ಬೆಂಗಳೂರು : ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯ ಅಡಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆ ಅಡಿ ಸ್ಥಳೀಯವಾಗಿ ಸೀಬೆಹಣ್ಣು ಎಂದು ಕರೆಸಿಕೊಳ್ಳುವ ಪೇರಳೆ ಕೊಪ್ಪಳ ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆ ಅಡಿ ಆಯ್ಕೆಗೊಂಡಿದೆ.
ಈ ಮೂಲಕ ಹಲವು ರೈತರ ಬದುಕಿಗೆ ಆಧಾರವಾಗಿದೆ. ಈ ಯೋಜನೆಯಡಿ ಸಂಸ್ಕರಣ ಘಟಕ ಹನಿ ನೀರಾವರಿ ಸಾಲ ಸೌಲಭ್ಯದ ಜೊತೆಗೆ ಶೇಕಡ 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಪೇರಳೆ ಸುಲಭವಾಗಿ ಬೆಳೆಯಬಹುದಾದ ಬೆಳೆಯಾಗಿದ್ದು ರೈತರಿಗೆ ಇದೀಗ ಹೆಚ್ಚು ಅನುಕೂಲವನ್ನು ಮಾಡಿಕೊಟ್ಟಿದೆ. ಹೀಗಾಗಿ ರೈತರು ಪೇರಳೆ ಬೆಳೆಯಲು ಹೆಚ್ಚು ಒಲವು ತೋರುತ್ತಿದ್ದು ಹಿಂದೆ ಬೆಳೆಯುತ್ತಿದ್ದ ತಂಬಾಕು ಕಡಲೆಯಿಂದ ಪೇರಳೆ ಬೆಳೆಯತ್ತ ಗಮನ ಹರಿಸಿದ್ದಾರೆ. ಪೇರಳೆ ಹಲವು ಔಷಧಿಯ ಗುಣಗಳನ್ನು ಹೊಂದಿದ್ದು ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ.