ಬಾಲಿವುಡ್ ನಟಿಗೆ ಚಾಕು ತೋರಿಸಿ 6.5 ಲಕ್ಷ ರೂ. ದರೋಡೆ!

ಚಂಡೀಗಢ: ಬಾಲಿವುಡ್ ನಟಿ ಅಲಂಕೃತ ಸಹಾಯ್ ಅವರ ಚಂಡಿಗಢ ನಿವಾಸಕ್ಕೆ ಹಾಡಹಗಲೇ ನುಗ್ಗಿದ ಮೂವರು ದುಷ್ಕರ್ಮಿಗಳು ಅವರಿಗೆ ಚಾಕು ತೋರಿಸಿ ಬೆದರಿಸಿ 6.50 ಲಕ್ಷ ರೂ. ದರೋಡೆ ಮಾಡಿರುವ ಸಿನಿಮೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ʻನಮಸ್ತೆ ಇಂಗ್ಲೆಂಡ್ʼ ಖ್ಯಾತಿಯ ನಟಿ ಅಲಂಕೃತ ಅವರು ವಾಸವಾಗಿದ್ದ ಚಂಡಿಗಢದ ಅಪಾರ್ಟ್‌ಮೆಂಟ್‌ಗೆ ಕಳೆದ ಮಧ್ಯಾಹ್ನ 12.30ಕ್ಕೆ ನುಗ್ಗಿದ ಮೂವರು ದರೋಡೆಕೋರರು ಆಕೆಗೆ ಚಾಕುವಿನಿಂದ ಬೆದರಿಸಿ ಒತ್ತೆಯಲ್ಲಿಟ್ಟುಕೊಂಡು. ಒಬ್ಬ ದುಷ್ಕರ್ಮಿ ನಟಿಯ ಎಟಿಎಂ ಕಾರ್ಡ್ ಪಡೆದು ಹೊರ ಹೋಗಿ ಅಕೌಂಟ್‌ನಿಂದ 50,000 ರೂ.ಗಳನ್ನು ವಿತ್‌ಡ್ರಾ ಮಾಡಿದ ಎಂದು ವರದಿಗಳು ಹೇಳಿವೆ.

ಈ ಸಂದರ್ಭದಲ್ಲಿ ಅಲಂಕೃತ ಇನ್ನಿಬ್ಬರು ದುಷ್ಕರ್ಮಿಗಳ ಕಣ್ ತಪ್ಪಿಸಿ ತನ್ನ ಕೊಠಡಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡರು. ಆದರೆ ದರೋಡೆಕೋರರು ಬಾಲ್ಕನಿ ಮೂಲ ಆಕೆಯ ಕೊಠಡಿಯನ್ನು ಪ್ರವೇಶಿಸಿ ಅಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿ ಹಣಕ್ಕಾಗಿ ಪೀಡಿಸಿ ನಟಿಗೆ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದರು. ಇದರಿಂದ ಭಯಗೊಂಡ ನಟ 6 ಲಕ್ಷ ರೂ.ಗಳನ್ನು ನೀಡಿದರು. ಹಣ ಪಡೆದು ತಕ್ಷಣ ದುಷ್ಕರ್ಮಿಗಳು ಪರಾರಿಯಾದರು.

ಮೂವರು ದರೋಡೆಕೋರರಲ್ಲಿ ಒಬ್ಬನನ್ನ ಅಲಂಕೃತ ಗುರುತಿಸಿದ್ದಾರೆ. ಕಳೆದ ವಾರ ತಮ್ಮ ಮನೆಗೆ ಪೀಠೋಪಕರಣ ಪೂರೈಕೆ ಮಾಡಿದ್ದ ವ್ಯಕ್ತಿ ಈ ಗುಂಪಿನಲ್ಲಿದ್ದ ಎಂದು ನಟಿ ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.

× Chat with us