ಗೋಡೌನ್‌ನಲ್ಲಿ ಇರಿಸಿದ್ದ ನೂರಾರು ವರ್ಷಗಳ ಹಿನ್ನೆಲೆಯುಳ್ಳ ದರ್ಬಾರ್ ಕುರ್ಚಿಗಳಿಗೆ ಹೊಸ ರೂಪ
ಮೈಸೂರು: ಜಗತ್ಪಸಿದ್ಧ ಅರಮನೆಯ ದರ್ಬಾರ್ ಕೊಠಡಿಯಲ್ಲಿ ಬಳಸಲಾಗುತ್ತಿದ್ದ ಕುರ್ಚಿಗಳು ನೂರು ವರ್ಷಗಳಷ್ಟು ಹಳೆಯವು. ಆದರೂ ಇಂದಿಗೂ ಅದರ ಸೌಂದರ್ಯ ಮಾಸಿಲ್ಲ. ಅರಮನೆಗೆ ಭೇಟಿ ನೀಡುವ ಬಹುತೇಕ ವಿದೇಶಿಗರಿಗೆ ಈ ಕುರ್ಚಿಗಳ ಬಗ್ಗೆ ವಿಶೇಷ ವ್ಯಾಮೋಹ. ಈ ಸಲುವಾಗಿಯೇ ಫೋಟೋಕ್ಲಿಕ್ಕಿಸಿಕೊಳ್ಳುವುದನ್ನು ಮಾತ್ರ ಅವರು ಮರೆಯುವುದಿಲ್ಲ.
ಮೈಸೂರು ಮಹಾರಾಜರು ದರ್ಬಾರ್ ನಡೆಸುವ ವೇಳೆ ಗಣ್ಯರು ಆಸೀನರಾಗುವ ಸಲುವಾಗಿ ಬಳಸುತ್ತಿದ್ದ ದರ್ಬಾರ್ ಕುರ್ಚಿಗಳದ್ದೇ ಒಂದು ಇತಿಹಾಸ, ರಾಜರ ದರ್ಬಾರು ನಡೆಯುತ್ತಿದ್ದ ವೇಳೆ ಜನರು ರಾಜರನ್ನು ಆಗಿಂದಾಗ್ಗೆ ಕಾಣಬಹುದಾಗಿತ್ತು. ಈ ಕುರ್ಚಿಗಳು ತುಂಬಾ ಐತಿಹಾಸಿಕ ಮತ್ತು ಶ್ರೀಮಂತಿಕೆಯ ಪ್ರತೀಕವಾಗಿವೆ. ಈ ಕುರ್ಚಿಗಳನ್ನು ನವಾಬ್ ಖಾಸರತ್ತುಲ್ಲಾ ಖಾನ್ ಎಂಬ ಸ್ವಾತಂತ್ರ್ಯ ಹೋರಾಟ ಗಾರರ ಮನೆತನದವರು ತಯಾರಿಸಿದ್ದಾರೆ. ಅವುಗಳ ಮೇಲೆ ಅಲಂಕಾರಿಕ ಕುಸುರಿ ಕೆಲಸ, ಶಿಲಕಲೆಯನು ಕಾಣಬಹುದು.
