Andolana originals

ಸರ್ವಜನ ಹಿತಕಾರಿ ಬಜೆಟ್

ಆರ್.ಟಿ.ವಿಠ್ಠಲಮೂರ್ತಿ

ಸಾಮಾಜಿಕ ನ್ಯಾಯದ ರಥ ಎಳೆಯಲು ಸಿಎಂ ಗರಿಷ್ಟ ಯತ್ನ 

ಬೆಂಗಳೂರು: ರಾಜ್ಯದ ಆದಾಯ ಮೂಲಗಳಿಗೆ ಹೊಡೆತ ಬಿದ್ದರೂ ಸಾಮಾಜಿಕ ನ್ಯಾಯದ ರಥವನ್ನು ಎಳೆಯಲು ಗರಿಷ್ಟ ಯತ್ನ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಸರ್ವಜನರ ಹಿತ ಕಾಪಾಡುವ ಹೊಸ ಹೊಸ ಯೋಜನೆಗಳನ್ನು ೪.೪೭ ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನ್ನು ಮಂಡಿಸಿದ್ದಾರೆ.

ಪ್ರತಿಕೂಲ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿಯೂ ತಮ್ಮ ಬಜೆಟ್ ಗಾತ್ರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿರುವ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಒತ್ತಡವಿದ್ದರೂ ಅದನ್ನು ಲೆಕ್ಕಿಸದೆ, ಗ್ಯಾರಂಟಿ ಯೋಜನೆಗಳನ್ನು ಉಳಿಸಿಕೊಳ್ಳುವುದಲ್ಲದೆ ಬಡವರು, ರೈತರು, ಮಹಿಳೆಯರು, ಮಕ್ಕಳು ಉದ್ಯಮಿಗಳು ಸೇರಿದಂತೆ ಸಮಾಜದ ಸರ್ವರ ಹಿತ ಕಾಯುವ ಯತ್ನ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಅವರು ಮಂಡಿಸಿದ ಬಜೆಟ್‌ಗೆ ರಾಜ್ಯದ ಸ್ವಂತ ತೆರಿಗೆಗಳ ಮೂಲಕ ೨.೨೦ ಲಕ್ಷ ಕೋಟಿ ರೂ. ಹರಿದು ಬರಲಿದ್ದರೆ, ತೆರಿಗೆಯೇತರ ಮೂಲ ಗಳಿಂದ ೧೬ ಸಾವಿರ ಕೋಟಿ ರೂ. ಆದಾಯ ಬರಲಿದೆ.

ಇದೇ ರೀತಿ ಕೇಂದ್ರ ಸರ್ಕಾರದ ವಿವಿಧ ಬಾಬ್ತುಗಳಿಂದ ೭೯ ಸಾವಿರ ಕೋಟಿ ರೂ.ಗಳಷ್ಟು ಹಣ ದೊರೆಯಲಿದ್ದರೆ, ಸಾಲದ ಪ್ರಮಾಣ ೧.೩೨ ಲಕ್ಷ ಕೋಟಿ ರೂ.ಗಳಷ್ಟಿದ್ದು ಬಜೆಟ್‌ನ ಆದಾಯ ಮೂಲಗಳಲ್ಲಿ ನಂಬರ್ ಟೂ ಸ್ಥಾನ ಗಳಿಸಿಕೊಂಡಿದೆ.

ಹೀಗೆ ಹೆಚ್ಚಿನ ಸಾಲ ಮಾಡುವ ಅನಿವಾರ್ಯತೆಯ ಬಗ್ಗೆ ನಿಖರವಾಗಿ ಹೇಳದಿದ್ದರೂ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಬಜೆಟ್ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಧೋರಣೆಗಳು ರಾಜ್ಯಕ್ಕೆ ಯಾವ್ಯಾವ ಮೂಲಗಳಿಂದ ಹೊಡೆತ ಕೊಟ್ಟಿದೆ ಎಂಬುದನ್ನು ಸಾದ್ಯಂತವಾಗಿ ವಿವರಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪಾಲು ಕೊಡುವಿಕೆಯಲ್ಲಿ ಆಗಿರುವ ತಾರತಮ್ಯ, ಹಲವು ವಸ್ತುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿಮೆ ಮಾಡುವ ನಿರ್ಧಾರದಿಂದ ರಾಜ್ಯಕ್ಕೆ ಆಗಿರುವ ನಷ್ಟ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಿಗುತ್ತಿದ್ದ ಪಾಲಿನಲ್ಲಿ ಕೊರತೆಯಾಗಿರುವುದೂ ಸೇರಿದಂತೆ ಕೇಂದ್ರದ ಧೋರಣೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ವಿವರಿಸಿದ್ದಾರೆ.

