Andolana originals

ಜಲಕ್ರೀಡೆಗೆ ಆಕರ್ಷಿಸುವ ಮುತ್ತತ್ತಿ, ಅಪಾಯವನ್ನೂ ನೋಡಿ ಕತ್ತೆತ್ತಿ

ಎಸ್.ಉಮೇಶ್

ಮಳವಳ್ಳಿ ತಾಲ್ಲೂಕಿನ ಕಾವೇರಿ ನದಿಯ ಪ್ರಾಕೃತಿಕ ಸೌಂದರ್ಯ ಬಹಳ ರಮಣೀಯವಾದುದು. ಅದರಲ್ಲೂ ಕಾವೇರಿ ವನ್ಯ ಜೀವಿ ಅಭಯಾರಣ್ಯ ಅನೇಕ ಜೀವ ಸಂಕುಲಗಳನ್ನು ಹೊಂದಿದೆ.

ಈ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಅದರಲ್ಲೂ ಮುತ್ತತ್ತಿಯ ಪ್ರವಾಸಿ ತಾಣ ಅದ್ಭುತ ರಮ್ಯ ತಾಣವೇ ಸರಿ. ಆದರೆ, ಅದರ ಬುಡದಲ್ಲೇ ಇರುವ ಅಪಾಯದ ಕರಾಳತೆಯನ್ನರಿಯದ ಜನರು ಇಲ್ಲಿ ಜಲಕ್ರೀಡೆಗೆ ನೀರಿಗಿಳಿದು ಸಾವಿಗೀಡಾಗುತ್ತಿರುವುದು ಆತಂಕಕಾರಿ ಸಂಗತಿ.

ಮುತ್ತತ್ತಿಯಲ್ಲಿರುವ ಮುತ್ತೆತ್ತರಾಯನ ದೇವಾಲಯ ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರ ಮನೆದೇವರು. ಹಾಗಾಗಿ ಹೆಚ್ಚು ಪ್ರಚಲಿತಕ್ಕೆ ಬಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವುದಲ್ಲದೆ, ಇಲ್ಲಿ ಬೀಗರ ಔತಣ, ದೇವರ ಸೇವೆ ಜತೆಗೆ ಮಾಂಸಾಹಾರಿ ಊಟ ಮಾಮೂಲಿ ಎಂಬಂತಾಗಿದೆ. ಇದಲ್ಲದೆ, ಬೆಂಗಳೂರಿನ ಜನ ರಜಾ ದಿನಗಳಂದು ಒಂದು ದಿನದ ಪ್ರವಾಸಕ್ಕೆಂದು ಬರುತ್ತಾರೆ. ಅದರಲ್ಲೂ ಯುವಜನರು ಪಾರ್ಟಿ, ಮೋಜು, ಮಸ್ತಿ ಮಾಡಲು ಮುತ್ತತ್ತಿಗೆ ಬರುವುದು ಮಾಮೂಲು. ಹೀಗೆ ರಜಾದಿನಗಳು ಹಾಗೂ ಪೂಜೆ ಸಲ್ಲಿಸುವ ವಾರದ ದಿನಗಳಲ್ಲಿ ಜನರು ಇಲ್ಲಿಗೆ ತಂಡೋಪ ತಂಡವಾಗಿ
ಆಗಮಿಸುತ್ತಾರೆ. ಸಾರಿಗೆ ಬಸ್ ಸೌಕರ್ಯವಲ್ಲದೆ, ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಪರಿಣಾಮ ಶನಿವಾರ ಭಾನುವಾರಗಳಂದು ಇಲ್ಲಿ ಜನಜಾತ್ರೆಯೇ ನೆರೆಯುತ್ತದೆ. ಹಾಗೆ ಬಂದವರು ಮೋಜು ಮಸ್ತಿ ಮಾಡಿ ಮದ್ಯದ ನಶೆಯಲ್ಲಿ  ಈಜಿಗಿಳಿದು ಜೀವವನ್ನೇ ಕಳೆದುಕೊಂಡ ನಿದರ್ಶನಗಳಿವೆ.

ಹಲಗೂರು ಠಾಣೆ ವ್ಯಾಪ್ತಿಗೊಳಪಡುವ ಮುತ್ತತ್ತಿಯಲ್ಲಿ ಸತ್ತವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿ, ಬಳಿಕ ವಾರಸುದಾರರಿಗೆ ಒಪ್ಪಿಸುವ ಪೊಲೀಸರ ಕಾರ್ಯಾಚರಣೆಯೂ ಇಲ್ಲಿ ಮಾಮೂಲು
ಎಂಬಂತಾಗಿದೆ.

