ಪ್ರಶಾಂತ್ ಎಸ್.
ಮೈಸೂರು: ನಾಡಿಗೆ ಲಗ್ಗೆಯಿಡುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ವಿಭಿನ್ನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಅರಣ್ಯ ಇಲಾಖೆಯು ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಥರ್ಮಲ್ ಇಮೇಜ್ ಟ್ರ್ಯಾಕಿಂಗ್ ಸಿಸ್ಟಂ (ಡ್ರೋನ್) ಮೂಲಕ ಆನೆಗಳ ಚಲನವಲನವನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಡ್ರೋನ್ ಕ್ಯಾಮೆರಾಗಳ ಮೂಲಕ ಆನೆಗಳ ಹಿಂಡಿನ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಿಗೆ ಆಗಾಗ್ಗೆ ನುಗ್ಗಲು ಯತ್ನಿಸುತ್ತಿದ್ದ ಕಾಡಾನೆಗಳ ಹಿಂಡನ್ನು ಕಾಡಿನೊಳಕ್ಕೆ ಅಟ್ಟಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಅದರ ಯಶಸ್ಸಿನಿಂದ ಇನ್ನಷ್ಟು ಉತ್ಸಾಹದಿಂದ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಉದ್ಬೂರು, ಮೇಟಿಕುಪ್ಪೆ, ಕಾಕನಕೋಟೆ, ನಲ್ಕೆರೆ ಅರಣ್ಯಪ್ರದೇಶಗಳಲ್ಲಿ ಥರ್ಮಲ್ ಇಮೇಜ್ ಟ್ರ್ಯಾಕಿಂಗ್ ಸಿಸ್ಟಂ ಬಳಸಲಾಗುತ್ತಿದೆ.
ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ: ಕಾಡಾನೆಗಳು ನಾಡಿನತ್ತ ನುಗ್ಗುವುದನ್ನು ತಡೆಯಲು ಸದ್ಯ ರೈಲು ಕಂಬಿಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಸೌರವಿದ್ಯುತ್ ಚಾಲಿತ ತಂತಿ ಬೇಲಿ, ಇಪಿಟಿ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಕಾಡಾನೆಗಳು ಈ ಎಲ್ಲ ತಂತ್ರಗಳನ್ನೂ ವಿಫಲಗೊಳಿಸಿ ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿವೆ.
ಥರ್ಮಲ್ ಇಮೇಜ್ ಟ್ರ್ಯಾಕಿಂಗ್ ಸಿಸ್ಟಂ ವಿಶೇಷತೆ ಏನು?: ಈ ಯೋಜನೆಯಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಿ ಡ್ರೋನ್ ಗಳನ್ನು ಹಾರಿಸುವ ಮೂಲಕ ಕಾಡಾನೆಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ. ಕಾಡಾನೆಗಳು ಜನವಸತಿ ಪ್ರದೇಶಗಳತ್ತ ಬಂದೊಡನೆ ಕೂಡಲೇ ಲೊಕೇಷನ್ ಸಹಿತ ಅವುಗಳ ಚಿತ್ರವನ್ನು ಸೆರೆ ಹಿಡಿದು ಆಯಾ ಭಾಗದ ಅರಣ್ಯ ಸಿಬ್ಬಂದಿಗೆ ರವಾನಿಸುವ ವ್ಯವಸ್ಥೆ ಇದೆ. ಕೂಡಲೇ ಅರಣ್ಯ ಸಿಬ್ಬಂದಿ ಕಾರ್ಯಾ ಚರಣೆ ನಡೆಸಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಡ್ರೋನ್ ಸಾಮರ್ಥ್ಯ ಎಷ್ಟು?: ಥರ್ಮಲ್ ಇಮೇಜ್ ಟ್ರ್ಯಾಕಿಂಗ್ ಸೆರೆ ಹಿಡಿಯುವ ಕ್ಯಾಮೆರಾ ಅಳವಡಿಸಿದ ಡ್ರೋನ್‌ಗಳು ೩ ಬ್ಯಾಟರಿ ಗಳನ್ನು ಹೊಂದಿದ್ದು, ನಿರಂತರ ೪ ಗಂಟೆಗಳ ಕಾಲ ಹಾರಾಟ ನಡೆಸಿ ಮಾಹಿತಿ ಸಂಗ್ರಹಿಸಬಲ್ಲವು. ಹಗಲು ಮತ್ತು ರಾತ್ರಿ ವೇಳೆ, ಎಲ್ಲಾ ರೀತಿಯ ವಾತಾವರಣದಲ್ಲೂ ಈ ಡ್ರೋನ್‌ಗಳು ಕಾರ್ಯಾಚರಣೆ ನಡೆಸಬಲ್ಲವು.
