ಎಂ.ಯೋಗಾನಂದ
ಹುಣಸೂರು ತಾಲ್ಲೂಕಿನಲ್ಲಿ ೭೪,೯೯೦ -ಲಾನುಭವಿಗಳು; ಶೇ.೯೮.೫ರಷ್ಟು ಸಾಧನೆ
ಹುಣಸೂರು: ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ೭೪,೯೯೦ ಫಲಾನುಭವಿಗಳಿದ್ದು, ಇವರ ಪೈಕಿ ೧೭೦ ಮಂದಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಯಾಗುತ್ತಿಲ್ಲ.
ಸಂಬಂಧಪಟ್ಟ ಸಿಡಿಪಿಒ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯವರು ಇತ್ತ ಗಮನಹರಿಸಿ ನೊಂದ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಸ್ಯೆ ಬಗೆಹರಿಸಿ ಹಣ ತಲುಪಿಸುವ ಕೆಲಸ ಮಾಡಬೇಕಾಗಿದೆ.
ನಾನು ಐಟಿ, ಜಿಎಸ್‌ಟಿ ಕ್ಯಾನ್ಸಲ್ ಮಾಡಿಸಿ ಸಂಬಂಧಪಟ್ಟ ಇಲಾಖೆ, ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರವರಿಗೂ ಈ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದರೂ ಇದುವರೆಗೂ ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಎಲ್ಲ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುವ ಹಾಗೆ ನನ್ನ ಪತ್ನಿಗೂ ಹಣ ಬಂದರೆ ಸಂಸಾರದಲ್ಲಿ ಸಂತೋಷ ಕಾಪಾಡಿಕೊಳ್ಳಬಹುದು. ಇಲ್ಲದಿದ್ದರೆ ಮನೆಯಲ್ಲಿ ಕಿರಿಕಿರಿ ಆಗುತ್ತಿದೆ ಎಂದು ಉಯಿಗೊಂಡನ ಹಳ್ಳಿ ಗ್ರಾಮದ ಯು.ಬಿ.ಆಶಾರವರ ಪತಿ ಎಸ್.ಕುಮಾರ ಅಳಲು ತೋಡಿಕೊಂಡರು.
ಹುಣಸೂರು ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಶೇ.೯೮.೫ರಷ್ಟು ಫಲಾನುಭವಿಗಳಿಗೆ ದೊರಕಿದೆ. ೪೦ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದಾರೆ. ಅವರ ಹೆಸರಿನಲ್ಲಿ ಕುಟುಂಬದವರೇ ಪಡೆಯುತ್ತಿದ್ದಾರೆ. ೧೩೦ ಜನರು ಬ್ಯಾಂಕ್ಗಳಲ್ಲಿ ಎನ್‌ಪಿಸಿಐ ಲಿಂಕ್ ಮಾಡಿಸಿಲ್ಲ. ಹೀಗೆ ಒಟ್ಟು ೧೭೦ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ. ಈ ಎಲ್ಲ ಅರ್ಜಿಗಳನ್ನೂ ಸಂಬಂಧಪಟ್ಟ ಇಲಾಖೆಗೆ ಕಳಿಸಲಾಗಿದೆ. ಇದು ತಾಂತ್ರಿಕ ಸಮಸ್ಯೆ ಯಾಗಿದ್ದು, ಸರ್ಕಾರದ ಹಂತದಲ್ಲಿಯೇ ಬಗೆಹರಿಯಬೇಕು ಎಂದು ಸಿಡಿಪಿಒ ಹರೀಶ್ ತಿಳಿಸಿದ್ದಾರೆ.
” ಮೈಸೂರು ಜಿಲ್ಲೆಯಲ್ಲಿ ಐಟಿ, ಜಿಎಸ್‌ಟಿ ಸಮಸ್ಯೆ ಇರುವ ೮೦೦ ರಿಂದ ೧,೦೦೦ ಫಲಾನುಭವಿಗಳಿಗೆ ಈ ಯೋಜನೆ ಹಣ ಬರುತ್ತಿಲ್ಲ. ಜೊತೆಗೆ ಹುಣಸೂರು ತಾಲ್ಲೂಕಿನ ಮಾಹಿತಿಯೂ ನನಗಿಲ್ಲ. ಇದರ ಬಗ್ಗೆ ಮಾಹಿತಿ ಪಡೆದು ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ.”
-ಡಾ.ಪುಷ್ಪಾ ಅಮರ್‌ನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ
” ತಾಲ್ಲೂಕಿನಲ್ಲಿ ಈಗ ೭೪,೮೨೦ ಮಂದಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಶೇ.೯೮.೫ರಷ್ಟು ಸಾಧನೆ ಸಾಧಿಸಿದ್ದು ವಿವಿಧ ಕಾರಣಗಳಿಂದ ಉಳಿದಿರುವ ಫಲಾನುಭವಿಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು.”
-ರಾಘು ಕಲ್ಕುಣಿಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…