ಮೈಸೂರು: ಇತ್ತೀಚೆಗೆ ನಾನಾ ಕಾರಣಗಳಿಂದ ಸುದ್ದಿಯಲ್ಲಿರುವ ನಂದಿನಿ ಮಾತೃಸಂಸ್ಥೆ ಕೆಎಂಎಫ್ ರಾಜ್ಯದ ೨೬ ಲಕ್ಷ ಹೈನುಗಾರರಿಗೆ ಆಸರೆಯಾಗುವ ಮೂಲಕ ರಾಜ್ಯದ ಅತಿದೊಡ್ಡ ಉದ್ಯೋಗದಾತ ಸಂಸ್ಥೆ ಯಾಗಿದೆ. ಇದು ಎರಡು ಲಕ್ಷಕ್ಕೂ ಹೆಚ್ಚು ನೌಕರರಿಗೆ ನೇರ ಉದ್ಯೋಗ ನೀಡಿದೆ.
೨೨ ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದಿನಂಪ್ರತಿ ೮೪ರಿಂದ ೮೫ ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿರುವ ಕೆಎಂಎಫ್ ದಿನವೊಂದಕ್ಕೆ ಸುಮಾರು ೨೪ ಕೋಟಿ ರೂ.ಗಳನ್ನು ರೈತರಿಗೆ ವಿತರಿಸುತ್ತಿದೆ. ೨೯ ಲಕ್ಷ ಜನರಿಗೆ ನೇರ ಉದ್ಯೋಗ ಕಲ್ಪಿಸಿರುವ ನಮ್ಮ ದೇಶದ ಸೇನೆ ಜಗತ್ತಿನ ಅತಿ ದೊಡ್ಡ ಉದ್ಯೋಗದಾತ ಸಂಘಟನೆ. ೨೮ ಲಕ್ಷ ಜನರಿಗೆ ಬದುಕು ನೀಡಿದ ಕೆಎಂಎಫ್ ರಾಜ್ಯದ ಅತಿದೊಡ್ಡ ಉದ್ಯೋಗದಾತ ಸಹಕಾರಿ ಸಂಸ್ಥೆ ಎನ್ನಲು ಯಾವುದೇ ಅಡ್ಡಿಯಿಲ್ಲ.
ದೇಶದ ಅತಿ ದೊಡ್ಡ ಸಹಕಾರಿ ಹಾಲು ಒಕ್ಕೂಟವಾಗಿರುವ ಗುಜರಾತ್ ಮೂಲದ ಅಮುಲ್ ಜತೆ ಕೆಎಂಎಫ್ ವಿಲೀನವಾಗಲಿದೆ ಎಂಬ ಸುದ್ದಿ ಇತ್ತೀಚೆಗೆ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಆದರೆ ದೇಶದ ಎರಡನೇ ಅತಿ ದೊಡ್ಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವಾಗಿರುವ ಕೆಎಂಎಫ್ ಎಷ್ಟು ಸುಭದ್ರವಾಗಿದೆ ಎನ್ನುವುದಕ್ಕೆ ಮೇಲಿನ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ಒಂದು ವೇಳೆ ಕೆಎಂಎಫ್ ಅಸ್ತಿತ್ವಕ್ಕೆ ಧಕ್ಕೆಯಾದರೆ ರಾಜ್ಯದ ಆರ್ಥಿಕತೆಗೆ ಯಾವ ಮಟ್ಟದ ಏಟು ಬೀಳಬಹುದು ಎನ್ನುವುದನ್ನೂ ಇದೇ ಅಂಕಿ ಅಂಶಗಳು ದೃಢೀಕರಿಸುತ್ತವೆ.
ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಆಮುಲ್ ಮತ್ತು ನಂದಿನಿ ಒಂದಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದ್ದು ಇದೇ ಕಾರಣಕ್ಕಾಗಿ. ಆದರೆ ಇಡೀ ಕರ್ನಾಟಕ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ‘ನಂದಿನಿ’ ಬ್ರ್ಯಾಂಡ್ ಪರ ನಿಲ್ಲಲು ಕಾರಣವಾಗಿದ್ದು ಕೂಡ ಕೆಎಂಎಫ್ನ ಈ ಅಗಾಧತೆ ಮತ್ತು ವಿಶ್ವಾಸಾರ್ಹತೆ.
