Andolana originals

ಕ್ರೀಡೆಯಲ್ಲಿ ನವಿರಾದ ಇತಿಹಾಸ ಹೊತ್ತ ಗಡಿನಾಡು

 ಬ್ರಿಜೇಶ್ ಒಲಿವೆರಾ, ಸ್ಟಾರ್ ಕ್ರಿಕೆಟರ್ಸ್

ಗಡಿನಾಡು ಚಾಮರಾಜನಗರ ಜಿಲ್ಲೆಯು ಜಾನಪದ ಸಂಸ್ಕೃತಿ ಹಾಗೂ ನನ್ನ ಸಂಪತ್ತಿನಲ್ಲಿ ತನ್ನ ಹೆಗ್ಗುರುತನ್ನು ಹೇಗೆ ಛಾಪಿಸಿದೆಯೋ ಹಾಗೆಯೇ ಇಲ್ಲಿನ ಕ್ರೀಡೆಗೂ ಒಂದು ನವಿರಾದ ಇತಿಹಾಸವಿದೆ.

1990ರ ದಶಕದಲ್ಲಿ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿ ಬೆಳಗಿನ ಜಾವ ಎದ್ದು ಕಣ್ಣುಜ್ಜಿಕೊಂಡು ರಸ್ತೆಯನ್ನು ನೋಡಿದರೆ ಟೆನ್ನಿಸ್ ಬ್ಯಾಟ್ ಹಿಡಿದ ಒಂದೊಂದು ಗುಂಪು ಅಘೋಷಿತ ಆಟದ ಮೈದಾನ (ವಿಶಾಲವಾದ ಸರ್ಕಾರಿ ಖಾಲಿ ಜಾಗ)ದತ್ತ ಸಾಗುತ್ತಿದ್ದವು. ಆಟದ ಮೈದಾನ ಗಳಲ್ಲಿ ಒಂದೆಡೆ ವಾಲಿಬಾಲ್ ಆಡುವ ಒಂದೆರಡು ಗುಂಪುಗಳು ಪೈಪೋಟಿ ಮೇಲೆ ಆಡುತಿದ್ದವು. ಮತ್ತೊಂದೆಡೆ ಫುಟ್‌ಬಾಲ್ ತಂಡಗಳ ನಡುವೆ ಕ್ರೀಡಾ ಕದನ ನಡೆಯುತ್ತಿತ್ತು. ಕಂಡ ಕಂಡ ಖಾಲಿ ಮೈದಾನಗಳಲ್ಲೆಲ್ಲ ಕ್ರಿಕೆಟ್ ಕಲಿಗಳು ಹಾರಾಡುತ್ತಿದ್ದರು. ಜೆಎಸ್‌ಎಸ್ ಕಾಲೇಜಿನ ಆಟದ ಮೈದಾನದಲ್ಲಿ ಕ್ರೀಡಾಳುಗಳು ಗಿಜಿಗುಡುತ್ತಿದ್ದರು. ಪ್ರತಿದಿನ ಬೆಳಗಿನ ಜಾವ 5ರಿಂದ 10 ಗಂಟೆವರೆಗೂ ಕ್ರೀಡಾಪಟುಗಳ ಕಲರವ ನಗರದ ತುಂಬಾ ಮೊಳಗುತ್ತಿತ್ತು.

ಆದರೆ ವರುಷಗಳು ಉರುಳಿದಂತೆ ರಸ್ತೆ, ಸೇತುವೆ ಮತ್ತು ಕಟ್ಟಡಗಳಂತಹ ಸಿವಿಲ್ ಕೆಲಸಗಳೇ ಅಭಿವೃದ್ಧಿ ಎಂದೆನಿಸಿ ಕೊಳ್ಳುತ್ತಿರುವ ಕಾರಣ, ಕ್ರೀಡೆ ಇನ್ನಿತರ ವಿಷಯಗಳು ಪ್ರಗತಿಯ ವ್ಯಾಖ್ಯಾನಕ್ಕೆ ನಿಲುಕುತ್ತಿಲ್ಲ.

ಸರ್ಕಾರಗಳು, ಆಡಳಿತ ವರ್ಗ ಆಟೋಟ ಮತ್ತು ಕ್ರೀಡೆ ಗಳನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಹಾಗಾಗಿ ಇನ್ನೂ ನಾವು ಹಳೆಯದನ್ನೇ ಮೆಲುಕು ಹಾಕುತ್ತಾ ಕೂರುವಂತಾಗಿದೆ.

