ಕೃಷಿ

IPL ಲಕ್ನೋಗೆ ಸೋಲುಣಿಸಿದ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್

ಅಹಮದಾಬಾದ್ : ಐಪಿಎಲ್ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಗೆಲುವಿನ ಓಟ ಮುಂದುವರಿದಿದ್ದು, ಭಾನುವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು 56 ರನ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

11 ಪಂದ್ಯಗಳಲ್ಲಿ ಟೈಟಾನ್ಸ್ ಎಂಟನೇ ಜಯವಾಗಿದ್ದು, 16 ಅಂಕಗಳಿಗೆ ಮತ್ತು ಪ್ಲೇ-ಆಫ್‌ಗೆ ಹತ್ತಿರವಾಗಿದೆ.

ಶುಭಮನ್ ಗಿಲ್ (ಔಟಾಗದೆ 94) ಮತ್ತು ವೃದ್ಧಿಮಾನ್ ಸಹಾ (81) ನಡುವಿನ ಫ್ರಾಂಚೈಸಿ ದಾಖಲೆಯ 142 ರನ್‌ಗಳ ಜೊತೆಯಾಟದಿಂದ ಎರಡು ವಿಕೆಟ್‌ಗೆ 227 ರನ್ ಗಳಿಸಿದ ಗುಜರಾತ್ ಟೈಟಾನ್ಸ್, ಎಲ್‌ಎಸ್‌ಜಿಯ ಚೇಸ್‌ ವೇಳೆ ಸಮಗ್ರ ರೀತಿಯಲ್ಲಿ ಬಲವಾಗಿ ಮರಳಿ ಗೆಲುವಿನ ಕೇಕೆ ಹಾಕಿತು.

228 ರನ್‌ಗಳನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ಮೊದಲ ವಿಕೆಟ್‌ಗೆ 102 ರನ್‌ ಗಳಿಸಿ ಬಲಿಷ್ಠ ಆಟ ತೋರಿತ್ತು.ಮೇಯರ್ಸ್ ಮತ್ತು ಡಿ ಕಾಕ್ ಇಬ್ಬರೂ ವೇಗವನ್ನು ಕಂಡುಕೊಳ್ಳುವುದರೊಂದಿಗೆ ಕೇವಲ ನಾಲ್ಕು ಓವರ್‌ಗಳಲ್ಲಿ ಗುರಿಯಿಂದ 50 ರನ್ ಗಳಿಸಿದರು. ಆದರೆ ಜಿಟಿ ಬಿಗಿ ಬೌಲಿಂಗ್ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಮೋಹಿತ್ ಶರ್ಮಾ 4 ವಿಕೆಟ್ ಕಬಳಿಸಿದರು.

ಕ್ವಿಂಟನ್ ಡಿ ಕಾಕ್ ಅವರ ಅದ್ಭುತ 70 ಮತ್ತು ಅಗ್ರಸ್ಥಾನದಲ್ಲಿ ಕೈಲ್ ಮೇಯರ್ಸ್ ಅವರ ಚುರುಕಾದ 48 ರ ಹೊರತಾಗಿಯೂ, ಲಕ್ನೋ ಮಧ್ಯಮ ಕ್ರಮಾಂಕದ ವೈಫಲ್ಯದ ಮೂಲಕ ಬೃಹತ್ ಮೊತ್ತ ಗುರಿ ತಲುಪಲು ಪರದಾಡಿತು. 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 171 ರನ್ ಗಳಿಸಿತು.

ಪಂದ್ಯಶ್ರೇಷ್ಠ:ಶುಭ್‌ಮನ್‌ ಗಿಲ್‌

andolanait

Share
Published by
andolanait

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

5 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

10 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

14 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

14 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

14 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

17 hours ago