Andolana originals

ಪುಷ್ಪಗಳಿಂದ ಆಕರ್ಷಿಸುತ್ತಿರುವ ತಾವರೆಕೆರೆ

ಕೆ.ಬಿ.ಶಂಶುದ್ಧೀನ್

ಸೆಲ್ಛಿ ಕೇಂದ್ರವಾಗಿ ಮಾರ್ಪಾಡು; ಐತಿಹಾಸಿಕ ಕೆರೆಯನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಒತ್ತಾಯ 

ಕುಶಾಲನಗರ: ಇಲ್ಲಿನ ತಾವರೆಕೆರೆಯು ನೀಲಿ ವರ್ಣದ ನಯನ ಮನೋಹರವಾದ ಪುಷ್ಟಗಳಿಂದ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ.

ನಗರದ ತಾವರೆಕೆರೆ ಇತಿಹಾಸವನ್ನು ಹೊಂದಿದೆ. ಭೂ ಮಾಫಿಯಾದಿಂದ ತನ್ನ ವಿಸ್ತೀರ್ಣವನ್ನು ಕಳೆದುಕೊಂಡು ಬಂದಿದ್ದು, ಕೊಳಚೆ ತ್ಯಾಜ್ಯ ನೀರು ಶೇಖರಣಾ ಘಟಕದಂತಾಗಿತ್ತು. ಆಕರ್ಷಣೆ ಕಳೆದುಕೊಂಡಿದ್ದ ಈ ಕೆರೆಯಲ್ಲಿ ಈಗ ನೀಲಿ ವರ್ಣದ ಪುಷ್ಪಗಳು ಅರಳಿ ತನ್ನ ಸೌಂದರ್ಯ ಹೆಚ್ಚಿಸಿಕೊಂಡು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಪ್ರವಾಸಿ ತಾಣವನ್ನಾಗಿಸಿ: ಹಲವು ದಶಕಗಳಿಂದ ಜೀವಂತವಾಗಿರುವ ತಾವರೆಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವು ಅಧಿಕಾರಿಗಳ ಹಾಗೂ ಜನಪ್ರತಿನಿಽಗಳ ನಿರಾಸಕ್ತಿಯಿಂದ ತಾವರೆಕೆರೆ ಕೊಳಚೆ ನೀರನ್ನು ಸಂಗ್ರಹಿಸುವ ಘಟಕವಾಗಿಯೇ ಉಳಿದಿದೆ. ಇದೀಗ ತಾವರೆಕೆರೆಯಲ್ಲಿ ಪುಷ್ಪಗಳು ಅರಳಿದ್ದು, ಪ್ರಕೃತಿಯೇ ಕೆರೆಯನ್ನು ಉಳಿಸಿ ಎಂದು ಸಾರಿ ಹೇಳಿದಂತಿದೆ.

ಆದ್ದರಿಂದ ಪುರಸಭೆ ಹಾಗೂ ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ಚರ್ಚಿಸಿ, ತಾವರೆಕೆರೆಯನ್ನು ಪ್ರವಾಸಿತಾಣವನ್ನಾಗಿಸುವ ಮೂಲಕ ಐತಿಹಾಸಿಕ ಕೆರೆಯನ್ನು ಸಂರಕ್ಷಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಅಪಾಯಕ್ಕೆ ಆಹ್ವಾನ: ತಾವರೆಕೆರೆ ಆಕರ್ಷಣೀಯ ಪುಷ್ಪಗಳಿಂದ ಕಂಗೊಳಿಸುತ್ತಿದ್ದು, ತನ್ನತ್ತ ಜನರನ್ನು ಆಕರ್ಷಿಸುತ್ತಿದೆ. ಇದರಿಂದಾಗಿ ದಾರಿಹೋಕರು, ಪ್ರವಾಸಿಗರು ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ತಾವರೆಕೆರೆ ಅಂದವನ್ನು ವೀಕ್ಷಿಸಲು ಮುಂದಾಗುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಫೋಟೋ, ಸೆಲ್ಛಿ ತೆಗೆದುಕೋವವರನ್ನು ಸ್ಥಳದಲ್ಲಿ ಕಾಣಬಹುದಾಗಿದೆ. ತಾವರೆಕೆರೆ ಬಳಿ ತಿರುವಿನ ರಸ್ತೆಯಿರುವ ಕಾರಣದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಪ್ರಕೃತಿಯ ಸೌಂದರ್ಯವು ಸಾರ್ವಜನಿಕರನ್ನು ಕೈಬೀಸಿ ಕರೆಯುವುದರೊಂದಿಗೆ ಅನಾಹುತಕ್ಕೂ ಆಹ್ವಾನ ನೀಡಿದಂತಾಗಿದೆ.

