ಇ-ಆಡಳಿತ ಮೂಲಕವೇ ಡಿಸಿ, ಜಿಪಂ ಸಿಇಒ ಕಾರ್ಯವೈಖರಿಗೆ ಆದೇಶ

ಮೈಸೂರು: ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಇಲಾಖಾ ಮುಖ್ಯಸ್ಥರು ತಮ್ಮ ಪ್ರಸ್ತಾವನೆ, ಪತ್ರಗಳು, ಕಡತಗಳನ್ನು ಇನ್ನು ಮುಂದೆ ಇ-ಆಫೀಸ್ ತಂತ್ರಾಂಶದ ಮೂಲಕವೇ ಅಕ್ಟೋಬರ್ 1ರಿಂದ ಸರ್ಕಾರದೊಂದಿಗೆ ವ್ಯವಹರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾರ್ಯದರ್ಶಿಗಳು ಸಾಧ್ಯವಾದಷ್ಟು ತಮ್ಮ ಮಟ್ಟದಲ್ಲೇ ವಿಷಯವನ್ನು ಇತ್ಯರ್ಥಪಡಿಸಿ, ಸಂಬಂಧಪಟ್ಟ ಸಚಿವರಿಗೆ ಆದೇಶಕ್ಕಾಗಿ ಮಾತ್ರ ಕಳುಹಿಸಬೇಕು. ಅಸಾಧಾರಣ ಪ್ರಕರಣಗಳ ಇ-ಕಚೇರಿ ಕಡತಗಳನ್ನು ಅಥವಾ ಸಚಿವ ಸಂಪುಟ ಟಿಪ್ಪಣಿಯನ್ನು ತಯಾರಿಸಿ ಸಚಿವ ಸಂಪುಟದ ಮುಂದೆ ತರಬೇಕು. ಏಕ ಕಡತಗಳನ್ನು ಮಾತ್ರ ಕಾರ್ಯದರ್ಶಿಗಳು ಸಂಬಂಧಿಸಿದ ಉಪ ಕಾರ್ಯದರ್ಶಿಗಳಿಗೆ ಕಳುಹಿಸಬೇಕು. ಸಚಿವಾಲಯಕ್ಕೆ ಕಳುಹಿಸು ಎಲ್ಲಾ ಪತ್ರಗಳು, ವರದಿಗಳನ್ನು ಇ- ಆಫೀಸ್ ತಂತ್ರಾಂಶದಲ್ಲಿ ಸ್ವೀಕೃತಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.

× Chat with us