ಹಿಂದೆ ಚಾಮರಾಜನಗರದಲ್ಲಿ ಹಲವಾರು ಫುಟ್‌ಬಾಲ್ ತಂಡಗಳಿದ್ದವು. 1999ರವರೆಗೂ ಇಲ್ಲಿ ಬಾಲ್ ಬ್ಯಾಡ್ಮಿಂಟನ್ ಅಭ್ಯಾಸ ನಡೆಯುತ್ತಿತ್ತು. ಪ್ರತಿವರ್ಷ ರಾಜ್ಯ ತಂಡಕ್ಕೆ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಇಬ್ಬರು ಕ್ರೀಡಾಪಟುಗಳಾದರೂ ಚಾಮರಾಜನಗರದಿಂದ ಆಯ್ಕೆ ಆಗುತ್ತಿದ್ದರು. ಎಫ್‌ಯುಎಸ್‌ ಯಲ್ಲಿ ಮಾದಯ್ಯ, ಆನಂತರದ ದಿನಗಳಲ್ಲಿ ಅರಸು ಈ ಕ್ರೀಡೆಗೆ ಗೌರವ ತಂದಿದ್ದರು.

ಈಗ ಮತ್ತೆ ಅದನ್ನು ಮುನ್ನೆಲೆಗೆ ತರುವ ಯೋಜನೆ ರೂಪಿಸಿದ್ದು, ಅದಕ್ಕಾಗಿ ಚಾಮರಾಜನಗರ ಸ್ಪೋರ್ಟ್ಸ್ ಕ್ಲಬ್ ಎಂಬ ಸಂಘಟನೆ ಹುಟ್ಟು ಹಾಕಲಾಗಿದೆ. ಟೆನ್ನಿಸ್ ಆಟವು ಟೌನ್ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆಯುತ್ತಿದೆ.

ಈ ಹಿಂದೆ ಚಾಮರಾಜನಗರದಂತಹ ತಾಲ್ಲೂಕು ಕೇಂದ್ರದಲ್ಲಿ 3 ಬಾರಿ ರಾಷ್ಟ್ರೀಯ ಪಂದ್ಯಾವಳಿ ಮತ್ತು 2 ಬಾರಿ ರಾಜ್ಯ ಮಟ್ಟದ ಪಂದ್ಯಾವಳಿ ನಡೆದ ದಾಖಲೆಯಿದೆ. ಹಿಂದೆ ಉತ್ತಮ ವಾಲಿಬಾಲ್ ತಂಡ ಇತ್ತು. ಈಗ  ವಾಲಿಬಾಲ್ ಆಡುವವರೇ ಇಲ್ಲ. ಜಿಲ್ಲೆಯ ಯಳಂದೂರಿ ನಲ್ಲಿ ವಾಲಿಬಾಲ್ ತಂಡ ಬಹಳ ಹೆಸರು ಮಾಡಿತ್ತು. ಕೊಳ್ಳೇಗಾಲ ಮೊದಲಿನಿಂದಲೂ ಲಾನ್ ಟೆನ್ನಿಸ್ ಹಾಗೂ ಬಾಲ್ ಬ್ಯಾಡ್ಮಿಂಟನ್‌ಗೆ ಹೆಸರುವಾಸಿ. ಅಲ್ಲದೆ ಹಿರಿಯಯರ ಕ್ರೀಡಾ ಸ್ಪರ್ಧೆಗಳಿಗೆ ಕೊಳ್ಳೇಗಾಲ ದಿಂದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದರು.

