ಎಚ್.ಎಸ್.ದಿನೇಶ್‌ಕುಮಾರ್
ಪೊಲೀಸರಿಗೆ ತಲೆನೋವಾದ ಬೈಕ್, ಸ್ಕೂಟರ್ ಕಳ್ಳತನ ಪ್ರಕರಣಗಳು
ವಾಹನ ಸವಾರರಿಗೆ ಮುನ್ನೆಚ್ಚರಿಕೆ:
* ನಿಮ್ಮ ವಾಹನಗಳನ್ನು ನಿಲ್ಲಿಸಬೇಕಾದಲ್ಲಿ ಆದಷ್ಟು ಪೇ-ಅಂಡ್ ಪಾರ್ಕ್ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ
* ವಾಹನ ನಿಲುಗಡೆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಇರುವ ಬಗ್ಗೆ ಖಚಿತಪಡಿಸಿಕೊಂಡು ಅಂತಹ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ
* ದ್ವಿಚಕ್ರ ವಾಹನಕ್ಕೆ ಹ್ಯಾಂಡಲ್ ಲಾಕ್ ಜೊತೆಗೆ ಚಕ್ರಕ್ಕೆ ಹೊಂದಿಕೊಂಡು ಅಳವಡಿಸುವ ಮತ್ತೊಂದು ಲಾಕ್ ಹಾಕುವುದು ಉತ್ತಮ
* ಪೊಲೀಸ್ ಇಲಾಖೆ ನಿಗದಿಪಡಿಸಿರುವ ಸ್ಥಳದ ಬಳಿ ನಿಮಗೆ ಪರಿಚಿತರಿರುವ ಮಳಿಗೆ ಬಳಿ ವಾಹನವನ್ನು ನಿಲ್ಲಿಸಿ
* ದೂರ ಪ್ರಯಾಣದ ಸಂದರ್ಭದಲ್ಲಿ ಬಸ್ ನಿಲ್ದಾಣಕ್ಕೆ ಬರಲು ದ್ವಿಚಕ್ರ ವಾಹನದ ಬದಲು ನಗರ ಸಾರಿಗೆ ಬಸ್‌ನ್ನು
ಬಳಸುವುದು ಉತ್ತಮ
* ಅನಧಿಕೃತ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಡಿ. ಅಸುರಕ್ಷಿತೆ ಜೊತೆಗೆ ಪೊಲೀಸ್ ಇಲಾಖೆಯು ವಿಧಿಸುವ ದಂಡವನ್ನೂ ಪಾವತಿಸಬೇಕಾಗುತ್ತದೆ
ಮೈಸೂರು: ಮಾರುಕಟ್ಟೆ ಬಳಿ ನನ್ನ ಬೈಕ್ ನಿಲ್ಲಿಸಿದ್ದೆ. ಅದು ಕಳ್ಳತನವಾಗಿದೆ.., ಹೋಟೆಲ್‌ನಲ್ಲಿ ತಿಂಡಿ ತಿಂದು ಬರುವಷ್ಟರಲ್ಲಿ ನನ್ನ ವಾಹನ ಕಳವಾಗಿದೆ.., ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ವಾಹನ ನಾಪತ್ತೆ…, ಇವು ನಗರ ವ್ಯಾಪ್ತಿಯ ಒಂದಲ್ಲಾ ಒಂದು ಪೊಲೀಸ್ ಠಾಣೆಗಳಲ್ಲಿ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳು.
ಒಂದು ವರ್ಷಗಳಿಂದೀಚೆಗೆ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ೨೩೧ ದ್ವಿಚಕ್ರ ವಾಹನಗಳು ಕಳವಾಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಕೆಲ ಜನನಿಬಿಡ ಪ್ರದೇಶಗಳಲ್ಲಿ ಹೊಂಚು ಹಾಕುವ ಕಳ್ಳರು ತಮ್ಮ ಕೈ ಚಳಕ ತೋರಿ ಕ್ಷಣ ಮಾತ್ರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದೊಯ್ಯುತ್ತಿದ್ದಾರೆ. ವಾಹನ ಕಳೆದುಕೊಂಡ ಮಾಲೀಕರು ಪೊಲೀಸ್ ಠಾಣೆಗೆ ಎಡತಾಕುವಂತಾಗಿದೆ.