ತಾವರೆಕೆರೆ ಬಳಿ ಓರ್ವ ಸಂಚಾರ ಪೊಲೀಸ್ ಪೇದೆ ಗಸ್ತು ಕಾಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಽಸಿದ ಅಽಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ತಾವರೆಕೆರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ತಾವರೆಕೆರೆಯ ಕಣ್ಮನ ಸೆಳೆಯುವ ಫೋಟೋ, ವೀಡಿಯೋಗಳನ್ನು ಕಾಣಬಹುದಾಗಿದೆ. ಇದರಿಂದ ವಿವಿಧೆಡೆಯಿಂದ ಪ್ರವಾಸಿಗರು ಕೂಡ ಆಗಮಿಸಿ ತಾವರೆಕೆರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಯಾವುದು ಈ ಹೂವು?… ಗಂಟೆ ಹೂವಿನ ಜೊಂಡು, ಅಂತರತಾವರೆ, ಅಂತರಗಂಗೆ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ವಾಟರ್ ಹಯಸಿಂತ್ ಒಂದು ಏಕದಳ ಸಸ್ಯ. ನೀರಿನ ಹಯಸಿಂತ್ ಅಮೆಜಾನ್ ಜಲಾನಯನ ಪ್ರದೇಶಕ್ಕೆ ಸ್ಥಳೀಯವಾಗಿರುವ ಒಂದು ದೊಡ್ಡ ಜಲಸಸ್ಯವಾಗಿದೆ. ಇದರ ದಪ್ಪ, ಮೇಣದಂತಹ, ಅಂಡಾಕಾರದ ಎಲೆಗಳು ೪-೮ ಇಂಚುಗಳಷ್ಟು ಅಗಲವಿದ್ದು, ಸಸ್ಯದ ಮಧ್ಯಭಾಗದಿಂದ ಕವಲು ಒಡೆಯುವ ಕಾಂಡಗಳ ಮೇಲೆ ಬೆಳೆಯುತ್ತವೆ. ಸಸ್ಯದ ಕೆಳಗಿರುವ ನೀರಿನಲ್ಲಿ ನೇತಾಡುವ ಸೂಕ್ಷ್ಮಬೇರುಗಳ ಸಮೂಹವು ಗಾಢ ನೇರಳೆ ಅಥವಾ ಕಪ್ಪು ಬಣ್ಣದ್ದಾಗಿದೆ. ಸಣ್ಣ, ಬಿಳಿ ಬೇರುಗಳನ್ನು ಹೊಂದಿರುತ್ತದೆ. ಕಾಂಡಗಳು ಸ್ಪಂಜಿನಂತಿದ್ದು, ಅವು ಗಾಳಿಯಿಂದ ತುಂಬಿದ ಅಂಗಾಂಶಗಳನ್ನು ಹೊಂದಿರುತ್ತವೆ. ಇದು ಸಸ್ಯವನ್ನು ತೇಲುವಂತೆ ಮಾಡುತ್ತದೆ.

” ತಾವರೆಕೆರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ವಿಚಾರವಾಗಿ ಪುರಸಭೆ ಎಚ್ಚೆತ್ತುಕೊಳ್ಳಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಕುಶಾಲನಗರ ಸುತ್ತಮುತ್ತಲಿನ ಕೆರೆಯ ಜಾಗಗಳು ಅಧಿಕಾರಶಾಹಿಗಳ, ಭೂಮಾಫಿಯದವರ ಪಾಲಾಗಿವೆ. ಅವುಗಳನ್ನು ಕೂಡ ತೆರವುಗೊಳಿಸಬೇಕು.”

– ಎಸ್.ಆದಂ, ಕಾಂಗ್ರೆಸ್ ಯುವ ಮುಖಂಡ

” ಕುಶಾಲನಗರದ ತಾವರೆಕೆರೆ ಬಹಳ ಸುಂದರವಾಗಿದೆ. ರಸ್ತೆಹೋಕರ ಕಣ್ಮನ ಸೆಳೆಯುತ್ತಿದೆ. ಈ ರಸ್ತೆಯಲ್ಲಿ ತೆರಳುವಾಗ ಇಲ್ಲಿನ ಪುಷ್ಪಗಳನ್ನು ಕಂಡು ಬೆರಗಾದೆವು. ವಿಭಿನ್ನ ಪ್ರಕೃತಿ ಸೌಂದರ್ಯ ಹೊಂದಿರುವ ಕೊಡಗಿನ ತಾವರೆಕರೆಯಲ್ಲಿ ಅರಳಿದ ಈ ಹೂವುಗಳ ಅಂದವನ್ನು ಎಷ್ಟು ನೋಡಿದರೂ ಸಾಲದು. ಇದನ್ನು ಪ್ರವಾಸಿತಾಣವಾಗಿ ಮಾರ್ಪಡಿಸಿ ಅಭಿವೃದ್ಧಿ ಮಾಡಿದಲ್ಲಿ ಇನ್ನಷ್ಟು ಗಮನಸೆಳೆಯಲಿದೆ.”

-ಮೋನಿಕ, ಕೇರಳದ ಪ್ರವಾಸಿ

ಆಂದೋಲನ ಡೆಸ್ಕ್

Recent Posts

ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ…

1 second ago

ಕೇಂದ್ರ ಸರ್ಕಾರ, ಇಂಡಿಗೋ ವಿರುದ್ಧ ಹೈಕೋರ್ಟ್‌ ಆಕ್ರೋಶ

ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ನೂರಾರು ವಿಮಾನಗಳು ರದ್ದಾಗಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ…

38 mins ago

ಸಕ್ಕರೆನಾಡು ಮಂಡ್ಯದಲ್ಲಿ ಅವಿವಾಹಿತ ಯುವಕರ ವಿಚಿತ್ರ ಪ್ರಕರಣ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಅವಿವಾಹಿತ ಯುವಕರ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪಂಚಾಯಿತಿ ವತಿಯಿಂದ ನಮಗೆ ಮಠ ಕಟ್ಟಿಸಿಕೊಡುವಂತೆ…

1 hour ago

ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಲೇಔಟ್‌ ನಿರ್ಮಾಣ ಮಾಡುವ ವೇಳೆ ರೇಣುಕಾಸ್ವಾಮಿ…

2 hours ago

ರಾಜ್ಯದಲ್ಲಿ ಇನ್ಮುಂದೆ ದ್ವೇಷ ಭಾಷಣ ಮಾಡಿದ್ರೆ 5000 ದಂಡ, 3 ವರ್ಷ ಜೈಲು ಶಿಕ್ಷೆ

ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣ ಮಾಡಿದರೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್‌ ಆಗಿದೆ. ವಿಧಾನಸಭೆಯಲ್ಲಿ ಇಂದು ಮಸೂದೆ ಮಂಡನೆ…

2 hours ago

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಚಿನ್ನಯ್ಯ ಆರೋಪಿಸಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಹಣದ…

3 hours ago