Andolana originals

ನರಪೇತಲ ರೇಣುಕಾಸ್ವಾಮಿಗೆ ಮಾತಿಗೊಂದು ಏಟು

ನೆತ್ತಿ,ಕೈ ಬೆರಳುಗಳಿಂದ ಸೋರುತ್ತಿದ್ದ ರಕ್ತ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿದ್ದಿತ್ತು ಹೊಡೆತ
ದರ್ಶನ್‌ಗಿದ್ದ ಸಿಟ್ಟನ್ನು ಸಾರಿ ಹೇಳುತ್ತಿದ್ದವು ರೇಣುಕಾಸ್ವಾಮಿಯ ಮೈಮೇಲಿನ ಬಾಸುಂಡೆ

ಪಬ್‌ನಿಂದ ಹೊರಟ ನಾವು ವಿಷ್ಣುವರ್ಧನ್ಸ ಮಾಧಿ ರಸ್ತೆಯಿಂದ ಎಡಗಡೆ ತಿರುಗಿ ಆರ್.ಆರ್ .ನಗರದತ್ತ ತೆರಳಿದೆವು. ಅಲ್ಲಿಂದ ಸ್ವಲ್ಪ ದೂರದಲ್ಲಿ ಎಡಭಾಗದಲ್ಲಿ Full Circle ಹೆಸರಿನ ಹೋಟೆಲ್ಬ ಳಿ ಹೋಗುತ್ತಿದ್ದಾಗ ದರ್ಶನ್ ನನಗೆ ಕಾರನ್ನು ಸ್ತೋ ಮಾಡಿ ಎಂದರು. ನಾನು ಏಕೆ ಎಂದು ಕೇಳಿದಾಗ ಬಾಡಿಗಾರ್ಡ ಗಳು ಇದ್ದ ಕಾರನ್ನು ತಮ್ಮ ಮನೆಗೆ ಹೋಗುವಂತೆ ತಿಳಿಸಲು ಹೇಳಿದರು. ಆಗ ನಾನು ಗ್ಲಾಸ್ ಡೌನ್ ಮಾಡಿ ಕೈ ಸನ್ನೆ ಮಾಡಿದಾಗ, ಆ ಮೂರು ಕಾರುಗಳ ಪೈಕಿ ಬಾಡಿಗಾರ್ಡ್‌ಗಳು ಇದ್ದ ಕಾರು ನಮ್ಮ ಕಾರಿನ ಪಕ್ಕ ಬಂದು ನಿಂತುಕೊಂಡಿತು. ನಾನು ಬಾಡಿಗಾರ್ಡ್‌ಗಳಿಗೆ ನೀವು ಮನೆಗೆ ಹೋಗಬೇಕಂತೆ ಎಂದು ತಿಳಿಸಿದೆ. ನಂತರ ಆ ಕಾರು ತನ ಪಾಡಿಗೆ ತಾನು ಮನೆಯ ಕಡೆ ಹೊರಟಿತು.

ಪವಿತ್ರ ಗೌಡ ಮನೆಯತ್ತ ಪ್ರಯಾಣ: ನಂತರ ನಾನು ಎಲ್ಲಿಗೆ ಹೋಗಬೇಕು ಎಂದು ದರ್ಶನ್‌ಗೆ ಕೇಳಿದಾಗ, ಅವರು ಪವಿತ್ರಾ ಗೌಡ ಅವರ ಮನೆಗೆ ಹೋಗಬೇಕು ಎಂದರು. ಪವಿತ್ರಾ ಗೌಡ ದರ್ಶನ್ 2ನೇ ಪತ್ನಿಯಾಗಿದ್ದು, ಅವರಮನೆಆರ್.ಆರ್.ನಗರದಕೆಂಚೇನಹಳ್ಳಿಯಲ್ಲಿ ಇದೆ ಎಂದು ನನಗೆ ಗೊತ್ತಿತ್ತು. ದರ್ಶನ್ ಸೂಚನೆ ಯಂತೆ ಮಧ್ಯಾಹ್ನ 4 ಗಂಟೆಯ ಸುಮಾರಿಗೆ ಪವಿತ್ರಾ ಗೌಡ ಅವರ ಮನೆಯ ಹತ್ತಿರ ಹೋದಾಗ, ಪವಿತ್ರಾ ಗೌಡ ಅವರು ತಮ್ಮ ಮನೆಯ ಮೆಟ್ಟಿಲುಗಳನ್ನು ಇಳಿದು ಗೇಟ್ ಹತ್ತಿರ ಬಂದಿದ್ದರು. ಆಗ ನನ್ನ ಕಾರಿನಲ್ಲಿ ಕುಳಿತವರು ತಮ್ಮ ಸೀಟ್ ಬದಲಾವಣೆ ಮಾಡಿಕೊಂಡರು. ನನ್ನ ಹಿಂಭಾಗದಲ್ಲಿ ಕುಳಿತಿದ್ದ ವಿನಯ್ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತರು. ವಿನಯ್ ಹಿಂಬದಿಯ ಸೀಟಿನಲ್ಲಿ ದರ್ಶನ್ ಹಾಗೂ ನನ್ನ ಸೀಟಿನ ಹಿಂಭಾಗದಲ್ಲಿ ಪವಿತ್ರಾ ಗೌಡ ಬಂದು ಕುಳಿತುಕೊಂಡಿದ್ದರು.

