ಚಿತ್ರರಂಗದಿಂದಲೂ ರೋಹಿಣಿ ಸಿಂಧೂರಿಗೆ ಬೆಂಬಲ, ಅಧಿಕಾರಿ ಪರ ರಮ್ಯಾ, ರಾಗಿಣಿ ಬ್ಯಾಟ್
ಬೆಂಗಳೂರು: ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪರವಾಗಿ ಕನ್ನಡ ಸಿನಿಮಾ ರಂಗದಿಂದಲೂ ಕೂಗು ಕೇಳಿಬಂದಿದೆ.
ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದರ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ರಾಜಕೀಯ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ರೋಹಿಣಿ ಸಿಂಧೂರಿ ಅವರು ಸಂದರ್ಶನ ನೀಡುತ್ತಿರುವ ವಿಡಿಯೋ ತುಣುಕೊಂದನ್ನು ಅವರು ಹಂಚಿಕೊಂಡಿದ್ದಾರೆ.
ಅದರಲ್ಲಿ ವರ್ಗಾವಣೆ ನಿರೀಕ್ಷಿಸಿದ್ರಾ ಎನ್ನುವ ಪ್ರಶ್ನೆಗೆ ರೋಹಿಣಿ ಅವರು ಉತ್ತರಿಸಿ ಖಂಡಿತ ಇಲ್ಲ. ಅಧಿಕಾರ ನಿರ್ವಹಿಸಿದ ಸಮಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ಲಸಿಕೆಯಲ್ಲೂ ನಾವು ಮುಂದಿದ್ದೇವೆ. ಹಾಗಿರುವಾಗ ವರ್ಗಾವಣೆಯನ್ನು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ಇತ್ತ ನಟಿ ರಾಗಿಣಿ ರಾಗಿಣಿ ದ್ವಿವೇದಿ ಅವರೂ ಕೂಡ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಸರಿಯಾದ ನಿರ್ಧಾರವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.