ಕೆ.ಬಿ.ರಮೇಶನಾಯಕ
ಮೈಸೂರು: ಅರಮನೆ ನಗರಿಯಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ಮಹೋತ್ಸವದ ವೈಭವ ದಿನಕಳೆದಂತೆ ರಂಗೇರಿದೆ. ಮೊದಲ ದಿನದಿಂದಲೂ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ಆಕರ್ಷಿಸುತ್ತಿರುವ ದಸರಾ ಸಂಭ್ರಮ ಮತ್ತಷ್ಟು ಕಳೆಗಟ್ಟಿದೆ.
ಅರಮನೆ ನಗರಿಗೆ ವರ್ಷಪೂರ್ತಿ ಪ್ರವಾಸಿಗರು ಆಗಮಿಸಿದರೂ, ನವರಾತ್ರಿಯ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ. ಅದರಲ್ಲೂ ಈ ವರ್ಷ ಜನರ ಪಾಲ್ಗೊಳ್ಳುವಿಕೆ ತುಸು ಹೆಚ್ಚೇ ಆಗಿದೆ. ಸೆ.೨೨ರಂದು ಆರಂಭವಾದ ದಸರಾ ಮಹೋತ್ಸವದಲ್ಲಿ ೭ನೇ ದಿನದ ಸಂಭ್ರಮ ಮುಗಿಲುಮುಟ್ಟಿದೆ. ಹತ್ತು ಹಲವು ಕಾರ್ಯಕ್ರಮಗಳು ಎಲ್ಲರನ್ನೂ ಆಕರ್ಷಿಸುವಂತೆ ಮಾಡಿವೆ.
ಸಂಭ್ರಮವೋ ಸಂಭ್ರಮ: ನಗರದಲ್ಲಿ ಸಂಭ್ರಮದ ನವೋಲ್ಲಾಸ ಎಲ್ಲೆಲ್ಲೂ ಮನೆ ಮಾಡಿದೆ. ಮನೆಗಳಲ್ಲಿ ನವರಾತ್ರಿ ಗೊಂಬೆ ಪ್ರದರ್ಶನ ಹಬ್ಬದ ವಾತಾವರಣಕ್ಕೆ ಮತ್ತಷ್ಟು ರಂಗು ಮೂಡಿಸಿದೆ. ವಿವಿಧ ವೇದಿಕೆಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಸಾಂಸ್ಕೃತಿಕ ವೈಭವವನ್ನು ಶ್ರೀಮಂತಗೊಳಿಸಿವೆ. ಬನ್ನಿಮಂಟಪದ ಪಂಜಿನ ಕವಾ ಯತು ಮೈದಾನದಲ್ಲಿ ಶನಿವಾರ ನಡೆದ ಏರ್ ಶೋ ಮತ್ತು ಭಾನುವಾರ ನಡೆದ ಡ್ರೋನ್ ಶೋ ದಸರಾಗೆ ಮತ್ತಷ್ಟು ಮೆರುಗು ನೀಡಿತು.
ಏರ್ ಶೋ, ಡ್ರೋನ್ ಶೋ ವೀಕ್ಷಿಸಿ ಜನರು ಪುಳಕಿತಗೊಂಡರು. ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ವಯೋಮಾನ ದವರನ್ನೂ ರಂಜಿಸುತ್ತಿದ್ದರೆ, ಉತ್ತನಹಳ್ಳಿ ಬಳಿ ಐದು ದಿನಗಳ ಕಾಲ ಯುವ ದಸರಾ ಯಶಸ್ವಿಯಾಗಿ ನಡೆಯಿತಲ್ಲದೆ, ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟಿತ್ತು. ಯುವ ಸಮೂಹ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿತು. ಅರ್ಜುನ್ ಜನ್ಯ ಮತ್ತು ತಂಡದಿಂದ ಆರಂಭವಾದ ಯುವ ದಸರಾ ಝಲಕ್, ಸುನಿಽ ಚೌವ್ಹಾಣ್ ಅವರ ಹಾಡುಗಾರಿಕೆಯೊಂದಿಗೆ ಶನಿವಾರ ಸಂಪನ್ನಗೊಂಡಿತು. ಅರಮನೆ ವೇದಿಕೆ ಬಿಟ್ಟರೆ ಯುವ ದಸರಾ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದರೂ ಸಣ್ಣ ಅವಘಡವೂ ಇಲ್ಲದೆ ಮುಕ್ತಾಯಗೊಂಡಿದೆ. ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ, ಯೋಗ ದಸರಾ, ಪಾರಂಪರಿಕ ನಡಿಗೆ ಎಲ್ಲವೂ ಈ ಬಾರಿ ವಿಭಿನ್ನವಾಗಿ ನಡೆದು ದಸರಾ ಕಳೆಯನ್ನು ಹೆಚ್ಚಿಸಿದವು.
ಸಾಹಿತ್ಯಾಸಕ್ತರನ್ನು ಸೆಳೆದ ಪಂಚಕಾವ್ಯದೌತಣ ಶನಿವಾರ ಸಂಪನ್ನಗೊಂಡರೆ, ಪುಸ್ತಕ ಮೇಳ ಪುಸ್ತಕ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಕುಸ್ತಿ ಪ್ರೇಮಿಗಳನ್ನು ರಂಜಿಸಿತಲ್ಲದೆ, ಕುಸ್ತಿಪಟುಗಳು ದಸರಾ ಕಿಶೋರ-ಕಿಶೋರಿ, ದಸರಾ ಕಂಠೀರವ, ದಸರಾ ಕೇಸರಿ, ಮೈಸೂರು ದಸರಾ ಕುಮಾರ ಕಪ್ ಗೆದ್ದು ಬೀಗಿದರು. ರಾಜ್ಯ ಮಟ್ಟದ ಮುಖ್ಯಮಂತ್ರಿಗಳ ದಸರಾ ಕಪ್ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ಸಾವಿರಾರು ಕ್ರೀಡಾಪಟುಗಳು ಸಾಂಸ್ಕೃತಿಕ ರಾಜಧಾನಿಯ ವೈಭವ ಸವಿದು ಊರಿನತ್ತ ಪಯಣ ಬೆಳೆಸಿದರು. ೧೦ ಕಿಮೀ ಮ್ಯಾರಥಾನ್ ಭಾನುವಾರ ನಡೆಯಿತು. ಲಕ್ಷಾಂತರ ಹೂವುಗಳಿಂದ ಕಂಗೊಳಿಸುತ್ತಿರುವ ವಿವಿಧ ಕಲಾಕೃತಿಗಳ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬೆಳಿಗ್ಗೆಯಿಂದ ಸಂಜೆವರೆಗೆ ಮುಗಿಬಿದ್ದು ಸೆಲ್ಛಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇನ್ನು ಪಕ್ಕದಲ್ಲಿರುವ ದಸರಾ ವಸ್ತು ಪ್ರದರ್ಶನದ ಕಡೆಗೆ ಪ್ರವಾಸಿಗರು ತೆರಳುವುದರಿಂದ ಎತ್ತನೋಡಿದರೂ ಜನರ ದಂಡು ಕಾಣುತ್ತಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಬಾಯಿಚಪ್ಪರಿಸುವಂತಹ ಖಾದ್ಯ ಸಿಗುತ್ತಿರುವುದರಿಂದ ಬಗೆಬಗೆಯ ಭಕ್ಷ ಸವಿದು ಹೋಗುತ್ತಿದ್ದಾರೆ. ಶನಿವಾರ ರಾತ್ರಿ ೧೧ ಗಂಟೆಯಾದರೂ ಆಹಾರ ಮೇಳದ ಕಡೆಗೆ ಬರುವ ಜನರ ಸಂಖ್ಯೆ ಕಡಿಮೆಯಾಗದ ಕಾರಣ ಮಳಿಗೆಗಳ ಮಾಲೀಕರು ಆಹಾರ ಪೂರೈಸುವಲ್ಲಿ ಸುಸ್ತಾದರೆ, ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಕೂಡ ಹೈರಣಾದರು.
ಖಾಸಗಿ ದರ್ಬಾರ್: ಅರಮನೆಯಲ್ಲಿ ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರು ಗತಕಾಲದ ವೈಭವವನ್ನು ನೆನಪಿಸುವಂತೆ ಮಾಡಿದೆ. ರಾಜಪೋಷಾಕಿನಲ್ಲಿ ಯದುವೀರ್ ನಡೆಸಿಕೊಡುವ ಖಾಸಗಿ ದರ್ಬಾರ್ ವೀಕ್ಷಣೆಗೆ ಖಾಸಗಿಯಾಗಿ ಶಿಫಾರಸ್ಸು ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ
ಗಿನ್ನಿಸ್ ದಾಖಲೆ ನಿರ್ಮಾಣ!:
ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆಸ್ಕ್ ವತಿಯಿಂದ ನಡೆಸಲಾದ ಡ್ರೋನ್ ಪ್ರದರ್ಶನದಲ್ಲಿ ಒಟ್ಟು ೨,೯೮೩ ಡ್ರೋನ್ಗಳನ್ನು ಬಳಸಿಕೊಂಡು ಬಾನಂಗಳದಲ್ಲಿ ಬೃಹದಾ ಕಾರದ ಹುಲಿ ಕಲಾಕೃತಿಯನ್ನು ನಿರ್ಮಾಣ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಾಣ ಮಾಡಲಾಯಿತು. ಈ ಮೊದಲು ೧,೯೮೫ ಡ್ರೋನ್‌ಗಳನ್ನು ಬಳಸಿಕೊಂಡು ಹುಲಿಯ ಕಲಾಕೃತಿ ರಚಿಸುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು.
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…
ಎಚ್.ಡಿ.ಕೋಟೆ: ಬಸ್ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…
ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…
ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ…