Andolana originals

ಅಯ್ಯಾಜಯ್ಯನ ಹುಂಡಿ, ಕೇರ್ಗಳ್ಳಿ ಕೆರೆ ಕಲುಷಿತ ತಡೆಗೆ 24.80 ಕೋಟಿ ರೂ.ಪ್ಲಾನ್

ಮೈಸೂರು: ಲಕ್ಷ ಲಕ್ಷ ಹಣ ಕೊಟ್ಟು ನಿವೇಶನ ಖರೀದಿಸಿ, ಸುಂದರವಾದ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರೂ ಒಳಚರಂಡಿ (ಯುಜಿಡಿ) ಸಮಸ್ಯೆ ಎದುರಿ ಸುತ್ತಿರುವ ನಿವಾಸಿಗಳ ಬವಣೆ ಕೊನೆಗೂ ದೂರವಾಗುವ ಕಾಲ ಸನ್ನಿಹಿತವಾಗಿದೆ. ಯುಜಿಡಿ ಸಮಸ್ಯೆಯಿಂದ ಪುರಾತನ ಕಾಲದ ಅಯ್ಯಾಜಯ್ಯನ ಹುಂಡಿ,ಕೇರ್ಗಳ್ಳಿ ಕೆರೆಗಳು ಕಲುಷಿತಗೊಳ್ಳುವ ಜತೆಗೆ ನಿವಾಸಿಗಳ ನಿದ್ರಾಭಂಗಕ್ಕೆ ಕಾರಣವಾಗಿದ್ದ ಯುಜಿಡಿ ಸಮಸ್ಯೆ ನೀಗಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 24.80 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸಲು ಒಳಚರಂಡಿ ಕೊಳವೆ ಅಳವಡಿಸಲು ಕರ್ನಾಟಕ

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ತಕ್ಷಣವೇ ತಾಂತ್ರಿಕ ಟೆಂಡರ್ ಕರೆಯಲು ಅಽಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ದಿನದಿಂದ ದಿನಕ್ಕೆ ಖಾಸಗಿ ಬಡಾವಣೆಗಳು ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗುತ್ತಿವೆ. ಮುಡಾ ಬಡಾವಣೆಗಳಿಗಿಂತ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳು ಬಡಾವಣೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿವೆ. ಯಾವುದೇ ಮೂಲ ಸೌಕರ್ಯಗಳು ಇಲ್ಲದೇ ಇದ್ದರೂ ಹೊರವಲಯದಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿರುವ ನಿವಾಸಿಗಳ ಗೋಳು ಹೇಳತೀರದಾಗಿದೆ.

ನ್ಯಾಯಾಂಗ ಬಡಾವಣೆ, ಬಡಗನಹುಂಡಿ, ರೂಪಾನಗರ, ರೈಲ್ವೆ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ಯುಜಿಡಿ ಸಂಪರ್ಕ ಇಲ್ಲದ ಕಾರಣ ನೇರವಾಗಿ ಅಯ್ಯಾಜಯ್ಯನ ಹುಂಡಿ ಕೆರೆ ಮತ್ತು ಕೇರ್ಗಳ್ಳಿಗೆ ಸೇರುತ್ತಿದೆ. ಇದರಿಂದಾಗಿ ಕೆರೆಗಳು ಕಲುಷಿತಗೊಳ್ಳುವ ಜತೆಗೆ ಕುಡಿಯುವ ನೀರಿನ ಸಂಪರ್ಕವಿರುವ ಕೊಳವೆ ಮಾರ್ಗಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ, ಒಳಚರಂಡಿ ನಿರ್ಮಾಣ ಮಾಡುವಂತೆ ಸ್ಥಳೀಯ ನಿವಾಸಿಗಳು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಅವರ ಮೇಲೆ ನಿರಂತರವಾಗಿ ಒತ್ತಡ ಹೇರುವ ಜತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷರು, ಆಯುಕ್ತರಿಗೂ ಮನವಿ ಸಲ್ಲಿಸುತ್ತಲೇ ಬಂದಿದ್ದರು.

ಆದರೆ, ಇದೀಗ ಜಿ. ಟಿ. ದೇವೇಗೌಡರ ಅವಿರತ ಪ್ರಯತ್ನದ -ಲವಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ೨೪. ೮೦ ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯ ಡಿಪಿಆರ್ ತಯಾರಿಸಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ. ಸಚಿವರ ಅನುಮೋದನೆ, ಮುಖ್ಯಮಂತ್ರಿಗಳ ಒಪ್ಪಿಗೆ ಪಡೆಯುತ್ತಿದ್ದಂತೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ತಯಾರಿ ಮಾಡಲಾಗಿದೆ.