ಹೀಗೆ ಕೇಂದ್ರದ ಧೋರಣೆಯ ಹಿನ್ನೆಲೆಯಲ್ಲಿ ಆಗಿರುವ ಆರ್ಥಿಕ ನಷ್ಟವನ್ನು ಮುಖ್ಯವಾಗಿಟ್ಟುಕೊಂಡಿದ್ದರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಪ್ರಯೋಗ ಮಾಡಬಹುದಿತ್ತಾದರೂ, ಸಿದ್ದರಾಮಯ್ಯ ಅದನ್ನು ಮಾಡಲು ಹೋಗಿಲ್ಲ. ಅದೇ ಕಾಲಕ್ಕೆ ಕೃಷಿ ವ್ಯವಸ್ಥೆಗೆ ಶಕ್ತಿ ತುಂಬಲು ಪ್ರಯತ್ನಿಸಿರುವ ಸಿದ್ದರಾಮಯ್ಯ ಅವರು, ಶಿಕ್ಷಣ, ಲೋಕೋಪಯೋಗಿ, ಸಮಾಜ ಕಲ್ಯಾಣ,ನೀರಾವರಿ, ಇಂಧನ, ಆರೋಗ್ಯ ಸೇರಿದಂತೆ ವಿವಿಧ ಬಾಬ್ತುಗಳಿಗೆ ಗಣನೀಯ ಪ್ರಮಾಣದ ಹಣ ನೀಡಿದ್ದಾರೆ.

ಈ ಮಧ್ಯೆ ಇಡೀ ಜಗತ್ತನ್ನು ಬೆರಗಾಗಿಸಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಕ್ಕೆ ಆದ್ಯತೆ ನೀಡಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕಡೆ ನೋಟ ಬೀರಿದೆ. ಹೀಗೆ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ರಥದ ನಡಿಗೆಗೆ ತೊಂದರೆಯಾಗದಂತೆ ನೋಡಿಕೊಂಡಿರುವ ಅವರು, ಕರ್ನಾಟಕದ ಅಭಿವೃದ್ಧಿಗೆ ನೆರವಾಗುವ ಯೋಜನೆಗ ಳಿಗೂ ಹೆಚ್ಚು ಒತ್ತು ನೀಡಿದ್ದಾರೆ.

ಅಂದ ಹಾಗೆ ಸಿದ್ದರಾಮಯ್ಯ ಅವರು ೨೦೨೬-೨೭ನೇ ಸಾಲಿನ ಬಜೆಟ್ ಮಂಡಿಸುವ ಮುನ್ನ ಆರ್ಥಿಕ ತಜ್ಞರು, ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಾಗುವುದು ಕಷ್ಟ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ನಾಲ್ಕು ಲಕ್ಷದ ಏಳು ಸಾವಿರ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಕೇಂದ್ರದ ಅಸಹಕಾರ ಧೋರಣೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಂಡಿಸಿದ ಬಜೆಟ್ ಗಾತ್ರವನ್ನು ಮೀರಿ ಮುಂದೆ ಹೋಗುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ವಿವಿಧ ಮೂಲಗಳಿಂದ ಸರ್ಕಾರದ ಆದಾಯವನ್ನು ಹೆಚ್ಚಳ ಮಾಡಿಕೊಂಡ ಸಿದ್ದರಾಮಯ್ಯ ಅವರು, ಆರ್ಥಿಕ ಶಿಸ್ತಿನಡಿಯಲ್ಲಿಯೇ ಸಾಲದ ಪ್ರಮಾಣವನ್ನು ನಿರ್ಧರಿಸಿ, ಅದಕ್ಕೆ ಪೂರಕವಾಗಿ ನಾಲ್ಕು ಲಕ್ಷದ ನಲವತ್ತೇಳು ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯದ ರಥ ಎಳೆಯುತ್ತಲೇ ರಾಜ್ಯದ ಹಿತವನ್ನು ಕಾಪಾಡುವ ಪ್ರಯತ್ನ ಮಾಡಿದ್ದಾರೆ.

” ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪಾಲು ಕೊಡುವಿಕೆಯಲ್ಲಿ ಆಗಿರುವ ತಾರತಮ್ಯ, ಹಲವು ವಸ್ತುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿಮೆ ಮಾಡುವ ನಿರ್ಧಾರದಿಂದ ರಾಜ್ಯಕ್ಕೆ ಆಗಿರುವ ನಷ್ಟ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಿಗುತ್ತಿದ್ದ ಪಾಲಿನಲ್ಲಿ ಕೊರತೆಯಾಗಿರುವುದೂ ಸೇರಿದಂತೆ ಕೇಂದ್ರದ ಧೋರಣೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬಿದ್ದಿದೆ ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ವಿವರಿಸಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಬಜೆಟ್‌ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗಿಯಾಗಿ: ಸ್ಪೀಕರ್‌ ಯು.ಟಿ.ಖಾದರ್‌ ಕರೆ

ಮಂಗಳೂರು: ಬಜೆಟ್‌ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗಿಯಾಗಿ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಕರೆ ನೀಡಿದ್ದಾರೆ. ಈ ಕುರಿತು ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ…

25 mins ago

ಹಾಸನ| ಒಂದೇ ವಾರದಲ್ಲಿ ಎರಡು ಚಿರತೆ ಸೆರೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ದಿಂಡಗೂರು ಗ್ರಾಮದಲ್ಲಿ ಕಳೆದ ಒಂದು ವಾರದ ಅಂತರದಲ್ಲಿ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ಗ್ರಾಮಸ್ಥರು ನೆಮ್ಮದಿಯ…

1 hour ago

ಯುದ್ಧದ ನಡುವೆ ಇರಾನ್‌ನಲ್ಲಿ ಭೂಕಂಪ: 4.1 ತೀವ್ರತೆ ದಾಖಲು

ಟೆಹರಾನ್:‌ ಯುದ್ಧದ ನಡುವೆಯೇ ಇರಾನ್‌ನಲ್ಲಿ ಇಂದು ಭೂಕಂಪ ಸಂಭವಿಸಿದೆ. ಇರಾನ್‌ನ ಆಯಕಟ್ಟಿನ ಪ್ರದೇಶದವಾದ ಬಂದರ್‌ ಅಬ್ಬಾಸ್‌ ಸಮೀಪ ರಿಕ್ಟರ್‌ ಮಾಪಕದಲ್ಲಿ…

1 hour ago

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಜತ್‌ ವಿರುದ್ಧ ಬೆಂಗಳೂರಿನ ಕೆ.ಆರ್.‌ಪುರಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.…

4 hours ago

ಸಿಎಂ ಸಿದ್ದರಾಮಯ್ಯ ಅವರ ಇಂದಿನ ಮೈಸೂರು ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರು ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11:40ಕ್ಕೆ ಮೈಸೂರು ಜಿಲ್ಲೆಯ ವರುಣದ…

4 hours ago

ಓದುಗರ ಪತ್ರ: ಯುದ್ಧ ವಿನಾಶಕಾರಿ!

ಯುದ್ಧ ವಿನಾಶಕಾರಿ! ನಿಲ್ಲುವಂತೆ ಕಾಣುವುದಿಲ್ಲ ಕೊಲ್ಲಿ ರಾಷ್ಟ್ರಗಳ ಸಂಘರ್ಷ! ಬದಲಿಗೆ ವಿಸ್ತರಿಸಿರುವುದು ನೋವು ಸಂಕಟದ ಸಂಗತಿ! ಗೆಲ್ಲಲಾಗದು ದ್ವೇಷದಲಿ ಯಾರನ್ನೂ ಪ್ರೀತಿ…

4 hours ago