Andolana originals

ನಾಗರಹೊಳೆಗೆ ಸ್ತ್ರೀ ಸಂರಕ್ಷಕಿ

ಅರಣ್ಯ, ಕಾಡುಪ್ರಾಣಿಗಳ ಸಂರಕ್ಷಣೆ ಎಂಬುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಸವಾಲುಗಳಿರುತ್ತವೆ. ಸ್ಥಳೀಯ ಜನರ ವಿಶ್ವಾಸ ಗಳಿಸುವುದಲ್ಲದೆ, ಅರಣ್ಯ ಪ್ರದೇಶದ ಇಂಚಿಂಚೂ ಭೂಮಿಯನ್ನು ಕಾಪಾಡಬೇಕು. ಇಂತಹ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಬಹುದು ಎಂಬುದನ್ನು ಸಾಧಿಸಿದ್ದಾರೆ ಉಪ ಅರಣ್ಯ ಸಂರಕ್ಷಕರಾದ ಸೀಮಾ.

ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ಸೀಮಾರವರೇ ಉದಾಹರಣೆ. ಹೆಚ್ಚು ಹುಲಿಗಳು, ಆನೆಗಳ ಪ್ರಮುಖ ತಾಣವಾಗಿರುವ 7 ಅಪಾರ ವನ್ಯ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಮಹಿಳಾ ನಿರ್ದೇಶಕರಾಗಿ ಐಎಫ್‌ಎಸ್ ಅಧಿಕಾರಿ ಪಿ.ಎ.ಸೀಮಾ ಅಧಿಕಾರ ವಹಿಸಿಕೊಂಡಿರುವುದು ಅರಣ್ಯ ಸಂರಕ್ಷಣೆಯ ವಿಷಯದಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸಿದಂತಾಗಿದೆ.

ರಾಜ್ಯದ ಅರಣ್ಯ ಇಲಾಖೆಯಲ್ಲಿ ಐಎಫ್‌ಎಸ್ ಬಡ್ತಿ ಪಡೆದ ಹಲವು ಮಹಿಳಾ ಅಧಿಕಾರಿಗಳಿಗೆ ಸಾಮಾನ್ಯ ವಿಭಾಗಗಳು ಇಲ್ಲವೆ ಸಾಮಾಜಿಕ ಆರಣ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆಗಳ ನಿರ್ದೇಶಕರು ಹಾಗೂ ಮುಖ್ಯಸ್ಥರ ಹುದ್ದೆಗಳಲ್ಲಿ ಪುರುಷ ಅಧಿಕಾರಿಗಳೇ ಹೆಚ್ಚಾಗಿದ್ದರು. ಆದರೆ ಇದೀಗ ಮಹಿಳಾ ಅಧಿಕಾರಿಯಾಗಿ ಸೀಮಾ ನಾಗರಹೊಳೆಗೆ ನೇಮಕವಾಗಿರುವುದು ಇತಿಹಾಸ ಬರೆದಂತಾಗಿದೆ.

ಕರ್ನಾಟಕದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷವನ್ನು ತಪ್ಪಿಸಲು ಮೊದಲ ಬಾರಿಗೆ ‘ಆನೆ ಕಾವಲು ಪಡೆ’ಯನ್ನು ರಚಿಸಿದಾಗ ನಾಗರಹೊಳೆ ವಿಭಾಗದ ಆನೆ ಕಾವಲು ಪಡೆಯ ಮುಖ್ಯಸ್ಥರಾಗಿ ಪಿ.ಎ.ಸೀಮಾ ನೇಮಕಗೊಂಡು ಯಶಸ್ವಿಯಾಗಿ ನಿಭಾಯಿಸಿದ್ದರು. ಮೂಲತಃ ಕೊಡಗಿನವರಾದ ಸೀಮಾ ಒಂದೂವರೆ ದಶಕದಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಂಡ್ಯ, ಮೈಸೂರು, ಹುಣಸೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅನೇಕ ಆನೆ, ಚಿರತೆ, ಹುಲಿ ಸೆರೆಯ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಸಾಲುಸಾಲು ಜವಾಬ್ದಾರಿಗಳ ಇವರ ಮುಂದಿವೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಸಾಕಷ್ಟು ಸವಾಲುಗಳಿವೆ. ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಹಂಚಿರುವ ಈ ಹು ರಕ್ಷಿತ ಪ್ರದೇಶ ಕೇರಳದವರೆಗೂ ವಿಸ್ತರಿಸಿಹೆ. ಇಲ್ಲಿ ಕಳ್ಳಬೇಟೆ, ಹುಲಿ, ಆನೆಗಳು ಕಾಡಿನಿಂದ ಹೊರಬಂದು ಮಾನವನೊಂದಿಗೆ ಸಂಘರ್ಷಕ್ಕಿಳಿಯುತ್ತವೆ. ಈ ವೇಳೆ ಅದನ್ನು ನಿಭಾಯಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಣಿಗಳನ್ನು ಸಂರಕ್ಷಿಸುವುದು ಅವರ ಜವಾಬ್ದಾರಿಗಳು. ಅಲ್ಲದೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ನಷ್ಟವಾದಗಲೂ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕೊಡಿಸಬೇಕಿದೆ.

ಹುಲಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕಿ: ಪುನರ್ವಸತಿ, ಆನೆ ಶಿಬಿರಗಳಲ್ಲಿ ಸಾಕಾನೆಗಳ ಸಾಲು ಸಾಲು ಸಾವು, ಇವೆಲ್ಲ ಘಟನೆಗಳು ನಾಗರಹೊಳೆಯನ್ನು ಸವಾಲುಗಳ ಗೂಡಾಗಿಸಿದೆ. ಈ ಸವಾಲಿನ ಗೂಡಿಗೆ ಮಹಿಳಾ ದಕ್ಷ ಅಧಿಕಾರಿಯಾಗಿ ಮೊದಲ ನಿರ್ದೇಶಕರಾಗಿ ಪಿ.ಎ.ಸೀಮಾ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದೆ ನಾಗರಹೊಳೆಯಲ್ಲಿ ಮಾಲತಿಪ್ರಿಯಾ, ಆನುಷಾ ಮತ್ತಿತರರು ಎಸಿಎಫ್‌ಗಳಾಗಿ ಕೆಲಸ ಮಾಡಿದ್ದರೂ ನಿರ್ದೇಶಕರಾಗಿರಲಿಲ್ಲ. ಮೊದಲ ಬಾರಿಗೆ ಸೀಮಾ ಅವರು ಆ ಸ್ಥಾನವನ್ನು ತುಂಬಿದ್ದು, ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೋ ಕಾದುನೋಡಬೇಕಿದೆ.

ಕೋಟ್ಸ್‌))

ಅರಣ್ಯ ಇಲಾಖೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ನಾಗರಹೊಳೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಜನರ ಸಹಕಾರದೊಂದಿಗೆ ಸೇವೆ ಸಲ್ಲಿಸುತ್ತೇನೆ.

-ಪಿ.ಎ.ಸೀಮಾ, ಹುಲಿ ಯೋಜನೆ ನಿರ್ದೇಶಕರು, ನಾಗರಹೊಳೆ.

ಆಂದೋಲನ ಡೆಸ್ಕ್

Recent Posts

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

13 mins ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

2 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

2 hours ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

3 hours ago