ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ಎಲ್ಲ ಚರ್ಚ್‌ಗಳಲ್ಲೂ ಆಚರಣೆ; ಪರಸ್ಪರ ಶುಭಾಶಯ ವಿನಿಮಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಕ್ರೈಸ್ತರು ವಿಶೇಷ ಖಾದ್ಯ ತಯಾರಿಸಿ ಸವಿದರು. ಬಗೆ ಬಗೆಯ ಕೇಕ್‌ಗಳನ್ನು ತಯಾರಿಸಿ ಹಂಚಿದರು.
ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿ ದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ಯೇಸುವಿನ ಸ್ಮರಣೆ ಮಾಡಲಾಯಿತು. ಮಾಗಿಯ ಚಳಿಯಲ್ಲೂ ಕ್ರೈಸ್ತರು ಮಂಗಳವಾರ ಮಧ್ಯರಾತ್ರಿ ಚರ್ಚ್‌ಗಳಿಗೆ ತೆರಳಿ ತಮ್ಮ ಆರಾಧ್ಯ ದೈವ ಯೇಸುವಿಗೆ ಪ್ರಾರ್ಥನೆ ಸಲ್ಲಿಸಿದರು.
ಬುಧವಾರ ಮಧ್ಯರಾತ್ರಿ ೧೨ ಗಂಟೆ(ಡಿ. ೨೫)ಗೆ ಕ್ರೈಸ್ತ ಸಮುದಾಯದವರೊಟ್ಟಿಗೆ ಅನ್ಯ ಧರ್ಮೀ ಯರೂ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್ ಆಚರ ಣೆಯಲ್ಲಿ ಭಾಗಿಯಾಗುವ ಮೂಲಕ ಸಾಮರಸ್ಯ ಮೆರೆದರು. ಹೂವು-ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌ನ ಸೊಬಗನ್ನು ಕಣ್ತುಂಬಿಕೊಂಡರು. ಮಧ್ಯರಾತ್ರಿ ೧೨ ಗಂಟೆಗೆ ಶ್ವೇತ ವಸ್ತ್ರಧಾರಿ ಮೈಸೂರು ಪ್ರಾಂತ್ಯದ ಡಾ. ಬರ್ನಾರ್ಡ್ ಮೊರಾಸ್ ಅವರು ಚರ್ಚ್‌ನ ಪರಿವಾರ, ಛತ್ರಿ ಚಾಮರಗಳ ಹಿಮ್ಮೇಳ ಸಹಿತ ಮೆರವಣಿಗೆಯೊಂದಿಗೆ ಬಾಲ ಯೇಸುವಿನ ಪುಟ್ಟ ಮೂರ್ತಿಯನ್ನು ತಂದು ಗೋದಲಿಯಲ್ಲಿ ಮಲಗಿಸಿ, ನಮಿಸುತ್ತಿದ್ದಂತೆ ಕ್ರಿಸ್ ಮಸ್ ಸಂಭ್ರಮ ಇಮ್ಮಡಿಗೊಂಡಿತು. ಬಾಲ ಯೇಸುವನ್ನು ಹೊತ್ತು ತರುವ ಸಂದರ್ಭದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದವರು ದೇವರ ಪಾದ ಮುಟ್ಟಿ ನಮಸ್ಕರಿಸಿದರು.
ಎಲ್ಲೆಡೆ ಅರ್ಥ ಪೂರ್ಣ ಆಚರಣೆ
ಕ್ರೈಸ್ತ ಸಮುದಾಯದವರು ಚರ್ಚ್‌ಗಳ ಜತೆಗೆ ತಮ್ಮ ಮನೆಗಳನ್ನೂ ಸಿಂಗರಿಸಿಕೊಂಡು ಯೇಸುವಿನ ಜಪ ಮಾಡಿದರು. ಶಾಂತಿ, ಪ್ರೀತಿ, ಸಹನೆ, ಕ್ಷಮೆಯನ್ನು ಸಾರಿದ ಯೇಸು, ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ನಕ್ಷತ್ರ ಪ್ರತಿಕೃತಿಗಳನ್ನು ತಮ್ಮ ಮನೆಗಳ ಮುಂದೆ ಅಳವಡಿಸಿದ್ದರು. ಹೊಸ ಉಡುಪುಗಳನ್ನು ಧರಿಸಿ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ವಿವಿಧೆಡೆ ಆಚರಣೆ
ನಗರದ ಬೆಂಗಳೂರು-ಮೈಸೂರು ರಸ್ತೆಯ ವೆಸ್ಲಿ ಚರ್ಚ್, ಸಂತ ಬಾರ್ಥ ಲೋಮಿಯೋ ಚರ್ಚ್, ಹಿನಕಲ್‌ನ ಇನ್‌ಫ್ಯಾಂಟ್ ಜೀಸಸ್ ಚರ್ಚ್, ಲಕ್ಷ್ಮಿಪುರಂನ ಹಾರ್ಡ್ವಿಕ್ ಚರ್ಚ್, ರಾಮಕೃಷ್ಣ ನಗರದ ಯೇಸು ಕೃಪಾ ಲಯ ಚರ್ಚ್ ಸೇರಿದಂತೆ ನಗರದ ಎಲ್ಲ ಕ್ರೈಸ್ತ ದೇವಾಲಯಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಸಡಗರ ಹೆಚ್ಚಿತ್ತು. ಎಲ್ಲ ಕ್ರೈಸ್ತ ದೇವಾಲಯಗಳಲ್ಲಿ ಯೇಸು ಸ್ಮರಣೆ ಮಾಡಲಾಯಿತು.
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕರೀಘಟ್ಟ ವೆಂಕಟರಮಣ ಸ್ವಾಮಿಯ ಬ್ರಹ್ಮೋತ್ಸವ ಇಂದು ವೈಭವದಿಂದ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತ ಮುತ್ತ ಇರುವ…
ಭೇರ್ಯ ಮಹೇಶ್: ಕೆ.ಆರ್.ನಗರ ತಾಲ್ಲೂಕು ವರದಿಗಾರರು ಕೆ.ಆರ್.ನಗರ: ನಾಡಿನ ಸುಪ್ರಸಿದ್ಧ ಶ್ರೀ ಕಪ್ಪಡಿ ಜಾತ್ರೆಯಲ್ಲಿ ೨ನೇ ಬಾರಿ ೨೦ ಜೊತೆ…
ಪಾಟ್ನಾ: ಬಿಹಾರದ ಸಿಎಂ ಆಗಿ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಕೇವಲ ನಾಲ್ಕು ತಿಂಗಳಿನಲ್ಲೇ ನಿತೀಶ್ ಕುಮಾರ್ ಅವರು ಇಂದು…
ಬೆಂಗಳೂರು: ಹತ್ತು ಹಲವಾರು ನಿರೀಕ್ಷೆಗಳೊಂದಿಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ 17ನೇ ಐತಿಹಾಸಿಕ ಬಜೆಟ್ ಮಂಡನೆಯ…
ರಾಮನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಸಹೋದರಿ ಮಹಾದೇವಮ್ಮ ನಿಧನರಾಗಿದ್ದಾರೆ. ಕನಕಪುರ ತಾಲ್ಲೂಕಿನ…
ಹಾಸನ: ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ,…