ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ, ಮೈಸೂರಿನ ರೈತ ಗುರುಸ್ವಾಮಿ ಸಾಹಸ
ಮೈಸೂರು: ಫಲವತ್ತತೆ ಇಲ್ಲದ ಮಣ್ಣಿನಲ್ಲಿ,ಕಲ್ಲು ಮಣ್ಣು ಮಿಶ್ರಿತ ಕೆಂಪು ಮಣ್ಣಿನಲ್ಲಿ ಕೃಷಿ ಮಾಡಲು ಸಾಧ್ಯವೆ? ಕೃಷಿಯ ಮೇಲೆ ನಂಬಿಕೆ ಇಟ್ಟು ಲಕ್ಷ ಲಕ್ಷ ಬಂಡವಾಳ ಹೂಡಲು ಸಾಧ್ಯವೆ?
ಮೈಸೂರಿನ ರೈತರೊಬ್ಬರು ಬಂಗಾರದ ಬೆಳೆಯ ಕನಸಿನಲ್ಲಿ ಬೇರೊಂದು ಭೂಮಿಯಿಂದ ಟನ್ನುಗಟ್ಟಲೆ ಮಣ್ಣನ್ನು ತಂದು ಕೃಷಿ ಮಾಡಿದ್ದಾರೆ. ಮೂಲತ: ಉದ್ಯಮಿಯಾಗಿರುವ ಮೈಸೂರಿನ ವರುಣಾ ಕ್ಷೇತ್ರ ದುದ್ದಗೆರೆಯ ಎಸ್.ಗುರುಸ್ವಾಮಿ ಅವರು ತಮ್ಮ 32 ಎಕರೆ ಜಮೀನಿನಲ್ಲಿ ನಾನಾ ಬೆಳೆ ಬೆಳೆದು ಯಶಸ್ವಿಯಾದವರು. ಸಾಮಾಜಿಕ ಜಾಲತಾಣದಲ್ಲಿ “ಡ್ರ್ಯಾಗನ್ ಫ್ರುಟ್ʼ ಹಣ್ಣಿನ ಬಗ್ಗೆ ಮಾಹಿತಿ ಪಡೆದು ನಾಲ್ಕು ಎಕರೆ ಜಮೀನಿನಲ್ಲಿ ಈ ಬೆಳೆ ಬೆಳೆದಿದ್ದಾರೆ. ದುದ್ದಗೆರೆ ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆದ ಗುರುಸ್ವಾಮಿ ಅವರು ಇದಕ್ಕಾಗಿ ಬರೋಬ್ಬರಿ 47 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಉದ್ಯಮದಂತೆ ಕೃಷಿಯ ಮೇಲೂ ಇಷ್ಟೊಂದು ಬಂಡವಾಳ ಹಾಕಿರುವ ಅವರು ಮೊದಲ ಕೊಯ್ಲಿನಲ್ಲೇ ಹಣ ವಾಪಸ್ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಒಮ್ಮೆ ಬಂಡವಾಳ ಹೂಡಿದರೆ ಸುಮಾರು ೨೦ವರ್ಷ ಹಣ್ಣು ಕೊಯ್ಲು ಮಾಡಬಹುದೆನ್ನುವುದೇ ಡ್ರ್ಯಾಗನ್ ಫ್ರುಟ್ ಗಿರುವ ಆಕರ್ಷಣೆ. ಕೃಷಿಗೆ ಹೆಚ್ಚು ನೀರು ಬೇಕಿಲ್ಲ.ಬಿಸಿಲಿನಲ್ಲಿ ಹಣ್ಣು ಬೆಳೆದಷ್ಟೂ ರುಚಿ ಹೆಚ್ಚು ಎನ್ನಲಾಗುತ್ತಿದೆ. ಎಸ್.ಗುರುಸ್ವಾಮಿ ಅವರು ದೂರದ ವಿಜಯಪುರದಿಂದ ಗಿಡವೊಂದಕ್ಕೆ ತಲಾ ರೂ.70 ರಂತೆ ಸುಮಾರು 8000 ಗಿಡ ಖರೀದಿಸಿ ತಮ್ಮ ನಾಲ್ಕು ಎಕರೆ ಜಾಗವನ್ನು ಹದಗೊಳಿಸಿ ಏಪ್ರಿಲ್ ತಿಂಗಳಿನಲ್ಲಿ ಕೃಷಿ ಮಾಡಿದ್ದಾರೆ. ಒಂದು ಕೊಳವೆ ಬಾವಿ ತೋಡಿಸಿ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. 2000 ಕಾಂಕ್ರೀಟ್ ಕಂಬ ನೆಟ್ಟು ಅದರ ಮೇಲೆ ವೃತ್ತಾಕಾರದ ವಿನ್ಯಾಸ ಸಿದ್ದಪಡಿಸಿ ಗಿಡ ಹಬ್ಬಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ “ಡ್ರ್ಯಾಗನ್ ಫ್ರುಟ್ʼ ಕೃಷಿ ಮಾಡಿದ್ದು, ಮೂರು ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ತಂತಿ ಬೇಲಿ ಅಳವಡಿಸಿ ಭದ್ರತೆ ಒದಗಿಸಿದ್ದಾರೆ. ಮುಂದಿನ ಜೂನ್,ಜುಲೈ ತಿಂಗಳಿನಲ್ಲಿ ಹೂ ಬಿಟ್ಟು ಫಲ ನೀಡುವ ನೀಡುವ ನಿರೀಕ್ಷೆಯಲ್ಲಿದ್ದಾರೆ. ಗುರುಸ್ವಾಮಿ ಅವರು ಇದಕ್ಕೂ ಮುನ್ನ ತಮ್ಮ ೩೨ ಎಕರೆ ಜಮೀನಿನಲ್ಲಿ ಬಾಳೆ, ತರಕಾರಿ,ಮಂಗಳೂರು ಸೌತೆಕಾಯಿ,ಕಲ್ಲಂಗಡಿ ಹಣ್ಣು,ಪಪ್ಪಾಯಿ,ತೈವಾನ್ ಸೀಬೆ ಬೆಳೆದು ಯಶಸ್ವಿಯಾದವರು. ಈಗ ತೋಟದಲಿ ತೆಂಗು,ಅಡಿಕೆ ಗಿಡಗಳನ್ನೂ ನೆಟ್ಟು ಫಸಲು ನಿರೀಕ್ಷೆಯಲ್ಲಿದ್ದಾರೆ.
ಆರೋಗ್ಯ ವೃದ್ಧಿಗೆ ರಾಮಬಾಣ ಎನ್ನಲಾಗುತ್ತಿರುವ “ಡ್ರ್ಯಾಗನ್ ಫ್ರುಟ್ ʼ ಸೇಬು, ದಾಳಿಂಬೆಗಿಂತಲೂ ದುಬಾರಿ ಹಣ್ಣು. ೧೨ ದಿನಗಳವರೆಗೂ ಕೆಡದಂತೆ ಇಡಬಹುದಾದ ಈ ಹಣ್ಣನ್ನು ಶೀತಲೀಕರಣ ವ್ಯವಸ್ಥೆಯಲ್ಲಿ ತಿಂಗಳಿಗೂ ಹೆಚ್ಚು ಕಾಲ ಕೆಡದಂತೆ ಇಡಬಹುದು. ಮೂಲತಃ ಅಮೇರಿಕಾದ ತಳಿ. ಮಲೇಷ್ಯಾ, ಥಾಯ್ಲೆಂಡ್, ಫಿಲಿಪೈನ್ಸ್, ವಿಯೆಟ್ನಾಂನಂತಹ ದೇಶಗಳಲ್ಲೂ ವ್ಯಾಪಕವಾಗಿ ಬೆಳೆಯುತ್ತಿರುವ ಈ ಹಣ್ಣು ಇದೀಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಎಲ್ಲೆಡೆ ರೈತರು ಲಾಭದಾಯಕ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗುಲಾಬಿ ಬಣ್ಣದ ಹಣ್ಣಿಗೆ ಕಿಲೋಗೆ 250 ರಿಂದ ರೂ.300 ರವರೆಗೂ ದರವಿದೆ. ಬಿಳಿ ಹಣ್ಣಿಗೆ ದರ ಕಡಿಮೆ ಇದ್ದು ಹಳದಿ ಬಣ್ಣದ ಹಣ್ಣಿಗೆ ಕೆ.ಜಿ.ಗೆ ರೂ.500 ರವರೆಗೂ ದರವಿದೆ. ಗುರುಸ್ವಾಮಿ ಅವರು ಗುಲಾಬಿ ಬಣ್ಣದ ಹಣ್ಣು ಬೆಳೆದಿದ್ದಾರೆ. ಸುಮಾರು ರೂ.47 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು ಮೊದಲ ವರ್ಷದಲ್ಲಿಯೇ ಈ ಮೊತ್ತವನ್ನು ವಾಪಸ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…