Andolana originals

ಸ್ಮಾರಕಕ್ಕೆ ಕಾಯಕಲ್ಪ ಯೋಜನೆಗೆ ಹೊಸ ರೂಪ

ಅನುಚೇತನ್ ಕೆ.ಎಂ.

ಪರಂಪರೆ ಇಲಾಖೆಯಿಂದ ‘ನಮ್ಮ ಸ್ಮಾರಕ’ ಯೋಜನೆ ಅನುಷ್ಠಾನ

ದತ್ತು ನೀಡುವ ಮೂಲಕ ಸ್ಮಾರಕ ಪುನರುಜ್ಜೀವನಕ್ಕೆ ಯೋಜನೆ

ಮೈಸೂರು ಕಂದಾಯ ವಿಭಾಗದಲ್ಲಿ ಪುನಶ್ಚೇತನಕ್ಕೆ ೬೩ ಸ್ಮಾರಕಗಳ ಗುರುತು

ಮೈಸೂರು: ಪಾರಂಪರಿಕತೆ ಸಾರುವ ಆಧಾರಗಳಾದ ಸ್ಮಾರಕಗಳನ್ನು ರಕ್ಷಣೆ ಮಾಡುವಲ್ಲಿ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ‘ಸ್ಮಾರಕ ದತ್ತು ಸ್ವೀಕಾರ’ ಯೋಜನೆಯನ್ನು ಜಾರಿಗೊಳಿಸಿದೆ. ಆ ಮೂಲಕ ವಿವಿಧ ಸಂಘ-ಸಂಸ್ಥೆಗಳಿಗೆ ದತ್ತು ನೀಡಿ, ‘ನಮ್ಮ ಸ್ಮಾರಕ’ ಆಶಯದಲ್ಲಿ ಪಾರಂಪರಿಕ ಸ್ಮಾರಕಗಳ ಪುನಶ್ಚೇತನ ಕಾರ್ಯಕ್ಕೆ ಯೋಜನೆ ರೂಪಿಸಿದೆ.

ರಾಜ್ಯ ಸರ್ಕಾರ ೨೦೨೨-೨೩ರ ಬಜೆಟ್‌ನಲ್ಲಿ ಸ್ಮಾರಕಗಳ ದತ್ತು ಸ್ವೀಕಾರ ಯೋಜನೆಯನ್ನು ಜಾರಿ ಗೊಳಿಸಿತು. ಸಂಸತ್ತಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ೨೦೨೩ರ ಬಳಿಕ ಸ್ಮಾರಕ ದತ್ತು ಸ್ವೀಕಾರ ಯೋಜನೆಯನ್ನು ಹೊಸದಾಗಿ ಜಾರಿಗೆ ತರಲಾಯಿತು. ಈ ಮೂಲಕ ಮೊದಲ ಬಾರಿಗೆ ಡಿಜಿಟಲೀಕರಣದೊಂದಿಗೆ ‘ನಮ್ಮ ಸ್ಮಾರಕ’ ಎಂಬ ವೇದಿಕೆ ನಿರ್ಮಿಸಲಾಗಿದೆ.

ಯೋಜನೆ ಜಾರಿಗೊಳಿಸಿದ ಸಂದರ್ಭದಲ್ಲಿ ಟೆಂಡರ್ ಮೂಲಕ ಕಂಪೆನಿಗಳಿಗೆ ದತ್ತು ಸ್ವೀಕಾರಕ್ಕೆ ಅವಕಾಶವಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯಲಿಲ್ಲ. ಹಾಗಾಗಿ ಹರಾಜು ಪ್ರಕ್ರಿಯೆ ಬದಲಾಗಿ ಡಿಜಿಟಲ್ ವೇದಿಕೆ ನಿರ್ಮಿಸಲಾಯಿತು. ಈ ಡಿಜಿಟಲೀಕರಣದಿಂದ ದತ್ತು ಸ್ವೀಕಾರದಲ್ಲಿ ಕೇವಲ ಖಾಸಗಿ ಸಂಸ್ಥೆಗಳಲ್ಲದೆ ವ್ಯಕ್ತಿ ಹಾಗೂ ಸಂಘಗಳಿಂದಲೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಸ್ಮಾರಕ ಸಮಿತಿಯಿಂದ ಪರಿಶೀಲಿಸಿ, ಡಿಪಿಆರ್ ಸಿದ್ಧಪಡಿಸಲಾಗುತ್ತದೆ. ಬಳಿಕ ‘ಸ್ಮಾರಕ ಮಿತ್ರ’ ಎಂದು ಘೋಷಿಸಿ, ದತ್ತು ನೀಡಲಾಗುತ್ತದೆ.