ರಾಜ್ಯದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆ ನಮ್ಮ ಕೆಎಂಎಫ್
೨೮ ಲಕ್ಷ ಜನರಿಗೆ ಉದ್ಯೋಗವಿತ್ತು ಗ್ರಾಮೀಣ ಆರ್ಥಿಕತೆಯನ್ನೇ ಮೇಲೆತ್ತಿದ ಕ್ಷೀರ ಕ್ರಾಂತಿ,
ರಾಜ್ಯದ ಕೆಎಂಎಫ್ ಕ್ಷೀರಬಲ
೧೬- ಹಾಲು ಒಕ್ಕೂಟಗಳು
೨೨,೦೦೦ಕ್ಕೂ ಹೆಚ್ಚು ಹಾಲು ಸಹಕಾರ ಸಂಘಗಳು
೨೬.೪೪ ಲಕ್ಷ ಹಾಲು ಉತ್ಪಾದಕರು
೮೪ರಿಂದ ೮೫ ಲಕ್ಷ ಲೀಟರ್ ದೈನಂದಿನ ಹಾಲು ಸಂಗ್ರಹ
೬ರಿಂದ ೮ ಲಕ್ಷ ಲೀಟರ್ ಪ್ರತಿದಿನದ ಹಾಲು ವಾರಾಟ
೮ಲಕ್ಷ ಲೀಟರ್ ಪ್ರತಿದಿನದ ಮೊಸರು ಮಾರಾಟ
೨೪ ಕೋಟಿ ರೂ. ಹೈನುಗಾರರಿಗೆ ಪ್ರತಿದಿನದ ಪಾವತಿ
೨೮ ಲಕ್ಷ ಜನರಿಗೆ ಬದುಕು
ಕೋಟ್ಗಳು:
ಅಮುಲ್ನಿಂದ ಕೆಎಂಎಫ್ಗೆ ಧಕ್ಕೆಯಾಗಲಾರದು. ಬೆಂಗಳೂರು,ಮೈಸೂರಿನಂತಹ ಕಾಸ್ಮೋಪಾಲಿಟಿನ್ ಸಿಟಿಗಳಲ್ಲಿ ಹೊರ ರಾಜ್ಯದವರು ಹೆಚ್ಚಿರುವ ಕಡೆಗಳಲ್ಲಿ ಅಮುಲ್ ಹಾಲು ಸ್ವಲ್ಪ ಪ್ರಮಾಣದಲ್ಲಿ ಮಾರಾಟವಾಗಬಹುದಾದರೂ ನಂದಿನಿ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಉಂಟಾಗದು. ಶಾಲಾ ಮಕ್ಕಳಿಗೆ ಹಾಲು ಕೊಡುತ್ತಿರುವುದರಿಂದ ಮಾರಾಟಕ್ಕೆ ಅನುಕೂಲವಾಗಿದೆ. ಕೆಎಂಎಫ್ ಸದೃಢವಾಗಿರುವ ಕಾರಣ ಮುಂದೆಯೂ ತೊಂದರೆಯಾಗುವ ಸಾಧ್ಯತೆ ಇಲ್ಲ.
–ಎ.ಎಸ್.ಪ್ರೇಮ್ನಾಥ್, ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಹಾಲು ಒಕ್ಕೂಟ.
ದಕ್ಷಿಣ ಭಾರತದಲ್ಲಿ ಕೆಎಂಎಫ್ ಫಸ್ಟ್
ಕೆಎಂಎಫ್ ಇಂದು ಎಲ್ಲಾ ಜಿಲ್ಲೆಗಳನ್ನು ಒಳಗೊಂಡು ೧೬ ಹಾಲು ಒಕ್ಕೂಟಗಳನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಖರೀದಿ ಮತ್ತು ವಾರಾಟದ ವಿಷುಂದಲ್ಲಿ ಮೊದಲ ಸ್ಥಾನದಲ್ಲಿದೆ. ಗ್ರಾಮ ಮಟ್ಟದಲ್ಲಿ ಹಾಲು ಉತ್ಪಾದಕರ ಸಂಘಗಳು ಹಾಲು ಪೂರೈಕೆ ಮಾಡಿದರೆ ಜಿಲ್ಲಾಮಟ್ಟದಲ್ಲಿ ಹಾಲು ಒಕ್ಕೂಟಗಳು ಹಾಲಿನ ಖರೀದಿ, ಸಂಸ್ಕರಣೆ ಮತ್ತು ವಾರುಕಟ್ಟೆ ಬಗ್ಗೆ ಕಾಳಜಿ ವಹಿಸುತ್ತವೆ, ಹಾಲು ಉತ್ಪಾದನೆುಂನ್ನು ಹೆಚ್ಚಿಸಲು ತಾಂತ್ರಿಕ ನೆರವು ಒದಗಿಸುತ್ತವೆ. ಗ್ರಾಮೀಣರ ಕುಲ ಕಸುಬಾಗಿದ್ದ ಹೈನುಗಾರಿಕೆುಂನ್ನು ಮೇಲೆತ್ತಿ ಬೃಹತ್ ಉದ್ಯಮವನ್ನಾಗಿ ಪರಿವರ್ತಿಸಿದ ದೇಶದ ಕೆಲವೇ ಒಕ್ಕೂಟಗಳಲ್ಲಿ ಕೆಎಂಎಫ್ ಕೂಡ ಒಂದಾಗಿದೆ.
