Andolana originals

ಸಿಎಂ ತವರು ಜಿಲ್ಲೆಯಲ್ಲಿ 275 ಶಿಶುಗಳ ಸಾವು

  • ಕೆ. ಬಿ. ರಮೇಶನಾಯಕ

ಮೈಸೂರು: ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಕುರಿತು ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿರುವ ಕಳವಳಕಾರಿ ಸಂಗತಿ ಬಹಿರಂಗವಾಗಿದೆ.

ಭಾರತದ ಎಂಎಂಆರ್ ಹಾಗೂ ಐಎಂಆರ್ ಸರಾಸರಿಗೆ ಹೋಲಿಕೆ ಮಾಡಿದರೆ ಮೈಸೂರು ಜಿಲ್ಲೆಯಲ್ಲಿ ಬಾಣಂತಿಯರ ಮರಣ ಪ್ರಮಾಣ ಕಡಿಮೆಯಾಗಿದ್ದರೂ ಶಿಶುಗಳ ಸಾವು ಹೆಚ್ಚಾಗಿದೆ. ಅದರಲ್ಲೂ ಮೈಸೂರು ನಗರದಲ್ಲಿ ಹೆಚ್ಚಿನ ಶಿಶು ಮರಣ ದಾಖಲಾಗಿರುವುದನ್ನು ಅಂಕಿ-ಅಂಶಗಳಲ್ಲಿ ಕಾಣಬಹುದಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಬಹಿರಂಗವಾದ ಬಳಿಕ ಪ್ರತಿಯೊಂದು ಜಿಲ್ಲೆಯಲ್ಲೂ ತಾಯಿ ಮತ್ತು ಶಿಶುವಿನ ಮರಣದ ಪ್ರಮಾಣ ಕುರಿತು ಪೋಷಕರ ವಲಯದಲ್ಲಿ ಆತಂಕ ಮನೆ ಮಾಡಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ತಾಯಿ ಮರಣದ ಪ್ರಮಾಣ ಭಾರತ-೯೭, ಕರ್ನಾಟಕ-೬೯, ಮೈಸೂರು ೪-೨ ಇದ್ದು, ಶಿಶು ಮರಣದ ಪ್ರಮಾಣದಲ್ಲಿ ಭಾರತ -೨೭, ಕರ್ನಾಟಕ-೧೭, ಮೈಸೂರು-೧೨. ೮ ಇದ್ದು, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಮಾಧಾನಕರವಾಗಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾ ರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಗರ್ಭಿಣಿ ಸಂದರ್ಭದಲ್ಲಿ ಮತ್ತು ಮಗುವಿಗೆ ಜನನ ನೀಡಿದ ನಂತರ ಬಾಣಂತಿಯರು ಪೌಷ್ಠಿಕಾಂಶದ ಕೊರತೆ, ರಕ್ತಹೀನತೆ ಮೊದಲಾದ ಸಮಸ್ಯೆಗಳಿಗೆ ಸಿಲುಕಿ ಮರಣವನ್ನಪ್ಪುತ್ತಿದ್ದನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಮನೆಗಳಲ್ಲಿ ಹೆರಿಗೆ ಮಾಡಿಸುವ ಪ್ರಕರಣಗಳು ಕಡಿಮೆಯಾಗಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಶೇ.೯೯ರಷ್ಟು ಆಗಿರುವುದರಿಂದ ಬಾಣಂತಿಯರ ಸಾವಿನ ಪ್ರಮಾಣ ಕಡಿಮೆಯಾಗಿದ್ದರೂ ಶಿಶು ಮರಣ ಮಾತ್ರ ಇನ್ನೂ ಶೇ. ೫ರೊಳಗೆ ಇಳಿದಿಲ್ಲ. ಮೈಸೂರು ಜಿಲ್ಲೆಯಲ್ಲಿ ಒಂದು ಸಾವಿರ ಶಿಶು ಜನನಕ್ಕೆ ೧೨. ೪ರಷ್ಟು ಮರಣ ಪ್ರಮಾಣವಾಗಿದೆ ಎಂದು ಹೇಳಲಾಗಿದೆ.

