Andolana originals

ಬಿಸಿಲ ಬೇಗೆ ತಣಿಸಲು ಮಡಕೆಗಳ ಸಾಲು

ಚಿರಂಜೀವಿ ಸಿ.ಹುಲ್ಲಹಳ್ಳಿ

ತಣ್ಣನೆ ನೀರಿಗಾಗಿ ಮಡಕೆಗಳಿಗೆ ಮಾರುಹೋದ ಜನರು 

ಮಣ್ಣಿನ ಮಡಕೆಗಳಿಗೆ ಆಧುನಿಕ ಕಲಾ ಸ್ಪರ್ಶ

ನಲ್ಲಿ ಅಳವಡಿಸಿರುವ ಮಡಕೆಗಳೂ ಲಭ್ಯ

ಗುಜರಾತ್‌ನಿಂದ ೯ ಲೋಡ್ ಮಡಕೆಗಳ ಆಮದು

೨೦೦ ರಿಂದ ೧,೦೦೦ ರೂ.ವರೆಗೆ ಬಿಕರಿ

೪ ಲೀಟರ್‌ನಿಂದ ೨೦ ಲೀಟರ್‌ವರೆಗೆ ಮಡಕೆಗಳು ಮಾರಾಟಕ್ಕೆ ಲಭ್ಯವಿವೆ. ಕನಿಷ್ಠ ೨೦೦ ರೂ.ಗಳಿಂದ ಸಾವಿರ ರೂ.ಗಳವರೆಗೆ ಮಡಕೆಗಳನ್ನು ಬಿಕರಿ ಮಾಡಲಾಗುತ್ತಿದೆ. ಗ್ರಾಹಕರು ಚೌಕಾಸಿ ಮಾಡುತ್ತ ಮಡಕೆಗಳನ್ನು ಖರೀದಿಸುತ್ತಿದ್ದಾರೆ.

ಮೈಸೂರು: ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದು ಗಂಟಲು ಒಣಗಿದಾಗ ಒಂದಿಷ್ಟು ಕುಡಿಯಲು ನೀರು ಸಿಕ್ಕಿದರೆ ಸಾಕು. ಆ ನೀರು ತಣ್ಣಗೆ ಮಣ್ಣಿನ ಸುವಾಸನೆ ಯಿಂದ ಕೂಡಿದ್ದರೆ ದಣಿದ ದೇಹದಲ್ಲಿ ಅದಮ್ಯ ಚೇತನ ಮೂಡುತ್ತದೆ. ಹಾಗಾಗಿಯೇ ಪ್ರತಿ ವರ್ಷ ಬೇಸಿಗೆ ಬಂದರೆ ಮೈಸೂರಿನ ಹಲವೆಡೆ ಕಲಾಸ್ಪರ್ಶದ ಮಡಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಿಗೆ ಬೇಡಿಕೆಯೂ ಹೆಚ್ಚು.  ‘ಬಡವರ ಫ್ರಿಜ್’ ಎಂದು ಗುರುತಿಸಿಕೊಂಡಿರುವ ಈ ಮಡಕೆಗಳಿಗೆ ಕೆಲ ವರ್ಷಗಳಿಂದ ಆಧುನಿಕ ಸ್ಪರ್ಶ ಸಿಕ್ಕಿದೆ.

ಉತ್ತರ ಭಾರತದ ಹಲವು ರಾಜ್ಯಗಳಿಂದ ಬಂದಿರುವ ಮಡಕೆ ವ್ಯಾಪಾರಿಗಳು ಬೇಸಿಗೆಯಿಂದ ಭರಪೂರ ಲಾಭ ಪಡೆಯುತ್ತಿದ್ದಾರೆ. ವಿಶೇಷವಾಗಿ, ಮಡಕೆಗಳಿಗೆ ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಮಣ್ಣಿನ ಗಡಿಗೆಗಳು ಜನರನ್ನು ಆಕರ್ಷಿಸುತ್ತಿವೆ.

ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರು ತಣ್ಣನೆಯ ನೀರಿಗೆ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಎಲ್ಲರ ಚಿತ್ತ ಮಡಕೆಯತ್ತ ನೆಟ್ಟಿದೆ. ಇದಕ್ಕೆ ಮಡಕೆಯಲ್ಲಿ ಸಂಗ್ರಹಿಸಿ ಇಡುವ ನೀರು ನೈಸರ್ಗಿಕವಾಗಿಯೇ ಫ್ರಿಜ್ ನೀರಿಗಿಂತಲೂ ಹೆಚ್ಚು ತಂಪಾಗಿರುತ್ತದೆ ಎನ್ನಲಾಗಿದೆ. ಈ ತಂಪು ಪ್ರಮಾಣ ಮನೆಗಳಲ್ಲಿ ಇರುವ ಫ್ರಿಡ್ಜ್‌ಗಳಿಗಿಂತ ಹೆಚ್ಚಾಗಿರುತ್ತದೆ.

ಆಧುನಿಕತೆ ಹಾಗೂ ಜನರ ಬೇಡಿಕೆಗೆ ತಕ್ಕಂತೆ ಮಣ್ಣಿನ ಮಡಕೆಗಳ ತಯಾರಿಕೆಯೂ ಬದಲಾಗಿದೆ. ಸಾಮಾನ್ಯವಾಗಿ ಮಡಕೆ ತಯಾರು ಮಾಡುವಾಗಲೇ ಅದಕ್ಕೆ ನಲ್ಲಿಯನ್ನು ಅಳವಡಿಸಲಾಗಿರುತ್ತದೆ. ಇಂತಹ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಮೈಸೂರು ಮುಖ್ಯರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ರಾಜಸ್ಥಾನ, ಗುಜರಾತಿನ ಮಡಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹುಣಸೂರು ರಸ್ತೆಯ ಹಳೇ ಜಿಲ್ಲಾಧಿಕಾರಿಗಳ ಕಚೇರಿಯ ಉದ್ಯಾನವನ ಸಮೀಪ, ಕಲಾ ಮಂದಿರದ ವೃತ್ತ, ಬಲ್ಲಾಳ್ ವೃತ್ತ, ಬೋಗಾದಿಯ ರಸ್ತೆಯಲ್ಲಿರುವ ಕುಕ್ಕರಹಳ್ಳಿಯ ವೃತ್ತ, ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಸೇರಿದಂತೆ ನಾನಾ ಕಡೆ ಮಡಕೆ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತಿದೆ.

ಪ್ಲಾಸ್ಟಿಕ್ ಕ್ಯಾನ್ ಆರೋಗ್ಯಕ್ಕೆ ಹಾನಿಕರ: ಆರೋಗ್ಯಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಕ್ಯಾನ್, ಪ್ಲಾಸ್ಟಿಕ್ ಬಾಟಲ್ ಬಳಕೆ ನಿಲ್ಲಿಸಿ ನೀರು ಶೇಖರಣೆಗೆ ಮಣ್ಣಿನ ಮಡಕೆ ಬಳಸಬೇಕಿದೆ. ಇದು ಆರೋಗ್ಯಕ್ಕೆ ಪೂರಕ ಎಂಬ ಮಾತುಗಳೂ ಇವೆ. ಆಧುನಿಕ ಬದುಕಿನಿಂದ ನಶಿಸಿರುವ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿಗೆ ಮರುಜೀವ ನೀಡಿದಂತಾಗಲಿದೆ.

” ಮೂಲತಃ ರಾಜಸ್ಥಾನದವರಾದ ನಮ್ಮ ಕುಟುಂಬದವರು ಮೈಸೂರಲ್ಲಿ ೩೫ ವರ್ಷಗಳಿಂದ ಮಡಕೆ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಈ ವರ್ಷ ಗುಜರಾತಿನಿಂದ ೩ ಲೋಡ್‌ಗಳು ಅಂದರೆ ಒಟ್ಟು ೯ ಸಾವಿರ ಮಡಕೆಗಳನ್ನು ತರಿಸಲಾಗಿದೆ. ಬೇಸಿಗೆಯಲ್ಲಿ ಮಡಕೆಗಳಿಗೆ ಒಂದಷ್ಟು ಬೇಡಿಕೆ ಹೆಚ್ಚಲಿದೆ.”

-ಕೃಷ್ಣ, ಮಡಕೆ ವ್ಯಾಪಾರಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…

9 mins ago

ಓದುಗರ ಪತ್ರ: ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…

16 mins ago

ಅರಮನೆ ಮುಂಭಾಗ ಸಿಲಿಂಡರ್ ಸ್ಪೋಟ : ಮೃತ ವ್ಯಕ್ತಿ ಸಲೀಂ ವಿರುದ್ಧ ಎಫ್ಐಆರ್ ; ಗುರುತು ಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡು…

20 mins ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…

27 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

2 hours ago

2025ರ ನೆನಪು: ಅಗಲಿದ ಗಣ್ಯರ ನೆನಪಿನ ಮಾಲಿಕೆ…

2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ  ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…

2 hours ago