ಮೈಸೂರು: ಹಿರಿಯ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ನಿರ್ದೇಶನದ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಸೋಮವಾರ ಸಂಜೆ ಕಿರುರಂಗ ಮಂದಿರದಲ್ಲಿ ಚೊಚ್ಚಲ ಸಾರ್ವಜನಿಕ ಪ್ರದರ್ಶನ ಕಂಡಿತು.
ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ನಾಟಕವೂ ಅಂಬೇಡ್ಕರ್ ನಿಷ್ಠುರತೆ, ಆರ್‌ಎಸ್‌ಎಸ್ ಕುರಿತು ಅವರಿಗಿದ್ದ ನಿಲುವು, ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಮುಸಲ್ಮಾನರ ಬಗ್ಗೆ ಅವರ ಅಭಿಪ್ರಾಯ, ಕಾಂಗ್ರೆಸ್ ಮುಚ್ಚಿಟ್ಟಿದೆ ಎನ್ನಲಾದ ಸಂಗತಿಗಳನ್ನು ರಂಗದ ಮೇಲೆ ಬಿಚ್ಚುಟ್ಟು ನೆರೆದಿದ್ದ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿತು.
ಅಂಬೇಡ್ಕರ್ ಸಾಯುವವರೆಗೆ, ಸತ್ತ ಮೇಲೂ ಅವಮಾನಿಸಿದ, ಅವರ ಸಾಧನೆಗಳನ್ನು ಮರೆಯಲ್ಲಿಟ್ಟಿದ್ದ ಕಾಂಗ್ರೆಸ್, ವೋಟ್ ಬ್ಯಾಂಕ್‌ಗಾಗಿ ಅವರ ಹೆಸರು, ಭಾವಚಿತ್ರ ಬಳಸಿಕೊಳ್ಳುತ್ತಿದೆ. ಅವರ ವಿಷಯದಲ್ಲಿ ಬಚ್ಚಿಟ್ಟ ಅನೇಕ ಸಂಗತಿಗಳನ್ನು ಬಿಚ್ಚಿಡುವ ಪ್ರಯತ್ನವನ್ನೇ ಮಾಡುತ್ತಿದೆ ಎನ್ನುವುದನ್ನು ರಂಗರೂಪದಲ್ಲಿ ಕಟ್ಟಿಕೊಡಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ನಿಧನಕ್ಕೆ ಸ್ಥಳ ಕೊಡಲು ನೆಹರು ಒಪ್ಪಲಿಲ್ಲ ಎನ್ನಲಾಗುವ ಸನ್ನಿವೇಶ ಕಾಂಗ್ರೆಸ್ ಅಂಬೇಡ್ಕರ್‌ಗೆ ಮಾಡಿತ್ತು ಎನ್ನಲಾಗುವ ದ್ರೋಹಗಳು ಮತ್ತು ಮುಸ್ಲಿಂರ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ನಿಲುವುಗಳು ಅಡ್ಡಂಡ ಕಾರ್ಯಪ್ಪ ನಿರ್ದೇಶನದಲ್ಲಿ ಮೂಡಿ ಬಂದು ಪ್ರೇಕ್ಷಕರ ಮನ ಗೆದ್ದಿತ್ತು. ಲಿಖಿತ ಎಂಬವರು ಅಂಬೇಡ್ಕರ್ ಪಾತ್ರದಲ್ಲಿ ಮತ್ತು ಅನಿತಾ ಕಾರ್ಯಪ್ಪ ಸವಿತಾ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿ ಚಪ್ಪಾಳೆ ಗಿಟ್ಟಿಸಿದರು.
ನಟರಾದ ಮನೋಜ್‌ಕುಮಾರ್, ಎಂ.ಮಧು, ಸಚಿನ್ ಭಟ್, ಶಿವಕುಮಾರ್, ಸರ್ವೇಶ್, ಶರಣು ಬಸವ ಯಲವ, ಗೌಡ ಅಶೋಕ್, ಶ್ರೇಯಸ್ ಅವರು ಸುಧಾಮ, ನಾನಕ್ ಚಂದ್ ರತ್ತು, ಭಗತ್ ಅಮೀನ್ ಚಂದ್, ಜವಾಹರಲಾಲ್ ನೆಹರು, ದತ್ತೋಪಂಥ ಠೇಂಗಡಿ, ಟಿ.ವಿ.ಬೋನ್ ಸ್ಲೆ, ಶಂಕರಾನಂದ ಶಾಸಿ, ಗಾಯಕವಾಡ್, ಮಹಾತ್ಮ ಗಾಂಧಿ, ವೀರ ಸವರ್ಕರ್, ಡಾ.ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು ಅಭಿನಯಿಸಿ ಸೈ ಅನಿಸಿಕೊಂಡರು. ರವಿ ಮೂರೂರು ಸಂಗೀತ, ಸುಬ್ರಹ್ಮಣ್ಯ ಮೈಸೂರು ಧ್ವನಿ ವಿನ್ಯಾಸ, ತೀರ್ಥಹಳ್ಳಿ ಶಿವಕುಮಾರ್ ಬೆಳಕಿನ ಸಂಯೋಜನೆಯಲ್ಲಿ ತೊಡಗಿದ್ದರು.
” ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ಬೈದಿರುವುದನ್ನುನಾಟಕದಲ್ಲಿ ತೋರಿಸಲಾಗಿದೆ. ಇದರ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮೆಚ್ಚಿಕೊಂಡು ಹಾಡಿರುವ ಪ್ರಸಂಗವೂ ನಾಟಕದಲ್ಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಈ ಸತ್ಯವನ್ನು ಓದಿಲ್ಲ. ಹೀಗಾಗಿ ನಾಟಕದ ಮೂಲಕ ನಾವು ಈ ಸತ್ಯವನ್ನು ತೋರಿಸುತ್ತೇವೆ. ಸಾಧ್ಯವಾದರೆ ವಿಧಾನಸೌಧದಲ್ಲಿ ಪ್ರದರ್ಶನಕ್ಕೆ ಅನುವು ಮಾಡಿಕೊಡಲಿ.”
-ಅಡ್ಡಂಡ ಸಿ.ಕಾರ್ಯಪ್ಪ, ಹಿರಿಯ ರಂಗಕರ್ಮಿ
೨೦೦ ಟಿಕೆಟ್‌ಗಳು ಸಂಪೂರ್ಣ ಮಾರಾಟ: ಕಾರ್ಯಪ್ಪ
ಮೈಸೂರು: ೨ ತಿಂಗಳ ಕಾಲ ಹರಿವಿದ್ಯಾಲಯದಲ್ಲಿ ತಾಲೀಮು ನಡೆಸಿ ನಾಟಕ ಪ್ರದರ್ಶನ ಮಾಡಲಾಗು ತ್ತಿದೆ. ಸಂಪೂರ್ಣ ಹೊಸ ಕಲಾವಿದರೇ ನಾಟಕದಲ್ಲಿ ಅಭಿನಯಿಸಿದ್ದಾರೆ. ಇಂದಿನ ಪ್ರದರ್ಶನದ ೨೦೦ ಟಿಕೆಟ್ ಗಳೂ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಜೈಲಿಗೆ ಹೋಗಲು ಸಿದ್ಧ: ಸ್ವಯಂ ಸೇವಕನೆ ಪ್ರಧಾನಿ, ರಾಷ್ಟ್ರಪತಿಗಳೇ ಸ್ವಯಂ ಸೇವಕ ಸಂಘದವರು, ದೇಶದ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು ಸ್ವಯಂ ಸೇವಕರ ಸಂಘದವರೇ. ಸಚಿವ ಪ್ರಿಯಾಂಕ್ ಖರ್ಗೆಗೆ ಇತಿಹಾಸ ತಿಳಿದಿಲ್ಲ. ಸರ್ಕಾರದ ಜಾಗದಲ್ಲಿ ಆರ್‌ಎಸ್‌ಎಸ್ ನಿಷೇಧಿಸುತ್ತೇವೆ ಎನ್ನಲು ಸರ್ಕಾರಿ ಜಾಗಗಳು ಯಾರಪ್ಪಂದು ಅಲ್ಲ ಎಂದರು. ದೇವಸ್ಥಾನಕ್ಕೆ ಕಲ್ಲು ಹೊಡೆದವರು, ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಏಕೆ ಬ್ಯಾನ್ ಮಾಡಲಿಲ್ಲ. ರಾಷ್ಟ್ರ ಭಕ್ತರನ್ನು ಬ್ಯಾನ್ ಮಾಡು ವುದು ಒಂದು ಸಮುದಾಯದ ವೋಟಿಗಾಗಿ. ಆದರೆ, ಸ್ವಯಂ ಸೇವಕರಿಗೆ ದೇಶ ಮುಖ್ಯ. ಜೈಲಿಗೆ ಹೋಗಲು ನಾವು ಸಿದ್ಧ. ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದರು.
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…