೂ ರುಚಿ ರುಚಿಯಾದ ತಿಂಡಿ, ಊಟ ಉಣಬಡಿಸಲಾಯಿತು. ಆಹ್ವಾನಿತರು, ಗಣ್ಯರಿಗೆ, ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೂ, ಎಲ್ಲರಿಗೂ ಒಂದೇ ತರವಾದ ಊಟದ ಮೆನು ಇತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಸೇರಿ ಲಕ್ಷಾಂತರ ಜನರು ಊಟಮಾಡಿದರು. ಆಹ್ವಾನಿತರು ಮತ್ತು ಗಣ್ಯರ ಊಟದ ಕೌಂಟರ್ ವ್ಯವಸ್ಥಿತ ವಾಗಿತ್ತು. ಸಾರ್ವಜನಿಕರ ಕೌಂಟರ್ ವ್ಯವಸ್ಥಿತವಾಗಿದ್ದರೂ ನಿರೀಕ್ಷೆಗೂ ಮೀರಿ ಹೆಚ್ಚು ಜನ ಬಂದ ಕಾರಣ ನೂರು ನುಗ್ಗಲು ಕಂಡು ಬಂತು.

ನೋಂದಾಯಿತ ಪ್ರತಿನಿಧಿಗಳಿಗೆ ಉತ್ತಮ ವ್ಯವಸ್ಥೆ

ಈ ಬಾರಿಯೂ ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿಧಿ ಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಇವರಿಗೆ ಕಿಟ್ ನೀಡಲು 30ಕ್ಕೂ ಹೆಚ್ಚು ಕೌಂಟರ್ ತೆರೆಯಲಾಗಿತ್ತು. ಪ್ರತಿನಿಧಿಗಳಿಗೆ ಮತ್ತು ಗಣ್ಯರಿಗೆ ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಮದ್ದೂರಿನ ವಾಣಿಜ್ಯ ಮಳಿಗೆ ವ್ಯಾಪಾರಿಗಳಿಗೂ ಉತ್ತಮ ವ್ಯಾಪಾರ ಆಗಿದೆ. ಸಮ್ಮೇಳನದ ಸುತ್ತಲಿನ ಪ್ರದೇಶದಲ್ಲಿ ರಸ್ತೆ ಬದಿ ವ್ಯಾಪಾರವೂ ಜೋರಾಗಿತ್ತು. ಸಮ್ಮೇಳನದ ಎರಡನೇ ದಿನ ಮಳೆ ಬಂದ ಕಾರಣ ಇಡೀ ಆವರಣ ಕೆಸರುಮಯವಾಗಿ ಓಡಾಲು ಕಷ್ಟವಾದರೂ ಜನ ಲೆಕ್ಕಿಸಲಿಲ್ಲ. ಕನ್ನಡ ನಾಡು, ನುಡಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆಸಲ್ಲಿಸಿದ 130ಕ್ಕೂ ಹೆಚ್ಚು ಗಣ್ಯರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಹೋಟೆಲ್‌ಗಳು, ಹಾಸ್ಟೆಲ್‌ಗಳು, ರೆಸಾರ್ಟ್‌ಗಳು, ವಸತಿ ಶಾಲಾ- ಕಾಲೇಜು, ಛತ್ರಗಳಲ್ಲಿ ಉತ್ತಮವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಅವಕಾಶ ಕಲ್ಪಿಸಲಾಗಿತ್ತು.

ವಾಸ್ತವ್ಯದ ಸ್ಥಳದಿಂದ ಸಮ್ಮೇಳನ ನಡೆಯುವ ಜಾಗಕ್ಕೆ ಬರಲು ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಸಮ್ಮೇಳನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಬಂದ ಕಾರಣ ಪುಸ್ತಕ ಪ್ರದರ್ಶನಲ್ಲಿ ಹೆಚ್ಚಿನ ಸಂಖ್ಯೆಯ ಪುಸ್ತಕಗಳ ವ್ಯಾಪಾರವಾಯಿತು.

ಆಂದೋಲನ ಡೆಸ್ಕ್

Recent Posts

ಮನೆ ದೇವರ ದರ್ಶನ ಪಡೆದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಹಾಸನ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ತವರು ಜಿಲ್ಲೆಗೆ ಆಗಮಿಸಿದ್ದು, ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.…

18 mins ago

ಡಿ.24ಕ್ಕೆ ಮಧು ಜಿ.ಮಾದೇಗೌಡ ಷಷ್ಟ್ಯಬ್ಧಿ ಸಮಾರಂಭ

ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ…

36 mins ago

ಮಕ್ಕಳು ಪಠ್ಯಕ್ಕೆ ಸೀಮಿತವಾಗದಿರಲಿ : ಕೆ.ಎಂ ಗಾಯಿತ್ರಿ

ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ…

46 mins ago

ಕೆಎಎಸ್‌ ಮರು ಪರೀಕ್ಷೆ | ಕೆಪಿಎಸ್‌ಸಿ ಬೇಜವಾಬ್ದಾರಿ ತೋರಿದರೆ ಹೋರಾಟದ ಎಚ್ಚರಿಕೆ ನೀಡಿದ ವಿಜಯೇಂದ್ರ

ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್‌ 29ಕ್ಕೆ ಕೆಎಎಸ್‌ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…

59 mins ago

ಮೈಸೂರು: ಅಂಬೇಡ್ಕರ್‌, ಬಾಬು ಜಗಜೀವನರಾಂ ಪ್ರತಿಮೆ ಅನಾವರಣ

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…

1 hour ago

ಸಿಲಿಂಡರ್‌ ಸ್ಫೋಟ : 9 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ

ಹುಬ್ಬಳ್ಳಿ : ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…

2 hours ago