ಕ್ರೀಡೆಗಳು ಬೆಳೆಯಬೇಕಾದರೆ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹಳ ಮುಖ್ಯ. ಬಹಳ ಹಿಂದೆ ಮುನ್ಸಿಪಲ್ ಹೈಸ್ಕೂಲಿನ ದಿವಾನ್ ಸಿ.ಎಸ್.
ವರದರಾಜು ನಂತರ ಎಸ್‌.ನಾಗರಾಜು ಮತ್ತು ಜೆಎಸ್‌ಎಸ್‌ ಕಾಲೇಜಿನ ಸಿ.ಆರ್. ಕೃಷ್ಣಮೂರ್ತಿ ಕ್ರೀಡೆಯನ್ನು ಬೆಳೆಸಲು ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಅವರಿಂದ ಅನೇಕ ಕ್ರೀಡೆಗಳು ಬೆಳೆದವು. ಹಲವು ಕ್ರೀಡಾಪಟುಗಳು ಬೆಳಕಿಗೆ ಬಂದರು. ಆದರೆ ಪ್ರಸ್ತುತ ಪ್ರೌಢಶಾಲಾ ಹಂತದಲ್ಲೇ ಮಕ್ಕಳ ಕ್ರೀಡಾ ಕ್ಷಮತೆ ಗುರುತಿಸಿ ಸೂಕ್ತ ತರಬೇತಿ ನೀಡುವವರು ಇಲ್ಲ. ಈಗ ಜಿಲ್ಲೆಯಲ್ಲಿ 219 ಪ್ರೌಢಶಾಲೆಗಳಿದ್ದು, ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರು ಚೆನ್ನಾಗಿ ಕೆಲಸ ಮಾಡಿದ್ದೇ ಆದರೆ ಕ್ರೀಡೆಯಲ್ಲಿ ಜಿಲ್ಲೆಯ ಹೆಸರು ಮಿನುಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವು ಖಾಸಗಿ ಶಾಲೆಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ಕಾಣುತ್ತೇವೆ. ಆದರೆ ಅಲ್ಲಿನವರು ಅಕಾಡೆಮಿಕ್‌ ಗೆ ನೀಡುವ ಆದ್ಯತೆಯನ್ನು ಕ್ರೀಡೆಗೆ ನೀಡುವುದಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಕ್ರೀಡಾ ಹಾಸ್ಟೆಲ್‌ಗಳು, ಶಾಲೆಗಳು: ಚಾಮಾಜನಗರ ಜಿಲ್ಲಾ ಕೇಂದ್ರವಾದ ನಂತರ ಇಲ್ಲಿ ಕ್ರೀಡಾ ಹಾಸ್ಟೆಲ್ ಆರಂಭವಾಯಿತು. ಇಲ್ಲಿ 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಸದ್ಯ ಕ್ರೀಡಾ ಹಾಸ್ಟೆಲ್‌ನಲ್ಲಿ 26 ಹುಡುಗರು ಇದ್ದಾರೆ. ಇಲ್ಲಿಂದ ಫುಟ್‌ಬಾಲ್‌ನಲ್ಲಿ ರಾಷ್ಟ್ರ ಮಟ್ಟದ ಸಬ್ ಜ್ಯೂನಿಯರ್ ತಂಡದಲ್ಲಿ ಮತ್ತು ಖೇಲೋ ಇಂಡಿಯಾದಲ್ಲಿ
ಆಡಿದವರು ಉಂಟು.

ತರಬೇತುದಾರರು: ಕ್ರೀಡಾ ಮಾಸ್ಟರ್‌ಗಳು, ತರಬೇತುದಾರರು ಆಸಕ್ತಿ ವಹಿಸಿದರೆ ಕ್ರೀಡೆ ಬೆಳೆಯಲು ಸಾಧ್ಯ. ಆದರೆ, ಸಮರ್ಥ ತರಬೇತುದಾರರು ಇಡೀ ರಾಜ್ಯದಲ್ಲೇ 81 ಮಂದಿ ಮಾತ್ರ ಇದ್ದಾರೆ. ಇವರೆಲ್ಲ ಖಾಯಂ ನೌಕರರಲ್ಲ. ಇನ್ನು ಇವರು ಚಾಮರಾಜನಗರಕ್ಕೆ ಬರುವುದು ದೂರದ ಮಾತು.  ಸ್ಥಳೀಯವಾಗಿ ಕನಿಷ್ಠ ಬಿಪಿಇಡಿ, ಎಂಪಿಇಡಿ ಮಾಡುವವರನ್ನು ತರಬೇತುದಾರರ ನಾಗಿ ನೇಮಕ ಮಾಡಿಕೊಂಡರೆ ಅವರಿಗೂ ಉದ್ಯೋಗ ಸಿಕ್ಕಂತಾಗುತ್ತದೆ, ಕ್ರೀಡೆಗೂ ಉತ್ತೇಜನ ನೀಡಿದಂತಾಗುತ್ತದೆ. ಇಲ್ಲಿ 40-50 ವರ್ಷಗಳಿಂದಲೂ ಸಕ್ರಿಯವಾಗಿರುವ ಕ್ರಿಕೆಟ್ ತಂಡಗಳಿವೆ. ‘ಸ್ಟಾರ್ ಕ್ರಿಕೆಟರ್ಸ್‌’-ರಾಜ್ಯ ಕ್ರಿಕೆಟ್ ಮಂಡಳಿ ಯಿಂದ ಮಾನ್ಯತೆ ಪಡೆದ ಕ್ರಿಕೆಟ್ ತಂಡವಾಗಿದೆ. ಈಗಲೂ ಹಿರಿಯ ಕ್ರಿಕೆಟಿಗರು ಕಿರಿಯರಿಗೆ ತರಬೇತಿ ನೀಡುತ್ತಿದ್ದಾರೆ.