ನೂರಾರು ವರ್ಷಗಳ ಹಿನ್ನೆಲೆಯುಳ್ಳ ಈ ದರ್ಬಾರ್ ಕುರ್ಚಿಗಳನ್ನು ಗೋಡೌನ್‌ನಲ್ಲಿ ಇರಿಸಲಾಗಿತ್ತು. ಇವು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರ ಕಣ್ಣಿಗೆ ಬಿದ್ದ ಮೇಲೆ ಈ ಕುರ್ಚಿಗಳಿಗೆ ಮತ್ತೆ ಗತ ವೈಭವ ಮರುಕಳಿಸಿದೆ. ಈ ಬಗ್ಗೆ ಮಾತನಾಡಿದ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಮಹಾರಾಜರು ದರ್ಬಾರು ನಡೆಸುವಾಗ ಈ ಕುರ್ಚಿಗಳನ್ನು ಬಳಸಲಾಗುತ್ತಿತ್ತು. ದಿವಾನರುಗಳು ಸೇರಿದಂತೆ ಅರಮನೆಗೆ ಸೇರಿದ ಗಣ್ಯರು ಈ ಕುರ್ಚಿಯಲ್ಲಿ ಆಸೀನರಾಗುತ್ತಿದ್ದರು. ಸಿ.ರಂಗಚಾರ್ಲು, ದಿವಾನ್ ಪೂರ್ಣಯ್ಯ, ಸರ್ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಹೀಗೆ ಅನೇಕರು ಈ ಕುರ್ಚಿಯಲ್ಲಿ ಕುಳಿತಿದ್ದಿರಬಹುದು, ಬಲ್ಲವರು ಯಾರು? ಆದ್ದರಿಂದ ಈ ಕುರ್ಚಿಗಳ ಮಹತ್ವ ಅರಿತು, ಗೋಡೌನ್‌ನಿಂದ ಅದನ್ನು ಅರಮನೆ ಮಂಡಳಿ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಅಂದಾಜು 200ಕ್ಕೂ ಹೆಚ್ಚು ಕುರ್ಚಿಗಳಿದ್ದು, ಈ ಪೈಕಿ ಅರ್ಧದಷ್ಟು ಕುರ್ಚಿಗಳು ದುರಸ್ತಿಯಲ್ಲಿವೆ. ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದೇವೆ. ಈ ದರ್ಬಾರ್ ಕುರ್ಚಿಗಳನ್ನು ದಸರಾ ಅವಧಿಯಲ್ಲಿ ವಿಶೇಷವಾಗಿ ಅರಮನೆಯ ಖಾಸಗಿ ದರ್ಬಾರಿನ ವೇಳೆಯಲ್ಲಿ ಬಳಸಲಾಗುತ್ತದೆ. ಈ ಕುರ್ಚಿಗಳು, ಮೈಸೂರಿನ ರಾಜಕುಟುಂಬದ ವೈಭವ ಮತ್ತು ಪ್ರಖ್ಯಾತಿಯ ಸಂಕೇತವಾಗಿ ಇಂದು ಕೂಡ ಉಳಿದುಕೊಂಡಿವೆ.
ಟಿ.ಎಸ್. ಸುಬ್ರಹ್ಮಣ್ಯ,
ಅರಮನೆ ಮಂಡಳಿ ಉಪ ನಿರ್ದೇಶಕ
ಕುರ್ಚಿ ನೋಡಿ ಪುಳಕಿತಗೊಂಡಿದ್ದ ಅಮೆರಿಕಾ ಕೌನ್ಸುಲೇಟ್ ಜನರಲ್
ಮೈಸೂರು: ಅರಮನೆಗೆ ಭೇಟಿ ನೀಡಿದ್ದ ಅಮೆರಿಕ ಕೌನ್ಸುಲೇಟ್ ಜನರಲ್, ದರ್ಬಾರ್ ಕುರ್ಚಿಗಳನ್ನು ಕಂಡು ಪುಳಕಿತಗೊಂಡಿದ್ದು ಮಾತ್ರವಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಹೇಳಿದರು.
ಈ ಕುರ್ಚಿಗಳ ವಿನ್ಯಾಸದ ಬಗೆಗೂ ವಿದೇಶಿಗರಿಗೆ ಅಪಾರ ಮೆಚ್ಚುಗೆ. ಕಾರಣ ಈ ಕುರ್ಚಿಯ ಮೇಲೆ ದೀರ್ಘಕಾಲ ಕುಳಿತರೂ ಬೆನ್ನು ನೋವಿನ ಸಮಸ್ಯೆ ಕಾಡದು ಎಂಬುದು ಅವರ ಭಾವನೆಯಾಗಿದೆ ಎಂದರು.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…