ನಂದಿನಿಗಿಲ್ಲ ಪೈಪೋಟಿ
ದೊಡ್ಲಾ, ಜೆರ್ಸಿ, ತಿರುಮಲ, ಆರೋಕ್ಯ,ಹೆರಿಟೇಜ್ ಇತ್ಯಾದಿ ಖಾಸಗಿ ಸಂಸ್ಥೆಗಳು ಕರ್ನಾಟಕದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಆದರೆ ಈ ಪ್ರಮಾಣ ಶೇ.೨ ಮೀರಿಲ್ಲ. ಅಮುಲ್, ಹಡ್ಸನ್, ಮಿಲ್ಕಿ ಮಿಸ್ಟ್ , ಗೋವರ್ಧನ್ ಮತ್ತಿತರ ಹತ್ತಾರು ಕಂಪನಿಗಳು ಬೆಣ್ಣೆ, ತುಪ್ಪ, ಚೀಸ್,ಐಸ್ ಕ್ರೀಮ್ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಿದರೂ ಇವು ನಂದಿನಿ ಉತ್ಪನ್ನ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ‘ಆಂದೋಲನ’ಕ್ಕೆ ದೊರೆತ ಅಧಿಕೃತ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಂದಿನಿಯ ಹಾಲು ಮತ್ತು ಮೊಸರು ಮಾರಾಟದ ಪ್ರಮಾಣ ಸರಾಸರಿ ಶೇ.೪ರಿಂದ ರಷ್ಟು ಏರಿಕೆಯಾಗುತ್ತಲೇ ಇದೆ.
ಕೆಎಂಎಫ್ ಸೀಮೋಲ್ಲಂಘನ
ರಾಜ್ಯದ ಪ್ರತಿ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕೆಎಂಎಫ್ ಮಾರಾಟ ಮಳಿಗೆಗಳಿವೆ. ಹೈದರಾಬಾದ್,ತಿರುಪತಿ, ಕಣ್ಣೂರು, ತಿರುಚ್ಚಿ, ಗೋವಾದಲ್ಲಿರುವ ಮಾರಾಟ ಮಳಿಗೆಗಳ ಮಾದರಿಯಲ್ಲಿ ಇತರ ರಾಜ್ಯಗಳಲ್ಲೂ ಮಾರಾಟ ಮಳಿಗೆ ತೆರೆಯಲು ಕೆಎಂಎಫ್ ಮುಂದಾಗಿದೆ. ಎಲ್ಲ ರಾಜ್ಯಗಳ ವಿಮಾನ ನಿಲ್ದಾಣ ಮತ್ತು ಮೆಟ್ರೋಪಾಲಿಟಿನ್ ಸಿಟಿ ರೈಲು ನಿಲ್ದಾಣಗಳಲ್ಲಿ ನಂದಿನಿ ಮಾರಾಟ ಮಳಿಗೆಗಳನ್ನು ತೆರೆಯಲು ಮಾತುಕತೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಆಂದೋಲನ’ಕ್ಕೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ವಿದರ್ಭ ಪ್ರಾಂತ್ಯ, ಹೈದರಾಬಾದ್, ಚೆನ್ನೈ, ಕೇರಳ ಮತ್ತು ಗೋವಾದಲ್ಲಿ ಪ್ರತಿದಿನ ೭ ಲಕ್ಷಕ್ಕೂ ಅಧಿಕ ಲೀಟರ್ ಹಾಲು ಮತ್ತು ಮೊಸರನ್ನು ಅಲ್ಲಿನ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಅವರು ತಿಳಿಸಿದ್ದಾರೆ.
ಕೋಟ್
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಮೈಮುಲ್ನಲ್ಲಿ ಹಾಲು ಉತ್ಪಾದನೆ ಶೇ.೮ರಷ್ಟು ಜಾಸ್ತಿಯಾಗಿದೆ. ಹಾಲು ಮಾರಾಟ ಶೇ.೭ರಷ್ಟು ಏರಿಕೆಯಾಗಿದೆ. ಜಿಲ್ಲೆಯಲ್ಲಿ ಖಾಸಗಿ ಹಾಲಿನ ಡೈರಿಗಳು ಇಲ್ಲ. ಖಾಸಗಿಯವರು ಹಾಲು ಸಂಗ್ರಹಿಸುವುದಕ್ಕೆ ಅವಕಾಶವೇ ಇಲ್ಲದಂತೆ ನಮ್ಮಲ್ಲಿ ಡೈರಿಗಳಿವೆ. ಒಂದು ಡೈರಿಯಿಂದ ಮತ್ತೊಂದು ಗ್ರಾಮಕ್ಕೆ ದೂರವಾದರೆ ವಾಹನಗಳ ಮೂಲಕ ಸಂಗ್ರಹಿಸುವ ವ್ಯವಸ್ಥೆಯಿದೆ.
– ವಿಜಯಕುಮಾರ್,ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಹಾಲು ಉತ್ಪಾದಕರ ಒಕ್ಕೂಟ
ರೈತರ ಪಾಲಿನ ಸಂಜೀವಿನಿ ಮೈಮುಲ್
ಮೈಸೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮೈಮುಲ್ ಪ್ರತಿ ಲೀಟರ್ ಹಾಲಿಗೆ ಸರ್ಕಾರದ ಪ್ರೋತ್ಸಾಹಧನ ಸೇರಿ ೩೮ ರೂ.ಗಳನ್ನು ಕೊಡುತ್ತಿದೆ. ಹೈನುಗಾರರಿಗೆ ಆರ್ಥಿಕವಾಗಿ ನೆರವು ನೀಡುವ ಕೆಲಸ ಜತೆ ರಾಸುಗಳಿಗೆ ಲಸಿಕೆ, ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಮೈಮುಲ್ನಲ್ಲಿ ಈ ಬಾರಿ ಹಾಲು ಉತ್ಪಾದನೆ ಮತ್ತು ಮಾರಾಟ ಶೇ.೭ರಿಂದ ೮, ಮೊಸರಿನ ಮಾರಾಟ ಶೇ.೨೦ರಷ್ಟು ಜಾಸ್ತಿಯಾಗಿದೆ.
ಅತಿ ಹೆಚ್ಚು ಹಾಲು ಉತ್ಪಾದಕ ಒಕ್ಕೂಟ ಮನ್ಮುಲ್
ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮನ್ಮುಲ್) ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಸಂಗ್ರಹಿಸುವ ಒಕ್ಕೂಟ. ಅತಿ ಹೆಚ್ಚು ಮಹಿಳಾ ಡೈರಿ ಸಹಕಾರ ಸಂಘಗಳು ಈ ಒಕ್ಕೂಟದಲ್ಲಿವೆ. ರಾಜ್ಯದಲ್ಲೇ ಮೊದಲ ಬಾರಿಗೆ ಶೇ.೭೦ರಷ್ಟು ಅನುದಾನದಲ್ಲಿ ಪಶು ವಿಮೆ ನೀಡಿದ, ಸೊಸೈಟಿಗಳ ಕಾಂರ್ುದರ್ಶಿಗಳಿಗೆ ರೂ.೧೦ ಪೈಸೆ ಪ್ರೋತ್ಸಾಹ ಧನ ಜಾರಿಗೊಳಿಸಿದ ಹೆಗ್ಗಳಿಕೆಯೂ ಮಂಡ್ಯ ಹಾಲು ಒಕ್ಕೂಟಕ್ಕಿದೆ.
೨೦೨೨-೨೩ರ ಅಂಕಿ ಅಂಶಗಳ ಪ್ರಕಾರ ಒಕ್ಕೂಟದ ವ್ಯಾಪ್ತಿುಂಲ್ಲಿ ೧೨೮೦ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಒಟ್ಟು ೨,೭೧,೯೪೭ ಸದಸ್ಯರಿದ್ದಾರೆ. ಈ ಎಲ್ಲ ಡೇರಿಗಳಿಂದ ನಿತ್ಯ ಸರಾಸರಿ ೯,೦೩,೦೩೯ ಕೆ.ಜಿ. ಹಾಲು ಸಂಗ್ರಹವಾಗುತ್ತಿದೆ. ವಾರ್ಷಿಕ ೧೫೫೨.೮ ಕೋಟಿ ರೂ. ವಹಿವಾಟು ನಡೆುುಂತ್ತಿದೆ.
ಕೋಟ್
ಹಾಲಿನ ಉತ್ಪಾದನೆ ಶೇ.೨ರಷ್ಟು, ಹೆಚ್ಚಾಗಿದ್ದು ಮೆಗಾ ಡೇರಿ ಆರಂಭವಾದ ನಂತರ ಎಲ್ಲ ಉತ್ಪನ್ನಗಳ ಉತ್ಪಾದನೆುೂಂ ಹೆಚ್ಚಳವಾಗಿದೆ. ದಿನಂಪ್ರತಿ ೨ ಟನ್ ಪನ್ನೀರು , ೪ ಟನ್ ಕೋವಾ, ೧೨ ಟನ್ತುಪ್ಪ , ೩೫ ಟನ್ ಹಾಲಿನ ಪೌಡರ್ ಉತ್ಪಾದನೆಾಂಗುತ್ತಿದೆ. ಜಿಲ್ಲೆುಂಲ್ಲಿ ಖಾಸಗಿ ಡೇರಿಗಳಿಂದ ನಮಗೆ ಏನೂ ತೊಂದರೆ ಇಲ್ಲ.
-ಮಂಜೇಶ್, ವ್ಯವಸ್ಥಾಪಕ ನಿರ್ದೇಶಕರು, ಮನ್ಮುಲ್
ಕೋಟ್
ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್) ಕಳೆದ ೨ ತಿಂಗಳಿಂದ ಸುವಾರು ೫೦ ಸಾವಿರ ಲೀಟರ್ ಹಾಲು ಸಂಗ್ರಹ ಹೆಚ್ಚಳ ಕಂಡಿದೆ. ಒಕ್ಕೂಟದ ವ್ಯಾಪ್ತಿುಂಲ್ಲಿ ೪೬೮ ಹಾಲು ಉತ್ಪಾದಕ ಸಹಕಾರ ಸಂಘ(ಡೇರಿ)ಗಳಿದ್ದು ೩೫ ಸಾವಿರ ಸದಸ್ಯರು ಸಂಘಗಳ ವ್ಯಾಪ್ತಿುಂಲ್ಲಿದ್ದಾರೆ. ಪ್ರತಿದಿನ ೨.೮೦ ಲಕ್ಷ ಲೀಟರ್ ಹಾಲು ಸಂಗ್ರಹ ಆಗುತ್ತಿದೆ. ಒಕ್ಕೂಟ ಕಳೆದ ವರ್ಷ ೪೦೦ ಕೋಟಿ ರೂ. ವಹಿವಾಟು ನಡೆಸಿತ್ತು. ಈ ಸಲ ೪೫೦ ಕೋಟಿ ರೂ. ವಹಿವಾಟು ನಿರೀಕ್ಷಿಸಲಾಗಿದೆ.
-ರಾಜಶೇಖರಮೂರ್ತಿ, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ
ಹಾಸನ ಹಾಲು ಒಕ್ಕೂಟದ ವ್ಯಾಪ್ತಿುಂಲ್ಲಿ ಹಾಸನ, ಕೊಡಗು ಹಾಗೂ ಚಿಕ್ಕಮಂಗಳೂರು ಜಿಲ್ಲೆ ಒಳಪಟ್ಟಿದೆ. ಇದರ ಅಧೀನದಲ್ಲಿ ೧೬೮೦ ಸಹಕಾರ ಸಂಘಗಳು ಕಾಂರ್ುನಿರ್ವಹಿಸುತ್ತಿದೆ. ಇದರಲ್ಲಿ ಒಟ್ಟು ೧,೦೫೦೦೦ ಸದಸ್ಯರು ಸಂಘಕ್ಕೆ ಹಾಲು ವಿತರಣೆ ವಾಡುತ್ತಿದ್ದು, ಪ್ರತಿ ದಿನ ಸರಿ ಸುವಾರು ೧೨,೭೦,೦೦೦ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ೨೦೦೦ ಸಾವಿರ ಕೋಟಿ ವಹಿವಾಟು ನಡೆದಿದೆ.
ಪೂರಕ ಮಾಹಿತಿ: ಕೆ.ಬಿ.ರಮೇಶನಾಯಕ, ಮೋಹನ್ ಕುಮಾರ್ ಮಂಡ್ಯ, ಲಕ್ಕೂರು ಪ್ರಸಾದ್,ಚಾಮರಾಜ ನಗರ, ನವೀನ್ ಡಿಸೋಜ, ಕೊಡಗು