ಅಂಬೇಡ್ಕರ್ ಕ್ರೀಡಾಂಗಣ: ನಗರಕ್ಕೆ ಹೊಂದಿಕೊಡಂತೆ ಇದ್ದ ಕೆರೆ ಏರಿಯನು ನೆಲಸಮಗೊಳಿಸಿ ಕ್ರೀಡಾಂಗಣ ನಿರ್ಮಿಸಿದರು. ಆದರೆ ಅದರಲ್ಲಿ ಕೆಲವು ಎಕರೆಗಳಷ್ಟನ್ನು ಖಾಸಗಿ ಬಸ್‌ ನಿಲ್ದಾಣಕ್ಕೆ ನೀಡಲಾಯಿತು. ಇಲ್ಲಿಯೇನೋ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆ ಕೊರತೆಯಿದೆ. ಹೆಚ್ಚು ಮಳೆ ಬಂದರೆ ಈಗಲೂ ನೀರು ನಿಲ್ಲುತ್ತದೆ. ಈ ಸಮಸ್ಯೆ ಬಗೆಹರಿಸಿ ಸುಸಜ್ಜಿತ ಕ್ರೀಡಾಂಗಣ ಮಾಡಬೇಕಿದೆ.


ಕ್ರಿಕೆಟ್ ಸ್ಟೇಡಿಯಂ: ಚಾಮರಾಜನಗರ ಜಿಲ್ಲಾಡಳಿತ ಕ್ರಿಕೆಟ್ ಕ್ರೀಡಾಂಗಣಕ್ಕೆ ಬೇಕಾಗುವಷ್ಟು ಜಾಗವನ್ನು ಖರೀದಿಗೆ ನೀಡಿದರೆ ಕ್ರಿಕೆಟ್ ಮಂಡಳಿ ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಸಿದ್ಧವಿದೆ. ಈ ಪ್ರಸ್ತಾವನೆಯನ್ನು ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ರಾಮು, ಬಿ.ಬಿ.ಕಾವೇರಿ, ಡಾ. ಎಂ.ಆರ್.ರವಿ ಅವರಿಗೆ ನೀಡಲಾಗಿತ್ತು. ಆದರೆ ಈ ವಿಚಾರ ಪ್ರಸ್ತಾವನೆ ಹಂತದಲ್ಲೇ ಉಳಿದಿದೆ.

ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಆದಿವಾಸಿ ಮಕ್ಕಳು
ಪ್ರತಿವರ್ಷ 45ರಿಂದ 48 ಆದಿವಾಸಿ ಮಕ್ಕಳು ಓದಿನ ಜೊತೆಗೆ ಬಿಲ್ಲುಗಾರಿಕೆ ಮತ್ತು ಕತ್ತಿ ವರಸೆ ಕಲಿಯುತ್ತಿದ್ದಾರೆ. ಇಲ್ಲಿ ಬಿಲ್ಲುಗಾರಿಕೆ ಮತ್ತು ಕತ್ತಿವರಸೆ ಕಲಿತ ಮಕ್ಕಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಆಡಿದ್ದಾರೆ. ಪದಕಗಳನ್ನು ಪಡೆದಿದ್ದಾರೆ.