೩ಡಿ ಸ್ಕ್ಯಾನಿಂಗ್ ಮೂಲಕ ಸ್ಮಾರಕದ ೩ಡಿ ವಿನ್ಯಾಸ ಮಾಡಿ ಪುನಶ್ಚೇತನದ ಕಾಮಗಾರಿ ಹಾಗೂ ೫ ವರ್ಷಗಳವರೆಗೆ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ‘ನಮ್ಮ ಸ್ಮಾರಕ’ ಯೋಜನೆಯಲ್ಲಿ ೨೫ ಲಕ್ಷ ರೂ. ದಿಂದ ೧ ಕೋಟಿ ರೂ.ಗೂ ಹೆಚ್ಚು ಮೊತ್ತಕ್ಕೆ ದತ್ತು ಸ್ವೀಕಾರಕ್ಕೆ ಅವಕಾಶವಿದೆ. ಸ್ಮಾರಕ ಸಂರಕ್ಷಣೆ, ನಿರ್ವಹಣೆಯೊಂದಿಗೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಆದಾಯದ ಮೂಲವಾಗಿಸಿಕೊಂಡು, ಆ ಹಣವನ್ನು ಜೀರ್ಣೊದ್ಧಾರಕ್ಕೆ ಬಳಸಲಾಗುತ್ತದೆ ಎನ್ನುತ್ತಾರೆ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಅವರು.

ರಾಜ್ಯದಲ್ಲಿ ಎಷ್ಟು ಸ್ಮಾರಕಗಳಿವೆ: ರಾಜ್ಯದಾದ್ಯಂತ ಯೋಜನೆಯಡಿಯಲ್ಲಿ ೨೭೪ ಸ್ಮಾರಕಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಒಟ್ಟು ೨೪ ಅರ್ಜಿಗಳು ಸಲ್ಲಿಕೆಯಾಗಿವೆ. ೧೨ ಸ್ಮಾರಕಗಳನ್ನು ದತ್ತು ಸ್ವೀಕರಿಸಿದ್ದು, ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಯ ಅಡಿಯಲ್ಲಿ ದತ್ತು ಸ್ವೀಕಾರವಾಗಿರುವ ೨೭೪ ಸ್ಮಾರಕಗಳಲ್ಲಿ ಬೆಂಗಳೂರಿನ ವೆಂಕಟಪ್ಪ ಆರ್ಟ್‌ಗ್ಯಾಲರಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದವು ಜೀರ್ಣೋದ್ಧಾರ ಹಂತದಲ್ಲಿ ಹಾಗೂ ಅನುಮೋದನೆ ಹಂತದಲ್ಲಿವೆ ಎಂದು ದೇವರಾಜು ‘ಆಂದೋಲನ’ಕ್ಕೆ ತಿಳಿಸಿದ್ದಾರೆ.

ಆರ್ಕಿಟೆಕ್ಟ್ ಕಾಲೇಜು ಸಹಕಾರ: ಸ್ಥಳೀಯ ಸಹಕಾರ ದೊಂದಿಗೆ ಸ್ಥಳೀಯವಾಗಿ ಶಾಸನಗಳು, ಸ್ಮಾರಕಗಳನ್ನು ಪುನರುಜ್ಜೀವನ ಕಾರ್ಯಕ್ಕೆ ಇಲಾಖೆಯೊಂದಿಗೆ ಸ್ಮಾರಕಗಳ ಉದ್ಧಾರಕ್ಕಾಗಿ ಬೆಂಗಳೂರು ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜು , ಬಿಜಾಪುರದ ಒಂದು ಆರ್ಕಿಟೆಕ್ಚರ್ ಕಾಲೇಜು, ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜುಗಳು ಯೋಜನೆಯ ಡಿಪಿಆರ್ ಹಾಗೂ ಸಲಹೆ ನೀಡುವ ಭಾಗವಾಗಿ ಕಾರ್ಯ ನಿರ್ವಹಿಸಲಿವೆ. ದತ್ತು ಪಡೆದಿರುವ ಸಂಸ್ಥೆಗಳಿಗೆ ಇಲಾಖೆ ವತಿಯಿಂದಲೇ ಡಿಪಿಆರ್ ಸಿದ್ಧಪಡಿಸಿ ಇಂಜಿನಿಯರ್‌ಗಳು ಕಾಮಗಾರಿಯ ಹಾಗೂ ಸಲಹೆ ಸೂಚನೆ ಕೆಲಸ ಮಾಡುತ್ತಾರೆ. ಕಳೆದ ೨ ವರ್ಷಗಳಲ್ಲಿ ಇಲಾಖೆ ವತಿಯಿಂದ ಸ್ಮಾರಕ, ವೀರಗಲ್ಲು, ಶಾಸನ, ದೇವಾಲಯಗಳು ಸೇರಿ ೩೦೦ಕ್ಕೂ ಹೆಚ್ಚಿನ ಸ್ಮಾರಕಗಳ ರಕ್ಷಣೆ ಕಾರ್ಯ ಮಾಡಲಾಗಿದೆ.

” ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ‘ನಮ್ಮ ಸ್ಮಾರಕ ದರ್ಶನ ಅವುಗಳ ರಕ್ಷಣೆಗಾಗಿ ಪ್ರವಾಸ’ ಯೋಜನೆಯನ್ನು ಆರಂಭಿಸಲಾಗಿದೆ. ಯೋಜನೆ ಪ್ರಗತಿ ಪರಿಶೀಲನೆಗಾಗಿ ೬ ಜಿಲ್ಲೆಗಳಲ್ಲಿ ೩ ಹಂತಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯನ್ನು ಬೀದರ್ ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೂ ತಲುಪಿಸಲಾಗುತ್ತದೆ ಹಾಗೂ ತಾಲ್ಲೂಕುವಾರು ಸರ್ವೇ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ೨೪೦ಕ್ಕೂ ಹೆಚ್ಚು ತಾಲ್ಲೂಕುಗಳ ಪೈಕಿ ೧೨೦ರಲ್ಲಿ ಸರ್ವೇ ಕಾರ್ಯ ವನ್ನು ಪೂರ್ಣಗೊಳಿಸಲಾಗಿದೆ.”

” ರಾಜ್ಯದಲ್ಲಿ ೨೫ ಸಾವಿರಕ್ಕೂ ಹೆಚ್ಚಿನ ಸ್ಮಾರಕಗಳಿರುವ ಅಂದಾಜಿದೆ. ದತ್ತು ಸ್ವೀಕಾರ ಪ್ರಮಾಣದಲ್ಲಿ ನಿಧಾನವಾಗಿ ಏರಿಕೆ ಕಾಣುತ್ತಿದೆ. ವೆಚ್ಚಕ್ಕೆ ಅನುಗುಣವಾಗಿ ಇಲಾಖೆಯಿಂದ ಶೇ.೪೦ರಷ್ಟು ಅನುದಾನ ನೀಡಲಾಗುತ್ತಿದೆ. ಮತ್ತಷ್ಟು ಪ್ರಚಾರದ ಅಗತ್ಯವಿದೆ. ಸ್ಮಾರಕಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಿದರೆ ಸಂಘ- ಸಂಸ್ಥೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.”

-ಎ.ದೇವರಾಜು, ಆಯುಕ್ತರು, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ 

” ಮೈಸೂರು ಕಂದಾಯ ವಿಭಾಗದಲ್ಲಿ ಏಳು ಜಿಲ್ಲೆಗಳನ್ನು ಸೇರ್ಪಡೆ ಮಾಡಲಾಗಿದ್ದು, ೬೩ ಸ್ಮಾರಕಗಳನ್ನು ಪಟ್ಟಿ ಮಾಡಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಲಕ್ಮೀಕಾಂತ ಐತಿಹಾಸಿಕ ದೇವಸ್ಥಾನ ದತ್ತು ಸ್ವೀಕಾರವಾಗಿದ್ದು, ವಿಭು ಅಕಾಡೆಮಿ ಇದರ ಜೀರ್ಣೋದ್ಧಾರದ ಹೊಣೆ ಹೊತ್ತಿದೆ. ವಿಭಾಗವಾರು ಮಂಡ್ಯದ ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಮೆಟ್ಟಿಲು ಜೀರ್ಣೋದ್ಧಾರ, ಕೊಡಗಿನ ಕಕ್ಕಬ್ಬೆಯ ನಾಲ್ಕನಾಡು ಅರಮನೆ ದತ್ತು ಸ್ವೀಕಾರವಾಗಿದೆ.”

ಮೈಸೂರು ಕಂದಾಯ ವಿಭಾಗದಲ್ಲಿ ದತ್ತು ಸ್ವೀಕಾರ ಆಗಿರುವ ಸ್ಮಾರಕಗಳು: 

* ಮಂಡ್ಯದ ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಮೆಟ್ಟಿಲು ಜೀರ್ಣೋದ್ಧಾರ

* ಕೊಡಗಿನ ಕಕ್ಕಬ್ಬೆಯ ನಾಲ್ಕನಾಡು ಅರಮನೆ

* ಮೈಸೂರಿನ ಕಳಲೆ ಗ್ರಾಮದ ಲಕ್ಷ್ಮೀಕಾಂತ ದೇವಾಲಯ ಜೀರ್ಣೋದ್ಧಾರ

ಆಂದೋಲನ ಡೆಸ್ಕ್

Recent Posts

ಲಂಚಕ್ಕೆ ಬೇಡಿಕೆ : ಪಿಎಸ್ಐ ಚೇತನ್ ಲೋಕಾ ಬಲೆಗೆ

ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…

2 hours ago

ಪೊಲೀಸ್‌ ದಾಳಿ : ಮೈಸೂರಲ್ಲಿ ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳ ಪತ್ತೆ

ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…

2 hours ago

ಚಿನ್ನಾಭರಣ ಪಡೆದು ವಂಚನೆ : ಮಾಲೀಕನ ಬಂಧನ

ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…

2 hours ago

ನಾಳೆ ಕೇಂದ್ರ ಬಜೆಟ್‌ : ಕರ್ನಾಟಕದ ರಾಜ್ಯದ ನಿರೀಕ್ಷೆಗಳೇನು?

ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…

3 hours ago

ಐತಿಹಾಸಿಕ ಮಳವಳ್ಳಿ ಸಿಡಿ ಜಾತ್ರಾ ಮಹೋತ್ಸವ ಸಂಪನ್ನ

ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…

3 hours ago

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ : ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…

4 hours ago