೫ ವರ್ಷದೊಳಗಿನ ಶಿಶುಗಳ ಮರಣ: ಐದು ವರ್ಷದೊಳಗಿನ ಮರಣ ಪ್ರಮಾಣವು ನವಜಾತ ಶಿಶುವು ನಿಖರವಾಗಿ ೫ ವರ್ಷ ವಯಸ್ಸನ್ನು ತಲುಪುವ ಮೊದಲು ಸಾಯುವ ಸಂಭವನೀಯತೆಯನ್ನು ಸೂಚಿಸುತ್ತದೆ. ಪ್ರತಿ ೧,೦೦೦ ಜೀವಂತ ಜನನಗಳಿಗೆ ವ್ಯಕ್ತಪಡಿಸಲಾಗುತ್ತದೆ. ೨೦೨೨ರಲ್ಲಿ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ೪. ೯ ಮಿಲಿಯನ್ ಮಕ್ಕಳು ಸಾವನ್ನಪ್ಪಿದ್ದಾರೆ. ೨೦೨೨ರಲ್ಲಿ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ೧೩,೪೦೦ ಮಕ್ಕಳು ಪ್ರತಿದಿನ ಸಾಯುತ್ತಿದ್ದಾರೆ ಎಂದು ಇದು ಅನುವಾದಿಸುತ್ತದೆ. ಜಾಗತಿಕವಾಗಿ ನ್ಯುಮೋನಿಯಾ, ಅತಿಸಾರ ಮತ್ತು ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು, ಅವಧಿಪೂರ್ವ ಜನನ ಮತ್ತು ಇಂಟ್ರಾಪಾರ್ಟಮ್ -ಸಂಬಂಧಿತ ತೊಡಕುಗಳ ಜೊತೆಗೆ ಐದು ವರ್ಷದೊಳಗಿನ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಶೇ. ೬೦ರಷ್ಟು ಕಡಿಮೆಯಾಗಿದೆ, ೧೯೯೦ ರಲ್ಲಿ ೧,೦೦೦ ಜೀವಂತ ಜನನಗಳಿಗೆ ೯೩ ಸಾವುಗಳು ಇತ್ತು ೨೦೨೨ರಲ್ಲಿ ೩೭ಕ್ಕೆ ಇಳಿದಿದೆ. ಈ ಗಣನೀಯ ಪ್ರಗತಿಯ ಹೊರತಾಗಿಯೂ, ಮಕ್ಕಳ ಬದುಕುಳಿಯುವಿಕೆಯನ್ನು ಸುಧಾರಿಸುವುದು ತುರ್ತು ಕಾಳಜಿಯ ವಿಷಯವಾಗಿದೆ. ೨೦೨೨ರಲ್ಲಿ ಮಾತ್ರ, ಸರಿಸುಮಾರು ೧೩,೪೦೦ ಐದು ವರ್ಷದೊಳಗಿನ ಸಾವುಗಳು ಪ್ರತಿದಿನ ಸಂಭವಿಸಿವೆ, ಸಹಿಸಲಾಗದಷ್ಟು ಹೆಚ್ಚಿನ ಸಂಖ್ಯೆಯ ಮಕ್ಕಳ ಸಾವುಗಳು ಹೆಚ್ಚಾಗಿ ತಡೆಗಟ್ಟಬಹುದು ಎಂದು ಯೂನಿಸೆಫ್ ಹೇಳಿದೆ.

ರಾಜ್ಯದ ಸರಾಸರಿ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ಕಡಿಮೆಯಾಗಿದೆ. ಏಪ್ರಿಲ್ ನಿಂದ ಅಕ್ಟೋಬರ್‌ವರೆಗೆ ೨೭೫ ಮಕ್ಕಳ ಮರಣವಾಗಿದೆ. ೧ರಿಂದ ೫ ವರ್ಷದೊಳಗಿನ ಮಕ್ಕಳ ಪ್ರಮಾಣ ಗಮನಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿ ಈಗಲೇ ಹೇಳಲಾಗದು. ಮುಂದಿನ ಏಪ್ರಿಲ್‌ವರೆಗೆ ಎಷ್ಟು ಮರಣವಾಗಲಿದೆ ಎಂಬುದನ್ನು ನೋಡಬೇಕಾಗುತ್ತದೆ. -ಡಾ. ಸಿರಾಜಿನ್ ಬಾಷ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಓದುಗರ ಪತ್ರ: ಜನಪ್ರತಿನಿಧಿಗಳಿಂದಲೇ ಕಾನೂನು ಉಲ್ಲಂಘನೆ

ರಾಜಕಾರಣಿಗಳು ಪ್ರತಿನಿತ್ಯ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ವೈಯಕ್ತಿಕ ಪ್ರಚಾರ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಿ…

2 hours ago

ಓದುಗರ ಪತ್ರ: ಗಗನಕ್ಕೇರುತ್ತಿರುವ ಚಿನ್ನ, ಬೆಳ್ಳಿ ಬೆಲೆ

ಕಳೆದ ೨೫ ವರ್ಷಗಳಲ್ಲಿ ಷೇರುಪೇಟೆ ಸೇರಿದಂತೆ ಉಳಿದೆಲ್ಲ ಸ್ಥಿರಾಸ್ತಿಗಳ ಮೇಲಿನ ಹೂಡಿಕೆಗಿಂತ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಅತಿ…

2 hours ago

ಓದುಗರ ಪತ್ರ: ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಕೋತಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಬಿಲ್ಡಿಂಗ್ ಬಳಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ರೋಗಿಗಳ ಸಂಬಂಧಿಕರು ತರುವ ಊಟ, ತಿಂಡಿ…

2 hours ago

ಓದುಗರ ಪತ್ರ: ಶ್ರೀಕಂಠೇಶ್ವರ ದೇಗುಲದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಇರಲಿ

ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಸರ್ಕಾರಿ ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ…

2 hours ago

ರಾಜಾಸೀಟ್‌ನಲ್ಲಿ ಸ್ಥಾಪನೆಯಾಗಲಿದೆ ಫುಡ್‌ ಕೋರ್ಟ್‌

ನವೀನ್ ಡಿಸೋಜ ಖಾಸಗಿ ಸಹಭಾಗಿತ್ವದಲ್ಲಿ ಆರಂಭಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ; ಟ್ರಾಫಿಕ್ ಕಿರಿಕಿರಿಗೂ ಕಡಿವಾಣ ಮಡಿಕೇರಿ: ನಗರದ ರಾಜಾಸೀಟ್ ಆವರಣದಲ್ಲಿ…

3 hours ago

ಜಲಾಶಯಗಳ ಹಿನ್ನೀರಿನಲ್ಲಿ ರಿವರ್ ಟರ್ನ್ ಪಕ್ಷಿಗಳ ಕಲರವ

ಮಂಜು ಕೋಟೆ ಕೋಟೆ: ಹಿಮಾಲಯ, ಇನ್ನಿತರ ಪ್ರದೇಶಗಳಿಂದ ವಲಸೆ ಬಂದಿರುವ ಹಕ್ಕಿಗಳು; ಪರಿಸರ ಪ್ರಿಯರಲ್ಲಿ ಸಂತ ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿರುವ ಜಲಾಶಯಗಳ…

3 hours ago