ಯೋಜನೆಯಲ್ಲಿ ಏನೇನು ಕಾಮಗಾರಿಗಳು:
ಕೆ. ಸಾಲುಂಡಿ ಮತ್ತು ನಂಜರಾಜನಹುಂಡಿಯಲ್ಲಿ ಆಂತರಿಕ ಕೊಳವೆ ಮಾರ್ಗ ಹಾಗೂ ೬೦೦ ಮಿ. ಮೀ, ೭೦೦ ಮಿ. ಮೀ ಮತ್ತು ೮೦೦ ಮಿ. ಮೀ ವ್ಯಾಸದ ಆರ್‌ಸಿಸಿ, ಎಸ್‌ಪಿ-೩ ಔಟ್-ಲ್ ಕೊಳವೆಗಳನ್ನು ಒದಗಿಸಿ ಅಳವಡಿಸುವುದು. ಕೇರ್ಗಳ್ಳಿಯಿಂದ ಅಯ್ಯಾಜಯ್ಯನ ಹುಂಡಿಯ ಬಳಿಯಲ್ಲಿ ನಿರ್ಮಾಣಗೊಳ್ಳುವ ಪ್ರಸ್ತಾಪಿತ ತೇವ ಬಾವಿವರೆಗೆ ಆಳುಗುಂಡಿಗಳ ನಿರ್ಮಾಣ, ಅಯ್ಯಾಜಯ್ಯನ ಹುಂಡಿ ಬಳಿಯಲ್ಲಿ ೯ ಮೀಟರ್ ವ್ಯಾಸದ ತೇವ ಬಾವಿಯೊಂದಿಗೆ ಪ್ರಾಥಮಿಕ ಶುದ್ಧೀಕರಣ ಘಟಕಗಳ ನಿರ್ಮಾಣ ಮತ್ತು ವಿದ್ಯುದ್ದೀಕರಣ ಕಾಮಗಾರಿ ಮಾಡಲಾಗುತ್ತದೆ. ದಟ್ಟಗಳ್ಳಿ ಎಂಯುಎಸ್‌ಎಸ್‌ನಿಂದ ಅಯ್ಯಾಜಯ್ಯನ ಹುಂಡಿಯಲ್ಲಿನ ತೇವ ಬಾವಿಯವರೆಗೆ ೧೧ ಕೆವಿ ಎಕ್ಸ್‌ಪ್ರೆಸ್‌ಫೀಡರ್ ಸಂಪರ್ಕ ಮತ್ತು ೨೫೦ ಕೆವಿಎ ಡಿಜೆ ಸೆಟ್ ಅಳವಡಿಸುವುದು. ಅಯ್ಯಾಜಯ್ಯನ ಹುಂಡಿ ಬಳಿಯ ತೇವ ಬಾವಿಯಲ್ಲಿ ೧೫೦ ಎಚ್‌ಪಿ ಮತ್ತು

೬೦ ಎಚ್‌ಪಿ ಸಾಮರ್ಥ್ಯದ ನನ್ ಕ್ಲಾಗ್ ಸಬ್ ಮರ್ಸಿಬಲ್ ಸೀವೆಜ್ ಪಂಪಿಂಗ್ ಮೆಷಿನರಿಗಳನ್ನು ಒದಗಿಸಿ ಅಳವಡಿಸಲಾಗುತ್ತದೆ. ವಿಶೇಷವಾಗಿ ಅಯ್ಯಾಜಯ್ಯನ ಹುಂಡಿ ತೇವ ಬಾಯಿಯಿಂದ ರಾಯನಕೆರೆ ಘನತ್ಯಾಜ್ಯ ಶುದ್ಧೀಕರಣ ಘಟಕದವರೆಗೆ ೬. ೭೦ ಕಿ. ಮೀ. ಉದ್ದಕ್ಕೆ ೬೦೦ ಮಿ. ಮೀ. ವ್ಯಾಸದ ಏರು ಕೊಳವೆಗಳನ್ನು ಅಳವಡಿಸಲಾಗುತ್ತದೆ.

ಕೇರ್ಗಳ್ಳಿ, ಅಯ್ಯಾಜಯ್ಯನ ಹುಂಡಿ ಕೆರೆಗೆ ಕಲುಷಿತ ನೀರು ಸೇರದಂತೆ ತಡೆಯಲು ಒಳಚರಂಡಿ ಮಾರ್ಗಗಳನ್ನು ನಿರ್ಮಿಸಿ ರಾಯನಕೆರೆಗೆ ಸೇರುವಂತೆ ಮಾಡಲು ರೂಪಿಸಿರುವ ಕ್ರಿಯಾ ಯೋಜನೆಗೆ ಶೀಘ್ರ ಅನುಮೋದನೆ ಪಡೆಯ ಲಾಗುವುದು. ಸರ್ಕಾರದ ನಗರಾಭಿವೃದ್ಧಿ ಇಲಾಖೆ ಯಲ್ಲಿ ಕಡತ ಇರುವ ಕಾರಣ ಸಿಎಂ, ಸಚಿವರ ಗಮನಕ್ಕೆ ತಂದು ಶೀಘ್ರ ಅನುಮತಿ ಪಡೆಯುತ್ತೇವೆ. -ಜಿ. ಟಿ. ದೇವೇಗೌಡ, ಶಾಸಕರು

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago