Andolana originals

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು 

೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮ ದಿನಗಳ ವಾಸ್ತವ್ಯ ಮುಗಿಸಿ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ರಾಜ್ಯದ ಲೇಖಕರಾದ ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭ್ಯವಾಗಿದ್ದು… ಹೀಗೆ ಹತ್ತಾರು ದಾಖಲೆಗಳು ನಿರ್ಮಾಣವಾಗಿವೆ. ಇಲ್ಲಿ ಕ್ರೀಡಾ ಕ್ಷೇತ್ರ ಹೊರತಾದ ಸಾಧನೆ ಅಥವಾ ದಾಖಲೆಗಳ ವಿವರಗಳನ್ನು ನೀಡಲಾಗಿದೆ.

ಭುವಿಗೆ ಮರಳಿದ ಶುಭಾಂಶು ಶುಕ್ಲಾ:  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ೧೮ ದಿನಗಳ ಐತಿಹಾಸಿಕ ವಾಸ್ತವ್ಯವನ್ನು ಪೂರ್ಣಗೊಳಿಸಿ, ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಸಹ ಗಗನಯಾತ್ರಿ ಗಳೊಂದಿಗೆ ಜುಲೈ ೧೫ರಂದು ಭೂಮಿಗೆ ಮರಳಿದರು. ಇದು ಭಾರತದ ಮುಂಬರುವ ಗಗನಯಾನ ಯೋಜನೆಗೆ ಅತ್ಯಂತ ಮಹತ್ವದ್ದಾಗಿದೆ. ಅವರ ಈ ಯಶಸ್ವಿ ಯಾತ್ರೆಯು ರಾಕೇಶ್ ಶರ್ಮಾ ಅವರ ನಂತರ ಬಾಹ್ಯಾ ಕಾಶಕ್ಕೆ ಕಾಲಿಟ್ಟ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವಂತೆ ಮಾಡಿದೆ.

ಚಂದ್ರನ ಮೇಲ್ಮೈ ದಕ್ಷಿಣ ಭಾಗದಲ್ಲಿ ಇಳಿದ ‘ಅಥೇನಾ’:   ನಾಸಾದ ಚಂದ್ರಯಾನ ಕಾರ್ಯ ಕ್ರಮವಾದ ಇಂಟ್ಯೂಟಿವ್ ಮೆಷಿನ್ಸ್‌ನ ಬ್ಲೂ ಘೋಷ್ಟ್ ಮಿಷನ್ ೧ ಲ್ಯಾಂಡರ್ ‘ಅಥೇನಾ’ ಚಂದ್ರನ ಮೇಲ್ಮೈಯಲ್ಲಿ ದಕ್ಷಿಣ ಧ್ರುವದಲ್ಲಿ ಮಾರ್ಚ್ ೬ರಂದು ಯಶಸ್ವಿಯಾಗಿ ಇಳಿಯಿತು. ಆದರೆ ಚಂದ್ರನ ಮೇಲೆ ಬಿದ್ದು, ಬದಿಗೆ ತಿರುಗಿ, ಶಕ್ತಿ ಕಳೆದು ಕೊಂಡಿತು. ಅದರ ಸೋಲಾರ್ ಪ್ಯಾನೆಲ್ ಸೂರ್ಯನಿಂದ ದೂರವಿದ್ದುದ ರಿಂದ ಮತ್ತು ತೀವ್ರ ಚಳಿಯಿಂದಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು.

ಡಿಜಿಟಲ್ ಸಂಪರ್ಕದಲ್ಲಿ ಭಾರತ ಮೈಲುಗಲ್ಲು:  ೨೦೨೫ ರಲ್ಲಿ ಭಾರತವು ಡಿಜಿಟಲ್ ಸಂಪರ್ಕದಲ್ಲಿ ೫ಜಿ/ಬ್ರಾಡ್ ಬ್ಯಾಂಡ್ ಬೆಳವಣಿಗೆಯೊಂದಿಗೆ ೧ಬಿಲಿಯನ್ ಇಂಟರ್‌ನೆಟ್ ಬಳಕೆ ದಾರರನ್ನು ದಾಟುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ. ಬಾಹ್ಯಾಕಾಶ ಪರಿಶೋಧನೆ (ಇನ್-ಸ್ಪೇಸ್ ಡಾಕಿಂಗ್ ಯಶಸ್ಸು), ಮೂಲಸೌಕರ್ಯ (ನವಿ ಮುಂಬೈನಂತಹ ಹೊಸ ವಿಮಾನ ನಿಲ್ದಾಣಗಳ ಕಾರ್ಯಾಚರಣೆ), ಬಯೋಟೆಕ್ (ರಾಷ್ಟ್ರೀಯ ಬಯೋ ಫೌಂಡ್ರಿ ನೆಟ್‌ವರ್ಕ್)ಗಳಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ೧ ಬಿಲಿಯನ್ ಇಂಟರ್‌ನೆಟ್ ಸಂಪರ್ಕಗಳನ್ನು ದಾಟಿದ ಪರಿಣಾಮ ಬ್ರಾಡ್ ಬ್ಯಾಂಡ್ ಸಂಪರ್ಕಗಳು ಹೆಚ್ಚಾದವು ಮತ್ತು ಡೇಟಾ ಬಳಕೆ ಹೆಚ್ಚಿತು.

ಶಕ್ತಿ ಯೋಜನೆಯಲ್ಲಿ ದಾಖಲೆ:  ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದಿದೆ. ೨೦೨೩ರ ಜೂನ್ ೧೧ರಂದು ಚಾಲನೆ ಗೊಂಡ ಈ ಯೋಜನೆಯಡಿ ೨೦೨೫ರ ಜುಲೈ ೨೫ರವರೆಗೆ ೫೦೦ ಕೋಟಿಗಿಂತ ಹೆಚ್ಚಿನ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿರುವುದನ್ನು ಪರಿಗಣಿಸಿ ವಿಶ್ವ ದಾಖಲೆಯ ಸ್ಥಾನ ನೀಡಲಾಗಿದೆ.

ಐಟಿ ವಲಯಕ್ಕೆ ೯೬೭ ಕೋಟಿ ರೂ. ಮೀಸಲಿಟ್ಟ ರಾಜ್ಯ ಸರ್ಕಾರ:  ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ ೨೦೨೫-೩೦ರ ಅಡಿಯಲ್ಲಿ ವಿವಿಧ ಪ್ರೋತ್ಸಾಹ ಧನಗಳಿಗಾಗಿ ಕರ್ನಾಟಕ ಸರ್ಕಾರ ೯೬೭ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದೆ. ಈ ನೀತಿಯು ಬೆಂಗಳೂರಿನ ಹೊರಗಿನ ನಗರಗಳಲ್ಲಿ ಇತರೆ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ವಿಶೇಷ ಗಮನಹರಿಸಿ ಗಮನಾರ್ಹ ಹೂಡಿಕೆಗಳನ್ನು ತರಲು ಮತ್ತು ಕರ್ನಾಟಕದ ಬ್ರ್ಯಾಂಡ್ ಅನ್ನು ಜಾಗತಿಕವಾಗಿ ‘ಎಐ’ ಸ್ಥಳೀಯ ತಾಣವಾಗಿ ಉನ್ನತೀಕರಿಸಲು ಪ್ರಯತ್ನಿಸುತ್ತದೆ. ಬೆಂಗಳೂರಿನ ಹೊರಗಿನ ನಗರಗಳಲ್ಲಿ ಸ್ಥಾಪಿಸಲಾಗುವ ಕಂಪೆನಿಗಳಿಗೆ ಹೊಸದಾಗಿ ಸೇರಿಸಲಾದ ೯ ಪ್ರೋತ್ಸಾಹ ಧನಗಳು ಸೇರಿದಂತೆ ೧೬ ಪ್ರೋತ್ಸಾಹ ಧನಗಳನ್ನು ಪ್ರಸ್ತಾಪಿಸಲಾಗಿದೆ. ಬೆಂಗಳೂರಿನಲ್ಲಿ ಸ್ಥಾಪಿಸಲಾಗುವ ಘಟಕಗಳಿಗೆ ಆರು ಪ್ರಮುಖ ಪ್ರೋತ್ಸಾಹಧನಗಳನ್ನು ಪ್ರಸ್ತಾಪಿಸಲಾಗಿದೆ.

ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ ಕಂಡ ಬಂಗಾರ:  ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಉದ್ವಿಗ್ನತೆ ಮತ್ತು ಡಾಲರ್ ಸೂಚ್ಯಂಕದ ಕುಸಿತವು ಚಿನ್ನ-ಬೆಳ್ಳಿಯ ದರದಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಈವರೆಗೆ ಶೇ.೭೦ರಷ್ಟು ಏರಿಕೆಯಾಗಿದ್ದು, ಬೆಳ್ಳಿ ದರವು ಶೇ.೧೪೦ಕ್ಕಿಂತ ಹೆಚ್ಚು ಏರಿಕೆಯಾ ಗಿದೆ. ಕೇಂದ್ರ ಬ್ಯಾಂಕು ಗಳ ಖರೀದಿ, ಅಮೆ ರಿಕ ಫಂಡ್ ಬಡ್ಡಿದರ ಕಡಿತದ ನಿರೀಕ್ಷೆ, ಅಮೆರಿಕದ ಸುಂಕಗಳ ಆರ್ಥಿಕ ಪರಿಣಾಮದ ಬಗ್ಗೆ ಕಳವಳ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಚಿನ್ನ ಹಾಗೂ ಬೆಳ್ಳಿ ಇಟಿಎ-ಗಳಲ್ಲಿನ ಬಲವಾದ ಹೂಡಿಕೆಗಳು ಈ ಏರಿಕೆಗೆ ಪ್ರಮುಖ ಏರಿಕೆಗೆ ಕಾರಣ ಎನ್ನಲಾಗಿದೆ.

ಇನ್ವೆಸ್ ಕರ್ನಾಟಕ ಐತಿಹಾಸಿಕ ದಾಖಲೆ:  ಫೆಬ್ರವರಿ ೧೫ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ-೨೦೨೫ ಭರ್ಜರಿ ಯಶಸ್ವಿಯಾಗಿದೆ. ಇನ್ವೆಸ್ಟ್ ಕರ್ನಾಟಕ ನಡೆದ ಮೂರು ದಿನಗಳಲ್ಲಿ ೧೦,೨೭,೩೭೮ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಮೂಲಕ ೬ ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಈ ಒಪ್ಪಂದದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಶೇ.೪೫ರಷ್ಟು ಹೂಡಿಕೆಗೆ ಒಪ್ಪಂದ ಆಗಿದೆ. ಇದರೊಂದಿಗೆ ಇನ್ವೆಸ್ಟ್ ಕರ್ನಾಟಕ- ೨೦೨೫ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಅಂಚೆ ಕಚೇರಿಯಲ್ಲಿ ಹೆಚ್ಚಿನ ಬಡ್ಡಿ ದರ:  ಹಣಕಾಸು ಸಚಿವಾಲಯವು ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳಿಗೆ ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕ ಬಡ್ಡಿದರಗಳನ್ನು ಪರಿಷ್ಕರಿ ಸಿದೆ. ಅಂಚೆ ಕಚೇರಿಗಳಲ್ಲಿ ದೊರೆಯುವ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳಿಗೆ ಶೇ.೮.೨೦ ಗರಿಷ್ಟ ಬಡ್ಡಿದರ ಸಿಗಲಿದೆ. ಐದು ವರ್ಷಗಳ ಠೇವಣಿ ವಿಚಾರದಲ್ಲಿ ಪ್ರಮುಖ ಬ್ಯಾಂಕುಗಳಿಗಿಂತ ಅಂಚೆ ಇಲಾಖೆ ಹೆಚ್ಚಿನ ಬಡ್ಡಿ ದರ ನೀಡಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಗೌರವ:  ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ. ವಿಮಾನ ನಿಲ್ದಾಣ ಗಳಲ್ಲಿ ಇರು  ಸೌಲಭ್ಯಗಳನ್ನು ಆಧರಿಸಿ ವಿಮಾನ ನಿಲ್ದಾಣಗಳಿಗೆ ಗ್ಲೋಬಲ್ ಸ್ಕ್ರೈ ಟ್ರ್ಯಾಕ್ ಸಂಸ್ಥೆಯು ರೇಟಿಂಗ್ಸ್ ನೀಡುತ್ತದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಫೈವ್ ಸ್ಟಾರ್ ರೇಟಿಂಗ್ ಸಿಕ್ಕಿದ್ದು ಇದು ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ದಸರಾ ಡ್ರೋನ್ ಶೋ ಗಿನ್ನಿಸ್ ದಾಖಲೆ:  ಮೈಸೂರು ದಸರಾ ವೇಳೆ ನಡೆದ ಡ್ರೋನ್ ಶೋ ಗಿನ್ನಿಸ್ ದಾಖಲೆ ಬರೆದಿದೆ. ಸೆ.೨೮ರಂದು ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮವು ಹೊಸದಿಲ್ಲಿಯ ಸ್ಟಾರ್ಟ್ ಅಪ್ ಸಹಭಾಗಿತ್ವದಲ್ಲಿ ೨,೯೮೩ ಡ್ರೋನ್ಗಳನ್ನು ಬಳಸಿ ರಾತ್ರಿ ಆಕಾಶದಲ್ಲಿ ಬೃಹತ್ ಹುಲಿಯ ಚಿತ್ರ ರಚಿಸಲಾಯಿತು. ಇದು ಅತಿ ದೊಡ್ಡ ವಾಯುರೂಪದ ಕ್ಷೀರ ಪದಾರ್ಥದ ಚಿತ್ರದ ದಾಖಲೆಯಾಗಿದೆ. ಈ ಪ್ರದರ್ಶನವು ಹಿಂದಿನ ದಾಖಲೆಯನ್ನು ಮುರಿದು ದೇಶದ ಶಕ್ತಿಯನ್ನು ಪ್ರದರ್ಶಿಸಿ ಹೊಸ ದಾಖಲೆ ಬರೆದಿದೆ.

