ಬೆಂಗಳೂರು- ಭೂಮಿಯ ಫಲವತ್ತತೆಗೆ ಧಕ್ಕೆಯುಂಟು ಮಾಡುತ್ತಿರುವ ಗ್ಲೈಕೊಫಾಸ್ಟೇಟ್ ನಿಷೇಧಿಸುವ ಕುರಿತು ಕೃಷಿ ಸಚಿವರ ಜೊತೆ ಚರ್ಚಿಸುವುದಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರದಲ್ಲಿ ಸದಸ್ಯ ಛಲವಾದಿ ಟಿ.ನಾರಾಯಣಸ್ವಾಮಿ ಪ್ರಶ್ನೆ ಕೇಳಿ, ರೈತರು ಕಳೆ ನಾಶಕ್ಕೆ
ಗ್ಲೆಕೊಫಾಸ್ಟೇಟ್ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿರುವುದಲ್ಲದೆ, ಕೃಷಿ ಉತ್ಪನ್ನಗಳು ವಿಷವಾಗುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.
ಕೃಷಿ ಸಚಿವರ ಪರವಾಗಿ ಉತ್ತರ ನೀಡಿದ ಕಾರ್ಮಿಕ ಸಚಿವರು, ರಾಯಾಯನಿಕ ಹಾಗೂ ರಸಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ತೀವ್ರವಾಗಿ ಹಾನಿಯಾಗಿದೆ. ರೈತರು ನೈಸರ್ಗಿಕ ಕೃಷಿಯತ್ತ ಗಮನ ಹರಿಸಬೇಕು. ಸಾವಯವ ಪದ್ಧತಿ ಅಳವಡಿಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಆಯೋಗ ರಚನೆ ಮಾಡಿ ಸಾವಯವ ಕೃಷಿಗೆ ಬೆಂಬಲ ನೀಡಲಾಗುತ್ತಿದೆ ಎಂದರು.
ಎಸ್.ರವಿ ಪ್ರಶ್ನೆ ಕೇಳಿ ರಾಜ್ಯದಲ್ಲಿ ಗ್ಲೆಕೊಫಾಸ್ಟೇಟ್ ನಿಷೇಧ ಮಾಡಬೇಕು. ಇದರ ಬಳಕೆಯಿಂದ ರಾಜ್ಯದಲ್ಲಿ ಒಂದು ಲಕ್ಷ ಹೆಕ್ಟೇರ್ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಅದರಲ್ಲೂ ಚಿತ್ರದುರ್ಗ, ಶುಂಠಿ ಬೆಳೆಯುವ ಭಾಗದಲ್ಲಿ ದುರ್ಬಳಕೆ ಹೆಚ್ಚಾಗಿದೆ. ನೆರೆಯ ಕೇರಳ, ಪಂಜಾಬ್ , ಹರಿಯಾಣ ರಾಜ್ಯಗಳಲ್ಲಿ ಈ ರಾಸಾಯನಿಕವನ್ನು ನಿಷೇಧ ಮಾಡಲಾಗಿದೆ.
ಇಲ್ಲಿ ನಿಷೇಧ ಮಾಡಲು ಏನು ತೊಂದರೆ ಇದೆ. ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಹೊಣೆ ಹೊರಿಸುವುದು ಬೇಡ. ಸಾವಯವ ಕೃಷಿ ಪದ್ಧತಿ ಅಳವಡಿಕೆಯಿಂದ ಶ್ರೀಲಂಕದಲ್ಲಿ ಕೃಷಿ ಉತ್ಪನ್ನ ಕುಸಿದು, ನಂತರ ಆ ದೇಶ ಆರ್ಥಿಕವಾಗಿ ಅವನತಿ ಹೊಂದಿದೆ. ನಮ್ಮಲ್ಲಿ ಸಾವಯವ ಕೃಷಿ ಬಗ್ಗೆ ಉದ್ದುದ್ದ ಭಾಷಣ ಬಿಗಿಯಲಾಗುತ್ತದೆ. ಸಾವಯವ ಕೃಷಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಒಂದು ಸಾವಿರ ರೂಪಾಯಿ ಬೆಂಬಲ ಬೆಲೆ ನೀಡುತ್ತಿದೆ. ಇದು ಸಾಲುವುದಿಲ್ಲ ಎಂದರು.
ಸಚಿವರು ಪ್ರತಿಕ್ರಿಯಿಸಿ, ಬೇರೆ ರಾಜ್ಯಗಳಲ್ಲಿ
ಗ್ಲೈಕೊಫಾಸ್ಟೇಟ್ ನಿಷೇಧವಾಗಿದ್ದರೆ ಅದನ್ನು ಪರಿಶೀಲಿಸಿ ಇಲ್ಲಿಯೂ ನಿಷೇಧ ಮಾಡುವ ಬಗ್ಗೆ ಕೃಷಿ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಸಾವಯವ ಕೃಷಿಗೆ ನೀಡಲಾಗುವ ಪೆÇ್ರೀತ್ಸಾಹವನ್ನು ಹೆಚ್ಚಿಸಲು ಹಣಕಾಸು ಲಭ್ಯತೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಂಜುನಾಥ್ ಭಂಡಾರಿ ಅವರ ಪರವಾಗಿ ಹರೀಶ್ ಕುಮಾರ್ ಪ್ರಶ್ನೆ ಕೇಳಿದಾಗ ಕೃಷಿ ಸಚಿವರ ಪರವಾಗಿ ಉತ್ತರ ನೀಡಿದ ಸಚಿವ ಶಿವರಾಮ್ ಹೆಬ್ಬಾರ್, ವಿದ್ಯಾನಿ ಯೋಜನೆಯಡಿ ಕಂಡು ಬರುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆ ಹರಿಸಲು ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಿ ಪಡಿಸುವುದಾಗಿ ಭರವಸೆ ನೀಡಿದರು.
ವಿದ್ಯಾನಿ ಯೋಜನೆಯಡಿ 439 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ವರ್ಷದಿಂದ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ನೀಡಲು ನಿರ್ಧರಿಸಲಾಗಿದೆ. ಜಾತಿ, ಧರ್ಮ ಭೇದವಿಲ್ಲದೆ ಯೋಜನೆ ಸೌಲಭ್ಯವನ್ನು ವಿತರಿಸಲಾಗುತ್ತಿದೆ ಎಂದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಭೂಮಿಯ ಫಲವತ್ತತೆ ಕೊಲ್ಲುತ್ತಿರುವ ʼಗ್ಲೆಕೊಫಾಸ್ಟೇಟ್ʼ ನಿಷೇಧಿಸುವತ್ತ ಸರ್ಕಾರ ಹೆಜ್ಜೆ
Next Article ನಾಳೆ ಸೋನಿಯಾ ಗಾಂಧಿ ಭೇಟಿ ಮಾಡಲಿರುವ ಲಾಲೂ-ನಿತೀಶ್