ಪವಿತ್ರಾ ಗೌಡ ಮನೆಯಿಂದ ಗೊತ್ತಿಲ್ಲದ ದಾರಿಯಲ್ಲಿ ಡೈವಿಂಗ್: ಆಗ ನಾನು ಎಲ್ಲಿಗೆ ಹೋಗಬೇಕು ಎಂದು ದರ್ಶನ್‌ಗೆ ಕೇಳಿದಾಗ, ವಿನಯ್ ಹೇಳಿದಂತೆ ಕಾರು ಓಡಿಸಿ ಎಂದು ತಿಳಿಸಿದರು. ಅದರಂತೆ ನಾನು ಹೇಗೆ ಹೋಗಬೇಕು ಎಂದು ವಿನಯ್‌ಗೆ ಕೇಳಿದಾಗ, ಅವರು ಕಾರನ್ನು ರಿವರ್ ತೆಗೆದುಕೊಳ್ಳಿ ಎಂದರು. ನಾನು ಕಾರನ್ನು ರಿವರ್ ತೆಗೆದುಕೊಂಡ ನಂತರ ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಹತ್ತಿರ ಹೋಗಲು ಹೇಳಿದರು. ನಮ್ಮ ಕಾರಿನ ಹಿಂದೆ ವಿನಯ್ ಅವರ ಜೀಪ್, ಅದರ ಹಿಂದೆ ಬಿಳಿ ಸಾರ್ಪಿಯೋ ಫಾಲೋ  ಮಾಡಿಕೊಂಡು ಬರುತ್ತಿದ್ದವು. ರಾಜರಾಜೇಶ್ವರಿ ನಗರದ ದೇವಸ್ಥಾನದಿಂದ ಮುಂದಕ್ಕೆ ಎಲ್ಲಿಗೆ ಹೋಗ ಬೇಕು ಎಂದು ನನಗೆ ತಿಳಿಯದ ಕಾರಣ ವಿನಯ್ ಅವರಿಗೆ ಮುಂದಿನ ರಸ್ತೆಯನ್ನು ತಿಳಿಸಲು ಹೇಳಿದೆ. ಅದರಂತೆ ಅವರು ತೋರಿಸಿದ ದಾರಿಯಲ್ಲಿ ಸಾಗಿದೆ.

ಮಡ್ ರೋಡ್‌ನಲ್ಲಿದ್ದ ಶೆಡ್‌ಗೆ ಎಂಟ್ರಿ:  ಆರ್.ಆರ್.ನಗರದ ದೇವಸ್ಥಾನದಿಂದ ಅರ್ಧ ಮುಕ್ಕಾಲು ಕಿ.ಮೀ. ಹೋದ ನಂತರ ನಮಗೆ ಮಣ್ಣಿನ ರಸ್ತೆ ಸಿಕ್ಕಿತು. ಅಲ್ಲಿ ತೆಂಗಿನ ಮರಗಳು ಇದ್ದವು. ಅದೇ ಮಣ್ಣಿನ ರಸ್ತೆಯಲ್ಲಿ ಮುಂದೆ ಹೋಗಲು ತಿಳಿಸಿದರು. ನಾನು ಅದೇ ರಸ್ತೆಯಲ್ಲಿ ಮುಂದೆ ಹೋದಾಗ ಒಂದು ನೀಲಿ ಬಣ್ಣದ ಶೀಟ್ ನಿಂದ ಮಾಡಿರುವ ಗೇಟ್ ಕಂಡಿತ್ತು. ಆಗ ವಿನಯ್ ತಮ್ಮ ಬದಿಯ ಗ್ಲಾಸ್ ಇಳಿಸಿ ಗೇಟನ್ನು ತೆರೆಯಲು ಅಲ್ಲಿದ್ದ ವಾಚ್‌ಮೆನ್‌ಗೆ ತಿಳಿಸಿದರು. ಗೇಟ್ ಒಳಗಡೆ ಹೋದಾಗ, ಎಡಭಾಗದಲ್ಲಿ ಒಂದು ಸೆಕ್ಯುರಿಟಿ ರೂಂ ತರಹ ಒಂದು ರೂಂ ಇತ್ತು. ಸ್ವಲ್ಪ ಕಾರನು ತೆಗೆದುಕೊಂಡು ಹೋದಾಗ, ಎಡಬದಿಯಲ್ಲಿ ಗ್ರೇ ಕಲ‌ ಇಟಿಯೋಸ್ ಕಾರು ನಿಂತಿತ್ತು. ಕಾರಿನ ಪಕ್ಕದಲ್ಲಿ ಮೂರು ಜನ ಕುಳಿತಿದ್ದರು. ಅವರು ಯಾರು ಎಂದು ನನಗೆ ತಿಳಿದಿರಲಿಲ್ಲ. (ಸಾಕ್ಷಿ ವಿಸಿಯಲ್ಲಿ ಹಾಜರುಪಡಿಸಿದ ಆರೋಪಿಗಳ ಪೈಕಿ 6ನೇ ಆರೋಪಿ ಜಗದೀಶ್, 7ನೇ ಆರೋಪಿ ಅನುಕುಮಾರ್, 8ನೇ ಆರೋಪಿ ರವಿಶಂಕರ್) ನಾನು ವಿನಯ್‌ಗೆ ಕಾರನ್ನು ಎಲ್ಲಿ ನಿಲ್ಲಿಸಬೇಕು ಎಂದು ಕೇಳಿದಾಗ, ಅವರು ಸ್ವಲ್ಪ ಮುಂದೆ ನಡಿಯಿರಿ ಎಂದರು. ಅದರಂತೆ ನಾನು ಮುಂದೆ ಹೋಗುವಾಗ, ರಸ್ತೆಯ ಎಡಬದಿಯಲ್ಲಿ ದ್ವಿಚಕ್ರವಾಹನಗಳು, ಬಲಬದಿಯಲ್ಲಿ ನಾಲ್ಕು ಚಕ್ರಗಳ ವಾಹನಗಳು ನಿಂತಿದ್ದವು. ಸ್ವಲ್ಪ ಮುಂದೆ ಹೋಗಿ ಬಲತಿರುವು ತೆಗೆದು ಕೊಂಡಾಗ, ಎಡಭಾಗದಲ್ಲಿ ಕಮರ್ಷಿಯಲ್ ವಾಹನಗಳು ನಿಲುಗಡೆಯಾಗಿದ್ದವು.

ತಲೆ ಬಗ್ಗಿಸಿ ಕುಳಿತಿದ್ದ ನರಪೇತಲ:  ಹಾಗೆಯೇ ಮುಂದೆ ಹೋಗುತ್ತಿದ್ದಂತೆ, ಅಲ್ಲಿ ಒಂದು ಹುಡುಗರ ಗುಂಪು ಕಂಡಿತು. ಹಾಗೆ ಮುಂದೆ ಹೋದಾಗ, ಅಲ್ಲಿ ನೀಲಿ ಬಣ್ಣದ ಜೀನ್ಸ್, ಬಿಳಿ ಬಣ್ಣದ ಅರ್ಧ ತೋಳಿನ ಬನಿಯನ್
ಹಾಕಿಕೊಂಡಿದ್ದ ಒಬ್ಬ ವ್ಯಕ್ತಿ ಅರ್ಧಂಬರ್ಧ ಚಕ್ಕಮಕ್ಕಲು ಹಾಕಿಕೊಂಡು, ತಲೆಯನ್ನು ಬಗ್ಗಿಸಿಕೊಂಡು ನೆಲದ ಮೇಲೆ ಕುಳಿತಿದ್ದ. ಆತನ ನೆತ್ತಿಯ ಭಾಗದಿಂದ ರಕ್ತ ಸುರಿಯುತ್ತಿತ್ತು. ನಾನು ಕಾರನ್ನು ಇನ್ನೂ ಸ್ವಲ್ಪ ಮುಂದೆ ತೆಗೆದು ಕೊಂಡು ಹೋದಾಗ, ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ, ಪಕ್ಕದಲ್ಲಿ ನಂದೀಶ್ ಇದ್ದರು. ಇಬ್ಬರೂ ನನಗೆ ಮೊದಲಿನಿಂದಲೂ ಪರಿಚಯ. ಅವರಲ್ಲದೆ, ದೀಪಕ್ (13ನೇ ಆರೋಪಿ) ಮತ್ತು ಪುನೀತ್ (ಚಾ. ಸಾ.91) ಇದ್ದರು. ಜೊತೆಗೆ ಅಲ್ಲಿ ಕೆಲಸ ಮಾಡುವ ಕಿರಣ್ ಎಂಬಾತನೂ ಇದ್ದ. ನನಗೆ ಅವರು ಅಷ್ಟೊಂದು ಪರಿಚಯ ಇರಲಿಲ್ಲ. ದೀಪಕ್ ಲೋನ್ ಕಟ್ಟದೇ ಇರುವ ವಾಹನಗಳನ್ನು ಜಪ್ತಿ ಮಾಡುವ ಟೀಂನಲ್ಲಿ ಕೆಲಸಮಾಡುತ್ತಿದ್ದರು. ವಿನಯ್ ಮೂಲಕ ಪರಿಚಯ ಆಗಿದ್ದ ಅವರು ನನಗೆ ಸುಮಾರು 4 ವರ್ಷಗಳಿಂದ ಗೊತ್ತು.

ಆಂದೋಲನ ಡೆಸ್ಕ್

Recent Posts

ಮಗನೆ, ನಾನು ಯಾರು ಎಂದು ಗೊತ್ತಾ?

ರೇಣುಕಾಸ್ವಾಮಿಗೆ ಬೈಗುಳದೊಂದಿಗೆ ಏಟು ಕೊಡುತ್ತಿದ್ದ ದರ್ಶನ್ ಕಾರಿನಿಂದ ಇಳಿಯುತ್ತಲೇ ನರಪೇತಲನಿಗೆ ಒದ್ದ ವಿನಯ್ ನಂತರ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್…

1 min ago

ರೇಣುಕಾಸ್ವಾಮಿ ಕೊಲೆಯಾದ ದಿನ ನಡೆದಿದ್ದೇನು?

ಸಿನಿಮೀಯ ಮಾದರಿಯಲ್ಲೇ ದರ್ಶನ್ ಹೊಡೆತ; ರೇಣುಕಾಸ್ವಾಮಿಗೆ ಬಿದ್ದ ಪ್ರತಿ ಏಟಿನಲ್ಲೂ ಇತ್ತು ದರ್ಶನ್ ಸಿಟ್ಟು  ಮಾಫಿ ಸಾಕ್ಷಿಯಾದ 14ನೇ ಆರೋಪಿ:…

40 mins ago

ಓದುಗರ ಪತ್ರ: ಅರಿವು ಹೆಚ್ಚಿಸುವ ಚೆನ್ನಬಸವಣ್ಣ ಅವರ ಲೇಖನ

ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ…

5 hours ago

ಓದುಗರ ಪತ್ರ: ಹೊಸ ರಾಜ್ಯಪಾಲರು ರಾಜ್ಯದ ಪ್ರಗತಿಗೆ ಮಾರ್ಗದರ್ಶನ ನೀಡಲಿ

ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…

5 hours ago

ಓದುಗರ ಪತ್ರ: ದರ ವ್ಯತ್ಯಾಸ: ಗ್ರಾಹಕರ ಹಿತವೇ ಮುಖ್ಯ

ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…

5 hours ago

ದೇವಭೂಮಿ ದ್ವಾರಕಾದ ‘ಮೀಟಾಪುರ್ ಮದರ್ ಥೆರೇಸಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ  ಮದರ್ ಥೆರೇಸಾ ಈಗ ನಮ್ಮ…

5 hours ago