ಬಾನು ಮುಷ್ತಾಕ್ ಕೃತಿಗೆ ಬುಕರ್:  ಹಾಸನದ ಸಾಹಿತಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ಕೃತಿಗೆ ೨೦೨೫ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಸಂದಿದೆ. ಕೊಡಗಿನ ದೀಪಾ ಬಸ್ತಿ ಅವರು ಇದನ್ನು ಆಂಗ್ಲಭಾಷೆಗೆ ಅನುವಾದಿಸಿದ್ದರು. ಈ ವರ್ಷದ ದಸರಾ ಉದ್ಘಾಟನೆಗೆ ಸಿದ್ಧರಾಮಯ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿತ್ತು. ಸೆ.೨೨ರಂದು ಚಾಮುಂಡಿಬೆಟ್ಟದಲ್ಲಿ ಬಾನು ಮುಷ್ತಾಕ್ ಅವರು ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ಆಂದೋಲನ ಡೆಸ್ಕ್

Recent Posts

ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಸೆರೆ

ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…

26 mins ago

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ದಾಳಿ ಪ್ರಕರಣಗಳು: ಕಂಗಾಲಾದ ರೈತರು

ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…

31 mins ago

ಓದುಗರ ಪತ್ರ:   ಜನೌಷಧ ಕೇಂದ್ರ: ಸುಪ್ರೀಂ ತೀರ್ಮಾನ ಸ್ವಾಗತಾರ್ಹ

ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…

37 mins ago

ಓದುಗರ ಪತ್ರ:  ಹೀಲಿಯಂ ಗ್ಯಾಸ್ ಬಲೂನ್ ಮಾರಾಟ ನಿಷೇಧಿಸಿ

ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…

60 mins ago

ಓದುಗರ ಪತ್ರ: ಯಥಾ ರಾಜ.. ತಥಾ ಅಧಿಕಾರಿ

‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…

1 hour ago

ಸೇವಾ ಕೈಂಕರ್ಯದ ಪ್ರತಿರೂಪ ಚೈತನ್ಯ ಚಾರಿಟಬಲ್ ಟ್ರಸ್ಟ್‌

ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…

2 hours ago