ಬಿಲ್ಲುಗಾರಿಕೆ ಮತ್ತು ಕತ್ತಿವರಸೆ ಶಾಲೆ
ಸಂತೇಮರಹಳ್ಳಿ ಬಳಿ ವಿಶಿಷ್ಟವಾದ ಬಿಲ್ಲುಗಾರಿಕೆ ಮತ್ತು ಕತ್ತಿವರಸೆ ತರಬೇತಿ ನೀಡುವ ಶಾಲೆಯಿದೆ. ರಾಜ್ಯದ ವಿವಿಧ ಭಾಗಗಳ 40 ವಿದ್ಯಾರ್ಥಿಗಳು ಬಿಲ್ಲುಗಾರಿಕೆ ಮತ್ತು
ಕತ್ತಿವರಸೆ ತರಬೇತಿ ಪಡೆಯುತ್ತಿದ್ದಾರೆ. ವಾಸ್ತವವಾಗಿ ಇದನ್ನು ಆದಿವಾಸಿಗಳನ್ನು ತಂಡವಿದೆ. ಈ ತಂಡದಲ್ಲಿರುವವರು ಬಹುತೇಕ ಆದಿ ದೃಷ್ಟಿಯಲ್ಲಿ ಇಟ್ಟುಕೊಂಡು ಆರಂಭಿಸಲಾಯಿತು. ಗುಂಡ್ಲುಪೇಟೆ ಬಳಿಯ ಬಂಡೀಪುರ ಕಾಡಂಚಿನಲ್ಲಿರುವ ಮೇಲುಕಾಮನಹಳ್ಳಿಯಲ್ಲಿ ಅತ್ಯುತ್ತಮವಾದ ವಾಲಿಬಾಲ್ ವಾಸಿಗಳು, ಇಲ್ಲಿಯ ರೆಸಾರ್ಟ್‌ಗಳಲ್ಲಿ ಕೆಲಸ ಮಾಡಿಕೊಂಡು ಟಿವಿಯಲ್ಲಿ ಆಟದ ನಿಯಮ ಗಳನ್ನು ನೋಡಿಕೊಂಡು ಕಲಿಯುತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಬೇಕಿದೆ. ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ, ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರಿನಲ್ಲಿ ಉತ್ತಮವಾಗಿ ಆಡುವವರು ಇದ್ದಾರೆ. ಅವರಿಗೆ ಅವಕಾಶ ನೀಡುವವರು ಯಾರು?

ಚಾಮರಾಜನಗರದಲ್ಲಿ ಜಿಲ್ಲಾ ಕ್ರೀಡಾಂಗಣ ದೊಡ್ಡದಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆ ವಿವಿಧ ಕ್ರೀಡಾ
ತರಬೇತುದಾರರನ್ನು ನೇಮಿಸಬೇಕು. ರಾಜ್ಯ ಮಟ್ಟದ ಅಥ್ಲೆಟಿಕ್, ಕ್ರಿಕೆಟ್ ಪಂದ್ಯಾವಳಿ ಆಯೋಜಿಸಬೇಕು, ಗಡಿ ಜಿಲ್ಲೆಯಲ್ಲೂ ಕ್ರೀಡಾಂಗಣವಿದೆ ಎಂಬುದು ಹೊರಗಿನವ ರಿಗೆ ಗೊತ್ತಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಡಳಿತ ಮುಂದಾಗಬೇಕು. • ವಿ.ಶ್ರೀನಿವಾಸಪ್ರಸಾದ್, ಕ್ರೀಡಾಪಟು. ಚಾ.ನಗರ.

ಚಾಮರಾಜ ನಗರ ದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಸಮರ್ಪಕವಾಗಿ ಅಭಿವೃದ್ಧಿ ಹೊಂದಿಲ್ಲ. ಬಾಕಿ ಇರುವ ಅಭಿವೃದ್ಧಿ ಕಾರ್ಯ ಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ಕ್ರೀಡಾ ಸಚಿವರ ಗಮನಕ್ಕೆ ತಂದಿದ್ದೇನೆ. ಅವರಿಂದ ಪೂರಕ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು.
ಕೆ.ವೆಂಕಟೇಶ, ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.

ಆಂದೋಲನ ಡೆಸ್ಕ್

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

1 hour ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

3 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

3 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

3 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

3 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

4 hours ago