1990ಕ್ಕಿಂತ ಮುನ್ನಾ ದಿನಗಳಲ್ಲಿ ಕಡಿಮೆಯಾಗಿದ್ದ ಸಾವಿನ ಪ್ರಕರಣಗಳು ನಂತರದ ವರ್ಷಗಳಲ್ಲಿ ಹೆಚ್ಚಾಗಿರುವುದನ್ನು ಕಾಣಬಹುದು. ವರ್ಷಂಪ್ರತಿ ಸರಾಸರಿ ಎಂಬಂತೆ ಐದಾರು ಪ್ರಕರಣಗಳು ಸಂಭವಿಸುತ್ತಿದ್ದವು. ಆದರೆ, ಹಲವು ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡು ತೆರೆಯ ಮೇಲೆ ಬರುತ್ತಿದ್ದಂತೆ ಹೆಚ್ಚು ಪ್ರಖ್ಯಾತಿಗೆ ಬಂದಿತ್ತು. ಮುತ್ತತ್ತಿಯ ಪ್ರಕೃತಿ ಸೌಂದರ್ಯ, ಜೊತೆಗೆ ಸ್ಮಾರ್ಟ್‌ ಫೋನ್‌ಗಳು ಚಾಲ್ತಿಗೆ ಬಂದು ಮುತ್ತತ್ತಿ ಕಾಡು, ನದಿ, ಬೆಟ್ಟಗಳ ಪ್ರಾಕೃತಿಕ ಮೆರುಗು ಪ್ರಚಾರಗೊಂಡ ಪರಿಣಾಮ ಯುವಜನರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಇದರ ಪರಿಣಾಮವೋ ಏನೋ ಎಂಬಂತೆ 2006ರ ಬಳಿಕ ಮುತ್ತತ್ತಿಯ ಕಾವೇರಿ ನದಿಯಲ್ಲಿ ಮರಣ ಮೃದಂಗ ಕೇಳಿಬರಲಾರಂಭಿಸಿತು. 2007ರ ಒಂದೇ ವರ್ಷದಲ್ಲಿ 30 ಸಾವು ಸಂಭವಿಸಿದ್ದು, ಆ ಮೂಲಕ ಇದುವರೆಗೆ ಅತಿ ಹೆಚ್ಚು ಜನರು ಕಾವೇರಿಯಲ್ಲಿ ಈಜಲು ಹೋಗಿ ಮೃತಪಟ್ಟ ದಾಖಲೆಯಾಗಿದೆ. ಆನಂತರದಲ್ಲಿ ವರ್ಷಕ್ಕೆ ಎಂಟತ್ತು ಸಾವುಗಳು ಸರಾಸರಿ ಎಂಬಂತಾಗಿವೆ. ಒಟ್ಟಾರೆ 1990ರಿಂದ 2022ರ ವರೆಗೆ 275 ಸಾವು ಸಂಭವಿಸಿದ್ದು ಹಲಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದಲ್ಲದೆ ಬೆಳಕಿಗೆ ಬಾರದಿರುವ ಪ್ರಕರಣಗಳು ಲೆಕ್ಕವಿಲ್ಲ.


ನದಿಯಲ್ಲಿನ ಸುಳಿಗೆ ಸಿಲುಕಿಯೋ, ಡೈ ಹೊಡೆದ ರಭಸಕ್ಕೆ ಬಂಡೆಗೆ ತಲೆ ಬಡಿದೋ, ಬಂಡೆಯ ಪದರು ನೀರಿನೊಳಗೆ ಕಾಣದೆ ಕಾಲು ಸಿಲುಕಿಕೊಂಡೋ, ಕುಡಿದ ಅಮಲಿನಲ್ಲಿ ನೀರಿಗೆ ಬಿದ್ದೋ…. ಹೀಗೆ ಕಾರಣಗಳು ಹಲವಾರು. ಈ ಬಗ್ಗೆ ಹಲಗೂರು ಪೊಲೀಸರು ನದಿ ದಡದಲ್ಲಿ ಹಲವಾರು ಎಚ್ಚರಿಕೆಯ ಫಲಕಗಳನ್ನು ಹಾಕಿ ಸಾವುನೋವಿನ ಘಟನೆಗಳನ್ನು ತಡೆಯುವ ಕೆಲಸ ಮಾಡಿದ್ದಾರಾದರೂ ಇಲ್ಲಿಗೆ ಬರುವ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.

ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರು, ಅದರಲ್ಲೂ ಯುವಕರು ಮೊದಲು ಮೋಜು ಮಸ್ತಿ ಮಾಡುತ್ತಾ ಖುಷಿ ಅನುಭವಿಸುತ್ತಾರೆ. ಅದೆಲ್ಲವೂ ಸರಿ ಆದರೆ, ಸಂಭ್ರಮದ ಖುಷಿಯಲ್ಲಿ ನಂತರ ಈಜಾಡಲು ನೀರಿಗಿಳಿದ ಕೆಲಹೊತ್ತಿನಲ್ಲೇ ಚೀರಾಟ, ಗೋಳಾಟ ಕೇಳಿಬರಲಾರಂಭಿಸುತ್ತದೆ. ಮರುಕ್ಷಣವೇ ಸ್ಮಶಾನ ಮೌನ. ಈಗ ತಾನೇ ಜೊತೆಯಲ್ಲಿದ್ದವ ಈಗ ಹೆಣವಾಗಿ ಹೋದ, ಅಯ್ಯೋ ಮುಂದೇನು ಎಂದು ಗೋಳಾಡುವವರ ದೃಶ್ಯ ರೌರವ ನರಕದಂತೆ ಭಾಸವಾಗುತ್ತದೆ.

ಇಲ್ಲಿಗೆ ಬರುವ ಪ್ರವಾಸಿಗರು, ಯುವಕರು ಎಚ್ಚೆತ್ತುಕೊಂಡು ಅಪಾಯಕಾರಿ ಸ್ಥಳಗಳತ್ತ ತೆರಳದೆ ಊರಿಗೆ ಮರಳಿದರೆ ಮುತ್ತತ್ತಿಗೆ ಅಂಟಿರುವ ಈ ಕಳಂಕ ತೊಳೆದುಹೋಗಲು ಸಾಧ್ಯ.

1990ರಿಂದ 2022 ರವರೆಗೆ ಮುತ್ತತ್ತಿ ಕಾವೇರಿ ನದಿಯಲ್ಲಿ 225 ಅವಘಡಗಳು ಸಂಭವಿಸಿದ್ದು,  ಪುರುಷರು 254, ಮಹಿಳೆಯರು 21 ಸೇರಿದಂತೆ ಒಟ್ಟಾರೆ 275 ಮಂದಿ  ಮೃತಪಟ್ಟಿದ್ದಾರೆ.

ಹಿಂದೆ ಮುತ್ತತ್ತಿ ನದಿಯಲ್ಲಿ ಮುಳುಗಿ ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಇದನ್ನು ತಪ್ಪಿಸಲು ಜಿಲ್ಲಾಡಳಿತದಿಂದ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಸದಾ ಕಾಲವೂ ಕಟ್ಟೆಚ್ಚರ ವಹಿಸಲಾಗಿದೆ. ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ನೇಮಿಸಿ ಕಟ್ಟು ನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ನದಿಯ ದಡದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಅಲ್ಲದೆ ಮುತ್ತತ್ತಿಯಲ್ಲಿ ಮದ್ಯ ಮಾರಾಟ ಹಾಗೂ ಮದ್ಯಪಾನ ಮಾಡುವುದನ್ನು ನಿಷೇಧ ಮಾಡಲಾಗಿದೆ.
ಶ್ರೀಧರ್, ವೃತ್ತ ನಿರೀಕ್ಷಕರು, ಹಲಗೂರು ವೃತ್ತ.

ವಾರಾಂತ್ಯಗಳಲ್ಲಿ ಮುತ್ತತ್ತಿ ಕಾವೇರಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗಿತ್ತು. ಪ್ರಸ್ತುತ ತಗ್ಗಿದೆ. ಕಾವೇರಿ ನದಿಯ ಬದಿಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಇಬ್ಬರು ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಚೆಕ್‌ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತದೆ.
ಮಸ್ತಿ ಮಾಡಿ ಮದ್ಯದ ನಶೆಯಲ್ಲಿ ಈಜಿಗಿಳಿದು ಜೀವವನ್ನೇ ಕಳೆದುಕೊಳ್ಳುತ್ತಿರುವ ನಿದರ್ಶನಗಳಿವೆ. ಹಲಗೂರು ಠಾಣಾ
ರವಿ ಬುರ್ಜಿ, ವಲಯ ಅರಣ್ಯ ಅಧಿಕಾರಿ, ಹಲಗೂರು ವನ್ಯ ಜೀವಿ ವಲಯ, ಹಲಗೂರು,

ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago