ಅಮಿತ್‌ ಶಾ ನಾಪತ್ತೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌, ಕುದುರೆ ವ್ಯಾಪಾರದಲ್ಲಿ ಬಿಜಿ ಅಂತಿದ್ದಾರೆ ನೆಟ್ಟಿಗರು

ಹೊಸದಿಲ್ಲಿ: ಕೋವಿಡ್‌ ಸಂಕಷ್ಟದಿಂದ ಭಾರತ ತತ್ತರಿಸಿದೆ. ಈ ಸಮಯದಲ್ಲಿ ಶ್ರೀಸಾಮಾನ್ಯರನ್ನು ಕಾಪಾಡಬೇಕಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಾಪತ್ತೆಯಾಗಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಿತ್‌ ಶಾ ನಡೆ ಕುರಿತು ಟೀಕಿಸಿರುವ ಟ್ವಿಟರ್‌ ಬಳಕೆದಾರರು ಪಂಚರಾಜ್ಯ ಚುನಾವಣೆ ಮುಗಿದ ನಂತರ ಅಮಿತ್‌ ಶಾ ಕಾಣೆಯಾಗಿದ್ದಾರೆ ಎಂದು ಪೋಸ್ಟ್‌ ಹಾಕಿದ್ದಾರೆ. ಟ್ವಿಟರ್‌ನಲ್ಲಿ #amithshahmissing ಎನ್ನುವ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ಬಹುಶಃ ಈಗ ಕುದುರೆ ವ್ಯಾಪಾರದ್ಲಿ ಬಿಝಿಯಾಗಿರಬಹುದು ಎಂದು ಟೀಕಿಸಿದ್ದಾರೆ.

ಶಾ ಅವರು ಚುನಾವಣೆ ಇದ್ದರಷ್ಟೇ ಪ್ರತ್ಯಕ್ಷವಾಗುತ್ತಾರೆ. ಬಾಕಿ ಸಮಯದಲ್ಲಿ ಅವರು ನಾಪತ್ತೆಯಾಗುವುದು ಸಾಮಾನ್ಯ ಎಂದು ಮತ್ತೊಬ್ಬ ಟ್ವಿಟ್ಟಿಗರು ಕುಟುಕಿದ್ದಾರೆ.

× Chat with us