೨ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ; ೩ ಕೆರೆಗಳ ಒಡಲು ತುಂಬಿಸದ ನಿಗಮ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಗಾಂಧಿ ಗ್ರಾಮ ಏತ ನೀರಾವರಿ ಯೋಜನೆಯಡಿ ಗುಂಡ್ಲುಪೇಟೆ ತಾಲ್ಲೂಕಿನ ೩ ಕೆರೆಗಳನ್ನು ಕಬಿನಿ ನೀರಿನಿಂದ ತುಂಬಿ ಸದೆ ವಿಳಂಬ ಮಾಡಲಾಗುತ್ತಿದ್ದು, ಸುತ್ತಮುತ್ತಲಿನ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಚಳಿಗಾಲ ಕಳೆದು ಬೇಸಿಗೆ ಕಾಲ ಆರಂಭವಾಗುತ್ತಿದ್ದು ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ತಾಲ್ಲೂಕಿನ ಗರಗನಹಳ್ಳಿ ಕೆರೆ, ಹಳ್ಳದ ಮಾದಹಳ್ಳಿ ಕೆರೆ, ಮಳವಳ್ಳಿ ಕೆರೆಗಳನ್ನು ತುಂಬಿಸದೆ ಇರುವುದರಿಂದ ಆ ಭಾಗದ ಜಾನುವಾರುಗಳು, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಅಂತರ್ಜಲ ಕುಸಿಯುವ ಭೀತಿ ಎದುರಾಗಿದೆ.
ಗಾಂಧಿ ಗ್ರಾಮ ಏತ ಯೋಜನೆಯಡಿ ಮೊದಲ ಹಂತದಲ್ಲಿ ನಂಜನಗೂಡು ತಾಲ್ಲೂಕಿನ ೩ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ರಾಘವಾ ಪುರ, ಕಮರಹಳ್ಳಿ ಕೆರೆಗಳನ್ನು ತುಂಬಿಸಲಾಗಿದೆ. ಅವುಗಳು ತುಂಬಿ ಕೋಡಿ ಬಿದ್ದಿವೆ. ಇದೇ ಯೋಜನೆಯ ೨ ಹಂತದಲ್ಲಿ ಬರುವ ಗರಗನಹಳ್ಳಿ, ಹಳ್ಳದ ಮಾದಹಳ್ಳಿ, ಮಳವಳ್ಳಿ ಕೆರೆಗಳನ್ನು ಮಾತ್ರ ತುಂಬಿಸಿಲ್ಲ. ೨ ವರ್ಷಗಳ ಹಿಂದೆ ಪ್ರಾಯೋಗಿಕ ವಾಗಿ ನೀರು ತುಂಬಿಸಿದ್ದನ್ನು ಹೊರತುಪಡಿಸಿದರೆ ಮತ್ತೆ ನೀರು ಬಿಟ್ಟಿಲ್ಲ ಎಂದು ರೈತ ಮುಖಂಡರು ದೂರಿದ್ಧಾರೆ.
ನಂಜನಗೂಡು ತಾಲ್ಲೂಕಿನ ಗಾಂಧಿಗ್ರಾಮದ ಬಳಿ ಹರಿಯುವ ಕಬಿನಿ ನದಿಯ ದಂಡೆಯಲ್ಲಿ ಪಂಪ್‌ಹೌಸ್ ನಿರ್ಮಿಸಿ ನೀರೆತ್ತಿ ನಂಜನಗೂಡು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ. ಎಚ್. ಎಸ್. ಮಹದೇವಪ್ರಸಾದ್ ಅವರು ಕಾವೇರಿ ನೀರಾವರಿ ನಿಗಮದ ಮೂಲಕ ಅನುಷ್ಠಾನಗೊಳಿಸಿದ್ದರು.
೨ ಕೆರೆಗಳು ಕೋಡಿ ಬಿದ್ದಿವೆ: ಈ ಯೋಜನೆಯ ಮೊದಲ ಹಂತದಲ್ಲಿ ಬರುವ ಗುಂಡ್ಲುಪೇಟೆ ತಾಲ್ಲೂಕಿನ ೨ ಕೆರೆಗಳನ್ನು ಮಾತ್ರ ತುಂಬಿಸುತ್ತಿದ್ದಾರೆ. ಅವುಗಳು ಈಗಲೂ ತುಂಬಿ ಕೋಡಿ ಬಿದ್ದಿವೆ. ನೀರೆಲ್ಲ ಗುಂಡ್ಲುಹೊಳೆಯಲ್ಲಿ ಹರಿದು ಹೋಗುತ್ತಿದೆ. ೨ನೇ ಹಂತದಲ್ಲಿ ಸೇರಿರುವ ೩-೪ ಕೆರೆಗಳನ್ನು ಮಾತ್ರ ನಿಗಮದವರು ತುಂಬಿಸಲು ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
೩ ಕೆರೆಗಳಿಗೆ ಪೈಪ್‌ಲೈನ್ ಕೂಡ ಆಗಿದೆ. ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಆದರೆ, ಕಬಿನಿ ನೀರು ಮಾತ್ರ ಕೆರೆಗಳ ಒಡಲು ತುಂಬುತ್ತಿಲ್ಲ. ಈ ಬಗ್ಗೆ ನಿಗಮದ ಅಧಿಕಾರಿಗಳನ್ನು ವಿಚಾರಿಸಿದರೆ ಗಾಂಧಿ ಗ್ರಾಮದ ಬಳಿ ನೀರೆತ್ತುವ ಮೋಟಾರ್ ಕೆಟ್ಟಿದೆ. ಬೇಗೂರು ಬಳಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೆಯೂ ೩ ಕೆರೆಗಳಿಗೆ ಕಬಿನಿ ನೀರು ತುಂಬಿಸಿದ್ದೆವು. ಬೇಗೂರು ಬಳಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ಅದನ್ನು ಸರಿಪಡಿಸಿ ಕೆರೆಗಳನ್ನು ಆದಷ್ಟು ಬೇಗ ತುಂಬಿಸಲಾಗುವುದು. ಪೈಪ್‌ಲೈನ್ ಸಮಸ್ಯೆಯಿಲ್ಲ. -ಮಹೇಶ್, ಸಹಾಯಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ. ಕಮರಹಳ್ಳಿ ಕೆರೆ ಮತ್ತು ರಾಘವಾಪುರ ಕೆರೆ ತುಂಬಿ ಕೋಡಿ ಬಿದ್ದು ಗುಂಡ್ಲುಹೊಳೆ ಪಾಲಾಗು ತ್ತಿದೆ. ಆದರೆ, ಗರಗನಹಳ್ಳಿ ಕೆರೆ, ಹಳ್ಳದ ಮಾದಹಳ್ಳಿ ಕೆರೆ, ಮಳವಳ್ಳಿ ಕೆರೆಗಳನ್ನು ತುಂಬಿಸದೆ ಇರುವುದರಿಂದ ದನಕರು, ಹಕ್ಕಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲ. ವಿದ್ಯುತ್ ಹಾಗೂ ಇತರೆ ಸಮಸ್ಯೆಗಳನ್ನು ಸರಿಪಡಿಸಿ ಕೆರೆಗಳನ್ನು ತುಂಬಿಸಬೇಕು. –ಮಾಡ್ರಹಳ್ಳಿ ಮಹದೇವಪ್ಪ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರು
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…