ಜನನಿಬಿಡ ಪ್ರದೇಶಗಳೇ ಗುರಿ: ವಾಹನ ಕಳ್ಳರು ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳನ್ನೇ ಆಯ್ದುಕೊಳ್ಳುತ್ತಾರೆ. ಜನಸಂದಣಿ ಹೆಚ್ಚಾಗಿದ್ದಲ್ಲಿ ಅಲ್ಲಿನ ಚಲನವಲನಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಕಳ್ಳರ ಆಲೋಚನೆ. ಹೀಗಾಗಿ, ಆಸ್ಪತ್ರೆ, ಹೋಟೆಲ್, ಬಸ್ ನಿಲ್ದಾಣ ಮುಂತಾದ ಪ್ರಮುಖ ಸ್ಥಳಗಳನ್ನು ತಮ್ಮ ಕಾರ್ಯಾಚರಣೆಗೆ ಆರಿಸಿಕೊಳ್ಳುತ್ತಾರೆ.
ಇಬ್ಬರು ಅಥವಾ ಮೂವರಿಂದ ಕಾರ್ಯಾಚರಣೆ: ಕೆಲ ಪ್ರಕರಣಗಳ ವಿಚಾರಣೆ ವೇಳೆ ಖದೀಮರು ಹೇಳುವಂತೆ ಇಬ್ಬರು ಅಥವಾ ಮೂವರು ಸೇರಿ ವಾಹನಗಳ ಕಳ್ಳತನಕ್ಕೆ ಸಜ್ಜಾಗುತ್ತಾರೆ. ತಾವು ನಿಂತ ಸ್ಥಳದಲ್ಲಿ ಬಂದು ನಿಲ್ಲುವ ವಾಹನಗಳನ್ನು ಕಣ್ಣಂಚಿನಲ್ಲಿಯೇ ಪರೀಕ್ಷಿಸುತ್ತಾರೆ. ನಂತರ ಗುಂಪಿನಲ್ಲಿರುವ ಒಬ್ಬ ವಾಹನ ನಿಲ್ಲಿಸಿ ತೆರಳಿದವನನ್ನು ಹಿಂಬಾಲಿಸುತ್ತಾನೆ. ಉಳಿದ ಮತ್ತೊಬ್ಬ ವಾಹನವನ್ನು ಏರಿ ಕುಳಿತುಕೊಳ್ಳುತ್ತಾನೆ. ನಂತರ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಕಲಿ ಕೀ ಮೂಲಕ ವಾಹನವನ್ನು ಸ್ಟಾರ್ಟ್ ಮಾಡಲು ಯತ್ನಿಸುತ್ತಾನೆ. ಹೀಗೆ ಹಲವಾರು ನಕಲಿ ಕೀ ಬಳಸುವ ಆತ ಯಾವುದಾದರೂ ಒಂದು ಕೀ ಮೂಲಕ ವಾಹನವನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಆರಾಮವಾಗಿ ತೆರಳುತ್ತಾನೆ. ಈ ನಡುವೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಸ್ನೇಹಿತನಿಗೆ ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆ ದೂರವಾಣಿ ಮೂಲಕ ತಿಳಿಸಿ ತಾವು ಮೊದಲೇ ನಿಗದಿಪಡಿಸಿದ್ದ ಸ್ಥಳದಲ್ಲಿ ಭೇಟಿಯಾಗುತ್ತಾರೆ. ನಂತರ ವಾಹನವನ್ನು ಬಸ್, ರೈಲ್ವೆ ನಿಲ್ದಾಣ ಅಥವಾ ಇನ್ನಾವುದಾದರು ವಾಹನ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿ ಮನೆಗೆ ತೆರಳುತ್ತಾರೆ. ಮೂರು ದಿನಗಳ ಕಾಲ ಅವರು ವಾಹನದ ಕಡೆ ಸುಳಿಯುವುದಿಲ್ಲ. ಮೂರು ದಿನಗಳ ನಂತರ ವಾಹನವನ್ನು ನಿಲ್ದಾಣದಿಂದ ತೆಗೆಯುವ ಅವರುಗಳು ಕಳವು ಮಾಡಿದ ವಾಹನಗಳನ್ನು ಸಾಧ್ಯವಾದಷ್ಟು ಗ್ರಾಮೀಣ ಪ್ರದೇಶದ ಜನರಿಗೆ ಮಾರಾಟ ಮಾಡಲು ಯತ್ನಿಸುತ್ತಾರೆ. ಅದೂ ಸಾಧ್ಯವಾಗದಿದ್ದಲ್ಲಿ ತಮಗೆ ಪರಿಚಿತರಾಗಿರುವ ವಾಹನಗಳ ಹಳೆಯ ಬಿಡಿ ಭಾಗಗಳನ್ನು ಮಾರಾಟ ಮಾಡುವ ಮಳಿಗೆಗೆ ತೆರಳಿ ವಾಹನವನ್ನು ಮಾರಾಟ ಮಾಡುತ್ತಾರೆ. ನಂತರ ಕೇವಲ ಒಂದು ಗಂಟೆಯ ಅವಧಿಯಲ್ಲಿಯೇ ವಾಹನದ ಬಿಡಿಭಾಗಗಳು ಆತನ ಮಳಿಗೆಯಲ್ಲಿಯೇ ಮಾರಾಟಕ್ಕೆ ಸಿದ್ಧವಾಗುತ್ತವೆ
” ವಾಹನ ಕಳುವಿಗೆ ಸಂಬಂಧಿಸಿದಂತೆ ಪೊಲೀಸರೇನೂ ಸುಮ್ಮನೆ ಕುಳಿತಿಲ್ಲ. ಕಳೆದ ವರ್ಷ ೧೧೬ ವಾಹನಗಳನ್ನು ಪತ್ತೆ ಹಚ್ಚಿರುವ ಅವರು, ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
” ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಬಾರದು. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂಬ ಕಾರಣಕ್ಕಾಗಿ ರಸೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಕಾಂಪೌಂಡ್ ಒಳಗೆ ಸ್ಥಳಾವಕಾಶವಿದ್ದರೂ ಮನೆಯ ಮುಂದೆ ವಾಹನಗಳನ್ನು ನಿಲ್ಲಿಸುತ್ತಾರೆ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ವಾಹನ ಕಳವಿಗೆ ನೀವೇ ದಾರಿ ಮಾಡಿಕೊಟ್ಟಂತಾಗುತ್ತದೆ.”
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು
ಬೆಳಗಾವಿ: ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು.…
ಬೆಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲಾ ಮಾಡಿಸಿದ್ದ ರಿಷಬ್ ಶೆಟ್ಟಿ ತೊಡೆ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.…
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಕಾರ್ಯಾಚರಣೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ…
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಇಂದು 9ಕ್ಕೂ ಹೆಚ್ಚು…
ಕೆ.ಆರ್.ಪೇಟೆ: ಗಾಂಜಾ ಮತ್ತು ಮಧ್ಯ ಸೇವಿಸಿದ ಅಮಲಿನಲ್ಲಿ ಶಾಲಾ ಬಸ್ ತಡೆದು, ಅಪ್ರಾಪ್ತ ಬಾಲಕಿಯನ್ನು ತಮ್ಮ ವಶಕ್ಕೆ ನೀಡುವಂತೆ ಕಿರಿಕ್…
ಇತ್ತೀಚೆಗೆ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡು…