ಗೌರಿ-ಗಣೇಶ ಹಬ್ಬದಂದು ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ: ಹೊಸ ಸಿನಿಮಾ ಹೆಸರು ಘೋಷಣೆ

ಬೆಂಗಳೂರು: ಗೌರಿ-ಗಣೇಶ ಹಬ್ಬದ ದಿನದಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಹಬ್ಬದ ದಿನವೇ ನಟ ದರ್ಶನ್‌ ಹೊಸ ಸಿನಿಮಾ ಹೆಸರು ಘೋಷಣೆಯಾಗಿದೆ. ಅವರಿಗೆ ಇದು 55ನೇ ಸಿನಿಮಾವಾಗಿದ್ದು, ವಿ.ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

ಶೈಲಜಾ ನಾಗ್‌ ಮತ್ತು ಬಿ.ಸುರೇಶ್‌ ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಕನ್ನಡದ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐದೂ ಭಾಷೆಗಲಲ್ಲಿ ಸಿನಿಮಾದ ಹೆಸರಿನ ಪೋಸ್ಟರ್‌ ಶುಕ್ರವಾರ ಬಿಡುಗಡೆಯಾಗಿದೆ.

ಅಂದ ಹಾಗೆ, ಹೊಸ ಸಿನಿಮಾದ ಹೆಸರು ʻಕ್ರಾಂತಿʼ. ನಟ ದರ್ಶನ್‌ ಪೋಸ್ಟರ್‌ನಲ್ಲಿ ಆಂಗ್ರಿ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

× Chat with us