ಕಾಡಾನೆ ಹಾವಳಿ ತಪ್ಪಿಸಲು ‘ಥರ್ಮಲ್ಇಮೇಜ್ ಟ್ರ್ಯಾಕಿಂಗ್ ಸಿಸ್ಟಮ್’ ಯೋಜನೆ ಕಾರ್ಯರೂಪಕ್ಕೆ
ಮೂರು ಬ್ಯಾಟರಿ ಸಹಿತ ನಾಲ್ಕು ಗಂಟೆಗಳ ಕಾಲ ಹಗಲು-ರಾತ್ರಿ ಕಾರ್ಯಾಚರಣೆ ಆನೆಗಳು ಜನವಸತಿ ಪ್ರದೇಶಗಳತ್ತ ಬಂದೊಡನೆ
ಲೊಕೇಷನ್ ಸಹಿತ ಚಿತ್ರ ಸೆರೆ ಹಿಡಿದು ಆ ಭಾಗದ ಅರಣ್ಯ ಸಿಬ್ಬಂದಿಗೆ ರವಾನಿಸುವ ವ್ಯವಸ್ಥೆ ಡ್ರೋನ್ ಮಾಹಿತಿ ಸಿಕ್ಕ ಕೂಡಲೇ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಮಾಡುವ ಅರಣ್ಯ ಸಿಬ್ಬಂದಿ
” ಕಾಡಾನೆ ದಾಳಿಗಳಿಂದ ಆಗುತ್ತಿರುವ ಅಪಾರ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವನ್ನು ತಡೆಯುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಇದು ಇಲಾಖೆಗೆ ಬಹಳ ಉಪಯುಕ್ತವಾಗಿದೆ. ಅಲ್ಲದೆ, ಕಾಡ್ಗಿಚ್ಚು ಕಾಣಿಸಿಕೊಂಡಾಗ ಈ ತಂತ್ರಜ್ಞಾನದಿಂದ ಸಕಾಲದಲ್ಲಿ ಮಾಹಿತಿ ಪಡೆದು ಅನಾಹುತವನ್ನು ತಪ್ಪಿಸಬಹುದು.”
-ಪಿ.ಎ.ಸೀಮಾ, ಡಿಸಿಎಫ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
ಎಲ್ಲೆಲ್ಲಿ ಡ್ರೋನ್ ಕಾರ್ಯಾಚರಣೆ?: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಉದ್ಬೂರು, ಮೇಟಿಕುಪ್ಪೆ, ಕಾಕನಕೋಟೆ, ನಲ್ಕೆ, ನಾಗಪುರ, ವೀರನಹೊಸಹಳ್ಳಿ, ಮಾನಿಮೂಲೆ ಹಾಡಿ, ದಮ್ಮನಕಟ್ಟೆ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಥರ್ಮಲ್ ಇಮೇಜ್ ಟ್ರ್ಯಾಕಿಂಗ್ ಸಿಸ್ಟಮ್ ಬಳಸಲಾಗುತ್ತಿದೆ. ಅಕ್ಟೋಬರ್ ಮಾಹೆಯಲ್ಲಿಯೇ ಎರಡು ಬಾರಿ ಮಗ್ಗೆ, ಮಳಲಿ ವ್ಯಾಪ್ತಿಯಲ್ಲಿ ಸುಮಾರು ೨೫ ಆನೆಗಳ ಹಿಂಡು ಕಾಡಿನಿಂದ ಹೊರಬರುತ್ತಿರುವುದನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಗುರುತಿಸಿ ಅವುಗಳನ್ನು ಮರಳಿ ಕಾಡಿಗೆ ಅಟ್ಟುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…